JK Encounter: ಕಣಿವೆನಾಡಿನಲ್ಲಿ ಸೇನಾ ಕಾರ್ಯಾಚರಣೆ- ಯೋಧ ಹುತಾತ್ಮ
ಸೋಪೋರ್ ಜಿಲ್ಲೆಯ ಜಲೂರಾ ಗುಜ್ಜರ್ಪತಿಯಲ್ಲಿ ಉಗ್ರರು ಅವಿತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ ಬೆನ್ನಲ್ಲೇ ಪೊಲೀಸರು ಮತ್ತು ಸೇನೆ ಜಂಟಿ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದವು. ಈ ವೇಳೆ ಉಗ್ರರು ಮತ್ತು ಯೋಧದ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಆಗ ಉಗ್ರರ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ(Jammu-Kashmir) ಸೋಪೋರ್ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ(JK Encounter) ನಡೆದಿದ್ದು,ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಸೋಪೋರ್ ಜಿಲ್ಲೆಯ ಜಲೂರಾ ಗುಜ್ಜರ್ಪತಿಯಲ್ಲಿ ಉಗ್ರರು ಅವಿತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ ಬೆನ್ನಲ್ಲೇ ಪೊಲೀಸರು ಮತ್ತು ಸೇನೆ ಜಂಟಿ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದವು. ಈ ವೇಳೆ ಉಗ್ರರು ಮತ್ತು ಯೋಧದ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಆಗ ಉಗ್ರರ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
The soldier, who was injured in the encounter between terrorists and security forces in Gujjarpati area of Zaloora in Sopore, succumbed to his injuries, pic.twitter.com/iMZAYv2Fic
— Early Times Jammu (@earlytimesjk) January 20, 2025
ಇನ್ನು ಸ್ಥಳದಲ್ಲಿ ಬಿಗಿ ಕಣ್ಗಾವಲು ಇಡಲಾಗಿದ್ದು, ಆ ಪ್ರದೇಶದಲ್ಲಿ ಶಂಕಿತ ಭಯೋತ್ಪಾದಕರಿಗಾಗಿ ಹುಡುಕಾಟವನ್ನು ತೀವ್ರಗೊಳಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಜಮ್ಮು ಹೊರವಲಯದಲ್ಲಿ ಎನ್‌ಕೌಂಟರ್: ಮೂವರು ಉಗ್ರರ ಹತ್ಯೆ