ಮಹಿಳಾ ವಿಶ್ವಕಪ್‌ಗೂ ಮುನ್ನ ಕೌರ್ ಪಡೆಗೆ ವಿಶಾಖಪಟ್ಟಣದಲ್ಲಿ ಪೂರ್ವಸಿದ್ಧತಾ ಶಿಬಿರ
ಐಸಿಸಿ ಏಕದಿನ ಮಹಿಳಾ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡವು ಆಸ್ಟ್ರೇಲಿಯಾ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿಗೆ ಆಲ್ರೌಂಡರ್ ಅಮನ್‌ಜೋತ್ ಕೌರ್ ಆಯ್ಕೆಯಾಗಿಲ್ಲ, ಆದರೆ ಏಕದಿನ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದಾರೆ.


ನವದೆಹಲಿ: ಸೆಪ್ಟೆಂಬರ್ 30 ರಂದು ಆರಂಭವಾಗಲಿರುವ ಮುಂಬರುವ ಮಹಿಳಾ ವಿಶ್ವಕಪ್(Women's World Cup)ಗೂ ಮುನ್ನ ಭಾರತ ಮಹಿಳಾ ತಂಡ(India Women) ವಿಶಾಖಪಟ್ಟಣದಲ್ಲಿ ಒಂದು ವಾರದ ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗವಹಿಸಲಿದೆ. ಮೀಸಲು ಆಟಗಾರರ ಜೊತೆಗೆ ಶಿಬಿರವು 15 ಸದಸ್ಯರ ಸಂಪೂರ್ಣ ತಂಡವನ್ನು ಒಳಗೊಂಡಿರಲಿದೆ. ಆಗಸ್ಟ್ 24ರಿಂದ ಶಿಬಿರ ಆರಂಭವಾಗಲಿದೆ ಎಂದು ವರದಿಯಾಗಿದೆ. ನಿಖರವಾದ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.
ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆದ 10 ದಿನಗಳ ತರಬೇತಿ ಶಿಬಿರದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡ ಭಾಗವಹಿಸಿತ್ತು. ಈ ಶಿಬಿರದಲ್ಲಿ ಶಕ್ತಿ ಮತ್ತು ಕಂಡೀಷನಿಂಗ್, ಪಂದ್ಯ ಸಿಮ್ಯುಲೇಶನ್ ಮತ್ತು ಕೌಶಲ್ಯ-ನಿರ್ದಿಷ್ಟ ಡ್ರಿಲ್‌ಗಳಂತಹ ಅಂಶಗಳ ಮೇಲೆ ಕೇಂದ್ರೀಕರಿಸಲಾಗಿತ್ತು. ಶಿಬಿರವನ್ನು ಸಾಕಷ್ಟು ಕಾರ್ಯತಂತ್ರವಾಗಿ ನಡೆಸಲು ವಿಶಾಖಪಟ್ಟಣವನ್ನು ಆಯ್ಕೆ ಮಾಡಲಾಗಿದೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡವು ಆಸ್ಟ್ರೇಲಿಯಾ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿಗೆ ಆಲ್ರೌಂಡರ್ ಅಮನ್‌ಜೋತ್ ಕೌರ್ ಆಯ್ಕೆಯಾಗಿಲ್ಲ, ಆದರೆ ಏಕದಿನ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದಾರೆ.
36 ವರ್ಷದ ಹರ್ಮನ್‌ಪ್ರೀತ್ ಕೌರ್ ಪಾಲಿಗೆ ಇದು ಬಹುತೇಕ ಕೊನೆಯ ಏಕದಿನ ವಿಶ್ವಕಪ್ ಎನಿಸಲಿದೆ. ಯಾಕೆಂದರೆ ಮುಂದಿನ ಏಕದಿನ ವಿಶ್ವಕಪ್ 2029ಕ್ಕೆ ನಿಗದಿಯಾಗಿದ್ದು, ಆಗ ಕೌರ್‌ಗೆ 40 ವರ್ಷ ವಯಸ್ಸಾಗಿರಲಿದೆ. ಹೀಗಾಗಿ ತವರಿನಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಹರ್ಮನ್‌ಪ್ರೀತ್ ಕೌರ್‌ಗೆ ಇದು ಕೊನೆಯ ಅವಕಾಶ.
ವಿಶ್ವಕಪ್‌ಗೆ ಭಾರತ ತಂಡ
ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂಧನಾ(ಉಪನಾಯಕಿ), ಪ್ರತೀಕ್ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಯಾ ರೋಡ್ರಿಗ್ಸ್, ರೇಣುಕಾ ಸಿಂಗ್ ಠಾಕೂರ್, ಅರುಂದತಿ ರೆಡ್ಡಿ, ರಿಚಾ ಘೋಷ್(ವಿಕೆಟ್ ಕೀಪರ್), ಕ್ರಾಂತಿ ಗೌಡ್, ಅಮನ್‌ಜೋತ್ ಕೌರ್, ರಾಧಾ ಯಾದವ್, ಶ್ರೀ ಚರಣಿ, ಯಾಶ್ತಿಕಾ ಭಾಟಿಯಾ(ವಿಕೆಟ್ ಕೀಪರ್) ಹಾಗೂ ಸ್ನೆಹ್ ರಾಣಾ.
ಇದನ್ನೂ ಓದಿ ಚಿನ್ನಸ್ವಾಮಿಯಿಂದ ಮಹಿಳಾ ವಿಶ್ವಕಪ್ ಟೂರ್ನಿ ಶಿಫ್ಟ್; ಈ ವಾರ ಅಂತಿಮ ನಿರ್ಧಾರ