ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಹಿಳೆ ಕಾದಿರಿಸಿದ ಬಸ್‌ ಸೀಟ್‍ನಲ್ಲಿ ವ್ಯಕ್ತಿ ಕುಳಿತಿದ್ದಕ್ಕೆ ಶುರುವಾಯ್ತು ಫೈಟ್‌; ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಪ್ರಯಾಣಿಕರು

Man and Woman Thrash Each Other: ಮಹಿಳೆಯೊಬ್ಬಳು ಶಾಲು ಹಾಕಿ ಬಸ್‌ನಲ್ಲಿ ಸೀಟ್‍ ಕಾದಿರಿಸಿದ್ದಳು. ಆದರೆ ಆ ಆಸನದಲ್ಲಿ ವ್ಯಕ್ತಿಯೊಬ್ಬ ಬಂದು ಕುಳಿತಿದ್ದಕ್ಕೆ ಕ್ಯಾತೆ ತೆಗೆದಿದ್ದಾಳೆ. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾಳೆ. ಕೊನೆಗೆ ಇಬ್ಬರ ನಡುವೆ ವಾಗ್ವಾದ ನಡೆದು ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ.

ಬಸ್ ಸೀಟ್‍ಗಾಗಿ ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಮಹಿಳೆ-ಪುರುಷ

-

Priyanka P Priyanka P Aug 30, 2025 9:10 PM

ಅಮರಾವತಿ: ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳು ವ್ಯಕ್ತಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ, ಕಪಾಳಮೋಕ್ಷ ಮಾಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ (Andhra Pradesh) ನಡೆದಿದೆ. ವ್ಯಕ್ತಿಯೊಬ್ಬರಿಗೆ ಕಪಾಳಕ್ಕೆ ಹೊಡೆದದ್ದಲ್ಲದೆ, ಚಪ್ಪಲಿಯಿಂದ ಥಳಿಸಿದ್ದಾಳೆ. ಮಹಿಳೆಯು ತನ್ನ ಶಾಲು ಹಾಕಿ ಕಾಯ್ದಿರಿಸಿದ ಬಸ್ ಸೀಟಿನಲ್ಲಿ ಆ ವ್ಯಕ್ತಿ ಬಂದು ಕುಳಿತಿದ್ದಕ್ಕೆ ಜಗಳ ಮಾಡಿದ್ದಾಳೆ ಎನ್ನಲಾಗಿದೆ. ಕೊನೆಗೆ ಇಬ್ಬರೂ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ಘಟನೆ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (Viral Video)ಆಗಿದೆ.

ಸಹ ಪ್ರಯಾಣಿಕರೊಬ್ಬರು ಈ ವಿಡಿಯೊವನ್ನು ಚಿತ್ರೀಕರಿಸಿದ್ದಾರೆ. ಮಹಿಳೆ ಆ ವ್ಯಕ್ತಿ ಮುಂದೆ ಬಹಳ ಹತ್ತಿರದಲ್ಲಿ ನಿಂತು, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾಳೆ. “ನನ್ನ ಸೀಟಿನಲ್ಲಿ ಯಾಕೆ ಕುಳಿತಿದ್ದೀಯಾ? ನೀನು ಯಾರು? ನಿನಗೆ ನಾಚಿಕೆ ಆಗುವುದಿಲ್ಲವೇ?” ಎಂದು ಬೈಯ್ದಿದ್ದಾಳೆ. ಈ ಮಾತಿಗೆ ಆ ವ್ಯಕ್ತಿ ಪ್ರತಿಕ್ರಿಯಿಸಿದಾಗ, ಆತನಿಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಅಲ್ಲದೇ ಪದೇ ಪದೆ ಆತನ ಮೇಲೆ ಹಲ್ಲೆ ಮಾಡಿದ್ದಾಳೆ. ಇತರೆ ಮಹಿಳಾ ಪ್ರಯಾಣಿಕರು ಮಧ್ಯಪ್ರವೇಶಿಸಿ ಅವಳನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರ ಪ್ರಯತ್ನಗಳು ವಿಫಲವಾಗಿದೆ.

ವಿಡಿಯೊ ವೀಕ್ಷಿಸಿ:



ನಂತರ ಆ ವ್ಯಕ್ತಿ ಕೂಡ ಕೋಪದಿಂದ ಪ್ರತೀಕಾರವಾಗಿ ತನ್ನ ಚಪ್ಪಲಿಯನ್ನು ತೆಗೆದು ಹೊಡೆಯಲು ಮುಂದಾಗಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಆಕೆ ಕೂಡ ಚಪ್ಪಲಿಯಿಂದ ಹೊಡೆದಿದ್ದಾಳೆ. ಇಬ್ಬರೂ ತಮ್ಮ ಚಪ್ಪಲಿಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೊನೆಗೆ, ಆ ವ್ಯಕ್ತಿಯು ಆಸನದಿಂದ ಎದ್ದು ನಡೆದಿದ್ದಾನೆ. ಅವನು ಎದ್ದ ಕೂಡಲೇ ಮಹಿಳೆ ಅಲ್ಲಿ ಕುಳಿತಿದ್ದಾಳೆ. ಆದರೆ, ಇಬ್ಬರೂ ಪರಸ್ಪರ ನಿಂದಿಸುವುದನ್ನು ಮುಂದುವರಿಸಿದ್ದಾರೆ. ಪರಿಸ್ಥಿತಿ ಹದಗೆಟ್ಟಂತೆ, ವ್ಯಕ್ತಿಯು ಹಿಂತಿರುಗಿ ತನ್ನ ಚಪ್ಪಲಿಯಿಂದ ಮಹಿಳೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾನೆ. ಇತರ ಮಹಿಳೆಯರು ಹಲ್ಲೆಯನ್ನು ತಡೆಯಲು ಮಧ್ಯ ಪ್ರವೇಶಿಸಿದ್ದಾರೆ.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೂಡ ಮಹಿಳೆಯ ಮೇಲೆ ಸಿಟ್ಟಾಗಿದ್ದಾರೆ. ಬಸ್‌ಗಳಲ್ಲಿ, ಸೀಟಿನ ಮೇಲೆ ಶಾಲು ಹಾಕಿಕೊಳ್ಳುವುದು ಮೀಸಲಾತಿಯಾಗುತ್ತದೆಯೇ? ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಪುರುಷರಿಗೆ ಕೂಡ ಎಲ್ಲ ಹಕ್ಕಿದೆ. ಅಲ್ಲದೆ ಆತ ಮಹಿಳೆಯರ ಮೀಸಲು ಸೀಟಿನಲ್ಲಿ ಕುಳಿತಿದ್ದಂತೆ ಕಾಣುತ್ತಿಲ್ಲ. ಪರಿಸ್ಥಿತಿ ಏನೇ ಇರಲಿ, ಅವರನ್ನು ಮೌಖಿಕವಾಗಿ ನಿಂದಿಸುವುದು ಮತ್ತು ದೈಹಿಕವಾಗಿ ಹಲ್ಲೆ ಮಾಡುವುದು ಸರಿಯಾದ ಕ್ರಮವಲ್ಲ. ಮಹಿಳೆಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Viral News: ತನ್ನ ಕಣ್ಣುಗಳನ್ನು ತಾನೇ ಕಿತ್ತುಕೊಂಡ ಯುವತಿ; ಕಾರಣ ಕೇಳಿದ್ರೆ ಬೆಚ್ಚಿ ಬೀಳುತ್ತೀರಿ