ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎಲ್.ಯುಎಚ್‌ ತವರಲ್ಲೇ ಮೊದಲ ಪ್ರದರ್ಶನ

ಮೇಲ್ದರ್ಜೆಗೆ ಏರಿರುವ ಈ ಹೆಲಿಕಾಪ್ಟರ್ ತನ್ನ ಮೊದಲ ಪ್ರದರ್ಶನವನ್ನು ಏರೋ ಇಂಡಿಯಾದ ಉದ್ಘಾ ಟನಾ ಕಾರ್ಯಕ್ರಮದಲ್ಲಿ ನೀಡಿತು. ತುಮಕೂರಿನ ಗುಬ್ಬಿ ತಾಲೂಕಿನ ಬಿದರೆ ಕಾವಲ್ ಸಂದ್ರ ಉತ್ಪಾದಕ ಘಟಕದಲ್ಲಿ ತಯಾರಿಸಿರುವ ಎಲಯುಹೆಚ್ ಹೆಲಿಕಾಪ್ಟರ್ ವೀಕ್ಷಕರ ಮನಸೂರೆ ಗೊಳಿಸಿತು

ತುಮಕೂರಿನ ಎಚ್‌ಎಎಲ್ ಘಟಕದಲ್ಲಿ ಸಜ್ಜಾದ ಮೊದಲ ಹೆಲಿಕಾಪ್ಟರ್‌

Profile Ashok Nayak Feb 15, 2025 10:15 PM

ಅಪರ್ಣಾ ಎ.ಎಸ್. ಬೆಂಗಳೂರು

ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಕಾ ಘಟಕ ಎನಿಸಿರುವ ತುಮಕೂರಿನ ಎಚ್‌ಎಎಲ್ ತಯಾರಿಕ ಘಟಕಕ್ಕೂ ಈ ಬಾರಿಯ ಏರೋ ಇಂಡಿಯಾ ಪ್ರದರ್ಶನಕ್ಕೂ ವಿಶಿಷ್ಟ ಸಂಬಂಧವಿದೆ. ಅದೇನೆಂದರೆ, 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡಿದ್ದ ಘಟಕ ದಲ್ಲಿಯೇ ತಯಾರಾದ ಎಲ್‌ಯುಎಚ್ ಹೆಲಿಕಾಪ್ಟರ್ ಇದೇ ಮೊದಲ ಬಾರಿಗೆ ತಮ್ಮ ಪ್ರದರ್ಶನ ವನ್ನು ನೀಡಿದೆ. ಭಾರತ ವಾಯುಸೇನೆ ಅತ್ಯಾಧುನಿಕ ತಂತ್ರಜ್ಞಾನವಿರುವ ಹೆಲಿಕಾಪ್ಟರ್ ಎನಿಸಿರುವ ಎಲ್ ಯುಎಚ್ ಮೊದಲ ಬಾರಿಗೆ ತನ್ನ ಪ್ರದರ್ಶನವನ್ನು ನೀಡಿದೆ. ವಿವಿಧ ಬಳಕೆಗೆ ಅನುಕೂಲ ವಾಗುವ ಈ ಹೆಲಿ ಕಾಪ್ಟರ್ ಸಿಯಾಚಿನ್‌ನಂತಹ ಪ್ರದೇಶದಲ್ಲಿಯೂ ಯಾವುದೇ ತೊಂದರೆಯಿಲ್ಲದೇ ಕಾರ್ಯ ನಿರ್ವಹಿಸುವುದು ವಿಶೇಷ.

ಇದನ್ನೂ ಓದಿ: Mohan Vishwa Column: ಕೈಸನ್ನೆಗೆ ಸಿಕ್ಕ ರಾಜಕೀಯ ಪ್ರಚಾರ

ಮೇಲ್ದರ್ಜೆಗೆ ಏರಿರುವ ಈ ಹೆಲಿಕಾಪ್ಟರ್ ತನ್ನ ಮೊದಲ ಪ್ರದರ್ಶನವನ್ನು ಏರೋ ಇಂಡಿಯಾದ ಉದ್ಘಾಟನಾ ಕಾರ್ಯಕ್ರಮದಲ್ಲಿ ನೀಡಿತು. ತುಮಕೂರಿನ ಗುಬ್ಬಿ ತಾಲೂಕಿನ ಬಿದರೆ ಕಾವಲ್ ಸಂದ್ರ ಉತ್ಪಾದಕ ಘಟಕದಲ್ಲಿ ತಯಾರಿಸಿರುವ ಎಲಯುಹೆಚ್ ಹೆಲಿಕಾಪ್ಟರ್ ವೀಕ್ಷಕರ ಮನಸೂರೆ ಗೊಳಿಸಿತು. ಮೇಕ್ ಇನ್ ಇಂಡಿಯಾ ರೀತಿ ಮೇಕ್ ಕರ್ನಾಟಕ ಎಂಬಂತೆ ಸರಕಾರಿ ಸ್ವಾಮ್ಯದ ಎಚ್‌ ಎಎಲ್ ಸಂಪೂರ್ಣ ದೇಶಿಯ ತಂತ್ರಜ್ಞಾನ ಬಳಸಿಕೊಂಡಿರುವ ನೂತನ ಹೆಲಿಕಾಪ್ಟರ್ ಅಭಿವೃದ್ಧಿ ಪಡಿಸಿದ್ದು, ವೈಮಾನಿಕ ಪ್ರದರ್ಶನದಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸಿತು.

ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ತುಮಕೂರಿನ ಎಚ್‌ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕದಲ್ಲಿ ತಯಾರಾಗಿರುವ ಈ ಹೆಲಿಕಾಪ್ಟರ್ ಸಂಪೂರ್ಣ ಸ್ವದೇಶಿ ನಿರ್ಮಿತವಾಗಿದೆ. ಪ್ರತಿ ಬಿಡಿಭಾಗ ಗಳನ್ನು ಭಾರತದಲ್ಲಿಯೇ ತಯಾರಿಸಲಾಗಿದೆ. ಸದ್ಯ ಭಾರತೀಯ ವಾಯು ಸೇನೆ ಯಲ್ಲಿ ಹಳೆಯದಾಗಿರುವ ಚೀತಾ, ಚೇತಕ್ ಹೆಲಿಕಾಪ್ಟರ್ ಬದಲಿಗೆ ಈ ಹೆಲಿಕಾಪ್ಟರ್‌ಗಳನ್ನು ಬಳಸುವ ಲೆಕ್ಕಾಚಾರದಲ್ಲಿ ವಾಯುಸೇನೆಯಿದೆ. ಇದೇ ರೀತಿ ಈ ಹೆಲಿಕಾಪ್ಟರ್‌ಗಳನ್ನು ಇತರೆ ದೇಶ ಗಳಿಗೂ ಮಾರಾಟ ಮಾಡುವ ಮೂಲಕ ಲಾಭದ ಲೆಕ್ಕಾಚಾರದಲ್ಲಿ ಎಚ್ಎ ಎಲ್‌ಯಿದೆ.

೫ಜಿ ತಂತ್ರಜ್ಞಾನ ಅಳವಡಿಕೆ

ಐದನೇ ತಲೆಮಾರಿನ ಎಲಯುಎಚ್ ಹೆಲಿಕಾಪ್ಟರ್‌ನಲ್ಲಿ ಗಾಜಿನ ಕಾಕ್‌ಪಿಟ್ ಹಾಗೂ ಹೊಸ ಡಿಸ್‌ ಪ್ಲೇಗಳು ಅತ್ಯಾಧುನಿಕ ತಂತ್ರeನದಿಂದ ಕೂಡಿವೆ. ಪ್ರತಿ ಗಂಟೆಗೆ 235 ಕಿ.ಮೀ ವೇಗದಲ್ಲಿ ಚಲಿಸ ಲಿದ್ದು, ಗರಿಷ್ಠ 350 ಕಿ.ಮೀ ವ್ಯಾಪ್ತಿ ಹೊಂದಿದೆ. ದೇಶದ ಸೇನಾಪಡೆಗಳಿಗೆ 20 ಸಾವಿರ ಅಡಿಗಳಿಗಿಂತ ಎತ್ತರ ಮಟ್ಟದಲ್ಲಿ ಹಾರಾಟ ನಡೆಸುವ ಬೆರಳೆಣಿಕೆ ಹೆಲಿಕಾಪ್ಟರ್‌ಗಳಲ್ಲಿ ಇದೂ ಒಂದಾಗಿರುವುದು ವಿಶೇಷ.

ವಿಶೇಷ ಏನು ?

ಸಿಯಾಚಿನ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಅತ್ಯಾಧುನಿಕ ತಂತ್ರಜ್ಞಾನ

ಕಡಿಮೆ ಅಂತರದಲ್ಲಿ ತಿರುವು ಪಡೆಯಲು ಹಾಗೂ ಸುರಕ್ಷಿತವಾಗಿ ಇಳಿಸಲು ಸಾಧ್ಯ

500 ಕೆಜಿ ತೂಕದ ಯುದ್ಧಸಾಮಗ್ರಿ ಅಥವಾ ಇತರೆ ಸಾಮಗ್ರಿ ಹೋರುವ ಸಾಮರ್ಥ್ಯ

ಎಲ್‌ಯುಎಚ್ ಕೇವಲ ಸಾಮಗ್ರಿ ಸಾಗಣೆ ಮಾತ್ರವಲ್ಲದೇ ಇಬ್ಬರು ಪೈಲಟ್ ಸೇರಿ 10 ಮಂದಿಗೆ ಆಸನದ ವ್ಯವಸ್ಥೆ .