BY Vijayendra: ಇಂದು ಭಾರತದ ಮೊದಲ ಬೀದಿ ದೀಪ ಬೆಂಗಳೂರಿನಲ್ಲಿ ಬೆಳಗಿದ ದಿನ: ಬಿವೈ ವಿಜಯೇಂದ್ರ ಸ್ಮರಣೆ
Bengaluru: ಈ ವರ್ಷದ ಆಗಸ್ಟ್‌ಗೆ ಭಾರತದ ಮೊದಲ ವಿದ್ಯುತ್ ಬೀದಿ ದೀಪ ಅಳವಡಿಸಿ 120 ವರ್ಷಗಳಾಗುತ್ತವೆ. ಅದನ್ನು ಅಳವಡಿಸಿದ್ದು ಆಗಸ್ಟ್ 5, 1905ರಂದು. ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ ಸುತ್ತಲೂ ಮೊದಲ ವಿದ್ಯುತ್ ಬೀದಿ ದೀಪಗಳು ಬೆಳಗಿದ್ದವು. ವಿದ್ಯುತ್ ದೀಪ ಬರುವ ಮೊದಲು ಬೆಂಗಳೂರಿನ ರಸ್ತೆಗಳಲ್ಲಿ ಸೀಮೆಎಣ್ಣೆ ದೀಪಗಳನ್ನು ಬಳಸಲಾಗುತ್ತಿತ್ತು.

ಭಾರತದ ಮೊದಲ ಎಲೆಕ್ಟ್ರಿಕ್ ಬೀದಿ ದೀಪ

ಬೆಂಗಳೂರು: ʼಇಂದು (ಆಗಸ್ಟ್ 5) ಭಾರತದ (India) ಮೊದಲ ಬೀದಿ ದೀಪ (Street Lamp) ಬೆಂಗಳೂರಿನಲ್ಲಿ(Bengaluru) ಬೆಳಗಿದ ದಿನ, ಇದು ಕನ್ನಡಿಗರ ಹೆಮ್ಮೆʼ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಟ್ವೀಟ್ ಮಾಡಿದ್ದಾರೆ. ಈ ಕೊಡುಗೆ ಕೊಟ್ಟ ಮೈಸೂರು ರಾಜವಂಶಸ್ಥರು ಹಾಗೂ ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ವಿಜಯೇಂದ್ರ ಸ್ಮರಿಸಿಕೊಂಡಿದ್ದಾರೆ.
ʼಭಾರತದ ಹಿರಿಮೆಗೆ, ಬೆಂಗಳೂರಿಗರ ಹೆಗ್ಗಳಿಕೆಗೆ, ಕನ್ನಡಿಗರ ಪಾಲಿಗೆ ಇಂದು ಮಹತ್ವದ ದಿನ. ಏಷ್ಯಾ ಖಂಡದಲ್ಲೇ ಮೊಟ್ಟ ಮೊದಲ ಬಾರಿಗೆ, ಇಂದಿಗೆ 115 ವರ್ಷಗಳ ಹಿಂದೆ ವಿದ್ಯುತ್ ಶಕ್ತಿ ಬೀದಿದೀಪ ಬೆಳಗಿದ ಸುದಿನ. ಈ ದಿನ ಏಷ್ಯಾ ಖಂಡವೇ ಕಗ್ಗತ್ತಲಲ್ಲಿರುವ ಹೊತ್ತಲ್ಲಿ ಮೊದಲು ದೀಪ ಬೆಳಗಿದ್ದು ನಮ್ಮ ಇಂದಿನ ರಾಜಧಾನಿ ಬೆಂಗಳೂರಿನಲ್ಲಿ ಎನ್ನುವುದು ಕನ್ನಡಿಗರ ಹೆಮ್ಮೆ. ಇಂತಹ ಕೊಡುಗೆ ಕೊಟ್ಟ ಮೈಸೂರು ರಾಜವಂಶಸ್ಥರು ಹಾಗೂ ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಈ ಐತಿಹಾಸಿಕ ಕೊಡುಗೆಯನ್ನು ಹೆಮ್ಮೆಯಿಂದ ಸ್ಮರಿಸೋಣʼ ಎಂದು ವಿಜಯೇಂದ್ರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆಗಸ್ಟ್ - 5
— Vijayendra Yediyurappa (@BYVijayendra) August 5, 2025
ಭಾರತದ ಹಿರಿಮೆಗೆ, ಬೆಂಗಳೂರಿಗರ ಹೆಗ್ಗಳಿಕೆಗೆ, ಕನ್ನಡಿಗರ ಪಾಲಿಗೆ ಇಂದು ಮಹತ್ವದ ದಿನ. ಏಷ್ಯಾ ಖಂಡದಲ್ಲೇ ಮೊಟ್ಟ ಮೊದಲ ಬಾರಿಗೆ, ಇಂದಿಗೆ 115 ವರ್ಷಗಳ ಹಿಂದೆ ವಿದ್ಯುತ್ ಶಕ್ತಿ ಬೀದಿದೀಪ ಬೆಳಗಿದ ಸುದಿನ.
ಈ ದಿನ ಏಷ್ಯಾ ಖಂಡವೇ ಕಗ್ಗತ್ತಲಲ್ಲಿರುವ ಹೊತ್ತಲ್ಲಿ ಮೊದಲು ದೀಪ ಬೆಳಗಿದ್ದು ನಮ್ಮ ಇಂದಿನ ರಾಜಧಾನಿ ಬೆಂಗಳೂರಿನಲ್ಲಿ… pic.twitter.com/dUir7e34mV
ಎಲ್ಲಿತ್ತು ಮೊದಲ ಬೀದಿ ದೀಪ?
ಈ ವರ್ಷದ ಆಗಸ್ಟ್‌ಗೆ ಭಾರತದ ಮೊದಲ ವಿದ್ಯುತ್ ಬೀದಿ ದೀಪ ಅಳವಡಿಸಿ 120 ವರ್ಷಗಳಾಗುತ್ತವೆ. ಅದನ್ನು ಅಳವಡಿಸಿದ್ದು ಆಗಸ್ಟ್ 5, 1905ರಂದು. ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ ಸುತ್ತಲೂ ಮೊದಲ ವಿದ್ಯುತ್ ಬೀದಿ ದೀಪಗಳು ಬೆಳಗಿದ್ದವು. ವಿದ್ಯುತ್ ದೀಪ ಬರುವ ಮೊದಲು ಬೆಂಗಳೂರಿನ ರಸ್ತೆಗಳಲ್ಲಿ ಸೀಮೆಎಣ್ಣೆ ದೀಪಗಳನ್ನು ಬಳಸಲಾಗುತ್ತಿತ್ತು.
ಆಗಸ್ಟ್ 5, 1905ರಂದು ಬೆಂಗಳೂರು ತನ್ನ ಬೀದಿಗಳಲ್ಲಿ ವಿದ್ಯುತ್ ದೀಪ ಬೆಳಗಿಸಿದ ಏಷ್ಯಾದ ಮೊದಲ ನಗರವೆನಿಸಿತು. ಏಷ್ಯಾದಲ್ಲಿ ಮೊದಲ ಕರೆಂಟ್ ಬಳಕೆಯಾದದ್ದೂ ಕರ್ನಾಟಕದಲ್ಲೇ. ಶಿವನಸಮುದ್ರದ ಕಾವೇರಿ ಜಲಪಾತದ ಬಳಿ ಮೊದಲಿಗೆ ಜಲವಿದ್ಯುತ್ ಶಕ್ತಿಯನ್ನು ಉತ್ಪಾದಿಸಿ ಕೋಲಾರ ಚಿನ್ನದ ಗಣಿಗಳ (ಕೆಜಿಎಫ್) ಗಣಿಗಾರಿಕೆ ಕಾರ್ಯಾಚರಣೆಗಳಿಗೆ ಕಳಿಸಲಾಯಿತು. ಪ್ರಸರಣ ಮಾರ್ಗಗಳು ಬೆಂಗಳೂರಿನ ಮೂಲಕ ಹಾದುಹೋದವು. ನಂತರ, ಜಲವಿದ್ಯುತ್ ಕೇಂದ್ರವು ಹೆಚ್ಚುವರಿ ವಿದ್ಯುತ್ ಅನ್ನು ಉತ್ಪಾದಿಸಿದಾಗ, ಅದನ್ನು ನಗರದ ಬೀದಿ ದೀಪಗಳನ್ನು ಬೆಳಗಿಸಲು ಬಳಸಲಾಯಿತು. ಆಗ ಮೆದು ಕಬ್ಬಿಣದ ದೀಪದ ಕಂಬಗಳು ಬಳಕೆಯಲ್ಲಿದ್ದವು. ಅವುಗಳಲ್ಲಿ ಈಗ ಉಳಿದಿರುವ ಎರಡನ್ನು ಕೆಲವು ವರ್ಷಗಳ ಹಿಂದೆ ಬಿಬಿಎಂಪಿ ಕಚೇರಿ ಆವರಣಕ್ಕೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ: Vishweshwar Bhat Column: ವಿಮಾನದ ಸಂಚಾರ ದೀಪಗಳು