ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Girl death: ಜ್ಯೂಸ್‌ ಎಂದು ಭಾವಿಸಿ ಕಳೆನಾಶಕ ಸೇವಿಸಿ ಬಾಲಕಿ ಸಾವು, ಪೋಷಕರ ನಿರ್ಲಕ್ಷ್ಯದಿಂದ ಅನಾಹುತ

ಆರೋಗ್ಯ ಕಾಪಾಡಿಕೊಳ್ಳಲು ನಿಧಿ ಅಲೋವೆರಾ ಜ್ಯೂಸ್ ಕುಡಿಯುತ್ತಿದ್ದಳು. ಈ ನಡುವೆ ಕುಟುಂಬಸ್ಥರು ಅಲೋವೆರಾ ಜ್ಯೂಸ್ ಖಾಲಿಯಾದ ಡಬ್ಬದಲ್ಲಿ ಕಳೆನಾಶಕ ಔಷಧ ತುಂಬಿಟ್ಟಿದ್ದರು. ಮಾರ್ಚ್ 4ರಂದು ಜ್ಯೂಸ್ ಎಂದು ಭಾವಿಸಿ ನಿಧಿ ಹರ್ಬಿಸೈಡ್ ಔಷಧ ಕುಡಿದಿದ್ದಾಳೆ.

ಜ್ಯೂಸ್‌ ಎಂದು ಭಾವಿಸಿ ಕಳೆನಾಶಕ ಸೇವಿಸಿ ಬಾಲಕಿ ಸಾವು

ಮೃತ ಬಾಲಕಿ ನಿಧಿ

ಹರೀಶ್‌ ಕೇರ ಹರೀಶ್‌ ಕೇರ Apr 2, 2025 9:30 AM

ಬೆಂಗಳೂರು: ಮಕ್ಕಳು ಇರುವ ಮನೆಯಲ್ಲಿ ವಿಷಕಾರಿ (Poison) ರಾಸಾಯನಿಕ ದ್ರವ್ಯಗಳಿದ್ದರೆ ಅವುಗಳನ್ನು ಎಚ್ಚರಿಕೆಯಿಂದ ಮಕ್ಕಳ ಕೈಗೆ ಸಿಗದಂತೆ ಇಡದಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ. ಬೆಂಗಳೂರಿನಲ್ಲಿ (Bengaluru news) ಇಂಥಹುದೇ ದುರಂತ ಸಂಭವಿಸಿದೆ. ಜ್ಯೂಸ್ ಎಂದು ತಿಳಿದು ಅಲೋವೆರಾ ಡಬ್ಬದಲ್ಲಿದ್ದ ಕಳೆನಾಶಕ (Herbicide) ಔಷಧಿ ಕುಡಿದು ಬಾಲಕಿಯೊಬ್ಬಳು (girl death) ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬ್ಯಾಟರಾಯನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿಧಿಕೃಷ್ಣ (14) ಎನ್ನುವ ಬಾಲಕಿ ಹೀಗೆ ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ.

ಆರೋಗ್ಯ ಕಾಪಾಡಿಕೊಳ್ಳಲು ನಿಧಿ ಅಲೋವೆರಾ ಜ್ಯೂಸ್ ಕುಡಿಯುತ್ತಿದ್ದಳು. ಈ ನಡುವೆ ಕುಟುಂಬಸ್ಥರು ಅಲೋವೆರಾ ಜ್ಯೂಸ್ ಖಾಲಿಯಾದ ಡಬ್ಬದಲ್ಲಿ ಕಳೆನಾಶಕ ಔಷಧ ತುಂಬಿಟ್ಟಿದ್ದರು. ಮಾರ್ಚ್ 4ರಂದು ಜ್ಯೂಸ್ ಎಂದು ಭಾವಿಸಿ ನಿಧಿ ಹರ್ಬಿಸೈಡ್ ಔಷಧ ಕುಡಿದಿದ್ದಾಳೆ. ಅನಾರೋಗ್ಯ ತಲೆದೋರಿದ ಹಿನ್ನೆಲೆಯಲ್ಲಿ ತಕ್ಷಣ ನಿಧಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 31ರಂದು ನಿಧಿ ಮೃತಪಟ್ಟಿದ್ದಾಳೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಯುವಕನ ಕೊಚ್ಚಿ ಕೊಲೆ

ಬೆಂಗಳೂರು: ಬೆಂಗಳೂರಿನಲ್ಲಿ (Bengaluru news) ಮತ್ತೊಂದು ಭೀಕರವಾದ ಮರ್ಡರ್ (Crime news) ಆಗಿದ್ದು ಯುವಕನನ್ನು ಐದಾರು ಜನ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ (Murder Case) ಮಾಡಿರುವ ಘಟನೆ ಬೆಂಗಳೂರಿನ ಬನಶಂಕರಿ 2ನೇ ಹಂತದ ಎಕೆ ಕಾಲೋನಿಯಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ನಿಖಿಲ್ ಎಂದು ಗುರುತಿಸಲಾಗಿದೆ. ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೈಕ್‌ನಲ್ಲಿ ಬಂದಿದ್ದ ಐದಾರು ದುಷ್ಕರ್ಮಿಗಳು ನಿಖಿಲ್‌ನನ್ನು ಹತ್ಯೆ ಮಾಡಿದ್ದಾರೆ. ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಕೊಲೆಯಾದ ನಿಖಿಲ್ ಮೃತದೇಹವನ್ನು ಸದ್ಯ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕೃತ್ಯದ ಹಿಂದೆ ಪ್ರೇಮ ಪ್ರಕರಣ, ಹಳೆ ದ್ವೇಷದ ಹಿನ್ನೆಲೆಗಳನ್ನು ಪರಿಶೀಲಿಸಲಾಗುತ್ತಿದೆ. ಸ್ಥಳದಲ್ಲಿರುವ ಸಿಸಿಟಿವಿ ಪೂಟೇಜ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಇತ್ತೀಚೆಗೆ ಆನೆಕಲ್‌ನಲ್ಲಿ ರೌಡಿ ಶೀಟರ್‌ ಒಬ್ಬನನ್ನು ಇದೇ ರೀತಿ ಮಚ್ಚಿನಿಂದ ಕೊಚ್ಚಿ ಕೊಲ್ಲಲಾಗಿತ್ತು. ನೇಪಾಳಿ ಮಂಜ ಎಂಬ ರೌಡಿಯನ್ನು ಸ್ನೇಹಿತರೇ ಕರೆ ಮಾಡಿ ಕರೆಸಿಕೊಂಡಿದ್ದರು. ಎಣ್ಣೆ ಪಾರ್ಟಿಯ ಸಂದರ್ಭದಲ್ಲಿ ಅಲ್ಲಿಗೆ ದಾಳಿ ಮಾಡಿದ ದುಷ್ಕರ್ಮಿಗಳು ನೇಪಾಳಿ ಮಂಜನನ್ನು ಕೊಚ್ಚಿ ಕೊಂದಿದ್ದರು.

ಇದನ್ನೂ ಓದಿ: Mass Murder Case: ಗುಂಡು ಹಾರಿಸಿ ಅತ್ತೆ, ನಾದಿನಿ, ಮಗಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ