ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೀರೋ ಅಪ್ಪಂದಿರ ಸಂಖ್ಯೆಯಲ್ಲಿ ಹೆಚ್ಚಳ: 62% ರಷ್ಟು ಭಾರತೀಯ ಅಪ್ಪಂದಿರು ಕುಟುಂಬದ ಆರ್ಥಿಕ ಹೊಣೆಗಾರಿಕೆ ನಿಭಾಯಿಸುತ್ತಾರೆ — PNB ಮೆಟ್‌ಲೈಫ್ ಸಮೀಕ್ಷೆ

ಅಪ್ಪಂದಿರ ದಿನದಂದು ಪ್ರಾರಂಭವಾದ ಮತ್ತು ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಭಾರತ ದಾದ್ಯಂತ ನಡೆಸಿದ ರಾಷ್ಟ್ರವ್ಯಾಪಿ ಸಮೀಕ್ಷೆಯು ಅಪ್ಪಂದಿರನ್ನು ಅವರ ಆರ್ಥಿಕ ವರ್ತನೆಗಳ ಆಧಾರದ ಮೇಲೆ ತಮ್ಮ 'ಅಪ್ಪಂದಿರ ಪ್ರಕಾರ' ವನ್ನು ಗುರುತಿಸುವಲ್ಲಿ ತೊಡಗಿಸಿ ಕೊಂಡಿದ್ದು, ಅವರನ್ನು ಮೂರು ವಿಭಿನ್ನ ವ್ಯಕ್ತಿಗಳಾಗಿ ವರ್ಗೀಕರಿಸಿತು.

ಮುಂಬೈ: ಹೊಸ PNB ಮೆಟ್‌ಲೈಫ್ ಸಮೀಕ್ಷೆ ಪ್ರಕಾರ, ಸುಮಾರು ಮೂರನೇ ಎರಡರಷ್ಟು ಭಾರತೀಯ ಅಪ್ಪಂದಿರುವ ಈಗ ತಮ್ಮನ್ನು "ಹೀರೋ ಅಪ್ಪಂದಿರು" ಎಂಬುದಾಗಿ ಪರಿಗಣಿಸುತ್ತಾರೆ. ನಮ್ಮ ಜೀವನದಲ್ಲಿ ಅಪ್ಪಂದಿರ ಪ್ರಮುಖ ಪಾತ್ರವನ್ನು ಗುರುತಿಸಿ, ಭಾರತದ ಪ್ರಮುಖ ಜೀವ ವಿಮೆದಾರರಲ್ಲಿ ಒಬ್ಬರಾದ PNB ಮೆಟ್‌ಲೈಫ್ ಇಂಡಿಯಾ ಇನ್ಶೂರೆನ್ಸ್ ಲಿಮಿಟೆಡ್ (PNB ಮೆಟ್‌ ಲೈಫ್) ಅವರು ಆರ್ಥಿಕ ನಿರ್ಧಾರ ತೆಗೆದುಕೊಳ್ಳುವಲ್ಲಿ ತಮ್ಮ ಪಾತ್ರವನ್ನು ಹೇಗೆ ಗ್ರಹಿಸುತ್ತಾರೆ ಎಂಬ ಕುರಿತು ಅವಲೋಕನ ನಡೆಸಿತು.

ಅಪ್ಪಂದಿರ ದಿನದಂದು ಪ್ರಾರಂಭವಾದ ಮತ್ತು ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಭಾರತದಾದ್ಯಂತ ನಡೆಸಿದ ರಾಷ್ಟ್ರವ್ಯಾಪಿ ಸಮೀಕ್ಷೆಯು ಅಪ್ಪಂದಿರನ್ನು ಅವರ ಆರ್ಥಿಕ ವರ್ತನೆ ಗಳ ಆಧಾರದ ಮೇಲೆ ತಮ್ಮ 'ಅಪ್ಪಂದಿರ ಪ್ರಕಾರ' ವನ್ನು ಗುರುತಿಸುವಲ್ಲಿ ತೊಡಗಿಸಿಕೊಂಡಿದ್ದು, ಅವರನ್ನು ಮೂರು ವಿಭಿನ್ನ ವ್ಯಕ್ತಿಗಳಾಗಿ ವರ್ಗೀಕರಿಸಿತು.

ಇದನ್ನೂ ಓದಿ: Bones Health: ನಮ್ಮ ಮೂಳೆಗಳು ಬಲವಾಗಿರಲು ಏನೇನು ಬೇಕು ಗೊತ್ತೇ?

ಪ್ರತಿಕ್ರಿಯಿಸಿದವರಲ್ಲಿ ಗಮನಾರ್ಹವಾಗಿ 62% ಅಪ್ಪಂದಿರು ತಮ್ಮನ್ನು ತಾವು ‘ಹೀರೋ ಅಪ್ಪಂದಿರು’ ಎಂಬುದಾಗಿ, ಅಂದರೆ ಅವರ ಕುಟುಂಬದ ಆರ್ಥಿಕ ಭದ್ರತೆಯ ಪೋಷಕರೆಂಬುದಾಗಿ ಹೊರಹೊಮ್ಮಿದ್ದಾರೆ. 29% ಅಪ್ಪಂದಿರು ‘ಚಿಂತನಶೀಲ ಅಪ್ಪಂದಿರು’ ಎಂಬುದಾಗಿ, ಅಂದರೆ ಅವರ ಕುಟುಂಬದ ಹಣಕಾಸು ನಿರ್ವಹಣೆಯಲ್ಲಿ ಎಚ್ಚರಿಕೆಯ, ದೀರ್ಘಕಾಲೀನ ಕಾರ್ಯನಿರ್ಧಾರವನ್ನು ತೆಗೆದುಕೊಳ್ಳುವ ಕಾರ್ಯತಂತ್ರದ ಯೋಜಕರಾಗಿ ಹೊರ ಹೊಮ್ಮಿದ್ದಾರೆ. ಉಳಿದ 9% ಅಪ್ಪಂದಿರು ‘ಶಿಸ್ತಿನ ಅಪ್ಪಂದಿರು’ ಎಂಬುದಾಗಿ, ಅಂದರೆ ಅವರ ಹಣಕಾಸಿನ ನಿರ್ಧಾರಗಳಲ್ಲಿ ನಿಯಮಿತ, ನಿಯಂತ್ರಿತ ಮತ್ತು ರಚನೆಗೆ ಆದ್ಯತೆ ನೀಡುವ ಸ್ಥಿರ ಉಳಿತಾಯಗಾರರು ಎಂಬುದಾಗಿ ಹೊರ ಹೊಮ್ಮಿದ್ದಾರೆ.

ಭಾರತದಾದ್ಯಂತ ನಗರ ಮತ್ತು ಅರೆ-ನಗರ ನಗರಗಳಲ್ಲಿ ಇಂಟರಾಕ್ಟಿವ್ ಮೈಕ್ರೋಸೈಟ್ ಮತ್ತು QR ಕೋಡ್-ಮುಖಾಂತರದ ಆಕ್ಟಿವೇಶನ್‌ಗಳ ಮೂಲಕ ಸಮೀಕ್ಷೆಯನ್ನು ನಡೆಸಿ, ದೇಶಾದ್ಯಂತ 6000 ಕ್ಕೂ ಹೆಚ್ಚು ಅಪ್ಪಂದಿರುಗಳಿಂದ ಒಳನೋಟಗಳನ್ನು ಸಂಗ್ರಹಿಸುವ ಮೂಲಕ, ಇದನ್ನು ಆಧುನಿಕ ಭಾರತೀಯ ತಂದೆಯಂದಿರ ಆರ್ಥಿಕ ಮನಃಸ್ಥಿತಿಯ ಕುರಿತಾಗಿನ ಅತ್ಯಂತ ಸಮಗ್ರ ಸಮೀಕ್ಷೆಗಳಲ್ಲಿ ಒಂದಾಗಿಸಿತು.

PNB ಮೆಟ್‌ಲೈಫ್‌ನ ಚೀಫ್ ಮಾರ್ಕೆಟಿಂಗ್ ಮತ್ತು ಕಮ್ಯೂನಿಕೇಶನ್ಸ್ ಆಫೀಸರ್ ಆದ ಸೌರಭ್ ಲೋಹ್ತಿಯಾ ಅವರು ಮಾತನಾಡುತ್ತಾ, “ಇಂದಿನ ಭಾರತೀಯ ತಂದೆಯರು ಕೇವಲ ಪೂರೈಕೆ ದಾರರಲ್ಲ; ಅವರು ರಕ್ಷಕರು, ಯೋಜಕರು ಮತ್ತು ಪೋಷಕರಾಗಿದ್ದಾರೆ — ಅವರು ಭಾವನಾತ್ಮಕ ವಾಗಿ ಮಾತ್ರವಲ್ಲದೆ ಆರ್ಥಿಕವಾಗಿಯೂ ಹೆಚ್ಚಿನ ಪ್ರಮಾಣದಲ್ಲಿ ಜಾಗೃತರಾಗಿದ್ದಾರೆ.

ತಮ್ಮ ಕುಟುಂಬಗಳಿಗೆ ಸುರಕ್ಷಿತವಾದ ಮತ್ತು ಅರ್ಥಪೂರ್ಣವಾದ ಭವಿಷ್ಯವನ್ನು ನಿರ್ಮಿಸುವಲ್ಲಿ ಅಪ್ಪಂದಿರು ಎಷ್ಟು ಆಳವಾಗಿ ಬದ್ಧರಾಗಿದ್ದಾರೆ ಎಂಬುದನ್ನು 'ಡ್ಯಾಡ್ ಟೈಪ್' ಸಮೀಕ್ಷೆಯು ತೋರಿ ಸುತ್ತದೆ. PNB ಮೆಟಲೈಫ್‌ನಲ್ಲಿ, ಅವರ ವಿಕಸನಗೊಳ್ಳುತ್ತಿರುವ ಆಕಾಂಕ್ಷೆಗಳು ಮತ್ತು ಜವಾಬ್ದಾರಿ ಗಳನ್ನು ಪ್ರತಿಬಿಂಬಿಸುವ ರಕ್ಷಣೆ ಮತ್ತು ಉಳಿತಾಯ ಪರಿಹಾರಗಳೊಂದಿಗೆ ಈ ಪ್ರಯಾಣದಲ್ಲಿ ಅವರನ್ನು ಬೆಂಬಲಿಸುವುದಕ್ಕೆ ನಾವು ಹೆಮ್ಮೆಪಡುತ್ತೇವೆ”.