ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ನಾಯಕನಾದ ಅಕ್ಷರ್‌ ಪಟೇಲ್‌ಗೆ ಕೆಎಲ್‌ ರಾಹುಲ್‌ ವಿಶೇಷ ಸಂದೇಶ!

‌KL Rahul on Axar Patel: ಟೀಮ್‌ ಇಂಡಿಯಾ ಸ್ಟಾರ್‌ ಬ್ಯಾಟ್ಸ್‌ಮನ್‌ ಕೆಎಲ್ ರಾಹುಲ್ 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ನಾಯಕತ್ವವನ್ನು ನಿರಾಕರಿಸಿದ್ದ ಕಾರಣ ಸ್ಪಿನ್‌ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ಗೆ ನಾಯಕತ್ವವನ್ನು ನೀಡಲಾಗಿದೆ. ಈ ಬಗ್ಗೆ ಕೆಎಲ್‌ ರಾಹುಲ್‌ ಪ್ರತಿನಿಧಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ಅಕ್ಷರ್‌ ಪಟೇಲ್‌ಗೆ ಕೆಎಲ್‌ ರಾಹುಲ್‌ ಸಂದೇಶ!

ಅಕ್ಷರ್‌ ಪಟೇಲ್‌ಗೆ ಕೆಎಲ್‌ ರಾಹುಲ್‌ ವಿಶೇಷ ಸಂದೇಶ.

Profile Ramesh Kote Mar 14, 2025 6:56 PM

ನವದೆಹಲಿ: ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ನಿಮಿತ್ತ ಡೆಲ್ಲಿ ಕ್ಯಾಪಿಟಲ್ಸ್‌ಗೆ ನೂತನ ನಾಯಕನಾಗಿ ನೇಮಕಗೊಂಡಿರುವ ಅಕ್ಷರ್‌ ಪಟೇಲ್‌ಗೆ ಹಿರಿಯ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ. ಲಖನೌ ಸೂಪರ್‌ ಜಯಂಟ್ಸ್‌ ತಂಡದಿಂದ ರಿಲೀಸ್‌ ಆದ ಬಳಿಕ ಕೆಎಲ್‌ ರಾಹುಲ್‌ ಅವರನ್ನು ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಖರೀದಿಸಿತ್ತು. ಅದರಂತೆ ಡೆಲ್ಲಿ ನಾಯಕತ್ವವನ್ನು ಕೆಎಲ್‌ ರಾಹುಲ್‌ಗೆ ನೀಡಲು ಟೀಮ್‌ ಮ್ಯಾನೇಜ್‌ಮೆಂಟ್‌ ಬಯಸಿತ್ತು. ಆದರೆ, ನಾಯಕತ್ವವನ್ನು ಕೆಎಲ್‌ ರಾಹುಲ್‌ ನಿರಾಕರಿಸಿದ್ದರೆಂದು ವರದಿಯಾಗಿತ್ತು. ಆದರೆ, ಮಾರ್ಚ್‌ 14 ರಂದು ಅಕ್ಷರ್‌ ಪಟೇಲ್‌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ಗೆ ನೂತನ ನಾಯಕನ್ನಾಗಿ ನೇಮಿಸಲಾಗಿತ್ತು.

ಕೆಎಲ್‌ ರಾಹುಲ್‌ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಪಂಜಾಬ್‌ ಕಿಂಗ್ಸ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ಪರ ಆಡಿದ್ದಾರೆ. ಅಕ್ಷರ್‌ ಪಟೇಲ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ನಾಯಕನಾದ ಬೆನ್ನಲ್ಲೆ ಹಿರಿಯ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌, ತಮ್ಮ ಸಹ ಆಟಗಾರನಾಗಿ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ. "ಅಭಿನಂದನೆಗಳು ಬಾಪು. ನಿಮ್ಮ ಈ ಪಯಣ ಉತ್ತಮವಾಗಿರಲಿ ಎಂದು ಹಾರೈಸುತ್ತೇನೆ ಹಾಗೂ ನಿಮ್ಮೊಂದಿಗೆ ಸದಾ ಇರುತ್ತೇನೆ," ಎಂದು ಕೆಎಲ್‌ ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

IPL 2025: ಡೆಲ್ಲಿ ಕ್ಯಾಪಿಟಲ್ಸ್‌ ನಾಯಕತ್ವವನ್ನು ನಿರಾಕರಿಸಿದ ಕೆಎಲ್‌ ರಾಹುಲ್‌!

ಐಪಿಎಲ್ ಇತಿಹಾಸದಲ್ಲಿ ಕೆಎಲ್‌ ರಾಹುಲ್‌ ಅವರು ನಾಲ್ಕು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಇದೀಗ 18 ನೇ ಆವೃತ್ತಿಯ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಲು ಎದುರು ನೋಡುತ್ತಿದ್ದೇನೆಂದು ಹೇಳಿದ ಅವರು, ಬಲಿಷ್ಠವಾದ ಈ ತಂಡಕ್ಕೆ ಉತ್ತಮವಾಗಿ ಕಾರ್ಯನಿರ್ವಹಿಸುವ ಆಶಾವಾದವನ್ನು ಹೊಂದಿದ್ದೇನೆಂದು ತಿಳಿಸಿದ್ದಾರೆ.

ಡೆಲ್ಲಿ ಪರ ಆಡಲು ಎದುರು ನೋಡುತ್ತಿದ್ದೇನೆ

"ತಂಡ ಮತ್ತು ಟೀಮ್‌ ಮ್ಯಾನೇಜ್‌ಮೆಂಟ್‌ ನಿರ್ಮಿಸಿರುವ ರೀತಿಯನ್ನು ನೋಡಿದರೆ, ಇದು ಸಮತೋಲಿತ ತಂಡವೆಂದು ತೋರುತ್ತದೆ. ಹೆಚ್ಚಿನ ಕ್ಷೇತ್ರಗಳನ್ನು ಒಳಗೊಂಡಿದೆ. ಇಲ್ಲಿ ಅನುಭವಿ ಆಟಗಾರರು ಮತ್ತು ಯುವ ಪ್ರತಿಭೆಗಳ ಉತ್ತಮ ಮಿಶ್ರಣವಿದೆ ಮತ್ತು ಕೆಲವು ಅದ್ಭುತ ಪ್ರತಿಭಾನ್ವಿತ ಯುವಕರೊಂದಿಗೆ ಆಟವಾಡಲು ಮತ್ತು ಕಲಿಯಲು ನಾನು ಉತ್ಸುಕನಾಗಿದ್ದೇನೆ. ನಾನು ಈ ಹಿಂದೆ ಆಡಿರುವ ಮಿಚೆಲ್ ಸ್ಟಾರ್ಕ್, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್ ಅವರಂತಹ ಆಟಗಾರರೊಂದಿಗೆ ನಮ್ಮ ತಂಡ ಬಲಿಷ್ಠವಾಗಿದೆ. ಐಪಿಎಲ್ ಆರಂಭವಾಗಲು ನಾನು ಕಾತುರದಿಂದ ಕಾಯುತ್ತಿದ್ದೇನೆ," ಎಂದು ಕೆಎಲ್‌ ರಾಹುಲ್‌ ಹೇಳಿದ್ದಾರೆ.



ಹರಾಜಿನ ವೇಳೆ ಆತಂಕಕ್ಕೆ ಒಳಗಾಗಿದ್ದೆ: ಕೆಎಲ್‌ ರಾಹುಲ್‌

"ಕಳೆದ ಮೂರು ಋತುಗಳಲ್ಲಿ ನಾಯಕನಾಗಿ, ತಂಡವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ನಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ತಂಡವನ್ನು ಕಟ್ಟುವಾಗ ಫ್ರಾಂಚೈಸಿಗಳು ಎದುರಿಸುವ ಒತ್ತಡ ನನಗೆ ಅರ್ಥವಾಗುತ್ತದೆ. ಆದರೆ ಆಟಗಾರನ ದೃಷ್ಟಿಕೋನದಿಂದ ಇದು ಇನ್ನೂ ಕಷ್ಟಕರವಾಗಿದೆ ಏಕೆಂದರೆ ನಿಮ್ಮ ವೃತ್ತಿಜೀವನವು ಅಪಾಯದಲ್ಲಿದೆ. ಹರಾಜು ಪ್ರಕ್ರಿಯೆ ಆಟಗಾರನ ಭವಿಷ್ಯವನ್ನು ರೂಪಿಸಬಹುದು ಅಥವಾ ಅದು ಸವಾಲುಗಳನ್ನು ಒಡ್ಡಬಹುದು. ಹರಾಜಿನ ಸಮಯದಲ್ಲಿ ನಾನು ಖಂಡಿತವಾಗಿಯೂ ಆತಂಕಕ್ಕೊಳಗಾಗಿದ್ದೆ," ಎಂದು ವಿಕೆಟ್‌ ಕೀಪರ್‌ ತಿಳಿಸಿದ್ದಾರೆ.



ಕೆಎಲ್‌ ರಾಹುಲ್‌ರ ಐಪಿಎಲ್‌ ದಾಖಲೆಗಳು

  • ಕೆಎಲ್ ರಾಹುಲ್ ಐಪಿಎಲ್‌ ಟೂರ್ನಿಯಲ್ಲಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ವೇಗದ ಅರ್ಧಶತಕದ ದಾಖಲೆಯಾಗಿದೆ.
  • 2020ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೆಎಲ್ ರಾಹುಲ್ -132* ರನ್ ಗಳಿಸಿದ್ದರು. ಇದು ಐಪಿಎಲ್ ಇನಿಂಗ್ಸ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ ಗಳಿಸಿದ ವೈಯಕ್ತಿಕ ಗರಿಷ್ಠ ಸ್ಕೋರ್ ಇದಾಗಿದೆ.
  • -ಐಪಿಎಲ್‌ ಟೂರ್ನಿಯಲ್ಲಿ ಕೆಎಲ್‌ ರಾಹುಲ್ 187 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ 13 ಸಿಕ್ಸರ್‌ಗಳನ್ನು ಬಾರಿಸಿದರೆ, ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ನಲ್ಲಿ 200 ಸಿಕ್ಸರ್‌ಗಳನ್ನು ಬಾರಿಸಿದ 11 ನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.