ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಭಾರತದ ಟೆಸ್ಟ್‌ ತಂಡಕ್ಕೆ ಜಸ್‌ಪ್ರೀತ್‌ ಬುಮ್ರಾ ನಾಯಕನಾಗಬೇಕೆಂದ ಮದನ್‌ ಲಾಲ್‌!

ಮುಂಬರುವ ಇಂಗ್ಲೆಂಡ್‌ ಟೆಸ್ಟ್‌ ಸರಣಿಯ ನಿಮಿತ್ತ ಭಾರತ ಟೆಸ್ಟ್‌ ತಂಡಕ್ಕೆ ಹಿರಿಯ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾರನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡಬೇಕೆಂದು ಮಾಜಿ ಕ್ರಿಕೆಟಿಗ ಮದನ್‌ ಲಾಲ್‌ ಸಲಹೆ ನೀಡಿದ್ದಾರೆ. ಇದೇ ವೇಳೆ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ ನಿವೃತ್ತಿಯ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದ ಟೆಸ್ಟ್‌ ತಂಡಕ್ಕೆ ಬುಮ್ರಾ ನಾಯಕನಾಗಬೇಕು: ಮದನ್‌ ಲಾಲ್‌!

ಭಾರತ ಟೆಸ್ಟ್‌ ತಂಡಕ್ಕೆ ಜಸ್‌ಪ್ರೀತ್‌ ಬುಮ್ರಾ ನಾಯಕನಾಗಬೇಕೆಂದ ಮದನ್‌ ಲಾಲ್‌.

Profile Ramesh Kote May 10, 2025 6:37 PM

ನವದೆಹಲಿ: ಟೆಸ್ಟ್‌ ಕ್ರಿಕೆಟ್‌ಗೆ ರೋಹಿತ್‌ ಶರ್ಮಾ(Rohit sharma) ಹಠಾತ್‌ ವಿದಾಯ ಹೇಳಿದ್ದಾರೆ.ಈ ಹಿನ್ನೆಲೆಯಲ್ಲಿ ಭಾರತ ಟೆಸ್ಟ್‌ ತಂಡಕ್ಕೆ ನೂತನ ನಾಯಕನನ್ನು ಆಯ್ಕೆ ಮಾಡಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಪ್ರಯತ್ನಿಸುತ್ತಿದೆ.ಇದರ ನಡುವೆ ಹಲವು ಮಾಜಿ ಆಟಗಾರರು ಭಾರತ ಟೆಸ್ಟ್‌ ತಂಡದ ನಾಯಕತ್ವಕ್ಕೆ ಸೂಕ್ತ ಅಭ್ಯರ್ಥಿಗಳನ್ನು ಆರಿಸುತ್ತಿದ್ದಾರೆ.ಅದರಂತೆ ಭಾರತ ತಂಡದ ಮಾಜಿ ಆಟಗಾರ ಮದನ್‌ ಲಾಲ್‌(Madnan Lal) ಬಿಸಿಸಿಐಗೆ ಉಪಯುಕ್ತ ಸಲಹೆಯನ್ನು ನೀಡಿದ್ದಾರೆ.ಹಿರಿಯ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾಗೆ(Jasprit Bumrah) ಭಾರತ ಟಸ್ಟ್‌ ತಂಡದ ನಾಯಕತ್ವ ನೀಡಬೇಕೆಂದು ಮಾಜಿ ಕ್ರಿಕೆಟಿಗ ಆಗ್ರಹಿಸಿದ್ದಾರೆ.

31ರ ವಯಸ್ಸಿನ ಅನುಭವಿ ಬೌಲರ್‌ ಆಗಿರುವ ಬುಮ್ರಾ ಈ ಹಿಂದೆ ಹಲವು ಬಾರಿ ಟೆಸ್ಟ್‌ ತಂಡವನ್ನು ಮುನ್ನಡೆಸಿದ್ದಾರೆ ಹಾಗೂ ಉಪನಾಯಕನಾಗಿ ರೋಹಿತ್‌ ಶರ್ಮಾಗೆ ನೆರವು ನೀಡಿದ್ದಾರೆ.ಬುಮ್ರಾ ನಾಯಕತ್ವದಲ್ಲಿ ಭಾರತ ತಂಡ, ಕಳೆದ ವರ್ಷ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್‌ ಪಂದ್ಯದಲ್ಲಿ 295 ರನ್‌ಗಳ ಅಂತರದಲ್ಲಿ ಜಯ ಕಂಡಿತ್ತು.ಇದು ಆಸೀಸ್‌ ನೆಲದಲ್ಲಿ ಭಾರತ ತಂಡಕ್ಕೆ ದೊಡ್ಡ ಅಂತರದ(ರನ್‌ಗಳ) ಜಯವಾಗಿದೆ.ನಂತರ ಈ ವರ್ಷದಲ್ಲಿ ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲೂ ಭಾರತ ಟೆಸ್ಟ್‌ ತಂಡವನ್ನು ಬುಮ್ರಾ ಕೊನೆಯ ಬಾರಿ ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಸ್ವಯಂ ಪ್ರೇರಿತರಾಗಿ ಬೆಂಚ್‌ ಕಾದಿದ್ದರು.

ʻರಾಹುಲ್‌ ದ್ರಾವಿಡ್‌ ನನಗೆ ಯಾವಾಗಲೂ ವಿಶೇಷʼ: ಕನ್ನಡಿಗನನ್ನು ಶ್ಲಾಘಿಸಿದ ರೋಹಿತ್‌ ಶರ್ಮಾ!

ಜಸ್‌ಪ್ರೀತ್‌ ಬುಮ್ರಾಗೆ ಟೆಸ್ಟ್‌ ನಾಯಕತ್ವ ನೀಡಬೇಕು

1983ರ ವಿಶ್ವಕಪ್‌ ಗೆಲುವಿನ ತಂಡದ ಸದಸ್ಯರಾಗಿದ್ದ ಮದನ್‌ ಲಾಲ್‌, ಭಾರತ ಟೆಸ್ಟ್‌ ತಂಡದ ನಾಯಕತ್ವಕ್ಕೆ ಜಸ್‌ಪ್ರೀತ್‌ ಬುಮ್ರಾ ಅವರನ್ನು ಬೆಂಬಲಿಸಿದ್ದಾರೆ. ಬುಮ್ರಾ ದೈಹಿಕವಾಗಿ ಸಂಪೂರ್ಣ ಫಿಟ್‌ ಇದ್ದು, ಟೆಸ್ಟ್‌ ಕ್ರಿಕೆಟ್‌ ನಾಯಕನಾಗಿಯೂ 15 ವಿಕೆಟ್‌ ಪಡೆದಿದ್ದಾರೆ ಮತ್ತು ಅವರ ಬೆಸ್ಟ್‌ ಸ್ಪೆಲ್‌ 18-6-30-5 ಆಗಿದೆ. ಹಾಗಾಗಿ ಟೆಸ್ಟ್‌ ತಂಡದ ನಾಯಕನಾಗಿ ರೋಹಿತ್‌ ಶರ್ಮಾ ಸ್ಥಾನವನ್ನು ತುಂಬಲು ಬುಮ್ರಾ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಭಾರತ ಟೆಸ್ಟ್‌ ತಂಡವನ್ನು ಮುನ್ನಡೆಸಲು ಜಸ್‌ಪ್ರೀತ್‌ ಬುಮ್ರಾ ಸೂಕ್ತ ಆಟಗಾರ. ಫಿಟ್‌ನೆಸ್ ಎಂಬುದು ವಿಭಿನ್ನ ಸಂಗತಿ, ಅವರು ಸಂಪೂರ್ಣ ಫಿಟ್‌ ಆಗಿದ್ದು,ಲಭ್ಯರಿದ್ದರೆ ಭಾರತ ಟೆಸ್ಟ್‌ ತಂಡದ ನಾಯಕತ್ವಕ್ಕೆ ಮೊದಲ ಆಯ್ಕೆಯಾಗಲಿದ್ದಾರೆ," ಎಂದು ಮದನ್‌ ಲಾಲ್‌ ಪಿಟಿಐ ಸುದ್ದಿ ಸಂಸ್ಥೆಯ ವಿಡಿಯೊದಲ್ಲಿ ತಿಳಿಸಿದ್ದಾರೆ.

ಟೆಸ್ಟ್‌ಗೆ ವಿದಾಯ ಹೇಳಿದ ರೋಹಿತ್‌ ಶರ್ಮಾಗೆ ವಿಶೇಷ ಸಂದೇಶ ರವಾನಿಸಿದ ಕ್ರಿಕೆಟ್‌ ದೇವರು!

ರೋಹಿತ್‌ ಶರ್ಮಾ ಟೆಸ್ಟ್‌ ನಿವೃತ್ತಿಯ ಬಗ್ಗೆ ಮದನ್‌ ಲಾಲ್‌ ಪ್ರತಿಕ್ರಿಯೆ

ಕಳೆದ ಮೇ 7ರಂದು 38ರ ವಯಸ್ಸಿನ ಭಾರತ ಏಕದಿನ ತಂಡದ ನಾಯಕ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ 11 ವರ್ಷಗಳ ತಮ್ಮ ದೀರ್ಘಾವಧಿ ಸ್ವರೂಪದ ಕೆರಿಯರ್‌ಗೆ ವಿದಾಯ ಹೇಳಿರುವುದನ್ನು ಮದನ್‌ ಲಾಲ್‌ ಸ್ವಾಗತಿಸಿದ್ದಾರೆ.

"ಒಬ್ಬ ದೊಡ್ಡ ಆಟಗಾರ ತಂಡದಲ್ಲಿದ್ದಾಗ ಬೇರೆ ಆಟಗಾರರಿಗೆ ಆಡಲು ಸ್ಥಾನವಿರುವುದಿಲ್ಲ. ಅವರು ನೇರವಾಗಿ ಮೊದಲ ಆಯ್ಕೆಯ ಆಟಗಾರರಾಗುತ್ತಾರೆ. ಆದರೆ ಯಾವುದೇ ಸಮಯದಲ್ಲಿ ಫಾರ್ಮ್‌ಗೆ ಮರಳಬಹುದು. ಅವರ ಬ್ಯಾಟಿಂಗ್‌ ಪ್ರದರ್ಶನ ಸದ್ಯ ಉತ್ತಮವಾಗಿಲ್ಲ. ಫಾರ್ಮ್‌ ಇರಲಿ ಅಥವಾ ಇಲ್ಲದೆ ಇರಲಿ, ನಿವೃತ್ತಿ ನಿರ್ಧಾರ ವೈಯಕ್ತಿಕ ತೀರ್ಮಾನವಾಗಿರುತ್ತದೆ. ಈ ಕಾರಣದಿಂದಲೇ ಅವರ ನಿರ್ಧಾರವನ್ನು ಬಿಸಿಸಿಐ ಸ್ವೀಕರಿಸಿದೆ,"ಎಂದು 1983ರ ವಿಶ್ವಕಪ್‌ ವಿಜೇತ ಆಟಗಾರ ತಿಳಿಸಿದ್ದಾರೆ.

ವಿರಾಟ್‌ ಕೊಹ್ಲಿಯ ಭಾರತ ಟೆಸ್ಟ್‌ ನಾಯಕತ್ವದ ಬೇಡಿಕೆಯನ್ನು ತಿರಸ್ಕರಿಸಿದ ಬಿಸಿಸಿಐ! ವರದಿ

ಜೂನ್‌ 20ರಂದು ಇಂಗ್ಲೆಂಡ್‌ ಪ್ರವಾಸ ಆರಂಭ

ಭಾರತ ತಂಡ ಜೂನ್‌ ಆರಂಭದಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು 5 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿವೆ. ಜೂನ್‌ 20ರಂದು ಲೀಡ್ಸ್‌ನ ಹೇಡಿಂಗ್ಲೆನಲ್ಲಿ ಆರಂಭವಾಗಲಿರುವ ಮೊದಲನೇ ಟೆಸ್ಟ್‌ ಪಂದಯದ ಮೂಲಕ ಭಾರತದ ಇಂಗ್ಲೆಂಡ್‌ ಪ್ರವಾಸ ಅಧೀಕೃತವಾಗಿ ಶುರುವಾಗಲಿದೆ. ಇದರೊಂದಿಗೆ ಭಾರತದ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಅಭಿಯಾನ ಆರಂಭವಾಗಲಿದೆ.