#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IND vs ENG: ವರುಣ್‌ ಚಕ್ರವರ್ತಿ ಬೌಲಿಂಗ್‌ ವ್ಯರ್ಥ, ಇಂಗ್ಲೆಂಡ್‌ಗೆ ಮಣಿದ ಭಾರತ!

IND vs ENG 3rd T20I Highlights: ವರುಣ್‌ ಚಕ್ರವರ್ತಿ ಸ್ಪಿನ್‌ ಮೋಡಿಯ ಹೊರತಾಗಿಯೂ ಭಾರತ ತಂಡ ಮೂರನೇ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 26 ರನ್‌ಗಳಿಂದ ಸೋಲು ಅನುಭವಿಸಿತು. ಈ ಪಂದ್ಯದ ಗೆಲುವಿನ ಮೂಲಕ ಆಂಗ್ಲರು ಟಿ20ಐ ಸರಣಿಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ.

IND vs ENG: ಮೂರನೇ ಪಂದ್ಯ ಗೆದ್ದು ಟಿ20ಐ ಸರಣಿಯನ್ನು ಜೀವಂತವಾಗಿರಿಸಿಕೊಂಡ ಇಂಗ್ಲೆಂಡ್‌!

Ben Duckett-Indian Players

Profile Ramesh Kote Jan 28, 2025 11:15 PM

ರಾಜ್‌ಕೋಟ್‌: ಸತತ ಎರಡು ಪಂದ್ಯಗಳನ್ನು ಗೆದ್ದಿದ್ದ ಭಾರತ ತಂಡ, ಬ್ಯಾಟಿಂಗ್‌ ವೈಫಲ್ಯದಿಂದ ಮೂರನೇ ಟಿ20ಐ ಪಂದ್ಯದಲ್ಲಿ(IND vs ENG 3rd T20I Highlights) ಇಂಗ್ಲೆಂಡ್‌ ಎದುರು ಕೇವಲ 26 ರನ್‌ಗಳಿಂದ ಸೋಲು ಅನುಭವಿಸಿದೆ. ಈ ಪಂದ್ಯದ ಗೆಲುವಿನ ಮೂಲಕ ಜೋಸ್‌ ಬಟ್ಲರ್‌ ನಾಯಕತ್ವದ ಪ್ರವಾಸಿಗರು ಟಿ20ಐ ಸರಣಿಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ.

ಮಂಗಳವಾರ ಇಲ್ಲಿನ ನಿರಂಜನ್‌ ಶಾ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ನೀಡಿದ್ದ 172 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡ, ಇಂಗ್ಲೆಂಡ್‌ ಬೌಲರ್‌ಗಳ ಶಿಸ್ತು ಬದ್ದ ಬೌಲಿಂಗ್‌ ದಾಳಿಗೆ ನಲುಗಿ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 9 ವಿಕೆಟ್‌ಗಳ ನಷ್ಟಕ್ಕೆ 145 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು. ಈ ಪಂದ್ಯದಲ್ಲಿ ಸೋತರೂ ಆತಿಥೇಯರು ಸರಣಿಯಲ್ಲಿ 2-1 ಮುನ್ನಡೆಯನ್ನು ಪಡೆದಿದ್ದಾರೆ.

IND vs ENG: ʻಪರ್ಫೆಕ್ಟ್‌ ಡಿಆರ್‌ಎಸ್‌ʼ-ಪಂತ್‌ಗಿಂತ ಸಂಜು ಉತ್ತಮ ವಿಕೆಟ್‌ ಕೀಪರ್‌ ಎಂದ ಫ್ಯಾನ್ಸ್‌!

ಗುರಿ ಹಿಂಬಾಲಿಸಿದ ಭಾರತ ತಂಡದ ಪರ ಅಭಿಷೇಕ್‌ ಶರ್ಮಾ (24) ಹಾಗೂ ಹಾರ್ದಿಕ್‌ ಪಾಂಡ್ಯ (40) ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಆದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಸಮಯವನ್ನು ಕಳೆಯಲಿಲ್ಲ. 24 ರನ್‌ಗಳನ್ನು ಗಳಿಸಿ ಸಿಕ್ಕ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಅಭಿಷೇಕ್‌ ವಿಫಲರಾದರು. ಕೊನೆಯಲ್ಲಿ ಹಾರ್ದಿಕ್‌ ಏಕಾಂಗಿ ಹೋರಾಟ ನಡೆಸಿದ್ದರೂ ಪ್ರಯೋಜನವಾಗಲಿಲ್ಲ. ಇನ್ನುಳಿದಂತೆ ಸಂಜು ಸ್ಯಾಮ್ಸನ್‌, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ವಾಷಿಂಗ್ಟನ್‌ ಸುಂದರ್‌, ಅಕ್ಷರ್‌ ಪಟೇಲ್‌ ವಿಫಲರಾದರು.

ಇಂಗ್ಲೆಂಡ್‌ ಪರ ಜೋಫ್ರಾ ಆರ್ಚರ್‌ ಹಾಗೂ ಬ್ರೈಡನ್‌ ಕಾರ್ಸ್‌ ತಲಾ ಎರಡೆರಡು ವಿಕೆಟ್‌ ಕಿತ್ತರೆ, ಜೇಮಿ ಓವರ್ಟನ್‌ 3 ವಿಕೆಟ್‌ ಕಿತ್ತರು. ಆದರೆ, ಆದಿಲ್‌ ರಶೀದ್‌ ಕೀ ಬ್ಯಾಟ್ಸ್‌ಮನ್‌ ತಿಲಕ್‌ ವರ್ಮಾ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡುವ ಜೊತೆಗೆ 4 ಓವರ್‌ಗಳಿಗೆ ಕೇವಲ 15 ರನ್‌ ನೀಡಿದ್ದರು.



171 ರನ್‌ಗಳನ್ನು ಕಲೆ ಹಾಕಿದ್ದ ಇಂಗ್ಲೆಂಡ್‌

ಇದಕ್ಕೂ ಮುನ್ನ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಇಂಗ್ಲೆಂಡ್‌ ತಂಡ, ವರುಣ್‌ ಚಕ್ರವರ್ತಿ ಸ್ಪಿನ್‌ ಮೋಡಿಯ ಹೊರತಾಗಿಯೂ ಬೆನ್‌ ಡಕೆಟ್‌ (51 ರನ್‌) ಅರ್ಧಶತಕದ ಬಲದಿಂದ ತನ್ನ ಪಾಲಿಗೆ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 171 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಭಾರತ ತಂಡಕ್ಕೆ 172 ರನ್‌ಗಳ ಗುರಿಯನ್ನು ನೀಡಿತ್ತು.

ಇಂಗ್ಲೆಂಡ್‌ಗೆ ಅದ್ಭುತ ಆರಂಭ

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಇಂಗ್ಲೆಂಡ್‌ ತಂಡ ಬಹುಬೇಗ ಫಿಲ್‌ ಸಾಲ್ಟ್‌ (5) ವಿಕೆಟ್‌ ಕಳೆದುಕೊಂಡಿತು. ನಂತರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಾಯಕ ಜೋಸ್‌ ಬಟ್ಲರ್‌ 22 ಎಸೆತಗಳಲ್ಲಿ 24 ರನ್‌ ಗಳಿಸಿದರು ಹಾಗೂ ಬೆನ್‌ ಡಕೆಟ್‌ ಜೊತೆಗೆ ಮುರಿಯದ ಎರಡನೇ ವಿಕೆಟ್‌ಗೆ 74 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು. ಆದರೆ, ವರುಣ್‌ ಚಕ್ರವರ್ತಿ ಎಸೆತದಲ್ಲಿ ಜೋಸ್‌ ಬಟ್ಲರ್‌ ವಿಕೆಟ್‌ ಒಪ್ಪಿಸಿದರು.



ಬೆನ್‌ ಡಕೆಟ್‌ ಅರ್ಧಶತಕ

ಒಂದು ತುದಿಯಲ್ಲಿ ಉತ್ತಮ ಬ್ಯಾಟ್‌ ಮಾಡಿದ್ದ ಬೆನ್‌ ಡಕೆಟ್‌ ಅವರು ಕೇವಲ 28 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಏಳು ಬೌಂಡರಿಗಳೊಂದಿಗೆ 51 ರನ್‌ಗಳನ್ನು ಸಿಡಿಸಿದರು. ಆಮೂಲಕ ಇಂಗ್ಲೆಂಡ್‌ ತಂಡಕ್ಕೆ ಭರ್ಜರಿ ಆರಂಭ ತಂದುಕೊಟ್ಟು ವಿಕೆಟ್‌ ಒಪ್ಪಿಸಿದ್ದರು. ಸ್ಪಿನ್‌ ಮೋಡಿ ಮಾಡಿದ ವರುಣ್‌ ಚಕ್ರವರ್ತಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿ 5 ವಿಕೆಟ್‌ ಸಾಧನೆ ಮಾಡಿದರು. ಆದರೆ, ಕೊನೆಯ ಹಂತದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರು ಎದುರಿಸಿದ ಕೇವಲ 24 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ ಒಂದು ಬೌಂಡರಿಯೊಂದಿಗೆ 43 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಇಂಗ್ಲೆಂಡ್‌ ತಂಡವನ್ನು 150 ರ ಸನಿಹ ತಂದು ವಿಕೆಟ್‌ ಒಪ್ಪಿಸಿದರು.

ಸ್ಕೋರ್‌ ವಿವರ

ಇಂಗ್ಲೆಂಡ್‌: 20 ಓವರ್‌ಗಳಿಗೆ 171-9 (ಬೆನ್‌ ಡಕೆಟ್‌ 51 ರನ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ 43, ಜೋಸ್‌ ಬಟ್ಲರ್‌ 24; ವರುಣ್‌ ಚಕ್ರವರ್ತಿ 24ಕ್ಕೆ 5, ಹಾರ್ದಿಕ್‌ ಪಾಂಡ್ಯ 33ಕ್ಕೆ 2)

ಭಾರತ: 20 ಓವರ್‌ಗಳಿಗೆ 145-9 (ಹಾರ್ದಿಕ್‌ ಪಾಂಡ್ಯ 40, ಅಭಿಷೇಕ್‌ ಶರ್ಮಾ 24, ಜೇಮಿ ಓವರ್ಟನ್‌ 24ಕ್ಕೆ 3, ಆದಿಲ್‌ ರಶೀದ್‌ 15ಕ್ಕೆ 1, ಜೋಫ್ರಾ ಆರ್ಚರ್‌ 33ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ವರುಣ್‌ ಚಕ್ರವರ್ತಿ