IPL 2025: ರಾಜಸ್ಥಾನ್ ರಾಯಲ್ಸ್‌ಗೆ ಗಾಯದ ಭೀತಿ, ಸಂಜು ಸ್ಯಾಮ್ಸನ್‌ಗೆ ಏನಾಯ್ತು?
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಪಕ್ಕೆಲುಬಿನ ನೋವಿನಿಂದಾಗಿ ರಿಟೈರ್ ಹರ್ಟ್ ಆದರು. ಅವರು 19 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿಂದ 31 ರನ್ ಗಳಿಸಿದರು. ಇದೀಗ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗಾಯದ ಭೀತಿ ಶುರುವಾಗಿದೆ. ಟೂರ್ನಿಯ ಆರಂಭದಲ್ಲಿಯೂ ಗಾಯದಿಂದಾಗಿ ಸಂಜು ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಾತ್ರ ಆಡಿದ್ದರು. ಆದರೆ, ಇದೀಗ ಅವರ ಗಾಯದ ಸ್ವರೂಪದ ಮೇಲೆ ಸಂಜು ಅವರ ಟೂರ್ನಿಯ ಭವಿಷ್ಯ ತಿಳಿಯಲಿದೆ.
ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್
ಏಪ್ರಿಲ್ 16 ರಂದು ಬುಧವಾರ ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 32ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಿಗೆ ಎರಡೂ ತಂಡಗಳ ಮೊತ್ತ 188 ರನ್‌ಗಳಾಗಿತ್ತು.
ಸೂಪರ್ ಓವರ್ ಥ್ರಿಲ್ಲರ್ ಗೆದ್ದ ಡೆಲ್ಲಿ
ಈ ಪಂದ್ಯದ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ತಂಡ 5 ಎಸೆತಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 11 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಡೆಲ್ಲಿಗೆ 12 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇನ್ನೂ 2 ಎಸೆತಗಳು ಬಾಕಿ ಇರುವಾಗಲೇ 13 ರನ್ ಗಳಿಸಿ ಗೆದ್ದು ಬೀಗಿತು.
ಸಂಜು ಸ್ಯಾಮ್ಸನ್ ರಿಟೈರ್ ಹರ್ಟ್
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ನಿರಂತರವಾಗಿ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸುತ್ತಿದ್ದ ಸಂಜು ಆರನೇ ಓವರ್‌ನಲ್ಲಿ ರಿಟೈರ್ ಹರ್ಟ್ ಆದರು. ಆ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಅವರು ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಇದಾದ ನಂತರವೂ ಅವರು ಮೈದಾನ ಬಿಡಲು ನಿರ್ಧರಿಸಿದರು.
ರಿಟೈರ್ ಹರ್ಟ್ ಆದ ಮೂರನೇ ಬ್ಯಾಟ್ಸ್‌ಮನ್
ಸಂಜು ಸ್ಯಾಮ್ಸನ್ ಪ್ರಸಕ್ತ ಋತುವಿನಲ್ಲಿ ರಿಟೈರ್ ಔಟ್ ಆದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್‌ನ ತಿಲಕ್ ವರ್ಮಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ಡೆವೊನ್ ಕಾನ್ವೇ ಕೂಡ ರಿಟೈರ್ ಔಟ್ ಆಗಿ ಪೆವಿಲಿಯನ್‌ಗೆ ಮರಳಿದ್ದರು. ತಿಲಕ್ ಮತ್ತು ಡೆವೋನ್ ಕಾನ್ವೆ ಅವರನ್ನು ಉದ್ದೇಶ ಪೂರ್ವಕವಾಗಿ ರಿಟೈರ್ ಔಟ್ ಪಡೆಯಲಾಗಿತ್ತು.
19 ಎಸೆತಗಳಲ್ಲಿ 31 ರನ್ ಗಳಿಸಿದ ಸಂಜು
ಸಂಜು ಸ್ಯಾಮ್ಸನ್‌ಗೆ ಪಕ್ಕೆಲುಬುಗಳಲ್ಲಿ ನೋವು ಕಾಣಿಸಿಕೊಂಡಿತು ಅವರು ಕ್ರೀಸ್‌ನಲ್ಲಿರುವಾಗ ತುಂಬಾ ನೋವು ಅನುಭವಿಸುತ್ತಿದ್ದರು ಹಾಗೂ ಬ್ಯಾಟಿಂಗ್ ಮುಂದುವರಿಸುವ ಪರಿಸ್ಥಿತಿಯಲ್ಲಿ ಅವರು ಇರಲಿಲ್ಲ. ಈ ಕಾರಣಕ್ಕಾಗಿ ಅವರು ರಿಟೈರ್ ಹರ್ಟ್ ಆಗಿ ಪೆವಿಲಿಯನ್‌ಗೆ ಮರಳಿದರು. ಅವರು 19 ಎಸೆತಗಳಲ್ಲಿ 31 ರನ್ ಗಳಿಸಿದ್ದರು. ಇದರಲ್ಲಿ 2 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳು ಸಿಡಿಸಿದರು.
ಸಂಜು ಸ್ಯಾಮ್ಸನ್‌ಗೆ ಗಾಯದ ಭೀತಿ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ರಿಟೈರ್ ಹರ್ಟ್ ಆಗಿ ಪೆವಲಿಯನ್‌ಗೆ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಸಂಜು ಸ್ಯಾಮ್ಸನ್ ಅವರ ಗಾಯದ ಭೀತಿ ಎದುರಾಗಿದೆ. ಒಂದು ವೇಳೆ ಸಂಜು ಅವರ ಗಾಯ ಗಂಭೀರವಾಗಿದ್ದರೆ, ಅವರು ಟೂರ್ನಿಯಿಂದ ಹೊರ ಬೀಳಬೇಕಾಗುತ್ತದೆ.