ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Vishwa Column: ಕೈಸನ್ನೆಗೆ ಸಿಕ್ಕ ರಾಜಕೀಯ ಪ್ರಚಾರ

ಮರ್ಕೆಲ್ ಅವರ ಈ ಅಭ್ಯಾಸ ಕ್ರಮೇಣ ದೊಡ್ಡ ಪ್ರಚಾರವಾಗಿ ಬದಲಾಯಿತು, ದಿನದಿಂದ ದಿನಕ್ಕೆ ಜರ್ಮನ್ನರ ಮನೆಮಾತಾಯಿತು. ಜರ್ಮನ್ ಪ್ರಜೆಗಳೂ ಈ ಅಭ್ಯಾಸ ಮಾಡಿಕೊಂಡರು. ಇದನ್ನು ಮರ್ಕೆಲ್ ಡೈಮಂಡ್ ಅಥವಾ ಇಂಗ್ಲಿಷ್ ಮಾಧ್ಯಮದವರು ‘ಶಕ್ತಿಯ ತ್ರಿಕೋನ’ ಎಂದು ಕರೆದರು. ಇದು ಕೈಗಳನ್ನು ಹೊಟ್ಟೆಯ ಮುಂದೆ ಇಡುವ ಮೂಲಕ ಮಾಡಲಾದ ಒಂದು ಕೈಸೂಚಕವಾಗಿದೆ. ಇದು ಬೆರಳ ತುದಿಗಳು, ಹೆಬ್ಬೆರಳು ಮತ್ತು ತೋರುಬೆರಳಿನ ಆಕಾರವನ್ನು ಹೊಂದಿರುತ್ತದೆ

Mohan Vishwa Column: ಕೈಸನ್ನೆಗೆ ಸಿಕ್ಕ ರಾಜಕೀಯ ಪ್ರಚಾರ

ಅಂಕಣಕಾರ ಮೋಹನ್‌ ವಿಶ್ವ

ಮೋಹನ್‌ ವಿಶ್ವ ಮೋಹನ್‌ ವಿಶ್ವ Feb 15, 2025 8:06 AM

ವೀಕೆಂಡ್‌ ವಿತ್‌ ಮೋಹನ್‌

camohanbn@gmail.com

ಮರ್ಕೆಲ್ ‘ರೌಟ್’- (ರೌಟ್ ಎಂಬುದು ಗಣಿತದಲ್ಲಿ ಬರುವ ಜ್ಯಾಮಿತಿಯ ‘ರೋಂಬಸ್’ಗೆ ಜರ್ಮನಿ ಯ ಸಮಾನಾರ್ಥಕ ಪದ), ರೋಂಬಸ್ ಎಂದರೆ ‘ನಾಲ್ಕು ಭುಜಗಳೂ ಒಂದಕ್ಕೊಂದು ಸಮವಾ ಗಿರುವ, ಕೋನಗಳು ಸಮನಾಗಿಲ್ಲದಿರುವ ಸಮಾಂತರ ಚತುರ್ಭುಜ’. ಏಂಜೆಲಾ ಮರ್ಕೆಲ್ ಅವರು 2005ರಿಂದ 2021ರವರೆಗೆ ಜರ್ಮನಿ ಸರಕಾರದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಿದ್ದರು. ಮರ್ಕೆಲ್ ಭಾಷಣ ಮಾಡುವಾಗ, ಸಭೆಗಳಲ್ಲಿ ಪಾಲ್ಗೊಳ್ಳುವಾಗ, ಫೋಟೋ ತೆಗೆಸಿಕೊಳ್ಳುವಾಗ ತಮ್ಮೆರಡೂ ಕೈಗಳನ್ನು ಜೋಡಿಸಿ ‘ರೋಂಬಸ್’ ಮಾದರಿಯಲ್ಲಿಟ್ಟುಕೊಳ್ಳುತ್ತಿದ್ದರು. ರಾಜಕೀಯ ಭಾಷಣ ಮಾಡುವಾಗ ಜನರ ಮುಂದೆ ತಮ್ಮೆರಡೂ ಕೈಗಳನ್ನು ರೋಂಬಸ್ ಮಾದರಿಯಲ್ಲಿ ಟ್ಟುಕೊಳ್ಳುವುದು ಅವರ ಅಭ್ಯಾಸವಾಗಿತ್ತು.

ಮರ್ಕೆಲ್ ಅವರ ಈ ಅಭ್ಯಾಸ ಕ್ರಮೇಣ ದೊಡ್ಡ ಪ್ರಚಾರವಾಗಿ ಬದಲಾಯಿತು, ದಿನದಿಂದ ದಿನಕ್ಕೆ ಜರ್ಮನ್ನರ ಮನೆಮಾತಾಯಿತು. ಜರ್ಮನ್ ಪ್ರಜೆಗಳೂ ಈ ಅಭ್ಯಾಸ ಮಾಡಿಕೊಂಡರು. ಇದನ್ನು ಮರ್ಕೆಲ್ ಡೈಮಂಡ್ ಅಥವಾ ಇಂಗ್ಲಿಷ್ ಮಾಧ್ಯಮದವರು ‘ಶಕ್ತಿಯ ತ್ರಿಕೋನ’ ಎಂದು ಕರೆದರು. ಇದು ಕೈಗಳನ್ನು ಹೊಟ್ಟೆಯ ಮುಂದೆ ಇಡುವ ಮೂಲಕ ಮಾಡಲಾದ ಒಂದು ಕೈಸೂಚಕವಾಗಿದೆ. ಇದು ಬೆರಳ ತುದಿಗಳು, ಹೆಬ್ಬೆರಳು ಮತ್ತು ತೋರುಬೆರಳಿನ ಆಕಾರವನ್ನು ಹೊಂದಿರುತ್ತದೆ.

ಇದನ್ನೂ ಓದಿ: Mohan Vishwa Column: ನಿರ್ಮಲ ವಿರುದ್ಧ ತೆರಿಗೆ ಅಪಪ್ರಚಾರ

ಏಂಜೆಲಾ ಮರ್ಕೆಲ್ ಅವರ ಈ ಸೂಚಕವನ್ನು, ವಿಶ್ವದಲ್ಲಿ ಹೆಚ್ಚಾಗಿ ಗುರುತಿಸಬಹುದಾದ ಕೈಸನ್ನೆ ಗಳಲ್ಲಿ ಒಂದು ಎಂದು ವಿವರಿಸಲಾಗಿದೆ. ‘ಮರ್ಕೆಲ್ ರೌಟ್’ ಹೇಗೆ ತಮ್ಮ ಟ್ರೇಡ್ ಮಾರ್ಕ್ ಆಯಿತು ಎಂದು ಕೇಳಿದಾಗ ಮರ್ಕೆಲ್, “ನೀವು ನಿಮ್ಮ ತೋಳುಗಳನ್ನು ಏನು ಮಾಡಬೇಕೆಂಬುದರ ಬಗ್ಗೆ ಯಾವಾಗಲೂ ಪ್ರಶ್ನೆ ಇದ್ದೇ ಇರುತ್ತದೆ, ಹಾಗಾಗಿ ಈ ಕೈಸನ್ನೆ ಬಂದಿತು" ಎಂದು ಉತ್ತರಿಸಿದ್ದರು. ಮರ್ಕೆಲ್ ತಮ್ಮ ಸಲಹೆಗಾರರ ಸಹಾಯವಿಲ್ಲದೆ ಈ ಕೈಸನ್ನೆಯನ್ನು ತಾವೇ ಆಯ್ಕೆ ಮಾಡಿಕೊಂಡಿ ದ್ದರು. ಏಂಜೆಲಾ ಮರ್ಕೆಲ್‌ರನ್ನು ಮತ್ತು ಅವರ ಸರಕಾರವನ್ನು ಅಪಹಾಸ್ಯ ಮಾಡಲು ಜರ್ಮನಿ ಯಲ್ಲಿ ಈ ಕೈಸನ್ನೆಯನ್ನು ಅವರ ವಿರೋಧಿಗಳು ಬಳಸಿಕೊಂಡಿದ್ದರು.

ಮರ್ಕೆಲ್ ಸಾಮಾನ್ಯವಾಗಿ ಧರಿಸುತ್ತಿದ್ದಂಥ ವರ್ಣರಂಜಿತ ಜಾಕೆಟ್‌ಗಳೊಂದಿಗೆ ಜರ್ಮನಿಯ ಹಾಸ್ಯನಟರು ಅವರಂತೆ ನಟಿಸಿ ‘ಮರ್ಕೆಲ್ ರೌಟ್’ ಮಾಡುತ್ತಿದ್ದರು. ಜಾನ್ ಫಿಲಿಪ್ ಗ್ಲೋಗರ್ ಅವರ ‘ದಿ ಫ್ಲೈಯಿಂಗ್ ಡಚ್‌ಮ್ಯಾನ್’ ವೇದಿಕೆಯಲ್ಲಿ, 2013ರ ಬೈರೂತ್ ಫೆಸ್ಟಿವಲ್‌ನಲ್ಲಿ ‘ಮರ್ಕೆಲ್ ರೌಟ್’ ಅನ್ನು ಬಂಡವಾಳಶಾಹಿಯ ಟೀಕೆಯನ್ನಾಗಿ ಬಳಸಲಾಗಿತ್ತು.

ಅವರ ಪಕ್ಷವು (ಸಂಪ್ರದಾಯವಾದಿ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್) ‘ಮರ್ಕೆಲ್ ರೌಟ್’ ಅನ್ನು ಬಳಸಿದಾಗ, ಈ ಕೈಸನ್ನೆಯು ಮರ್ಕೆಲ್‌ರ ಅಪ್ರಚೋದಿತ ನಾಯಕತ್ವದ ರಾಜಕೀಯ ಸಂಕೇತ ವೆಂದು ಉದ್ದೇಶಿಸಲಾಗಿತ್ತು. 2013ರ ಸೆಪ್ಟೆಂಬರ್ 2ರಂದು ಫೆಡರಲ್ ಚುನಾವಣೆಯ ಪ್ರಚಾರದ ಸಮಯದಲ್ಲಿ, ಸಂಪ್ರದಾಯ ವಾದಿ ಕ್ರಿಶ್ಚಿಯನ್ ಡೆಮಾಕ್ರಟಿಕ್ ಪಕ್ಷವು ಪ್ರಯಾಣಿಕರಿಗೆ ಶುಭಾಶಯ ಕೋರುವ ದೈತ್ಯ ಬ್ಯಾನರ್ ಅನ್ನು ಬರ್ಲಿನ್ ನಗರದಲ್ಲಿ ಅನಾವರಣಗೊಳಿಸಿತು.

ನಿರ್ಮಾಣ ಹಂತದಲ್ಲಿದ್ದ ಹೋಟೆಲ್ ಕಟ್ಟಡದ ಎರಡು ಬದಿಗಳಲ್ಲಿ ಇದನ್ನು ಪ್ರದರ್ಶಿಸಲಾಗಿತ್ತು. ಈ ಬ್ಯಾನರ್ ಒಟ್ಟು 2400 ಚದರ ಮೀಟರ್ ನಷ್ಟು ದೊಡ್ಡದಿತ್ತು. ಮರ್ಕೆಲ್ ಬೆಂಬಲಿಗರ ‘ಮರ್ಕೆಲ್ ರೌಟ್’ ಸನ್ನೆಯನ್ನು ಹೋಲುವ 2150 ಕೈಸನ್ನೆಗಳ ಚಿತ್ರಗಳಿಂದ ಇದು ಮಾಡಲ್ಪಟ್ಟಿದ್ದು, ಜರ್ಮನಿ ಯ ಭವಿಷ್ಯವನ್ನು ಉತ್ತಮ ಕೈಯಲ್ಲಿ ಇರಿಸಿ ಎಂಬ ಘೋಷಣೆಯ ಪಕ್ಕದಲ್ಲಿ ಮರ್ಕೆಲ್‌ರ ಕೈಗಳು ‘ರೌಟ್’ ಅನ್ನು ರೂಪಿಸುವುದನ್ನು ಅದು ತೋರಿಸುತ್ತಿತ್ತು. ಮರ್ಕೆಲ್ ಕೈಸನ್ನೆಯು ಜರ್ಮನಿಯ ಚುನಾವಣಾ ಪ್ರಚಾರದ ಪ್ರಮುಖ ವಿಷಯವಾಗಿತ್ತು.

ಮರ್ಕೆಲ್‌ರ ಆಡಳಿತಾವಧಿಯಲ್ಲಿದ್ದ ಜರ್ಮನಿಯ ವಿಪಕ್ಷದ ರಾಜಕಾರಣಿಗಳು, ಬರ್ಲಿನ್ ನಗರದಲ್ಲಿ ಹಾಕಿದ್ದ ಇಂಥದೊಂದು ದೈತ್ಯ ಪ್ರಚಾರ ಫಲಕವನ್ನು ‘ವ್ಯಕ್ತಿತ್ವದ ದೈತ್ಯಾಕಾರದ ಆರಾಧನೆ’ ಎಂದು ಟೀಕಿಸಿ, ಇದು ಕ್ಯೂಬನ್ ಶೈಲಿಯ ಪ್ರಚಾರವೆಂದು ಕರೆದರು. ಬರ್ಲಿನ್ ಮೂಲದ ದಿನಪತ್ರಿಕೆ ಯೊಂದು, ‘ಮರ್ಕೆಲ್ ಅವರ ಈ ಬ್ಯಾನರ್ ವಯಸ್ಸಾದ ಮಹಿಳೆಯ ಕೈಗಳನ್ನು ವಿವರಿಸುತ್ತದೆ’ ಎಂದು ಟೀಕಿಸಿದ್ದರ ಜತೆಗೆ, ‘ಕೇವಲ ಒಂದು ಕೈಸನ್ನೆಯು ರಾಜಕಾರಣಿಯ ನಡವಳಿಕೆಯನ್ನು ತಿಳಿಸು ವುದಿಲ್ಲ’ ಎಂದು ಹೇಳಿತ್ತು.

ಚುನಾವಣೆ ಸಮಯದಲ್ಲಿ ಜಾಹೀರಾತು ಫಲಕದ ಜತೆಗೆ, ಪಕ್ಷದ ಇತರ ಪ್ರಚಾರ ಸಾಮಗ್ರಿಗಳಲ್ಲಿ ‘ಮರ್ಕೆಲ್ ರೌಟ್’ ಕೈಸನ್ನೆ ಸಾಮಾನ್ಯವಾಗಿತ್ತು. ಸಂಪ್ರದಾಯವಾದಿ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ ಪಕ್ಷದ ಯುವಘಟಕವು ಚುನಾವಣಾ ಪ್ರಚಾರದ ವೇಳೆ ಅಲ್ಲಲ್ಲಿ ‘ಫ್ಲ್ಯಾಷ್ ಮಾಬ್’ ಗಳನ್ನು ಆಯೋಜಿಸಿತ್ತು. ಆ ಸಂದರ್ಭದಲ್ಲಿ ಪಕ್ಷದ ಸದಸ್ಯರು ಜರ್ಮನಿಯ ಹಲವಾರು ಸಾರ್ವ ಜನಿಕ ಸ್ಥಳಗಳಲ್ಲಿ ‘ಮರ್ಕೆಲ್ ರೌಟ್’ ಕೈಸನ್ನೆಯನ್ನು ಅನುಕರಿಸಿ, ವೃತ್ತಗಳಲ್ಲಿ ಜನರನ್ನು ಸೇರಿಸು ತ್ತಿದ್ದರು.

ಬ್ರಿಟಿಷರ ಯುದ್ಧಕಾಲದ ನಾಟಕಗಳಲ್ಲಿನ ಸಾಲುಗಳಾದ ‘ಶಾಂತವಾಗಿರಿ ಮತ್ತು ಚಾನ್ಸಲರ್‌ಗೆ ಮತ ಚಲಾಯಿಸಿ’ ಅಥವಾ ‘ಸ್ಟೇ ಕೂಲ್ ಮತ್ತು ಚಾನ್ಸೆಲರ್ ಆಯ್ಕೆಮಾಡಿ’ ಎಂಬುದನ್ನು ಮುದ್ರಿಸಿ, ಮರ್ಕೆಲ್ ರೌಟ್‌ನ ಶೈಲಿಯ ಆವೃತ್ತಿಯ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ಈ ಪೋಸ್ಟರ್‌ಗಳ ಮೇಲಿನ ಸಾಲುಗಳನ್ನು ಬಳಸಿರುವ ಟಿ-ಶರ್ಟ್‌ನಂಥ ಉಡುಪನ್ನು ಪ್ರಚಾರದಲ್ಲಿ ಉಪಯೋಗಿಸಿ ಕೊಳ್ಳಲಾಗಿತ್ತು.

ಮರ್ಕೆಲ್ ಅವರ ಈ ಕೈಸನ್ನೆಯನ್ನು ಅವರ ಪಕ್ಷದ ಪ್ರಚಾರ ತಂಡವಾದ TEAM I ಕೂಡ 2013ರ ಮಾರ್ಚ್ ನಲ್ಲಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮರ್ಕೆಲ್ ಅವರನ್ನು ಪ್ರತಿನಿಧಿಸುವ ಲೋಗೋ ವನ್ನಾಗಿ ಬಳಸಿಕೊಂಡಿತ್ತು. ಅಲ್ಲದೆ, ಅವರ ಪಕ್ಷದ ಯುವಸಂಘಟನೆಯಾದ ಅಸೋಸಿಯೇಷನ್ ಆಫ್ ಕ್ರಿಶ್ಚಿಯನ್ ಡೆಮಾಕ್ರಟಿಕ್ ಸ್ಟೂಡೆಂಟ್ಸ್, ‘ಸ್ಟೂಡೆಂಟ್ಸ್ ಫಾರ್ ಮರ್ಕೆಲ್’ ಎಂಬ ವೆಬ್‌ಸೈಟ್ ರಚಿಸಿ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಅವರ ಚಿತ್ರದೊಂದಿಗೆ ‘ಮರ್ಕೆಲ್ ರೌಟ್ ಕೈಸನ್ನೆಯೊಂದಿಗೆ ನಾನು ಮರ್ಕೆಲ್ ಅವರಿಗೆ ಮತ ಹಾಕುತ್ತಿದ್ದೇನೆ, ಮತ್ತೆ ನೀವು?’ ಎಂಬ ಪ್ರಚಾರ ಸಾಮಗ್ರಿಯನ್ನು ರಚಿಸಿ, ‘ಮರ್ಕೆಲ್ ರೌಟ್’ ಕೈಸನ್ನೆಯ ಮಾದರಿಯಲ್ಲಿ ಅಲ್ಲಿನ ವಿದ್ಯಾರ್ಥಿಗಳು ತಮ್ಮ ಸ್ವಂತ ಛಾಯಾಚಿತ್ರಗಳನ್ನು ಅಪ್‌ಲೋಡ್ ಮಾಡಲು ಪ್ರೋತ್ಸಾಹಿಸಿತ್ತು. ‌

ಸಂಪ್ರದಾಯವಾದಿ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ ಪಕ್ಷವು 2017ರ ತನ್ನ ಚುನಾವಣಾ ಪ್ರಚಾರದ ಸಮಯದಲ್ಲೂ ‘ಮರ್ಕೆಲ್ ರೌಟ್’ ಕೈಸನ್ನೆಯನ್ನು ಮತ್ತೊಮ್ಮೆ ಚೆನ್ನಾಗಿ ಬಳಸಿಕೊಂಡಿ ತ್ತು. ‘ನಾನು ಮರ್ಕೆಲ್ ಅವರನ್ನು ಬೆಂಬಲಿಸುತ್ತೇನೆ, ಐ ಲವ್ ರೌಟ್’ ಎಂಬ ಘೋಷ ವಾಕ್ಯವನ್ನು ತನ್ನ ವೆಬ್‌ಸೈಟ್‌ನಲ್ಲಿ ಅದು ಬಳಸಿತ್ತು. ಘೋಷವಾಕ್ಯದ ಜತೆಗೆ ‘ಐ ಲವ್ ರೌಟ್’ ಲೋಗೋದಿಂದ ಅಲಂಕೃತವಾಗಿರುವ ತಮ್ಮ ಛಾಯಾಚಿತ್ರಗಳನ್ನು ಅಪ್‌ಲೋಡ್ ಮಾಡಲು ಮರ್ಕೆಲ್‌ರ ಬೆಂಬಲಿ ಗರನ್ನು ಪ್ರೋತ್ಸಾಹಿಸಲಾಗಿತ್ತು. ಮರ್ಕೆಲ್‌ರ ಪಕ್ಷವು ತನ್ನ ಮುಖ್ಯ ವೆಬ್‌ಸೈಟ್‌ ಲ್ಲಿ ಈ ಲೋಗೋ ದೊಂದಿಗಿನ ಪೆನ್ನು, ಕಪ್, ಸ್ಟಿಕರ್ ಮತ್ತು ಬ್ಯಾಗುಗಳಂಥ ವಸ್ತುಗಳನ್ನು ಮಾರಾಟಕ್ಕೆ ಲಭ್ಯವಾಗು ವಂತೆ ಮಾಡಿತ್ತು.

ಜರ್ಮನಿಯ ರಾಜಕಾರಣಿಯ ಒಂದು ಕೈಸನ್ನೆಯು ಚುನಾವಣಾ ಪ್ರಚಾರದ ದಿಕ್ಕನ್ನೇ ಬದಲಾ ಯಿಸಿತ್ತು, ಅಲ್ಲಿನ ಜನರಿಗೆ ಮರ್ಕೆಲ್ ಮೇಲೆ ಹೆಚ್ಚಿನ ವಿಶ್ವಾಸ ಬರಲು ಕಾರಣವಾಗಿತ್ತು. ‘ಮರ್ಕೆಲ್ ರೌಟ್’ ಎಂದೇ ಖ್ಯಾತಿ ಪಡೆದ ಏಂಜೆಲಾ ಮರ್ಕೆಲ್ ಅವರ ಕೈಸನ್ನೆಯನ್ನು ಜಗತ್ತಿನ ಅನೇಕ ನಾಯಕರೂ ಬಳಸುತ್ತಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಗ ಬಾರೆನ್ ಟ್ರಂಪ್ ಕೂಡ ತಾವು ಕುಳಿತಿರುವ ಸಂದರ್ಭದಲ್ಲಿ ‘ಮರ್ಕೆಲ್ ರೌಟ್’ ಕೈಸನ್ನೆಯನ್ನು ಬಳಸುತ್ತಾರೆ. ಜಗತ್ತಿನ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್, ಖ್ಯಾತ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಈ ಸಾಲಿಗೆ ಸೇರುತ್ತಾರೆ.

ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ಅವರ ಮಗ ಈ ಕೈಸನ್ನೆ ಮಾಡುವಾಗ, ಟ್ರಂಪ್ ಮಡದಿಯು ‘ಕೈಸನ್ನೆ ಮಾಡಿದ್ದು ಸಾಕು’ ಎಂದು ಹೇಳಿದ ವಿಡಿಯೋ ವೈರಲ್ ಆಗಿತ್ತು. ಈ ಕೈಸನ್ನೆಯ ಹಿಂದೆ ಗಣಿತ ಮಾತ್ರವಲ್ಲದೆ ವಿಜ್ಞಾನವೇ ಇದೆ. ಮುದ್ರಾಯೋಗದಲ್ಲಿ ಈ ಕೈಸನ್ನೆಯನ್ನು ‘ಹಾಕಿಣಿ ಮುದ್ರೆ’ ಎಂದು ಕರೆಯಲಾಗುತ್ತದೆ. ಈ ಕೈಸನ್ನೆಯಿಂದ ಮಾನಸಿಕ ಸ್ಪಷ್ಟತೆ, ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚಾಗುತ್ತವೆ ಎನ್ನಲಾಗುತ್ತದೆ. ಯೋಗ ಮತ್ತು ಧ್ಯಾನದ ಸಂದರ್ಭ ದಲ್ಲಿ ಈ ಕೈಸನ್ನೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಸಂಸ್ಕೃತದಲ್ಲಿ ‘ಹಾಕಿಣಿ’ ಎಂದರೆ ಶಕ್ತಿ ಅಥವಾ ನಿಯಮ ಎಂದರ್ಥ. ಈ ಮುದ್ರೆಯನ್ನು ನಿರಂತರ ವಾಗಿ ಅಭ್ಯಾಸ ಮಾಡಿದರೆ, ಮಿದುಳಿನ ಎಡ ಮತ್ತು ಬಲಭಾಗಗಳನ್ನು ಅದು ಸಂಪರ್ಕಿಸಿ, ನೆನಪಿನ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಎರಡೂ ಕೈಗಳನ್ನು ಜೋಡಿಸಿ ಕೈಸನ್ನೆ ಮಾಡುವ ಮೂಲಕ ನಾಯಕರು ಏಕಾಗ್ರತೆಯನ್ನು ಸಾಧಿಸುತ್ತಾರೆ ಎಂದು ಹೇಳಲಾಗುತ್ತದೆ.

ದೊಡ್ಡ ದೊಡ್ಡ ನಾಯಕರು ತಮಗೆ ತಿಳಿದೋ ತಿಳಿಯದೆಯೋ ಈ ಕೈಸನ್ನೆಯನ್ನು ಅಭ್ಯಾಸ ವನ್ನಾಗಿಸಿಕೊಂಡಿದ್ದಾರೆ. ಇಂಥದೊಂದು ಯೋಗಮುದ್ರೆಯನ್ನು ಜರ್ಮನಿಯ ಏಂಜೆಲಾ ಮರ್ಕೆಲ್ ತಮಗೆ ತಿಳಿದೋ ತಿಳಿಯದೆಯೋ ರೂಢಿಸಿಕೊಂಡಿದ್ದು ಚುನಾವಣಾ ಪ್ರಚಾರದ ದೊಡ್ಡ ಬ್ರ್ಯಾಂಡ್ ಆಗಿಹೋಗಿತ್ತು. ಜರ್ಮನಿಯ ಜನರು ಮರ್ಕೆಲ್ ಅವರ ಕೈಸನ್ನೆಯನ್ನು ಕಂಡು ಹುಚ್ಚೆದ್ದು ಕುಣಿ ಯುತ್ತಿದ್ದರು.

ಮರ್ಕೆಲ್‌ರ ಸುದೀರ್ಘ ರಾಜಕೀಯ ಜೀವನದಲ್ಲಿ ಈ ‘ಮರ್ಕೆಲ್ ರೌಟ್’ ಕೈಸನ್ನೆ ಅವರಿಗೆ ವರದಾನ ವಾಗಿತ್ತು. ಮರ್ಕೆಲ್ ಜನರ ಮುಂದೆ ಬಂದು ನಿಂತರೆ ಸಾಕು, ಅವರ ವಿಶಿಷ್ಟ ಕೈಸನ್ನೆಯಿಂದಲೇ ಮಾತು ಪ್ರಾರಂಭವಾಗಬೇಕಿತ್ತು. ವ್ಯಕ್ತಿಯೊಬ್ಬರು ವಿರೋಧ ಪಕ್ಷಗಳ ಟೀಕೆಯನ್ನೇ ಬಳಸಿಕೊಂಡು ಚುನಾವಣಾ ಪ್ರಚಾರ ನಡೆಸುತ್ತಿದ್ದರು, ವ್ಯಕ್ತಿಯೊಬ್ಬರ ಕೈಸನ್ನೆಯೊಂದು ಈ ಮಟ್ಟಕ್ಕೆ ಪ್ರಚಾರ ಗಿಟ್ಟಿಸಿಕೊಂಡಿತು ಎಂದರೆ ಆಶ್ಚರ್ಯವಾಗುತ್ತದೆ. ಏಂಜೆಲಾ ಮರ್ಕೆಲ್ ಅವರ ಕೈಸನ್ನೆಯು ‘ಮರ್ಕೆಲ್ ರೌಟ್’ ಎಂದೇ ಪ್ರಸಿದ್ಧವಾಯಿತು. ಅವರ ಈ ಕೈಸನ್ನೆಯನ್ನು ‘ಪೇಟೆಂಟೆಡ್’ ಕೈಸನ್ನೆ ಎಂದು ಹೇಳಲಾಗುತ್ತದೆ.