IND vs NZ: ರವೀಂದ್ರ ಜಡೇಜಾರ ಸ್ಟನಿಂಗ್ ಕ್ಯಾಚ್ ಪಡೆದ ಕೇನ್ ವಿಲಿಯಮ್ಸನ್! ವಿಡಿಯೊ
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಗ್ರೂಪ್ ಎ ಕೊನೆಯ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ಆಟಗಾರರು ಉತ್ತಮ ಪ್ರದರ್ಶನ ತೋರಿದರು. ಕಿವೀಸ್ ಆಟಗಾರರು ವಿಶೇಷವಾಗಿ ಕ್ಷೇತ್ರ ರಕ್ಷಣೆಯಲ್ಲಿ ಎಲ್ಲರ ಗಮನವನ್ನು ಸೆಳೆದರು. ಪಂದ್ಯದ ಆರಂಭದಲ್ಲಿ ಗ್ಲೆನ್ ಫಿಲಿಪ್ಸ್, ವಿರಾಟ್ ಕೊಹ್ಲಿ ಅವರ ಅದ್ಭುತ ಕ್ಯಾಚ್ ಪಡೆದರು ಮತ್ತು ಅದರ ನಂತರ ಕೇನ್ ವಿಲಿಯಮ್ಸನ್ ಕೂಡ ಪಾಯಿಂಟ್‌ನಲ್ಲಿ ಸ್ಟನಿಂಗ್ ಕ್ಯಾಚ್ ಪಡೆಯುವ ಮೂಲಕ ಎಲ್ಲರನ್ನು ಅಚ್ಚರಿ ಮೂಡಿಸಿದರು.

ಸ್ಟನಿಂಗ್ ಕ್ಯಾಚ್ ಪಡೆದ ಕೇನ್ ವಿಲಿಯಮ್ಸನ್.

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ (ICC Champions Trophy 2025) ಗ್ರೂಪ್ ʻಎʼ ನ ಕೊನೆಯ ಲೀಗ್ ಪಂದ್ಯದಲ್ಲಿ (IND vs NZ) ಭಾರತದ ವಿರುದ್ಧ ನ್ಯೂಜಿಲೆಂಡ್ ತಂಡ ತನ್ನ ಅದ್ಭುತ ಫೀಲ್ಡಿಂಗ್ ಮೂಲಕ ತೀವ್ರ ಸಂಚಲನ ಮೂಡಿಸಿತು. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಕಿವೀಸ್ ತಂಡದ ಪರ ಗ್ಲೆನ್ ಫಿಲಿಪ್ಸ್ ಮತ್ತು ಕೇನ್ ವಿಲಿಯಮ್ಸನ್ (Kane Williamson) ಸ್ಟನಿಂಗ್ ಕ್ಯಾಚ್‌ಗಳನ್ನು ಪಡೆಯುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಮೊದಲಿಗೆ ವಿರಾಟ್ ಕೊಹ್ಲಿಯ ಸ್ಟನಿಂಗ್ ಕ್ಯಾಚ್ ಅನ್ನು ಗ್ಲೆನ್ ಫಿಲಿಪ್ಸ್ ಪಡೆದರೆ, ತಡವಾಗಿ ರವೀಂದ್ರ ಜಡೇಜಾ ಅವರ ಅದ್ಭುತ ಕ್ಯಾಚ್ ಅನ್ನು ಕೇನ್ ವಿಲಿಯಮ್ಸನ್ ಪಡೆಯುವ ಮೂಲಕ ಭಾರತಕ್ಕೆ ಶಾಕ್ ನೀಡಿದ್ದರು.
ಭಾರತ ತಂಡದ ಇನಿಂಗ್ಸ್‌ನ 46ನೇ ಓವರ್‌ನ 5ನೇ ಎಸೆತದಲ್ಲಿ ಕೇನ್ ವಿಲಿಯಮ್ಸನ್ ಗಾಳಿಯಲ್ಲಿ ಡೈವ್ ಮಾಡಿ ತಮ್ಮ ಬೆರಳುಗಳಿಂದ ಕ್ಯಾಚ್ ಪಡೆದರು. ವಿಲಿಯಮ್ಸನ್ ಪಡೆದ ಈ ಕ್ಯಾಚ್ ಎಷ್ಟು ಅದ್ಭುತವಾಗಿತ್ತು. ಮ್ಯಾಟ್ ಹೆನ್ರಿ ಎಸೆತಗಳಲ್ಲಿ ಪಾಯಿಂಟ್ ಮೇಲೆ ಹೊಡೆಯಲು ರವೀಂದ್ರ ಜಡೇಜಾ ಪ್ರಯತ್ನ ನಡೆಸಿದ್ದರು. ಆದರೆ, ಬ್ಯಾಕ್ ವಾರ್ಡ್ ಪಾಯಿಂಟ್‌ನಲ್ಲಿ ನಿಂತಿದ್ದ ಕೇನ್ ವಿಲಿಯಮ್ಸನ್ ಅವರು ಗಾಳಿಯಲ್ಲಿ ಹಾರುವ ಮೂಲಕ ಸ್ಟನಿಂಗ್ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕಿವೀಸ್ ಕ್ಷೇತ್ರ ರಕ್ಷಣೆಯನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ಈ ಕ್ಯಾಚ್‌ಗೂ ಮುನ್ನ ಕೇನ್ ವಿಲಿಯಮ್ಸನ್ ಲೆಗ್ ಸೈಡ್‌ನಲ್ಲಿ ಅಕ್ಷರ್ ಪಟೇಲ್ ಅವರ ಕ್ಯಾಚ್ ಅನ್ನು ಒಂದೇ ಕೈನಲ್ಲಿ ಪಡೆದಿದ್ದರು.
IND vs NZ: ಕೊನೆಯ ಲೀಗ್ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲ ಬ್ಯಾಟಿಂಗ್!
ನ್ಯೂಜಿಲೆಂಡ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಕಿವೀಸ್ ಬೌಲರ್‌ಗಳ ಎದುರು ತಿಣುಕಾಡಿದರು. ಭಾರತ ತಂಡದ ಮೊತ್ತ 30 ರನ್ ಇರುವಾಗಲೇ, ರೋಹಿತ್ ಶರ್ಮಾ, ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದರು. ಆದರೆ, ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ತಮ್ಮ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಪಾರು ಮಾಡಿದ್ದರು. ಅಯ್ಯರ್ 98 ಎಸೆತಗಳಲ್ಲಿ 79 ರನ್ ಗಳಿಸಿದರು. ಇದಲ್ಲದೆ, ಹಾರ್ದಿಕ್ ಪಾಂಡ್ಯ ಕೂಡ ಕೆಳ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿ 45 ಎಸೆತಗಳಲ್ಲಿ 45 ರನ್ ಗಳಿಸಿದರು. ಈ ಮೂಲಕ ಟೀಮ್ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತು.
Kane Williamson takes a stunning catch to dismiss Jadeja! 🤯
— Anisht Dev (@cricketcoast) March 2, 2025
His sharp reflexes and safe hands prove once again why he's one of the best in the game 🔥.
New-Zealand's fielding is on Steroids 🤣.#NZvIND #INDvNZ#ChampionsTrophy #INDvsNZ pic.twitter.com/rOkIoLzldT
ಬೌಲಿಂಗ್‌ನಲ್ಲಿ ಮ್ಯಾಟ್ ಹೆನ್ರಿ ನ್ಯೂಜಿಲೆಂಡ್ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಅವರು ಬೌಲ್ ಮಾಡಿದ 8 ಓವರ್‌ಗಳಲ್ಲಿ 42 ರನ್‌ಗಳನ್ನು ನೀಡಿ 5 ವಿಕೆಟ್ ಸಾಧನೆ ಮಾಡಿದರು. ಇದಲ್ಲದೆ, ಕೈಲ್ ಜೇಮಿಸನ್, ವಿಲಿಯಂ ರೌರ್ಕಿ, ಮಿಚೆಲ್ ಸ್ಯಾಂಟ್ನರ್ ಮತ್ತು ರಚಿನ್ ರವೀಂದ್ರ ಕೂಡ ತಲಾ ಒಂದೊಂದು ವಿಕೆಟ್ ಪಡೆದರು.
ಅಕ್ಷರ್ ಪಟೇಲ್ ಕ್ಯಾಚ್ ಅನ್ನು ಒಂದೇ ಕೈನಲ್ಲಿ ಪಡೆದಿದ್ದ ಕೇನ್
ಇದಕ್ಕೂ ಮುನ್ನ ಕೇನ್ ವಿಲಿಯಮ್ಸನ್ ಅವರು ಅಕ್ಷರ್ ಪಟೇಲ್ ಅವರ ಕ್ಯಾಚ್ ಅನ್ನು ಒಂದೇ ಕೈನಲ್ಲಿ ಪಡೆದಿದ್ದರು. 30ನೇ ಓವರ್ ಎರಡನೇ ಎಸೆತದಲ್ಲಿ ರಚಿನ್ ರವೀಂದ್ರ ಎಸೆತದಲ್ಲಿ ಅಕ್ಷರ್ ಪಟೇಲ್ ಫೈನ್ ಲೆಗ್ ಹಾಗೂ ವಿಕೆಟ್ ಕೀಪರ್ ಮಧ್ಯೆದಲ್ಲಿ ಚೆಂಡನ್ನು ತಳ್ಳಲು ಪ್ರಯತ್ನ ನಡೆಸಿದ್ದರು. ಆದರೆ, ಚೆಂಡು ಬ್ಯಾಟ್ ತುದಿಗೆ ತಾಗಿ ಶಾರ್ಟ್ ಫೈನ್‌ನಲ್ಲಿ ನಿಂತಿದ್ದ ಕೇನ್ ವಿಲಿಯಮ್ಸನ್ ಕೈಗೆ ಸೇರಿತು. ಕ್ಯಾಚ್ ಪಡೆಯುವ ಸಮಯದಲ್ಲಿ ವಿಲಿಯಮ್ಸನ್ ಸ್ವಲ್ಪ ಗೊಂದಲದಲ್ಲಿರುವಂತೆ ಕಂಡರೂ ಒಂದೇ ಕೈನಲ್ಲಿ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು.