ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

China Restriction to Travel Abroad: ಶಿಕ್ಷಕರು, ವೈದ್ಯರು, ನಿವೃತ್ತರು...ಚೀನಾ ನೌಕರರು ವಿದೇಶಕ್ಕೆ ಹೋಗುವಂತಿಲ್ಲ

ಶಿಕ್ಷಕರು, ವೈದ್ಯರು, ನಾಗರಿಕ ಸೇವಕರು, ನಿವೃತ್ತ ಸಾರ್ವಜನಿಕ ನೌಕರರಿಗೆ ವಿದೇಶ ಪ್ರಯಾಣವನ್ನು ನಿಷೇಧಿಸಿ ಚೀನಾ ಹೊಸ ನೀತಿಯನ್ನು ಜಾರಿಗೆಗೊಳಿಸಿದೆ. ಇದರ ಪ್ರಕಾರ ಎಲ್ಲ ಸಾರ್ವಜನಿಕ ನೌಕರರು ತಮ್ಮ ಪಾಸ್‌ಪೋರ್ಟ್‌ಗಳನ್ನು ಆಡಳಿತಕ್ಕೆ ಒಪ್ಪಿಸಬೇಕು. ಯಾವುದೇ ರೀತಿಯಲ್ಲಿ ವಿದೇಶಿ ಪ್ರವಾಸ ಮಾಡಬೇಕಾದರೆ ಔಪಚಾರಿಕ ಅನುಮೋದನೆ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ.

ಚೀನಾ ನೌಕರರಿಗೆ ವಿದೇಶ ಪ್ರಯಾಣಕ್ಕೆ ಇಲ್ಲ ಅನುಮತಿ

ಬೀಜಿಂಗ್: ಶಿಕ್ಷಕರು, ವೈದ್ಯರು, ನಾಗರಿಕ ಸೇವಕರು, ನಿವೃತ್ತರು ಸೇರಿದಂತೆ ಸಾರ್ವಜನಿಕ ನೌಕರರಿಗೆ ವಿದೇಶ ಪ್ರಯಾಣ ನಿಷೇಧಿಸಿ ಚೀನಾ ಹೊಸ ನೀತಿಯನ್ನು (China Restriction to Travel Abroad) ಜಾರಿಗೊಳಿಸಿದೆ. ಇದರ ಅನ್ವಯ ಚೀನಾದ ಸಾರ್ವಜನಿಕ ನೌಕರರು (Chinese public employees) ತಮ್ಮ ಪಾಸ್‌ಪೋರ್ಟ್‌ಗಳನ್ನು(China passport) ಶರಣಾಗತಿ ಮಾಡಬೇಕು. ಯಾವುದೇ ರೀತಿಯ ಅನುಮೋದನೆ ಅಥವಾ ವೈಯಕ್ತಿಕವಾಗಿ ವಿದೇಶಗಳಿಗೆ ಪ್ರವಾಸ ಮಾಡಬೇಕಿದ್ದರೆ ಅನುಮತಿ ಕಡ್ಡಾಯ. ಈ ಮೂಲಕ ಚೀನಾ ತನ್ನ ಸಾರ್ವಜನಿಕ ನೌಕರರು ವಿದೇಶಿ ಸಂಪರ್ಕವನ್ನು ಕಡಿತಗೊಳಿಸಲು ಒತ್ತಾಯಿಸಿದೆ.

ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ವಿದೇಶ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ವಿಸ್ತರಿಸಿರುವ ಚೀನಾ ಇದರಲ್ಲಿ ಈಗ ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಮಾತ್ರವಲ್ಲದೆ ಶಿಕ್ಷಕರು, ವೈದ್ಯರು, ಆಸ್ಪತ್ರೆ ಕೆಲಸಗಾರರು, ನಾಗರಿಕ ಸೇವಕರು ಮತ್ತು ನಿವೃತ್ತರನ್ನೂ ಸೇರಿಸಿದೆ.

ಹೊಸ ನೀತಿಯನ್ವಯ ಅನೇಕ ಸಾರ್ವಜನಿಕ ಉದ್ಯೋಗಿಗಳು ತಮ್ಮ ಪಾಸ್‌ಪೋರ್ಟ್‌ಗಳನ್ನು ಉದ್ಯೋಗದಾತರಿಗೆ ಒಪ್ಪಿಸಬೇಕು. ವೈಯಕ್ತಿಕ ಪ್ರಯಾಣ ಸೇರಿದಂತೆ ಯಾವುದೇ ವಿದೇಶಿ ಪ್ರವಾಸ ಹೋಗಬೇಕಾದರೂ ಔಪಚಾರಿಕ ಅನುಮೋದನೆ ಕಡ್ಡಾಯ. ಹಲವು ನಗರಗಳಲ್ಲಿ ವಿದೇಶಿ ರಜಾದಿನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನು ಪಾಲನೆ ಮಾಡಲು ವಿಫಲವಾದರೆ ಶಿಸ್ತು ಕ್ರಮ ಅಥವಾ ಕೆಲಸದಿಂದ ವಜಾಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಏನು ಪರಿಣಾಮ?

ದಕ್ಷಿಣ ಚೀನಾದ ಸಾರ್ವಜನಿಕ ಶಾಲೆಯೊಂದರ ಸಾಹಿತ್ಯ ಶಿಕ್ಷಕಿಯೊಬ್ಬರು ತಮ್ಮ ಉದ್ಯೋಗ ಒಪ್ಪಂದದಲ್ಲಿ ಅನಧಿಕೃತ ವಿದೇಶಿ ಪ್ರಯಾಣ ಮಾಡಿ ಬಂದಿದ್ದು, ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ನರ್ಸ್ ಒಬ್ಬರು ವಿದೇಶಕ್ಕೆ ಪ್ರಯಾಣಿಸಲು ಅನುಮತಿ ಪಡೆಯಲು ನಾಲ್ಕು ಹಂತದ ಆಡಳಿತಾತ್ಮಕ ಅನುಮೋದನೆ ಪಡೆಯಲು ಸೂಚಿಸಲಾಗಿದೆ. ಕೆಲವು ನಗರಗಳಲ್ಲಿ ನಿವೃತ್ತ ಸರ್ಕಾರಿ ನೌಕರರು ತಮ್ಮ ಪಾಸ್‌ಪೋರ್ಟ್‌ಗಳನ್ನು ಮರಳಿ ಪಡೆಯಲು ಎರಡು ವರ್ಷಗಳವರೆಗೆ ಕಾಯಬೇಕೆಂದು ಸೂಚಿಸಲಾಗಿದೆ.

ಸರ್ಕಾರಿ ನೌಕರರಿಗೆ ವಿದೇಶ ಪ್ರಯಾಣ ನಿಷೇಧವು ಹಲವು ಮಂದಿಯ ವಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರಿದೆ. ಅನೇಕರು ವಿದೇಶ ಪ್ರಯಾಣ ನಿಷೇಧದಿಂದ ಪರದಾಡುವಂತಾಗಿದೆ. ಈ ನೀತಿಯಿಂದಾಗಿ ಆರು ತಿಂಗಳಿಗಿಂತ ಹೆಚ್ಚು ಕಾಲ ವಿದೇಶದಲ್ಲಿ ವಾಸಿಸುತ್ತಿರುವವರನ್ನು ನಾಗರಿಕ ಸೇವಾ ಹುದ್ದೆಗಳಿಂದ ತೆಗೆದುಹಾಕಲಾಗಿದೆ.

ಪ್ರಯಾಣದ ಮೇಲೆ ಏಕೆ ಕಠಿಣ ಕ್ರಮ ?

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೇತೃತ್ವದಲ್ಲಿ ಜಾರಿಗೆಗೊಳಿಸಿರುವ ಹೊಸ ನಿಯಮ ಪ್ರಯಾಣ ನಿರ್ಬಂಧಗಳು ವ್ಯಾಪಕ ಬದಲಾವಣೆಯ ಭಾಗವಾಗಿದೆ. ಇದು ರಾಷ್ಟ್ರೀಯ ಭದ್ರತೆ, ರಾಜಕೀಯ ಶಿಸ್ತು ಮತ್ತು ವೆಚ್ಚ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಹದಗೆಟ್ಟಿರುವ ಚೀನಾದ ಸಂಬಂಧ ಹಾಗೂ ವಿದೇಶಿ ಪಡೆಗಳು ಚೀನಾದ ದೇಶೀಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿದೆ ಎನ್ನುವುದು ತಿಳಿದು ಬಂದಿರುವುದರಿಂದ ಚೀನಾಕ್ಕೆ ರಾಷ್ಟ್ರೀಯ ಭದ್ರತೆ ಹೆಚ್ಚು ಪ್ರಾಮುಖ್ಯವೆನಿಸಿದೆ. ಇನ್ನು ನಾಗರಿಕ ಸೇವೆಯಲ್ಲಿ ರಾಜಕೀಯ ಮತ್ತು ಹಣಕಾಸಿನ ಶಿಸ್ತಿಗೆ ಇದನ್ನು ಅನುಮೋದಿಸಲಾಗಿದೆ.

ಇದನ್ನೂ ಓದಿ: Bengaluru News: ಫಿಟ್ನೆಸ್​ ಸೆಂಟರ್​ನ 3ನೇ ಮಹಡಿಯಿಂದ ಬಿದ್ದು ಯುವತಿ ಸಾವು

ಇದು ಮೊದಲೇನಲ್ಲ

ಚೀನಾ ವಿದೇಶಿ ಪ್ರಯಾಣವನ್ನು ನಿರ್ಬಂಧಿಸುತ್ತಿರುವುದು ಇದು ಮೊದಲೇನಲ್ಲ. 2023ರಲ್ಲಿ ನಾಗರಿಕ ಸೇವಕರು ಮತ್ತು ರಾಜ್ಯ-ಸಂಬಂಧಿತ ಉದ್ಯಮ ಉದ್ಯೋಗಿಗಳಿಗೆ ವೈಯಕ್ತಿಕ ವಿದೇಶ ಪ್ರಯಾಣದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲಾಗಿತ್ತು. ಕೆಲವು ಕಾರ್ಮಿಕರಿಗೆ ವರ್ಷಕ್ಕೆ ಒಮ್ಮೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದ್ದು, ಇದಕ್ಕಾಗಿ ನಿರ್ಗಮನ ಪೂರ್ವ ಗೌಪ್ಯತಾ ತರಬೇತಿಗೆ ಹಾಜರಾಗಬೇಕಾಗಿತ್ತು.