ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ಟೆಸ್ಟ್‌ ತಂಡದಲ್ಲಿ ರೋಹಿತ್‌ ಶರ್ಮಾ ಸ್ಥಾನ ತುಂಬಬಲ್ಲ ಟಾಪ್‌ 5 ಆಟಗಾರರು!

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಇನ್ನು ಕೇವಲ ಒಂದೂವರೆ ತಿಂಗಳು ಮಾತ್ರ ಬಾಕಿ ಇದೆ. ಇದರ ನಡುವೆ ರೋಹಿತ್‌ ಶರ್ಮಾ ಬುಧವಾರ ಟೆಸ್ಟ್‌ ಕ್ರಿಕೆಟ್‌ಗೆ ಹಠಾತ್‌ ವಿದಾಯ ಹೇಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಇದೀಗ ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ರೋಹಿತ್‌ ಶರ್ಮಾ ಸ್ಥಾನದಲ್ಲಿ ಭಾರತ ಟೆಸ್ಟ್‌ ತಂಡದ ಪರ ಯಾರು ಇನಿಂಗ್ಸ್‌ ಆರಂಭಿಸಲಿದ್ದಾರೆಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

1/6

ಟಾಪ್‌ 5 ಆಟಗಾರರು

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ಮುಗಿದ ಬಳಿಕ ಭಾರತ ತಂಡ, ಇಂಗ್ಲೆಂಡ್‌ ಪ್ರವಾಸವನ್ನು ಹಮ್ಮಿಕೊಳ್ಳಲಿದೆ. ಈ ಸರಣಿಗೂ ಮುನ್ನ ಬಿಸಿಸಿಐಗೆ ಒಂದು ತಲೆ ನೋವು ಶುರುವಾಗಿದೆ. ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಜೊತೆ ಯಾರು ಇನಿಂಗ್ಸ್‌ ಆರಂಭಿಸಬಹುದೆಂಬ ಬಗ್ಗೆ ಇನ್ನೂ ಖಚಿತತೆ ಇಲ್ಲ. ಅಂದ ಹಾಗೆ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ರೋಹಿತ್‌ ಶರ್ಮಾ ಸ್ಥಾನ ತುಂಬಬಲ್ಲ ಐವರು ಸ್ಟಾರ್‌ ಆಟಗಾರರನ್ನು ಇಲ್ಲಿ ವಿವರಿಸಲಾಗಿದೆ.

2/6

ಶುಭಮನ್‌ ಗಿಲ್‌

ಭಾರತ ಟೆಸ್ಟ್‌ ತಂಡದ ನಾಯಕತ್ವದ ರೇಸ್‌ನಲ್ಲಿ ಶುಭಮನ್‌ ಗಿಲ್‌ ಮುಂಚೂಣಿಯಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್‌ಗೂ ಮುನ್ನ ಭಾರತ ಟೆಸ್ಟ್‌ ತಂಡದಲ್ಲಿ ರೋಹಿತ್‌ ಶರ್ಮಾ ಜೊತೆ ಶುಭಮನ್‌ ಗಿಲ್‌ ಇನಿಂಗ್ಸ್‌ ಆರಂಭಿಸುತ್ತಿದ್ದರು ಹಾಗೂ ಅವರು ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಜೈಸ್ವಾಲ್‌ ಬಂದ ಬಳಿಕ ಗಿಲ್‌ ಮೂರನೇ ಸ್ಥಾನಕ್ಕೆ ಇಳಿದಿದ್ದರು.

3/6

ಕೆಎಲ್‌ ರಾಹುಲ್‌

ಕೆಎಲ್‌ ರಾಹುಲ್‌ ತಮ್ಮ ಟೆಸ್ಟ್‌ ವೃತ್ತಿ ಜೀವನದ ಬಹುತೇಕ ಅವಧಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡಿದ್ದರು. ನಂತರ ಅವರು ಮಧ್ಯಮ ಕ್ರಮಾಂಕಕ್ಕೆ ಇಳಿದಿದ್ದರು. ಕಳೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ರಾಹುಲ್‌, ಸನ್ನಿವೇಶಕ್ಕೆ ತಕ್ಕಂತೆ ವಿವಿಧ ಬ್ಯಾಟಿಂಗ್‌ ಕ್ರಮಾಂಕಗಳಲ್ಲಿ ಆಡಿದ್ದರು.

4/6

ಸಾಯಿ ಸುದರ್ಶನ್‌

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಗುಜರಾತ್‌ ಟೈಟನ್ಸ್‌ ತಂಡದ ಆರಂಭಿಕ ಸಾಯಿ ಸುದರ್ಶನ್‌ ಅತ್ಯುತ್ತಮ ಉತ್ತಮ ಫಾರ್ಮ್‌ನಲ್ಲಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಅವರು ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಟೆಸ್ಟ್‌ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಅವರು ಕೌಂಟಿ ಕ್ರಿಕೆಟ್‌ನಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ.

5/6

ಅಭಿಮನ್ಯು ಈಶ್ವರನ್‌

ಅಭಿಮನ್ಯು ಈಶ್ವರನ್‌ ಅವರು ಭಾರತ ಎ ತಂಡದಲ್ಲಿ ನಿಯಮಿತವಾಗಿ ಆಡುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೂರ್ನಿಯಲ್ಲಿಯೂ ಅವರು ಭಾರತ ತಂಡದಲ್ಲಿದ್ದರು. ದೇಶಿ ಕ್ರಿಕೆಟ್‌ನಲ್ಲಿ ಅವರು 100ಕ್ಕೂ ಅಧಿಕ ಪಂದ್ಯಗಳಿಂದ 7500 ರನ್‌ಗಳನ್ನು ದಾಖಲಿಸಿದ್ದರು. ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಭಾರತಕ್ಕೆ ಇವರನ್ನು ಆರಂಭಿಕನಾಗಿ ಪರಿಗಣಿಸಬಹುದು.

6/6

ಋತುರಾಜ್‌ ಗಾಯಕ್ವಾಡ್‌

ಋತುರಾಜ್‌ ಗಾಯಕ್ವಾಡ್‌ ಅವರನ್ನು ಭಾರತ ತಂಡದ ಭವಿಷ್ಯದ ಸ್ಟಾರ್‌ ಆಟಗಾರ ಎಂದು ಹೇಳಲಾಗುತ್ತಿತ್ತು, ಅದರಂತೆ ಅವರು ಟೀಮ್‌ ಇಂಡಿಯಾದಲ್ಲಿಯೂ ಸ್ಥಾನ ಪಡೆದಿದ್ದರು. ನಂತರ ಅವರು ಗಾಯದ ತಂಡದಿಂದ ಹೊರ ನಡೆದಿದ್ದರು. ಅವರು ಬ್ಯಾಟಿಂಗ್‌ ಕೌಶಲ ಹಾಗೂ ಸಾಮರ್ಥ್ಯ ಟೆಸ್ಟ್‌ ಕ್ರಿಕೆಟ್‌ಗೆ ಸೂಕ್ತವಾಗಿದೆ. ಹಾಗಾಗಿ ಅವರನ್ನು ಕೂಡ ಆರಂಭಿಕನಾಗಿ ಪರಿಗಣಿಸಬಹುದು.