Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್ ಆಲಿ ಖಾನ್‌ನನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?
Saif Ali Khan: ಮುಂಬೈಯ ಬಾಂದ್ರಾದಲ್ಲಿರುವ ಬಾಲಿವುಡ್ ನಟ ಸೈಫ್ ಆಲಿ ಖಾನ್ ಅವರ ಮನೆಗೆ ನುಗ್ಗಿದ ದರೋಡೆಕೋರನೊಬ್ಬ ಚೂರಿಯಿಂದ ಇರಿದು ಅವರನ್ನು ಗಾಯಗೊಳಿಸುವ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಗಾಯಗೊಂಡ ಅವರನ್ನು ಆಟೋದಲ್ಲೇ ಆಸ್ಪತ್ರೆಗೆ ಕರೆದೊಯ್ದಿರುವ ವಿಡಿಯೊ ವೈರಲ್ ಆಗಿದೆ.
ಮುಂಬೈ, ಜ. 16, 2025: ಗುರುವಾರ (ಜ. 16) ಮುಂಜಾನೆ ಮುಂಬೈಯ ಬಾಂದ್ರಾದಲ್ಲಿರುವ ಬಾಲಿವುಡ್ ನಟ ಸೈಫ್ ಆಲಿ ಖಾನ್ (Saif Ali Khan) ಅವರ ಮನೆಗೆ ನುಗ್ಗಿದ ದರೋಡೆಕೋರನೊಬ್ಬ ಚೂರಿಯಿಂದ ಇರಿದು ಅವರನ್ನು ಗಾಯಗೊಳಿಸುವ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಗಾಯಗೊಂಡ ಸೈಫ್ ಆಲಿ ಖಾನ್ ಅವರನ್ನು ಅವರ ಹಿರಿಯ ಪುತ್ರ ಇಬ್ರಾಹಿಂ (Ibrahim) ಆಟೋ ರಿಕ್ಷಾದಲ್ಲಿ ಮುಂಬೈಯ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನುವ ವಿಚಾರ ಇದೀಗ ಹೊರ ಬಿದ್ದಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಮನೆಯೊಳಗೆ ನುಗ್ಗಿದ ಅಪರಿಚಿತ ವ್ಯಕ್ತಿ ಸೈಫ್‌ಗೆ ಚೂರಿಯಿಂದ 6 ಬಾರಿ ಇರಿದಿದ್ದ. ಕಾರು ಲಭ್ಯವಿಲ್ಲದ ಕಾರಣ ಗಾಯಗೊಂಡು ರಕ್ತ ಸೋರಿಕೆಯಾಗುತ್ತಿದ್ದ ತಂದೆಯನ್ನು ಇಬ್ರಾಹಿಂ ಆಟೋದಲ್ಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
After the attack at Saif Ali Khan’s Bandra West residence, he was rushed to Lilavati Hospital in an auto-rickshaw. Considering he owns several luxury cars, why was an auto chosen over an ambulance or his own car? pic.twitter.com/L353FXRwRO
— Meme Farmer (@craziestlazy) January 16, 2025
ತಕ್ಷಣ ಹೊರಡಲು ಕಾರು ಸಿದ್ಧವಾಗಿಲ್ಲದ ಕಾರಣ ಇಬ್ರಾಹಿಂ ಸಮಯ ವ್ಯರ್ಥ ಮಾಡಲು ಇಚ್ಛಿಸದೆ ಸುಮಾರು 2 ಕಿ.ಮೀ. ದೂರದ ಆಸ್ಪತ್ರೆಗೆ ಆಟೋದಲ್ಲೇ ತಂದೆಯನ್ನು ಕರೆದೊಯ್ದಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಆಸ್ಪತ್ರೆ ಬಳಿ ಸೈಫ್ ಆಲಿ ಖಾನ್ ಅವರ ಪತ್ನಿ ಕರೀನಾ ಕಪೂರ್ ಕೂಡ ಆಟೋದ ಬಳಿ ಕಂಡು ಬಂದಿರುವ ವಿಡಿಯೊ ವೈರಲ್ ಆಗಿದೆ. ಕಳ್ಳತನ ತಡೆಯುವ ಪ್ರಯತ್ನ ಮಾಡಿದಾಗ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
ಸೈಫ್ ಅಲಿ ಖಾನ್ ಆಸ್ತಿ 1,200 ಕೋಟಿ ರೂ.ಗೂ ಅಧಿಕ. ಇತ್ತ ಕರೀನಾ ಕಪೂರ್ 485 ಕೋಟಿ ರೂ.ಗಳ ಒಡತಿ. ಜತೆಗೆ ಇವರ ಬಳಿ ಹಲವು ಐಷಾರಾಮಿ ಕಾರುಗಳ ಸಂಗ್ರಹವಿದೆ. ಹೀಗಿದ್ದೂ ತುರ್ತು ಸಂದರ್ಭದಲ್ಲಿ ಆಟೋವೇ ನೆರವಿಗೆ ಬಂದಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಯಶಸ್ವಿ ಸರ್ಜರಿ
ಸೈಫ್ ಆಲಿ ಖಾನ್ ಅವರಿಗೆ 6 ಕಡೆ ಗಾಯಗಳಾಗಿದ್ದು, ಸರ್ಜರಿ ನಡೆಸಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಬೆಳಗ್ಗೆ 5.30ಕ್ಕೆ ಸರ್ಜರಿ ಆರಂಭಿಸಲಾಗಿತ್ತು. ಹಲವು ಗಂಟೆಗಳ ಕಾಲ ನಡೆದ ಸರ್ಜರಿ ಸರ್ಜರಿ ವೇಳೆ ಸೈಫ್ ಅಲಿಖಾನ್ ದೇಹದಲ್ಲಿ ಚಾಕುವಿನ ಚೂರು ಪತ್ತೆಯಾಗಿತ್ತು. ವೈದ್ಯರು ಸದ್ಯ ಅದನ್ನು ಹೊರ ತೆಗೆದಿದ್ದಾರೆ. ಸೈಫ್ ಅಲಿ ಖಾನ್ಗೆ ಚಾಕು ಇರಿತ ಪ್ರಕರಣದಲ್ಲಿ ಮನೆಯಲ್ಲಿ ಕೆಲಸದವರ ಮೇಲೆ ಅನುಮಾನ ಮೂಡಿದ್ದು, ಈ ನಿಟ್ಟಿನಲ್ಲಿಯೂ ತನಿಖೆ ಆರಂಭಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Saif Ali Khan: ಮನೆಕೆಲಸದವನಿಗೆ ಅಟ್ಯಾಕ್ ಬಗ್ಗೆ ಮೊದಲೇ ತಿಳಿದಿತ್ತಾ? ಸೈಫ್ ಮೇಲಿನ ದಾಳಿಗೆ ಪೊಲೀಸರು ಹೇಳಿದ್ದೇನು?
ಸೈಫ್ ಅವರು ‘ಸದ್ಗುರು ಶರಣ್’ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದಾರೆ. 5 ಬೆಡ್ರೂಂ ಮನೆ ಇದಾಗಿದೆ. ಇದರ ಬೆಲೆ 100 ಕೋಟಿ ರೂ. ಎನ್ನಲಾಗಿದೆ. ಸ್ವಿಮ್ಮಿಂಗ್ ಪೂಲ್, ಥಿಯೇಟರ್ ಮೊದಲಾದ ವ್ಯವಸ್ಥೆ ಹೊಂದಿರುವ ಈ ಐಷರಾಮಿ ಮನೆಗೆ ಸೂಕ್ತ ಭದ್ರತೆ ಇರಲಿಲ್ಲ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಕಳ್ಳ ಪೈಪ್ ಮೂಲಕ ಸೈಫ್ ಮನೆ ಪ್ರವೇಶಿಸಿದ್ದಾನೆ ಎನ್ನಲಾಗಿದೆ.