ಟಿಬಿ ಮತ್ತು ಮಧುಮೇಹಗಳನ್ನು ಒಟ್ಟಿಗೆ ನಿಭಾಯಿಸುವುದು; ಭಾರತ ನಿರ್ಲಕ್ಷಿಸಲಾಗದಂತಹ ದುಪ್ಪಟ್ಟು ಹೊರೆಗಳು
ಭಾರತವು ವಿಶ್ವದ ಅತ್ಯಂತ ಹೆಚ್ಚಿನ ಪ್ರಮಾಣದ ಕ್ಷಯರೋಗದ (ಟಿಬಿ) ಹೊರೆ ಹೊಂದಿದೆ. ಜೊತೆಗೆ ಮಧುಮೇಹ ಪ್ರಕರಣಗಳಲ್ಲಿ ಕೂಡ ತೀವ್ರ ಏರಿಕೆ ಕಂಡಿದೆ. ಇವೆರಡರ ನಡುವಿನ ಸಂಪರ್ಕ ಗಮನ ಸೆಳೆಯುವಂಥದ್ದಾಗಿದೆ. ಮಧುಮೇಹ ಹೊಂದಿರುವ ಜನರಿಗೆ ಟಿಬಿ ಬರುವ ಸಾಧ್ಯತೆ ಗಮನಾರ್ಹವಾಗಿ ಹೆಚ್ಚಾಗಿದೆ. ಟಿಬಿ ರೋಗಿಗಳಲ್ಲಿ ಹೆಚ್ಚಾಗಿ ಮಧುಮೇಹ ಹರಡಿರುವುದನ್ನು ಭಾರತದಲ್ಲಿ ನಡೆಸಲಾದ ಸಂಶೋಧನೆ ಸತತÀವಾಗಿ ತೋರಿಸಿದೆಯಲ್ಲದೇ ಹೆಚ್ಚು ವಯಸ್ಸಾದವರಲ್ಲಿ ಈ ಸಮಸ್ಯೆಯ ದರಗಳು ಮತ್ತಷ್ಟು ಹೆಚ್ಚುತ್ತಿವೆ.


- ಡಾ.ರವಿ ಎನ್. ಸಂಗಾಪುರ್, ಆಂತರಿಕ ವೈದ್ಯಕೀಯ ಸಲಹಾ ತಜ್ಞರು, ಎಚ್‌ಸಿಜಿ ಸುಚಿರಾಯು ಹಾಸ್ಪಿಟಲ್ಸ್
ಎರಡು ಸಾಂಕ್ರಾಮಿಕ ರೋಗಗಳು ಸದ್ದಿಲ್ಲದೇ ಒಂದಾಗಿ ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಉಂಟುಮಾಡುವ ಅಪಾಯ ಎದುರಾಗುವಂತಿದೆ. ದೇಶದಲ್ಲಿ ಈಗಾಗಲೇ ಬದಲಾಗು ತ್ತಿರುವ ಜೀವನಶೈಲಿ ಮತ್ತು ಪದೇಪದೇ ಕಾಡುವ ಸಾಂಕ್ರಾಮಿಕ ರೋಗಗಳಿಂದ ಉಂಟಾಗಿರುವ ಆರೋಗ್ಯದ ಸವಾಲುಗಳನ್ನು ಲಕ್ಷಾಂತರ ಜನರು ಎದುರಿಸುತ್ತಿದ್ದಾರೆ. ಆದರೆ ಭವಿಷ್ಯದಲ್ಲಿ ಈ ತೊಂದರೆಗಳು ಸೇರಿಕೊಂಡು ಯಾವರೀತಿ ಜನರನ್ನು ಕಾಡಬಲ್ಲವು ಎಂಬುದನ್ನು ಕೆಲವೇ ಜನರು ಅರ್ಥಮಾಡಿಕೊಳ್ಳಬಲ್ಲರು.
ತಡೆಗಟ್ಟಬಹುದಾದ ಶ್ವಾಸಕೋಶದ ಸೋಂಕಿನ 27 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ಮತ್ತು ದೀರ್ಘಕಾಲದ ಚಯಾಪಚಯ ಸಂಬAಧಿತ ವೈದ್ಯಕೀಯ ಸಮಸ್ಯೆಗಳೊಂದಿಗೆ ಬದುಕುತ್ತಿರುವ 75 ಮಿಲಿಯನ್ ವಯಸ್ಕರ ಕಡೆಗೆ ತುರ್ತಾಗಿ ಗಮನ ಹರಿಸಬೇಕಾದ ಅಗತ್ಯ ಬಂದಿದೆ. ಜೊತೆಗೆ ಈ ಸಮಸ್ಯೆ ಕುರಿತು ಜಾಗೃತಿಯನ್ನು ಕೂಡ ಮೂಡಿಸಬೇಕಾಗಿದೆ. ನಗರ ಮತ್ತು ಗ್ರಾಮೀಣ ಸಮುದಾಯ ಗಳನ್ನು ಕಾಡುವ ಈ ಎರಡು ಹೊರೆಗಳ ಹಿನ್ನೆಲೆಯಲ್ಲಿ, ಜೀವಗಳನ್ನು ರಕ್ಷಿಸಲು ಮತ್ತು ಆರೋಗ್ಯ ಸೇವಾ ವ್ಯವಸ್ಥೆಗಳ ಮೇಲಿನ ಒತ್ತಡ ಕಡಿಮೆ ಮಾಡಲು ಗಮನ ಹರಿಸಬೇಕಾದ ಅಗತ್ಯವಿದೆ.
ಭಾರತದಲ್ಲಿ ಟಿಬಿ ಮತ್ತು ಮಧುಮೇಹಗಳ ಅವಳಿ ಹೊರೆ
ಭಾರತವು ವಿಶ್ವದ ಅತ್ಯಂತ ಹೆಚ್ಚಿನ ಪ್ರಮಾಣದ ಕ್ಷಯರೋಗದ (ಟಿಬಿ) ಹೊರೆ ಹೊಂದಿದೆ. ಜೊತೆಗೆ ಮಧುಮೇಹ ಪ್ರಕರಣಗಳಲ್ಲಿ ಕೂಡ ತೀವ್ರ ಏರಿಕೆ ಕಂಡಿದೆ. ಇವೆರಡರ ನಡುವಿನ ಸಂಪರ್ಕ ಗಮನ ಸೆಳೆಯುವಂಥದ್ದಾಗಿದೆ. ಮಧುಮೇಹ ಹೊಂದಿರುವ ಜನರಿಗೆ ಟಿಬಿ ಬರುವ ಸಾಧ್ಯತೆ ಗಮನಾರ್ಹ ವಾಗಿ ಹೆಚ್ಚಾಗಿದೆ. ಟಿಬಿ ರೋಗಿಗಳಲ್ಲಿ ಹೆಚ್ಚಾಗಿ ಮಧುಮೇಹ ಹರಡಿರುವುದನ್ನು ಭಾರತದಲ್ಲಿ ನಡೆಸಲಾದ ಸಂಶೋಧನೆ ಸತತÀವಾಗಿ ತೋರಿಸಿದೆಯಲ್ಲದೇ ಹೆಚ್ಚು ವಯಸ್ಸಾದವರಲ್ಲಿ ಈ ಸಮಸ್ಯೆಯ ದರಗಳು ಮತ್ತಷ್ಟು ಹೆಚ್ಚುತ್ತಿವೆ.
ಇದನ್ನೂ ಓದಿ: Bones Health: ನಮ್ಮ ಮೂಳೆಗಳು ಬಲವಾಗಿರಲು ಏನೇನು ಬೇಕು ಗೊತ್ತೇ?
ಈ ಜೋಡಿ ಆಕ್ರಮಣವು ಕಾಕತಾಳೀಯ ಎನ್ನುವುದಕ್ಕಿಂತ ಹೆಚ್ಚಿನ ವಿಷಯವಾಗಿದೆ. ಇದು ಸಿಂಡೆಟಿಕ್ ಸ್ಥಿತಿಯ ಒಂದು ಶ್ರೇಷ್ಠ ನಿದರ್ಶನವಾಗಿದೆ, ಇಲ್ಲಿ ಎರಡು ರೋಗಗಳ ಅಂತರ್‌ಕ್ರಿಯೆ ಯಿಂದಾಗಿ ಉಭಯ ರೋಗಗಳ ಪ್ರಭಾವ ಹೆಚ್ಚಾಗಿ ರೋಗಿಯ ಪರಿಸ್ಥಿತಿಯನ್ನು ಹದಗೆಡಿಸುತ್ತದೆ. ಮೈಕೋಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯದಿಂದ ಉಂಟಾಗುವ ಟಿಬಿ (ಕ್ಷಯರೋಗ), ಗಾಳಿಯ ಮೂಲಕ ಹರಡುತ್ತದೆ. ಅಲ್ಲದೇ ಪ್ರಾಥಮಿಕವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಇದು ಇತರ ಅಂಗಗಳಿಗೆ ಹಾನಿ ಮಾಡಬಹುದು. ಇನ್ಸುಲಿನ್ ಪ್ರತಿರೋಧ ಅಥವಾ ಕೊರತೆಯಿಂದಾಗಿ ಸತತ ಉನ್ನತ ಪ್ರಮಾಣದ ರಕ್ತದ ಸಕ್ಕರೆಯಿಂದ ಗುರುತಿಸ ಲಾಗುವ ಮಧುಮೇಹವು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ದುರ್ಬಲ ಗೊಳಿಸುತ್ತದೆ. ಇದರಿಂದ ದೇಹವು ಟಿಬಿಯಂತಹ ಸೋಂಕುಗಳ ವಿರುದ್ಧ ಹೋರಾಡುವುದು ಕಷ್ಟವಾಗುತ್ತದೆ.
ಈ ಎರಡು ಸಮಸ್ಯೆಗಳ ನಡುವಿನ ಸಂಬಂಧ ಪರಸ್ಪರ ನೆರವಾಗುತ್ತದೆ. ಮಧುಮೇಹವು ರೋಗ ನಿರೋಧಕತೆಯ ರಕ್ಷಣೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದ ಸಕ್ರಿಯ ಟಿಬಿ ಉಂಟಾಗುವ ಅಪಾಯ ಮೂರು ಪಟ್ಟು ಹೆಚ್ಚುತ್ತದೆ. ಮತ್ತೊಂದು ಕಡೆ, ಟಿಬಿ ಉರಿಯೂತ ಮತ್ತು ಶಾರೀರಿಕ ಒತ್ತಡಕ್ಕೆ ಚಾಲನೆ ನೀಡುತ್ತದೆಯಲ್ಲದೇ, ಇದು ರಕ್ತದಲ್ಲಿನ ಸಕ್ಕರೆ ನಿಯಂತ್ರಣವನ್ನು ಅಡ್ಡಿಪಡಿಸು ತ್ತದೆ. ಜೊತೆಗೆ ಚಿಕಿತ್ಸೆ ಸಮಯದಲ್ಲಿ ಅನಿಯಂತ್ರಿತ ರೀತಿಯಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಲು (ಹೈಪರ್ಗ್ಲೈಸೀಮಿಯಾ) ಕಾರಣವಾಗುತ್ತದೆ. ಭಾರತದ ವೇಗವಾಗಿ ನಗರೀಕರಣಗೊಳ್ಳುತ್ತಿರುವ ರಾಜ್ಯಗಳಲ್ಲಿ, ಜೀವನಶೈಲಿಯ ಬದಲಾವಣೆಗಳು ಎರಡೂ ಅನಾರೋಗ್ಯ ಸ್ಥಿತಿಗಳ ಹೆಚ್ಚಳಕ್ಕೆ ಕೊಡುಗೆ ನೀಡುತ್ತಿರುವುದಲ್ಲದೇ, ವಿಶೇಷವಾಗಿ ಈ ರೀತಿಯ ಬೆಳವಣಿಗೆ ಸ್ಪಷ್ಟವಾಗಿದೆ.
ಇದು ಏಕೆ ಮುಖ್ಯವಾಗಿದೆ: ಆರೋಗ್ಯ ಫಲಿತಾಂಶಗಳು ಮತ್ತು ಚಿಕಿತ್ಸೆಗೆ ಎದುರಾಗುವ ಸವಾಲುಗಳು
ಭಾರತದಲ್ಲಿ ಟಿಬಿ–ಮಧುಮೇಹಗಳು ಜೊತೆಯಾಗಿರುವುದು ಗಂಭೀರ ಪರಿಣಾಮಗಳನ್ನು ಬೀರು ತ್ತದೆ. ಮಧುಮೇಹ ಹೊಂದಿರುವ ಕ್ಷಯ ರೋಗಿಗಳು ಮಧುಮೇಹ ಇಲ್ಲದವರಿಗಿಂತ ಗಮನಾರ್ಹ ವಾಗಿ ಹೆಚ್ಚಿನ ಸಾವಿನ ಅಪಾಯ, ಚಿಕಿತ್ಸೆಯ ವೈಫಲ್ಯದ ಸಾಧ್ಯತೆಗಳು ಹೆಚ್ಚಾಗುವುದು ಮತ್ತು ಒಟ್ಟಾರೆ ಕಳಪೆ ಫಲಿತಾಂಶಗಳನ್ನು ಎದುರಿಸುತ್ತಾರೆ ಎಂದು ಭಾರತೀಯ ವೈದ್ಯಕೀಯ ಸಂಶೋ ಧನಾ ಮಂಡಳಿ (ಐಸಿಎಂಆರ್) – ಇಂಡಿಯಾ ಡಯಾಬಿಟಿಸ್ (ಇಂಡಿಯಾಬಿ)ಗಳ ಸಂಶೋಧನೆಗಳು ಸೇರಿದಂತೆ ಅಧ್ಯಯನಗಳು, ತೋರಿಸುತ್ತವೆ.
ಭಾರತದ ದ್ವಂದ್ವ ಆರೋಗ್ಯ ಹೊರೆಗಳಿಂದ ಅಪಾಯಗಳು ಹೆಚ್ಚಾಗುತ್ತವೆ. ಕಿಕ್ಕಿರಿದ, ಕಳಪೆ ಗಾಳಿ ಮತ್ತು ಅಪೌಷ್ಟಿಕತೆಯ ವಾತಾವರಣಗಳಲ್ಲಿ ಕ್ಷಯ ರೋಗ ಬೆಳೆಯುತ್ತದೆ. ಆದರೆ ಮಧುಮೇಹವು ಜಡ ಜೀವನಶೈಲಿ, ಹೆಚ್ಚಿನ ಸಂಸ್ಕರಿಸಿದ-ಕಾರ್ಬ್(ಶರ್ಕರ ಪಿಷ್ಟಾದಿ) ಆಹಾರಗಳು, ಬೊಜ್ಜು ಮತ್ತು ಆನುವಂಶಿಕ ಪ್ರವೃತ್ತಿಯಿಂದ ಚಾಲನೆ ಪಡೆಯುತ್ತದೆ. ಕಳಪೆಯಾಗಿ ನಿರ್ವಹಿಸಲಾದ ಮಧು ಮೇಹವು ಕ್ಷಯ ರೋಗಲಕ್ಷಣಗಳನ್ನು ಮರೆಮಾಚಬಹುದು, ರೋಗನಿರ್ಣಯವನ್ನು ವಿಳಂಬ ಗೊಳಿಸಬಹುದು ಮತ್ತು ಸುಪ್ತ ಕ್ಷಯವು ಸಕ್ರಿಯವಾಗುವ ಸಾಧ್ಯತೆಯನ್ನು ಇದು ಹೆಚ್ಚಿಸುತ್ತದೆ.
ಎರಡೂ ಕಾಯಿಲೆಗಳನ್ನು ಹೊಂದಿರುವ ರೋಗಿಗಳು ಹೆಚ್ಚಿನ ಪ್ರಮಾಣದ ಚಿಕಿತ್ಸೆಯ ವೈಫಲ್ಯದ ದರಗಳು ಅಲ್ಲದೇ ರೋಗ ಮರುಕಳಿಸುವ ಹೆಚ್ಚಿನ ಅಪಾಯ ಎದುರಿಸುತ್ತಾರೆ. ಇದಲ್ಲದೇ ಮಧು ಮೇಹ-ಸಂಬಂಧಿತ ರೋಗನಿರೋಧಕ ನಿಗ್ರಹದಿಂದಾಗಿ ಔಷಧ ಪ್ರತಿರೋಧದ ಹೆಚ್ಚಿನ ಸಾಧ್ಯತೆ ಗಳನ್ನು ಅವರು ಎದುರಿಸಬೇಕಾಗುತ್ತದೆ. ಇದು ಆರೋಗ್ಯ ಸೇವಾ ವ್ಯವಸ್ಥೆಗಳ ಮೇಲೆ ಒತ್ತಡ ಹೇರುತ್ತದೆ ಅಲ್ಲದೇ ಒಂದರ ಮೇಲೊಂದು ಅತಿಕ್ರಮಿಸುವ ಆರೋಗ್ಯ ಸಮಸ್ಯೆಗಳ ನಡುವೆ ಫಲಿತಾಂಶಗಳನ್ನು ಹದಗೆಡಿಸುತ್ತದೆ.
ಸಮಗ್ರ ಸಂಯೋಜಿತ ಆರೈಕೆ ಮುಖ್ಯವಾಗಿರುತ್ತದೆ. ಕ್ಷಯರೋಗ ಔಷಧಗಳು ಮಧುಮೇಹ ಔಷಧಿ ಗಳೊಂದಿಗೆ ಪರಸ್ಪರ ಪರಿಣಾಮ ಬೀರಬಹುದು. ಇದರಿಂದಾಗಿ ಔಷಧ ಪ್ರಮಾಣಗಳಲ್ಲಿ ಎಚ್ಚರಿಕೆ ಯ ಹೊಂದಾಣಿಕೆಗಳು ಮತ್ತು ಗ್ಲೂಕೋಸ್ ಮೇಲ್ವಿಚಾರಣೆಯ ಅಗತ್ಯವಿರುತ್ತದೆ. ಆದರೂ, ಚಿಕಿತ್ಸೆಯಲ್ಲಿ ಕೊರತೆಗಳು ಕಾಡಿವೆ. ಮುಂಚೂಣಿಯ ಅರೆವೈದ್ಯಕೀಯ ಸಿಬ್ಬಂದಿಗಳಲ್ಲಿ ಸಾಮಾನ್ಯ ವಾಗಿ ದ್ವಿಮುಖ ಪರೀಕ್ಷೆಗಳ ತರಬೇತಿಯ ಕೊರತೆಯಿದೆಯಲ್ಲದೇ ಪ್ರಾಥಮಿಕ ಕೇಂದ್ರಗಳಲ್ಲಿ ಸಂಪನ್ಮೂಲ ಕೊರತೆ ಕಾಡುತ್ತದೆ. ರೋಗಿಗಳು ಬದುಕುಳಿಯಲು ಮತ್ತು ಅವರ ಚೇತರಿಕೆ ಸುಧಾ ರಿಸಲು ಟಿಬಿ ಮತ್ತು ಮಧುಮೇಹವನ್ನು ಜಂಟಿಯಾಗಿ ಪರಿಹರಿಸಲು ಶಿಷ್ಟಾಚಾರಗಳನ್ನು ಸದೃಢ ಪಡಿಸುವುದು ಅತ್ಯಂತ ಅಗತ್ಯವಾಗಿರುತ್ತದೆ.
ಯಾವುದರಿಂದ ಸಹಾಯವಾಗಬಹುದು: ದ್ವಂದ್ವ ಬೆದರಿಕೆಯನ್ನು ಇಲ್ಲವಾಗಿಸುವ ಮಾರ್ಗಗಳು
* ಸಮಗ್ರ ಸಂಯೋಜನೆಯ ಪರೀಕ್ಷಾ ಶಿಷ್ಟಾಚಾರಗಳು: ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸೇವಾ ವ್ಯವಸ್ಥೆಗಳಲ್ಲಿ ಟಿಬಿ ಮತ್ತು ಮಧುಮೇಹಕ್ಕೆ ದಿನನಿತ್ಯದ ದ್ವಿಮುಖ ತಪಾಸಣೆ ಜಾರಿಗೊಳಿಸು ವುದು ಆರಂಭ ಹಂತದಲ್ಲಿಯೇ ರೋಗ ಪತ್ತೆ ಮಾಡಲು ಮತ್ತು ಸಕಾಲಿಕ ವೈದ್ಯಕೀಯ ಹಸ್ತಕ್ಷೇಪ ಕೈಗೊಳ್ಳುವುದಕ್ಕೆ ಬಹಳ ಮುಖ್ಯವಾಗಿರುತ್ತದೆ.
* ಆರೋಗ್ಯ ಸೇವೆಯ ಮುಂಚೂಣಿಯಲ್ಲಿ ಸಾಮರ್ಥ್ಯ ಹೆಚ್ಚಿಸುವುದು: ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಖಾಸಗಿ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆಯ ಸಮನ್ವಯ ಮತ್ತು ಅನುಸರಣೆ ಸೇರಿದಂತೆ ದ್ವಂದ್ವ ಹೊರೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಆರೋಗ್ಯ ಕಾರ್ಯಕರ್ತ ರಿಗೆ ತರಬೇತಿ ನೀಡಬೇಕು.
* ರೋಗಿಯ ಸಮಗ್ರ ನಿರ್ವಹಣೆ: ಸಮನ್ವಯದ ನಿರ್ವಹಣೆ - ಟಿಬಿ ಚಿಕಿತ್ಸೆಯ ಜೊತೆಗೆ ಗ್ಲೈಸೆಮಿಕ್ ನಿಯಂತ್ರಣವನ್ನು ಪರಿಹರಿಸುವುದರಿಂದ ಫಲಿತಾಂಶಗಳನ್ನು ಸುಧಾರಿಸಬಹುದು. ಹೃದಯರಕ್ತನಾಳದ ಅಪಾಯಗಳ ಮೇಲ್ವಿಚಾರಣೆ ಮತ್ತು ಸತತ ಔಷಧ ಪೂರೈಕೆಯ ಖಾತ್ರಿ ಮಾಡಿ ಕೊಳ್ಳುವುದು ಮುಖ್ಯವಾಗಿರುತ್ತದೆ.
* ಆರೋಗ್ಯ ಮಾಹಿತಿ ವ್ಯವಸ್ಥೆಗಳನ್ನು ಸದೃಢಗೊಳಿಸುವುದು: ಟಿಬಿ-ಮಧುಮೇಹದ ಸಹವರ್ತಿ ರೋಗ, ಚಿಕಿತ್ಸೆಯ ಫಲಿತಾಂಶಗಳು ಮತ್ತು ಪ್ರಾದೇಶಿಕ ಹರಡುವಿಕೆಗಳ ಕುರಿತು ಉತ್ತಮ ದತ್ತಾಂಶವು ನೀತಿ ಮತ್ತು ಸಂಪನ್ಮೂಲ ಹಂಚಿಕೆಗೆ ಮಾರ್ಗದರ್ಶನ ನೀಡಬಹುದು.
*ಸಮುದಾಯ ಜಾಗೃತಿ ಅಭಿಯಾನಗಳು: ಒಂದು ಅನಾರೋಗ್ಯ ಸ್ಥಿತಿಯನ್ನು ನಿರ್ವಹಿಸುವ ಕಾರ್ಯವು ಮತ್ತೊಂದರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕುರಿತು ಸಮುದಾಯ ಗಳಿಗೆ ಶಿಕ್ಷಣ ನೀಡುವುದು ಚಿಕಿತ್ಸೆಯ ನಿಯಮಗಳಿಗೆ ಅಂಟಿಕೊAಡಿರುವುದನ್ನು ಹೆಚ್ಚಿಸುತ್ತದೆ ಯಲ್ಲದೇ ರೋಗ ತಡೆಗಟ್ಟುವ ಅಭ್ಯಾಸಗಳನ್ನು ಪ್ರೋತ್ಸಾಹಿಸುತ್ತದೆ.
ಅಂತಿಮ ತೀರ್ಮಾನ
ಭಾರತದಲ್ಲಿ ಕ್ಷಯ ಮತ್ತು ಮಧುಮೇಹ ಸಮಸ್ಯೆಗಳು ಒಂದಾಗಿರುವುದು ಗಂಭೀರ ಸಾರ್ವಜನಿಕ ಆರೋಗ್ಯ ಸವಾಲು ಒಡ್ಡುತ್ತದೆ - ಇದು ಅನಾರೋಗ್ಯದ ತೀವ್ರತೆಯನ್ನು ಹೆಚ್ಚಿಸುತ್ತದೆ, ಚಿಕಿತ್ಸೆ ಯನ್ನು ಸಂಕೀರ್ಣಗೊಳಿಸುತ್ತದೆ ಮತ್ತು ಸಾವಿನ ಅಪಾಯ ಹೆಚ್ಚಿಸುತ್ತದೆ. ಈ ದ್ವಂದ್ವ ಹೊರೆಯು ಸಾಮಾಜಿಕ-ಆರ್ಥಿಕ ಸ್ಥಿತಿ, ಜೀವನಶೈಲಿ ಮತ್ತು ಪರಿಸರ ಅಂಶಗಳಿಂದ ಚಾಲನೆ ಪಡೆಯುತ್ತದೆ. ಇದು ಸಮಗ್ರ, ದ್ವಿಮುಖ ವೈದ್ಯಕೀಯ ತಪಾಸಣೆ ಮತ್ತು ನಿರ್ವಹಣೆಯನ್ನು ಅವಶ್ಯಕವಾಗಿಸುತ್ತದೆ. ಆರೋಗ್ಯ ಸೇವೆಯ ಮುಂಚೂಣಿಯ ಸಿಬ್ಬಂದಿ ಸಾಮರ್ಥ್ಯ ಸದೃಢಗೊಳಿಸುವುದು,
ರೋಗ ನಿರ್ಣಯದಲ್ಲಿನ ಕೊರತೆಗಳನ್ನು ತುಂಬುವುದು ಮತ್ತು ಎರಡೂ ಪರಿಸ್ಥಿತಿಗಳನ್ನು ಏಕಕಾಲದಲ್ಲಿ ಪರಿಹರಿಸಲು ಚಿಕಿತ್ಸೆ ರೂಪಿಸುವುದು ಇನ್ನು ಮುಂದೆ ಕೇವಲ ಐಚ್ಛಿಕವಲ್ಲ - ಅವು ಕಡ್ಡಾಯ ವಾಗಿವೆ. ಸಂಘಟಿತ, ಬಹು ವಿಭಾಗೀಯ ಕ್ರಮಗಳ ಮೂಲಕ ಮಾತ್ರ ಭಾರತವು ಟಿಬಿ ಮತ್ತು ಮಧುಮೇಹದ ನಡುವಿನ ಮಾರಕ ಜೋಡಿ ಪರಿಣಾಮವನ್ನು ನಿಗ್ರಹಿಸಲು ಮತ್ತು ಅದಕ್ಕೆ ತುತ್ತಾಗಬಲ್ಲ ಅತ್ಯಂತ ದುರ್ಬಲವರ್ಗದ ಜನಸಂಖ್ಯೆಯನ್ನು ರಕ್ಷಿಸುವ ಭರವಸೆ ಹೊಂದಬಹುದು.
ನಿಷ್ಕ್ರಿಯತೆ ಇಂದಿನ ಆಯ್ಕೆಯಲ್ಲ. ಇಂದಿನ ಸಮನ್ವಯಪೂರ್ಣ ಸಂಘಟಿತ ಪ್ರತಿಕ್ರಿಯೆಯು ನಾಳೆ ಸಾವಿರಾರು ಜೀವಗಳನ್ನು ಉಳಿಸಬಹುದು.