ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ತೆರೆದ ಚರಂಡಿಗೆ ಬಿದ್ದ ಸ್ಕೂಟರ್, ವಿಶೇಷ ಚೇತನ ಸವಾರ; ಆಡಳಿತದ ವಿರುದ್ಧ ಜನರ ಆಕ್ರೋಶ

Man Falls into Open Drain: ವಿಶೇಷ ಚೇತನ ವ್ಯಕ್ತಿಯೊಬ್ಬರು ತನ್ನ ಸ್ಕೂಟರ್ ಅನ್ನು ಹಿಂದಕ್ಕೆ ತೆಗೆಯುವಾಗ ತೆರೆದ ಚರಂಡಿಗೆ ಬಿದ್ದ ಆಘಾತಕಾರಿ ಘಟನೆ ದೆಹಲಿಯ ಇಂದಿರಾಪುರಂನಲ್ಲಿ ನಡೆದಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ತೆರೆದ ಚರಂಡಿಗೆ ಬಿದ್ದ ಸ್ಕೂಟರ್, ವಿಶೇಷಚೇತನ ಸವಾರ

-

Priyanka P Priyanka P Aug 30, 2025 9:01 PM

ದೆಹಲಿ: ವಿಶೇಷಚೇತನ ವ್ಯಕ್ತಿಯೊಬ್ಬರು ತನ್ನ ಸ್ಕೂಟರ್ ಅನ್ನು ಹಿಂದಕ್ಕೆ ತೆಗೆಯುವಾಗ ತೆರೆದ ಚರಂಡಿಗೆ (Open Drain) ಬಿದ್ದ ಆಘಾತಕಾರಿ ಘಟನೆ ದೆಹಲಿಯ ಇಂದಿರಾಪುರಂನಲ್ಲಿ ನಡೆದಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಮೂಲಭೂತ ಮೂಲಸೌಕರ್ಯ ಮತ್ತು ಸುರಕ್ಷತಾ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಇಂದಿರಾಪುರಂ ಪ್ರದೇಶದಲ್ಲಿ ಗುರುವಾರ ಪುರಸಭೆಯ ನಿರ್ಲಕ್ಷ್ಯದಿಂದಾಗಿ ಈ ಘಟನೆ ಸಂಭವಿಸಿದೆ. ವೈಭವ್ ಖಾಂಡ್‌ನಲ್ಲಿರುವ ಗೌರ್ ಗ್ರೀನ್ ಸೊಸೈಟಿಯಲ್ಲಿ ಸುಮಾರು 15 ಅಡಿ ಆಳದ ತೆರೆದ ಚರಂಡಿಗೆ ವಿಶೇಷ ಚೇತನ ವ್ಯಕ್ತಿ ಬಿದ್ದಿದ್ದಾರೆ. ಅವರು ತಮ್ಮ ಸ್ಕೂಟರ್ ಅನ್ನು ಹಿಮ್ಮುಖವಾಗಿ ಚಲಿಸುತ್ತಿದ್ದಾಗ ಸ್ಕೂಟರ್‌ನ ಹಿಂಭಾಗದ ಟೈರ್ ಚರಂಡಿಯೊಳಗೆ ಸಿಕ್ಕಿಹಾಕಿಕೊಂಡಿದೆ. ಈ ವೇಳೆ ವಾಹನ ಸಹಿತ ಅವರು ತೆರೆದ ಚರಂಡಿಯೊಳಗೆ ಬಿದ್ದಿದ್ದಾರೆ.

ಆ ವ್ಯಕ್ತಿ ಬರ್ಗರ್ ಖರೀದಿಸಲು ಅಲ್ಲಿಗೆ ಹೋಗಿದ್ದರು ಎನ್ನಲಾಗಿದೆ. ಅದೃಷ್ಟವಶಾತ್ ಯಾವುದೇ ದೊಡ್ಡ ದುರಂತ ಸಂಭವಿಸಿಲ್ಲ. ಆ ವ್ಯಕ್ತಿಯ ಬೆನ್ನಿಗೆ ಮಾತ್ರ ಗಾಯಗಳಾಗಿದ್ದು, ದುರಂತದಿಂದ ಪಾರಾಗಿದ್ದಾರೆ. ಸ್ಥಳದಲ್ಲಿದ್ದ ಜನರು ಕೂಡಲೇ ಆತನ ರಕ್ಷಣೆಗೆ ಧಾವಿಸಿದ್ದಾರೆ. ಏಣಿಯನ್ನು ಬಳಸಿ ಆ ವ್ಯಕ್ತಿಯನ್ನು ಚರಂಡಿಯಿಂದ ಹೊರಗೆಳೆದಿದ್ದಾರೆ.

ವಿಡಿಯೊ ವೀಕ್ಷಿಸಿ:



ವರದಿಗಳ ಪ್ರಕಾರ, ಜುಲೈಯಲ್ಲಿ ಪುರಸಭೆಯು ಚರಂಡಿಯನ್ನು ಸ್ವಚ್ಛಗೊಳಿಸಿತ್ತು. ಆದರೆ ಚರಂಡಿಯನ್ನು ಮುಚ್ಚದೆ ಇದ್ದ ಕಾರಣ ಈ ಘಟನೆ ಸಂಭವಿಸಿದೆ. ಇನ್ನು ಚರಂಡಿದೆ ಬಿದ್ದ ವ್ಯಕ್ತಿಯನ್ನು ಸಂತೋಷ್ ಯಾದವ್ ಎಂದು ಗುರುತಿಸಲಾಗಿದೆ. ಅವರು ಖೋಡಾ ಸುಭಾಷ್ ಪಾರ್ಕ್ ನಿವಾಸಿಯಾಗಿದ್ದು, ತಮ್ಮ ಮಕ್ಕಳಿಗಾಗಿ ಬರ್ಗರ್ ಖರೀದಿಸಲು ಆ ಸ್ಥಳಕ್ಕೆ ಹೋಗಿದ್ದರು. ತೆರೆದ ಚರಂಡಿಯನ್ನು ಅವರು ಗಮನಿಸಿರಲಿಲ್ಲ. ಸ್ಕೂಟರ್ ಅನ್ನು ಹಿಂದಕ್ಕೆ ಚಲಿಸುವಾಗ ಚರಂಡಿಗೆ ಸಿಕ್ಕಿಹಾಕಿಕೊಂಡು ಬಿದ್ದಿದೆ. ಪರಿಣಾಮ ಅವರ ಬೆನ್ನಿಗೆ ಗಾಯವಾಗಿದೆ. ಚರಂಡಿಯನ್ನು ಸುಮಾರು ಒಂದು ತಿಂಗಳಿನಿಂದ ತೆರೆದಿಡಲಾಗಿದೆ ಎಂದು ಹೇಳಲಾಗಿದೆ.

ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಅನೇಕ ವಾಹನಗಳು ಮತ್ತು ಮಕ್ಕಳು ಸಹ ಚರಂಡಿಗೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ತಿಂಗಳಷ್ಟೇ ಒಂದು ಮಗು ಕೂಡ ಇದೇ ಚರಂಡಿಗೆ ಬಿದ್ದಿತ್ತು. ಪುರಸಭೆಯ ಅಧಿಕಾರಿಗಳು ಕ್ರಮ ಕೈಗೊಳ್ಳುವ ಮೊದಲು ದೊಡ್ಡ ದುರಂತಕ್ಕಾಗಿ ಕಾಯುತ್ತಿರಬಹುದು ಎಂದು ಸಾರ್ವಜವನಿಕರು ಆರೋಪಿಸಿದ್ದಾರೆ. ಸದ್ಯ, ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ನಾಗರಿಕ ಸಂಸ್ಥೆಯ ನಿರ್ಲಕ್ಷ್ಯಕ್ಕಾಗಿ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: Assault: ನಾಯಿ ಕಾಣೆಯಾಗಿದ್ದಕ್ಕೆ ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ