Gold Price Today: ಚಿನ್ನದ ದರದಲ್ಲಿ ಯಥಾಸ್ಥಿತಿ; ಇಂದಿನ ರೇಟ್‌ ಹೀಗಿದೆ

22 ಕ್ಯಾರಟ್‌ ಚಿನ್ನದ ದರಗಳ ವಿವರ 22 ಕ್ಯಾರಟ್‌ನ 8 ಗ್ರಾಂ ಚಿನ್ನ 60,200 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 75,250 ರೂ. ಮತ್ತು 100 ಗ್ರಾಂಗೆ 7,52,500 ರೂ. ಪಾವತಿಸಬೇಕಾಗುತ್ತದೆ. 24 ಕ್ಯಾರಟ್‌ ಚಿನ್ನದ ದರಗಳ ವಿವರ 24 ಕ್ಯಾರಟ್‌ನ 8 ಗ್ರಾಂ ಚಿನ್ನ 65,672 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 82,090 ರೂ. ಮತ್ತು 100 ಗ್ರಾಂಗೆ 8,20,900 ರೂ. ಪಾವತಿಸಬೇಕಾಗುತ್ತದೆ.

gold price (8)
Profile Rakshita Karkera Jan 23, 2025 11:12 AM

ಬೆಂಗಳೂರು: ಚಿನ್ನದ ದರದಲ್ಲಿ ಇಂದು ಯಥಾಸ್ಥಿತಿ ಕಂಡುಬಂದಿದೆ(Gold Price Today). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ ತಲಾ 75 ರೂ. ಮತ್ತು 86 ರೂ. ಏರಿಕೆ ಕಂಡಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,525 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 8,209 ರೂ. ಇದೆ.

22 ಕ್ಯಾರಟ್‌ ಚಿನ್ನದ ದರಗಳ ವಿವರ 22 ಕ್ಯಾರಟ್‌ನ 8 ಗ್ರಾಂ ಚಿನ್ನ 60,200 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 75,250 ರೂ. ಮತ್ತು 100 ಗ್ರಾಂಗೆ 7,52,500 ರೂ. ಪಾವತಿಸಬೇಕಾಗುತ್ತದೆ. 24 ಕ್ಯಾರಟ್‌ ಚಿನ್ನದ ದರಗಳ ವಿವರ 24 ಕ್ಯಾರಟ್‌ನ 8 ಗ್ರಾಂ ಚಿನ್ನ 65,672 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 82,090 ರೂ. ಮತ್ತು 100 ಗ್ರಾಂಗೆ 8,20,900 ರೂ. ಪಾವತಿಸಬೇಕಾಗುತ್ತದೆ.

ಬೆಳ್ಳಿ ದರ

ಇತ್ತ ಬೆಳ್ಳಿ ಬೆಲೆಯಲ್ಲಿ ಇಂದು ಕೂಡ ಯಥಾಸ್ಥಿತಿ ಕಂಡುಬಂದಿದೆ. ಇತ್ತ ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡಿದೆ. ಬೆಳ್ಳಿ 1 ಗ್ರಾಂನ ಬೆಲೆ 96.50 ರೂ., 8 ಗ್ರಾಂಗೆ 772ರೂ., 10 ಗ್ರಾಂಗೆ 965 ರೂ. ಮತ್ತು 1 ಕೆಜಿಗೆ 96,500 ರೂ. ಪಾವತಿಸಬೇಕಾಗುತ್ತದೆ.

ಚಿನ್ನದ ಬೆಲೆ ಏರಿಕೆಗೆ ಕಾರಣ

ಭಾರತದಲ್ಲಿ ಚಿನ್ನದ ದರ ಪ್ರತಿ ದಿನ ಏರಳಿತವಾಗುತ್ತಲೇ ಇರುತ್ತದೆ. ಅದರಲ್ಲಿಯೂ ಚಿನ್ನದ ಬೆಲೆ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದುದು ಯಾವುವು ಎನ್ನುವುದನ್ನು ನೋಡೋಣ.

ಬೇಡಿಕೆ ಮತ್ತು ಪೂರೈಕೆ: ಹಬ್ಬಗಳು ಮತ್ತು ಮದುವೆ ಋತುವಿನಲ್ಲಿ ಚಿನ್ನಾಭರಣಗಳಿಗೆ ಬೇಡಿಕೆ ಹೆಚ್ಚಾಗಿ ದರ ವೃದ್ಧಿಯಾಗುತ್ತದೆ. ಅದೇ ರೀತಿ ಪೂರೈಕೆಯಲ್ಲಿನ ಅಡೆತಡೆಗಳು ಕೂಡ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಸರ್ಕಾರದ ನೀತಿ: ಸರ್ಕಾರ ಆಮದು ಸುಂಕ, ತೆರಿಗೆ ಹೆಚ್ಚಿಸಿದರೆ ಚಿನ್ನದ ಬೆಲೆಯಲ್ಲಿಯೂ ಏರಿಕೆಯಾಗುತ್ತದೆ. ಹಣದುಬ್ಬರಕ್ಕೆ ಸಂಬಂಧಿಸಿದ ಸರ್ಕಾರದ ನೀತಿಗಳು ಚಿನ್ನದ ದರದ ಮೇಲೆ ಪ್ರಭಾವ ಬೀರುತ್ತದೆ. ಸರ್ಕಾರಗಳ ದೊಡ್ಡ ಪ್ರಮಾಣದ ಖರೀದಿ ಅಥವಾ ಮಾರಾಟವು ಚಿನ್ನದ ಮಾರುಕಟ್ಟೆಯಲ್ಲಿ ಅಲೆಗಳನ್ನು ಸೃಷ್ಟಿಸುತ್ತದೆ.

ಈ ಸುದ್ದಿಯನ್ನೂ ಓದಿ: ಡಿಜಿಟ್ ಆರೋಗ್ಯ ವಿಮೆ ಅತಿ ಕಡಿಮೆ ಕಾಯುವ ಅವಧಿಯ ವಿಮೆಗಳಲ್ಲಿ ಒಂದಾಗಿದೆ

ಹಣದುಬ್ಬರ: ಚಿನ್ನವನ್ನು ಸಾಮಾನ್ಯವಾಗಿ ಹಣದುಬ್ಬರದ ವಿರುದ್ಧ ಹೂಡಿಕೆ ಎಂದು ಪರಿಗಣಿಸಲಾಗಿದೆ. ದೇಶದಲ್ಲಿ ಹೊಸ ನೋಟು, ನಾಣ್ಯಗಳನ್ನು ಹೊರತರಬೇಕಾದರೆ ಅಷ್ಟೇ ಪ್ರಮಾಣದ ಚಿನ್ನವನ್ನು ಆರ್‌ಬಿಐ (RBI) ತೆಗೆದಿರಿಸುತ್ತದೆ. ದೇಶದಲ್ಲಿ ಹಣದುಬ್ಬರದ ಒತ್ತಡದಿಂದಾಗಿ ಕರೆನ್ಸಿಗಳ ಮೌಲ್ಯ ಕಡಿಮೆಯಾಗುತ್ತದೆ. ಆಗ ಚಿನ್ನದ ಬೆಲೆ ತನ್ನಿಂತಾನೇ ಏರಿಕೆಯಾಗುತ್ತದೆ.

ಕಡಿಮೆ ಬಡ್ಡಿ ದರಗಳು: ಬ್ಯಾಂಕ್‌ಗಳಲ್ಲಿ ಬಡ್ಡಿ ದರಗಳು ಕಡಿಮೆಯಾದಾಗ ಜನರಲ್ಲಿ ಹಣದ ಹರಿವಿನ ಪ್ರಮಾಣ ಹೆಚ್ಚಳವಾಗುತ್ತದೆ. ಇದರಿಂದ ಚಿನ್ನ ಖರೀದಿ ಪ್ರಮಾಣ ಹೆಚ್ಚಾಗುತ್ತದೆ. ಇದು ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ವೃದ್ಧಿಗೆ ದಾರಿ ಮಾಡಿಕೊಡುತ್ತದೆ.

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

urea
2:13 PM January 22, 2025

ಕೃಷಿ ಸಬ್ಸಿಡಿಗೆ ರೈತರು ಬಿಟ್ಟು ಉಳಿದವರೆಲ್ಲ ಫಲಾನುಭವಿಗಳು!

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು