ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mutual Funds: ಫಂಡ್‌ಗಳ 9 ಫೆವರೇಟ್‌ ಸ್ಟಾಕ್ಸ್; ಚಿನ್ನ, ಬೆಳ್ಳಿ ಖರೀದಿಗೆ ರಿಚ್‌ ಡ್ಯಾಡ್ ಸಲಹೆ

ಮ್ಯೂಚುವಲ್‌ ಫಂಡ್‌ಗಳಲ್ಲಿ ವೃತ್ತಿಪರ ಮ್ಯಾನೇಜರ್‌ಗಳು ಹೂಡಿಕೆಗೆ ಮುನ್ನ ಷೇರಿನ ಬಗ್ಗೆ ಸಾಕಷ್ಟು ಅಧ್ಯಯನ ಮತ್ತು ಪರಿಶೀಲನೆ ಮಾಡುತ್ತಾರೆ. ಆದ್ದರಿಂದ 500ಕ್ಕೂ ಹೆಚ್ಚು ಮ್ಯೂಚುವಲ್‌ ಫಂಡ್‌ಗಳು ಖರೀದಿಸಿರುವ ಷೇರುಗಳು ಯಾವುದು ಎಂಬ ಕುತೂಹಲ ಉಂಟಾಗುವುದು ಸಹಜ. ಇಲ್ಲಿದೆ ಅಂತಹ ಷೇರುಗಳ ವಿವರ.

ಸಾಂದರ್ಭಿಕ ಚಿತ್ರ.
  • ಕೇಶವ ಪ್ರಸಾದ್‌ ಬಿ.

ಬೆಂಗಳೂರು: ಮಾರ್ಚ್‌ನಲ್ಲಿ 500ಕ್ಕೂ ಹೆಚ್ಚು ಮ್ಯೂಚುವಲ್‌ ಫಂಡ್‌ಗಳು (Mutual Funds) ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಇನ್ಫೋಸಿಸ್‌ ಸೇರಿದಂತೆ 9 ಷೇರುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆಯನ್ನು ಮಾಡಿವೆ. ನಾವು ಇದನ್ನು ಯಾಕೆ ಹೇಳ್ತಾ ಇದ್ದೇವೆ ಎಂದರೆ, ಮ್ಯೂಚುವಲ್‌ ಫಂಡ್‌ಗಳಲ್ಲಿ ವೃತ್ತಿಪರ ಮ್ಯಾನೇಜರ್‌ಗಳು ಹೂಡಿಕೆಗೆ ಮುನ್ನ ಅಂಥ ಷೇರಿನ ಬಗ್ಗೆ ಸಾಕಷ್ಟು ಅಧ್ಯಯನ ಮತ್ತು ಪರಿಶೀಲನೆ ಮಾಡುತ್ತಾರೆ. ಆದ್ದರಿಂದ 500ಕ್ಕೂ ಹೆಚ್ಚು ಮ್ಯೂಚುವಲ್‌ ಫಂಡ್‌ಗಳು ಖರೀದಿಸಿರುವ ಷೇರುಗಳು ಯಾವುದು ಎಂಬ ಕುತೂಹಲ ಉಂಟಾಗುವುದು ಸಹಜ. ಹೂಡಿಕೆದಾರರಿಗೆ ಇದು ಉಪಯುಕ್ತ ಮಾಹಿತಿ ಆಗಬಹುದು.

500ಕ್ಕೂ ಹೆಚ್ಚು ಮ್ಯೂಚುವಲ್‌ ಫಂಡ್‌ಗಳ ನೆಚ್ಚಿನ ಷೇರುಗಳು

  1. ಐಸಿಐಸಿಐ ಬ್ಯಾಂಕ್‌
  2. ಎಚ್‌ಡಿಎಫ್‌ಸಿ ಬ್ಯಾಂಕ್‌
  3. ಇನ್ಫೋಸಿಸ್‌
  4. ಭಾರ್ತಿ ಏರ್‌ಟೆಲ್‌
  5. ರಿಲಯನ್ಸ್‌ ಇಂಡಸ್ಟ್ರೀಸ್‌
  6. ಎಸ್‌ಬಿಐ
  7. ಎಲ್‌ & ಟಿ
  8. ಎಕ್ಸಿಸ್‌ ಬ್ಯಾಂಕ್‌
  9. ಮಹೀಂದ್ರಾ & ಮಹೀಂದ್ರಾ



ಐಸಿಐಸಿಐ ಬ್ಯಾಂಕ್‌: ಒಟ್ಟ 663 ಮ್ಯೂಚುವಲ್‌ ಫಂಡ್‌ ಯೋಜನೆಗಳು ಐಸಿಐಸಿಐ ಬ್ಯಾಂಕ್‌ನ ಷೇರುಗಳಲ್ಲಿ ಹೂಡಿಕೆ ಮಾಡಿವೆ. 173 ಕೋಟಿ ಷೇರುಗಳನ್ನು ಮ್ಯೂಚುವಲ್‌ ಫಂಡ್‌ ಯೋಜನೆಗಳು ಹೊಂದಿದ್ದು, ಇವುಗಳ ಮಾರುಕಟ್ಟೆ ಮೌಲ್ಯ 2 ಲಕ್ಷದ 33 ಸಾವಿರ ಕೋಟಿ ರೂ.

ಎಚ್‌ಡಿಎಫ್‌ಸಿ ಬ್ಯಾಂಕ್:‌ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳನ್ನು 657 ಮ್ಯೂಚುವಲ್‌ ಫಂಡ್‌ ಯೋಜನೆಗಳು ಒಳಗೊಂಡಿವೆ. ಒಟ್ಟು ಮಾರುಕಟ್ಟೆ ಮೌಲ್ಯ 2 ಲಕ್ಷದ 91 ಸಾವಿರ ಕೋಟಿ ರೂ.

ಇನ್ಫೋಸಿಸ್:‌ ಇನ್ಫೋಸಿಸ್‌ ಷೇರುಗಳನ್ನು 603 ಮ್ಯೂಚುವಲ್‌ ಫಂಡ್‌ ಯೋಜನೆಗಳು ಒಳಗೊಂಡಿವೆ. 76 ಕೋಟಿ ಷೇರುಗಳನ್ನು ಖರೀದಿಸಿದ್ದು ಇದರ ಮಾರುಕಟ್ಟೆ ಮೌಲ್ಯ 1 ಲಕ್ಷದ 19 ಸಾವಿರ ಕೋಟಿ ರೂ.

ಭಾರ್ತಿ ಏರ್‌ಟೆಲ್:‌ ಭಾರ್ತಿ ಏರ್‌ಟೆಲ್‌ ಷೇರುಗಳನ್ನು 593 ಮ್ಯೂಚುವಲ್‌ ಫಂಡ್‌ ಯೋಜನೆಗಳು ಖರೀದಿಸಿವೆ. 62 ಕೋಟಿ ಷೇರುಗಳನ್ನು ಮ್ಯೂಚುವಲ್‌ ಫಂಡ್‌ ಯೋಜನೆಗಳು ಖರೀದಿಸಿದ್ದು, ಇದರ ಮಾರುಕಟ್ಟೆ ಮೌಲ್ಯ 1 ಲಕ್ಷದ 7 ಸಾವಿರ ಕೋಟಿ ರೂ.

ರಿಲಯನ್ಸ್‌ ಇಂಡಸ್ಟ್ರೀಸ್‌: ಮುಕೇಶ್‌ ಅಂಬಾನಿ ಸಾರಥ್ಯದ ರಿಲಯನ್ಸ್‌ ಇಂಡಸ್ಟ್ರೀಸ್ ಕಂಪನಿಯ ಷೇರುಗಳನ್ನು 580 ಮ್ಯೂಚುವಲ್‌ ಫಂಡ್‌ ಕಂಪನಿಗಳು ಹೊಂದಿವೆ. 122 ಕೋಟಿ ಷೇರುಗಳನ್ನು ಖರೀದಿಸಿದ್ದು, ಇವುಗಳ ಒಟ್ಟು ಮಾರುಕಟ್ಟೆ ಮೌಲ್ಯವು 1 ಲಕ್ಷದ 56 ಸಾವಿರ ರೂ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಷೇರುಗಳನ್ನು 548 ಮ್ಯೂಚುವಲ್‌ ಫಂಡ್‌ ಕಂಪನಿಗಳು ಹೊಂದಿವೆ. 107 ಕೋಟಿ ಷೇರುಗಳನ್ನು ಖರೀದಿಸಿದ್ದು, ಇವುಗಳ ಒಟ್ಟು ಮಾರುಕಟ್ಟೆ ಮೌಲ್ಯವು 83,052 ಕೋಟಿ ರೂ.

ಲಾರ್ಸನ್‌ & ಟೂಬ್ರೊ: ಲಾರ್ಸನ್‌ & ಟೂಬ್ರೊದ ಷೇರುಗಳನ್ನು 521 ಮ್ಯೂಚುವಲ್‌ ಫಂಡ್‌ ಕಂಪನಿಗಳು ಹೊಂದಿವೆ. 27 ಕೋಟಿ ಷೇರುಗಳನ್ನು ಖರೀದಿಸಿದ್ದು, ಇವುಗಳ ಒಟ್ಟು ಮಾರುಕಟ್ಟೆ ಮೌಲ್ಯವು 94,755 ಕೋಟಿ ರೂ.

ಎಕ್ಸಿಸ್‌ ಬ್ಯಾಂಕ್:‌ ಎಕ್ಸಿಸ್‌ ಬ್ಯಾಂಕ್‌ನ ಷೇರುಗಳನ್ನು 503 ಮ್ಯೂಚುವಲ್‌ ಫಂಡ್‌ ಕಂಪನಿಗಳು ಹೊಂದಿವೆ. 27 ಕೋಟಿ ಷೇರುಗಳನ್ನು ಖರೀದಿಸಿದ್ದು, ಇವುಗಳ ಒಟ್ಟು ಮಾರುಕಟ್ಟೆ ಮೌಲ್ಯವು 1 ಲಕ್ಷದ 5 ಸಾವಿರ ಕೋಟಿ ರುಪಾಯಿಗಳಾಗಿದೆ.

ಮಹೀಂದ್ರಾ & ಮಹೀಂದ್ರಾ: ಮಹೀಂದ್ರಾ & ಮಹೀಂದ್ರಾ ಷೇರುಗಳನ್ನು 502 ಮ್ಯೂಚುವಲ್‌ ಫಂಡ್‌ ಕಂಪನಿಗಳು ಹೊಂದಿವೆ. 19 ಕೋಟಿ ಷೇರುಗಳನ್ನು ಖರೀದಿಸಿದ್ದು, ಇವುಗಳ ಒಟ್ಟು ಮಾರುಕಟ್ಟೆ ಮೌಲ್ಯವು 50,448 ಸಾವಿರ ಕೋಟಿ ರುಪಾಯಿಗಳಾಗಿದೆ.

ಈ ಸುದ್ದಿಯನ್ನೂ ಓದಿ: Week of Victories: ಟ್ರಂಪ್‌ ಹೊಡೆತಕ್ಕೆ ತತ್ತರಿಸಿದ ಚೀನಾ! ಮೊದಲ ವಾರ ಅಮೆರಿಕಕ್ಕೆ ಮುನ್ನಡೆ

ಚಿನ್ನ, ಬೆಳ್ಳಿ ಖರೀದಿಗೆ ಕಿಯೊಸಾಕಿ ಕರೆ

ನೀವು ʼರಿಚ್‌ ಡ್ಯಾಡ್‌ ಪೂರ್‌ ಡ್ಯಾಡ್‌ʼ ಎಂಬ ವಿಶ್ವ ಪ್ರಸಿದ್ಧ ಪರ್ಸನಲ್‌ ಫೈನಾನ್ಸ್‌ ಪುಸ್ತಕವನ್ನು ಓದಿರಬಹುದು. ಅಥವಾ ಕೇಳಿರಬಹುದು. ಈ ಪುಸ್ತಕದ ಲೇಖಕ ಹಾಗೂ ಹಣಕಾಸು ತಜ್ಞರಾದ ರಾಬರ್ಟ್‌ ಕಿಯೊಸಾಕಿಯವರು, ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ಒಂದು ಸಂದೇಶ ರವಾನಿಸಿದ್ದಾರೆ. ಸದ್ಯ ಜಗತ್ತಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಕುಸಿಯುತ್ತಿವೆ. ಇಂಥ ಬಿಕ್ಕಟ್ಟಿನ ಸಂದರ್ಭ ಚಿನ್ನ, ಬೆಳ್ಳಿ ಮತ್ತು ಬಿಟ್‌ ಕಾಯಿನ್‌ನಲ್ಲಿ ಹೂಡಿಕೆ ಮಾಡಬೇಕು ಎನ್ನುತ್ತಾರೆ ಅವರು.

"ಇಡೀ ಹಣಕಾಸು ಜಗತ್ತಿನಲ್ಲಿ ತೊಂದರೆಯಾಗಿದೆ. ಆದರೆ ಈ ವಿಪತ್ತಿನ ಸಂದರ್ಭ ಚಿನ್ನದ ದರ ದಾಖಲೆಯ ಎತ್ತರಕ್ಕೇರಿದೆ. ಬೆಳ್ಳಿಯ ದರವೂ ಗಗನಕ್ಕೇರಿದೆ. ಬಿಟ್‌ ಕಾಯಿನ್‌ ಕೂಡ ಆಯ್ಕೆಯಾಗಬಹುದುʼʼ ಎಂದು ರಾಬರ್ಟ್‌ ಕಿಯೊಸಾಕಿ ಹೇಳುತ್ತಾರೆ.

Please listen to Gold, Silver and Bit coin. what they telling you? ಚಿನ್ನ ಸಾರ್ವಕಾಲಿಕ ಎತ್ತರದ ಬೆಲೆಯಲ್ಲಿದೆ. ಬೆಳ್ಳಿಗೆ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಬಿಟ್‌ ಕಾಯಿನ್‌ ಜಿಗಿಯುತ್ತಿದೆ ಎನ್ನುತ್ತಾರೆ ಕಿಯೊಸಾಕಿ. ಕಿಯೊಸಾಕಿ ಅವರ ಪ್ರಕಾರ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಪತನದ ಆರಂಭ ಈಗ ಉಂಟಾಗಿದೆ. ಡಾಲರ್‌ ಅಪಾಯದಲ್ಲಿದೆ. ಡಾಲರ್‌ ಇದುವರೆಗೆ ಷೇರು, ಮ್ಯೂಚುವಲ್‌ ಫಂಡ್‌, ಇಟಿಎಫ್‌ಗಳಲ್ಲಿ ಜನರಿಗೆ ಹೆಚ್ಚಿನ ಆದಾಯ ತರಲು ಕಾರಣವಾಗಿತ್ತು. ಈಗ ಸ್ವತಃ ಡಾಲರ್‌ ಅಪಾಯದಲ್ಲಿದೆ. ಆದ್ದರಿಂದ ಷೇರು ಪೇಟೆಯಿಂದ ಅಪಾರ ಸಂಪತ್ತು ಕರಗಿ ಹೋಗಲಿದೆ ಎನ್ನುತ್ತಾರೆ ಕಿಯೊಸಾಕಿ.

ಷೇರು ವಿಭಜನೆ

ನೌಕರಿ ಡಾಟ್‌ ಕಾಮ್‌ನ ಮಾತೃ ಸಂಸ್ಥೆ ಇನ್ಫೋ ಎಡ್ಜ್‌ ತನ್ನ ಷೇರುಗಳ ವಿಭಜನೆ ಅಥವಾ ಸ್ಟಾಕ್‌ ಸ್ಪ್ಲಿಟ್‌ ಅನ್ನು ಘೋಷಿಸಿದೆ. 1: 5 ಅನುಪಾತದಲ್ಲಿ ಷೇರು ವಿಭಜನೆಯಾಗಲಿದೆ. ಮೇ 7ರಂದು ಇದರ ರೆಕಾರ್ಡ್‌ ಡೇಟ್‌ ಆಗಿದೆ. ಅಂದರೆ ರೆಕಾರ್ಡ್‌ ಡೇಟ್‌ ಒಳಗೆ ಷೇರು ಖರೀದಿಸಿದವರಿಗೆ ಷೇರು ವಿಭಜನೆಯ ಲಾಭ ಸಿಗಲಿದೆ.