ʻಭಾರತ ಏಕದಿನ ತಂಡಕ್ಕೂ ಶುಭಮನ್ ನಾಯಕʼ: ಮೊಹಮ್ಮದ್ ಕೈಫ್ ಭವಿಷ್ಯ!
ಇಂಗ್ಲೆಂಡ್ ವಿರುದ್ದ ಸರಣಿ ಸಮಬಲಗೊಂಡ ನಂತರ ಮಾತನಾಡಿದ ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಕೈಫ್, ಶುಭಮನ್ ಗಿಲ್ ಭಾರತ ಏಕದಿನ ತಂಡಕ್ಕೂ ಕೂಡ ನಾಯಕರಾಗಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ. ಸದ್ಯ ಭಾರತ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗಿದ್ದಾರೆ.

ಶುಭಮನ್ ಗಿಲ್ ಭಾರತ ಏಕದಿನ ತಂಡದ ನಾಯಕನಾಗುವ ಸಾಧ್ಯತೆ ಇದೆ ಎಂದ ಮೊಹಮ್ಮದ್ ಕೈಫ್.

ಲಂಡನ್: ಭಾರತ ಹಾಗೂ ಇಂಗ್ಲೆಂಡ್ (IND vs ENG) ನಡುವಣ ಐದು ಪಂದ್ಯಗಳ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಸರಣಿ ಸಮಬಲವಾಗಿದೆ. ಈ ಸರಣಿ ಆರಂಭಕ್ಕೂ ಮುನ್ನ ಬಿಸಿಸಿಐಗೆ ಭಾರತೀಯ ಟೆಸ್ಟ್ ಕ್ರಿಕೆಟ್‌ಗೆ ನಾಯಕನನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಏಕೆಂದರೆ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯವರು ಟೆಸ್ಟ್ ಕ್ರಿಕೆಟ್‌ಗೆ ಹಠಾತ್ ವಿದಾಯ ಹೇಳಿದ್ದರು. ಇದಾದ ಬಳಿಕ ಬಿಸಿಸಿಐ ಭವಿಷ್ಯ ದೃಷ್ಟಿಯೊಂದಿಗೆ ಶುಭಮನ್ ಗಿಲ್ (Shubman Gill) ಅವರಿಗೆ ಟೆಸ್ಟ್‌ತಂಡದ ನಾಯಕತ್ವವನ್ನು ನೀಡಿತ್ತು. ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಗಿಲ್ ಯಶಸ್ವಿಯಾಗಿದ್ದಾರೆ. ಅವರು ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಇದರ ಬೆನ್ನಲ್ಲೇ ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಮಾತನಾಡಿ, ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಇನ್ನು ಎಷ್ಟು ದಿನ ಮುಂದುವರಿಯುತ್ತಾರೆ ಎನ್ನುವ ಕುರಿತು ಖಚಿತತೆ ಇಲ್ಲ. ಹಾಗಾಗಿ ರೋಹಿತ್ ನಂತರ ಏಕದಿನ ಕ್ರಿಕೆಟ್‌ಗೂ ಶುಭ್‌ಮನ್ ಗಿಲ್ ನಾಯಕರಾಗುವ ಸಾಧ್ಯತೆ ಇದೆ. ಇಂಗ್ಲೆಂಡ್ ಸರಣಿಯಲ್ಲಿ ಗಿಲ್ ನಾಯಕರಾಗಿ ಅಸಾಧರಣ ಪ್ರದರ್ಶನ ತೋರಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
IND vs ENG: ಶುಭಮನ್ ಗಿಲ್ ಇನ್ನೂ ಕಲಿಯಬೇಕೆಂದಿದ್ದ ಕಪಿಲ್ ದೇವ್‌ಗೆ ಯೋಗರಾಜ್ ಸಿಂಗ್ ತಿರುಗೇಟು!
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್, "ರೋಹಿತ್ ಶರ್ಮಾ ಎಷ್ಟು ದಿನ ನಾಯಕನಾಗಿ ಮುಂದುವರಿಯುತ್ತಾರೋ ಗೊತ್ತಿಲ್ಲ. ಹಾಗಾಗಿ ಶುಭಮನ್ ಗಿಲ್ ಏಕದಿನ ತಂಡದ ನಾಯಕತ್ವವನ್ನೂ ಸ್ವೀಕರಿಸಬಹುದು. ಈ ಹುದ್ದೆಯನ್ನು ಅಲಂಕರಿಸಲು ಗಿಲ್ ಸಿದ್ಧರಾಗಿದ್ದಾರೆ. ಅವರು ವೈಟ್-ಬಾಲ್‌ನಲ್ಲಿ ರನ್ ಗಳಿಸುತ್ತಾರೆ. ಅವರು ಟೆಸ್ಟ್‌ನಲ್ಲಿ ನಾಯಕನಾಗಿ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ ಮತ್ತು ಮುಂದೆ ನಿಂತು ತಂಡವನ್ನು ಮುನ್ನಡೆಸಿದ್ದಾರೆ. ನೀವು ಯುವ ತಂಡದೊಂದಿಗೆ ಹೋದಾಗ, ನೀವು ಎರಡೂ ಕೆಲಸಗಳನ್ನು ಮಾಡಬೇಕು - ಬ್ಯಾಟ್‌ನಲ್ಲಿ ರನ್ ಗಳಿಸುವುದು ಮತ್ತು ನಾಯಕನಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವುದು. ಒಟ್ಟಾರೆಯಾಗಿ ಅವರಿಗೆ ಅದ್ಭುತ ಪ್ರವಾಸ," ಎಂದು ಹೇಳಿದ್ದಾರೆ.
ಶುಭ್‌ಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸಿದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಕೈಫ್, "ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್‌ರಂತಹ ದಿಗ್ಗಜ ಆಟಗಾರ ಅನುಪಸ್ಥಿತಿಯಲ್ಲಿ ತಂಡವು ಪರಿವರ್ತನೆಯ ಹಂತದಲ್ಲಿದೆ. ಸರಣಿಗೂ ಮುನ್ನ ಗಿಲ್ ಅವರಿಗೆ ನಾಯಕತ್ವ ಹೆಗಲೇರಿಸಿದ ಕುರಿತು ಕಳವಳ ವ್ಯಕ್ತಪಡಿಸಿದ ಹಲವರಿಗೆ ಗಿಲ್ ಅವರ ಈ ಸರಣಿಯ ನಾಯಕತ್ವ ಉತ್ತರ ನೀಡಿದೆ. ಅಲ್ಲದೆ ಅವರು ರನ್ ಗಳಿಸಿದ್ದು ಕೂಡ ಗಮನಾರ್ಹವಾಗಿತ್ತು," ಎಂದು ತಿಳಿಸಿದ್ದಾರೆ.
IND vs ENG: ಮೊಹಮ್ಮದ್ ಸಿರಾಜ್‌ಗೆ ಆಗುತ್ತಿರುವ ಅನ್ಯಾಯವನ್ನು ರಿವೀಲ್ ಮಾಡಿದ ಆರ್ ಅಶ್ವಿನ್!
ಗಿಲ್ ನಾಯಕತ್ವ ಉತ್ತಮವಾಗಿತ್ತು
"ಶುಭ್‌ಮನ್ ಗಿಲ್ ನಾಯಕನಾಗಿ ಈ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಅಪ್ಪಿಕೊಂಡರು. ಅವರು ನಾಯಕರಾಗಿ ಆಯ್ಕೆಯಾದಾಗ ಅವರ ಟೆಸ್ಟ್ ದಾಖಲೆಯನ್ನು ನೋಡಿ ಅವರನ್ನು ಏಕೆ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು ಎನ್ನುವ ಕುರಿತು ಹಲವು ಪ್ರಶ್ನೆಗಳಿದ್ದವು. ಆದರೆ ಯುವ ಪಡೆಯೊಂದಿಗೆ ಗಿಲ್, ಸರಣಿಯಲ್ಲಿ ನಾಯಕನಾಗಿ ಹಾಗೂ ಬ್ಯಾಟಿಂಗ್ ಪ್ರದರ್ಶನ ಮೂಲಕ ಉತ್ತರಿಸಿದ್ದಾರೆ. ಮತ್ತೊಂದು ವಿಶೇಷವೆಂದರೆ ಐತಿಹಾಸಿಕ ಡಾನ್ ಬ್ರಾಡ್‌ಮನ್ ಅವರ ದಾಖಲೆಯೊಂದನ್ನು ಗಿಲ್ ಮುರಿಯುವ ಹಂತಕ್ಕೆ ತಲುಪಿದರು," ಎಂದು ಕೈಫ್ ಹೇಳಿದ್ದಾರೆ.
IND vs ENG: ʻಒಂದು ವೇಳೆ ಬೆನ್ ಸ್ಟೋಕ್ಸ್ ಆಡಿದ್ರೆ ಇಂಗ್ಲೆಂಡ್ ಗೆಲ್ಲುತ್ತಿತ್ತುʼ-ಮೈಕಲ್ ವಾನ್!
"ಓವಲ್‌ನಲ್ಲಿ ಬ್ರೂಕ್ ಮತ್ತು ರೂಟ್ ಜೊತೆಯಾಟವನ್ನು ಕಟ್ಟಲು ಯತ್ನಿಸಿದಾಗ ಪಂದ್ಯವನ್ನು ಶುಭ್‌ಮನ್ ಗಿಲ್ ಮತ್ತು ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಮೇಲೆ ನನ್ನ ಕಣ್ಣುಗಳಿದ್ದವು. ಅವರು ತುಂಬಾ ನಿರಾಳರಾಗಿದ್ದರು ಮತ್ತು ಆ ಒಂದು ಕ್ಷಣ ಅವರು ಮತ್ತೆ ಆಟಕ್ಕೆ ಮರಳಲು ಸಹಾಯ ಮಾಡುತ್ತದೆ ಎಂದು ತಿಳಿದಿದ್ದರು. ಅವರು ಶಾಂತರಾಗಿದ್ದರು, ಹತಾಶೆಯನ್ನು ತೋರಿಸಲಿಲ್ಲ. ಒತ್ತಡದಲ್ಲಿ ನಾಯಕ ಶಾಂತವಾಗಿರುವುದಕ್ಕೆ ಇದು ಒಂದು ದೊಡ್ಡ ಉದಾಹರಣೆಯಾಗಿತ್ತು. ಇದು ಮಾಡು ಇಲ್ಲವೇ ಮಡಿ ಆಟವಾಗಿತ್ತು ಮತ್ತು ಅವರ ವರ್ತನೆ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ," ಎಂದು ತಿಳಿಸಿದ್ದಾರೆ.
ಬರಹ: ಕೆ. ಎನ್. ರಂಗು, ಚಿತ್ರದುರ್ಗ