Mahatma Gandhi Death Anniversary: ಶಾಂತಿಮಾರ್ಗದಲ್ಲಿ ಸಾಗಿದ, ಬಲಿಷ್ಠ ನಾಯಕ ಮಹಾತ್ಮ ಗಾಂಧೀಜಿಯ ಸ್ಫೂರ್ತಿದಾಯಕ ನುಡಿಮುತ್ತುಗಳು ಹಾಗೂ ಸಂದೇಶಗಳು ಇಲ್ಲಿದೆ
ಇಂದು (ಜ.30) ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 75ನೇ ಪುಣ್ಯಸ್ಮರಣೆ. ನಡೆ-ನುಡಿಗಳಲ್ಲಿ ಏಕನಿಷ್ಠೆಯವರಾಗಿದ್ದ ಗಾಂಧಿಯವರ ಸಂದೇಶಗಳು ಎಲ್ಲರಿಗೂ ದಾರಿ ದೀಪ, ಅವರ ತತ್ವ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿದೆ.
ರಾಷ್ಟ್ರಪಿತ ಮಹಾತ್ಮ ಗಾಂಧಿ (Mahatma gandhi death) ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಮುಂಚುವಳಿ ನಾಯಕರಲ್ಲಿ ಬಾಪೂಜಿಯವರು ಒಬ್ಬರು. ಗಾಂಧಿ ಅವರು ಅಕ್ಟೋಬರ್ 2, 1869ರಲ್ಲಿ ಗುಜರಾತ್‌ನ ಪೋರಬಂದರ್‌ನಲ್ಲಿ ಜನಿಸಿದರು. ತಂದೆ ಕರಮಚಂದ್ ಗಾಂಧಿ, ತಾಯಿ ಪುತಲೀಬಾಯಿ. 13 ನೇ ವಯಸ್ಸಿನಲ್ಲಿ ಗಾಂಧೀಜಿ ಕಸ್ತೂರಿ ಬಾ ಅವರನ್ನು ವಿವಾಹವಾದರು. ಇವರಿಗೆ ನಾಲ್ಕು ಮಕ್ಕಳು ಜನಿಸಿದರು, ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ, ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ. ಮಹಾತ್ಮ ಗಾಂಧಿ ತಮ್ಮ ಜೀವನದ ಉದ್ದಕ್ಕೂ ಹೋರಾಟಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಗಾಂಧಿಯವರು ಜನವರಿ 30 1948ರಂದು ನಾಥುರಾಮ್ ಗೋಡ್ಸೆ ಗುಂಡೇಟಿನಿಂದ ನಿಧನರಾದರು.
ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದ ಇವರು ಬ್ರಿಟಿಷರ ಕಪಿಮುಷ್ಟಿಯಿಂದ ಭಾರತವನ್ನು ಬಿಡಿಸಲು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಗಾಂಧಿಯವರ 151ನೇ ಪುಣ್ಯಸ್ಮರಣೆಯನ್ನು(Mahatma Gandhi Death Anniversary) ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅವರ ತತ್ವಗಳ-ಸಂದೇಶಗಳ ಬಗ್ಗೆ ಒಂದಿಷ್ಟು ತಿಳಿಕೊಳ್ಳೋಣ....
ನಮ್ಮ ರಾಷ್ಟ್ರಪಿತ ಗಾಂಧೀಜಿಯವರ ಬದುಕು, ಬೋದನೆ, ತತ್ವಾದರ್ಶಗಳು ಭಾರತೀಯರ ಹೃದಯದಲ್ಲಿ ಎಂದಿಗೂ ಅಜರಾಮರ. ಅವರು ಹೇಳಿದ ಅನೇಕ ಮುತ್ತಿನಂತ ನುಡಿಗಳು ಸಾರ್ವಕಾಲಕ್ಕೂ ಸತ್ಯ.
- ಸರಳ ಜೀವನ ಮತ್ತು ಮೇಲ್ಮಟ್ಟದ ವಿಚಾರ ಮನುಷ್ಯನನ್ನು ಮಹಾನ್ ಆಗಿ ಮಾಡುತ್ತದೆ
- ಸಂಪ್ರದಾಯದ ಬಾವಿಯಲ್ಲಿ ತೇಲುವುದು ಒಳ್ಳೆಯದು. ಅದರಲ್ಲಿ ಮುಳುಗುವುದು ಆತ್ಮಹತ್ಯೆ
- ನನ್ನ ಸೋದರಿಯರೇ, ನೀವು ಸ್ವತಂತ್ರರಾಗಬೇಕಾದರೆ ಮೊದಲು ನಿರ್ಭೀತರಾಗಿರಿ.
- ನಿಮ್ಮ ದೈಹಿಕ ದೌರ್ಬಲ್ಯಕ್ಕಿಂತ ಸಮಾಜ ನಿಮ್ಮ ಮೇಲೆ ವಿಧಿಸಿ ಬಿಡುವ ಸಾಂಸ್ಕೃತಿಕ ಅಸಹಾಯಕತೆ, ಮಾನಸಿಕ ಭಯ - ಇವೇ ಸಂಕೋಲೆಗಳಾಗಿ ನಿಮ್ಮನ್ನು ಕಾಡುತ್ತವೆ. ಮೊದಲು ಇವುಗಳಿಂದ ಹೊರ ಬನ್ನಿ. ವಿಶಾಲ ಜಗತ್ತು ನಿಮಗಾಗಿ ಕಾದಿದೆ
- ಪ್ರಾಮಾಣಿಕ ಟೀಕೆ ಟಿಪ್ಪಣಿ ಆರೋಗ್ಯಪೂರ್ಣವಾದ ಗುಣ. -ಮಹಾತ್ಮ ಗಾಂಧಿ
- ಯಾವುದೇ ಸಂಸ್ಕೃತಿ ತನ್ನ ವೈಶಿಷ್ಟ್ಯವನ್ನು ಉಳಿಸಿಕೊಳ್ಳದಿದ್ದರೆ ಅದು ಹೆಚ್ಚು ಕಾಲ ಉಳಿಯದು
- ಅಹಿಂಸೆ ಇಲ್ಲದೆ ಸತ್ಯ ಸಾಕ್ಷಾತ್ಕಾರ ಸಾಧ್ಯವಿಲ್ಲ
- ನಿನ್ನನ್ನು ನೀನು ತಿಳಿದುಕೊಳ್ಳೋದು ನಿನ್ನ ಮನಸ್ಸನ್ನು ಹದಗೋಳಿಸಿಕೊಂಡಾಗ ಮಾತ್ರ
- ನನ್ನನ್ನು ಸಂಕೋಲೆಯಲ್ಲಿ ಬಂಧಿಸಿಡಬಹುದು, ಹಿಂಸಿಸಬಹುದು, ಅಷ್ಟೆ ಯಾಕೆ ನನ್ನ ಈ ದೇಹವನ್ನು ನಾಶಪಡಿಸಬಹುದು. ಆದರೆ, ಯಾವತ್ತಿಗೂ ನನ್ನ ಆತ್ಮಬಲವನ್ನು ಬಂಧಿಸಿಡಲಾಗದು.
- ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲಾಗದು. ಅದು ಜೀವನದ ಉಸಿರು.
- ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ.
- ಜಗತ್ತು ಬದಲಾಗಬೇಕು ಎನ್ನುವವರು ಮೊದಲು ತಮ್ಮಿಂದಲೇ ಬದಲಾವಣೆಯಾಗಬೇಕು ಎಂಬುದನ್ನು ಅರಿತುಕೊಳ್ಳಬೇಕು.
- ನಾಳೆಯೇ ನೀವು ಸಾಯುತ್ತೀರಿ ಎಂದೇ ಇಂದು ಬದುಕಿ. ಎಂದೆಂದಿಗೂ ಬದುಕಿಯೇ ಇರುತ್ತೀರಿ ಎಂದು ಭಾವಿಸಿಕೊಂಡು ಹೊಸದನ್ನು ಕಲಿಯಿರಿ.
- ಬಲಿಷ್ಠತೆ ಎನ್ನುವುದು ನಿಮ್ಮ ದೈಹಿಕ ಸಾಮರ್ಥ್ಯದಿಂದ ಬರುವಂಥದಲ್ಲ; ಅದು ಅದಮ್ಯ ಅಂತಃಶಕ್ತಿಯಿಂದ ಬರುವಂಥದ್ದು.
- ಜಗತ್ತಿನಲ್ಲಿರುವ ಎಲ್ಲ ಧರ್ಮಗಳ ಮೂಲ ಸತ್ಯವನ್ನು ನಾನು ನಂಬುತ್ತೇನೆ.
- ನಿಮ್ಮನ್ನು ನೀವು ಕಂಡುಕೊಳ್ಳುವ ಬಗೆ ಯಾವುದಾದರೂ ಇದ್ದರೆ ಅದು ಮತ್ತೊಬ್ಬರಿಗೆ ಸೇವೆ ಮಾಡುವುದೇ ಆಗಿದೆ.
- ಅಸಹಿಷ್ಣುತೆಯು ಹಿಂಸೆಯ ಒಂದು ರೂಪ ಮತ್ತು ನಿಜವಾದ ಪ್ರಜಾಪ್ರಭುತ್ವದ ಬೆಳವಣಿಗೆಗೆ ಅದು ಅಡ್ಡಿಯಾಗಿರುತ್ತದೆ.
- ಕ್ರೌರ್ಯಕ್ಕೆ ಕ್ರೌರ್ಯವೇ ಉತ್ತರ ಎನ್ನುವವರು ನಿಶ್ಚಿತವಾಗಿಯೂ ಬೌದ್ಧಿಕ ದಾರಿದ್ರ್ಯವನ್ನು ಅನುಭವಿಸುತ್ತಿರುತ್ತಾರೆ. ಅದು ವಿಷವರ್ತುಲದ ಆರಂಭವಷ್ಟೆ.
- ಅವರು ಮೊದಲು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ನಂತರ ನಿಮ್ಮನ್ನು ನೋಡಿ ನಗುತ್ತಾರೆ, ಬಳಿಕ ನಿಮ್ಮೊಂದಿಗೆ ಸಂಘರ್ಷಕ್ಕಿಳಿಯುತ್ತಾರೆ, ಆಗ ನೀವು ಗೆದ್ದಂತೆ.
- ಅಹಿಂಸೆಗೆ ಎರಡು ನಂಬಿಕೆಗಳು ಬೇಕಾಗುತ್ತದೆ. ದೇವರು ಮೇಲೆ ನಂಬಿಕೆ ಇದ್ದಂತೆಯೇ ಮನುಷ್ಯನ ಮೇಲೆಯೂ ವಿಶ್ವಾಸ ಇರಬೇಕು.
- ದೇವರಿಗೆ ಯಾವುದೇ ಧರ್ಮವಿಲ್ಲ.
- ಸಿಟ್ಟು ಅಹಿಂಸೆಯ ವೈರಿ ಮತ್ತು ಹೆಮ್ಮೆ ಅದನ್ನು ನುಂಗಿ ಹಾಕುವ ದೈತ್ಯ.
- ಅಶಕ್ತ ಎಂದೂ ಕ್ಷಮಿಸಲಾರ. ಕ್ಷಮೆ ಎನ್ನುವುದು ಶಕ್ತಿ ಅಥವಾ ಸಾಮರ್ಥ್ಯದ ಸಂಕೇತವಿದ್ದಂತೆ.
- ಭೂಮಿ ನಮ್ಮ ಬಯಕೆಗಳನ್ನು ಪೂರೈಸಬಲ್ಲುದು. ಆದರೆ ದುರಾಸೆಗಳನ್ನಲ್ಲ.
- ಹಿಂಸೆ ಎಂದಿಗೂ ನಮ್ಮ ಗುರಿಯನ್ನು ಸಾಧಿಸಲಾರದು
- ಕೆಲಸವಿಲ್ಲದೆ ಕ್ಷಣ ಕಳೆದರೂ ಅದು ಕಳ್ಳತನ ಮಾಡಿದಂತೆ
ಈ ಸುದ್ದಿಯನ್ನು ಓದಿ: Mahatma Gandhi Death Anniversary; ಗಾಂಧೀಜಿಯವರ ಬದುಕು, ಸಾಧನೆ, ಚಳುವಳಿ, ಸಿದ್ದಾಂತಗಳ ಬಗ್ಗೆ ಇಲ್ಲಿದೆ ಮಾಹಿತಿ
ಮಹಾತ್ಮ ಗಾಂಧಿಜಿ ಅವರ ಸ್ಪೂರ್ತಿದಾಯಕ ಸಂದೇಶಗಳು
- ಮಹಾತ್ಮ ಗಾಂಧಿ ಅವರ ಮುಖ್ಯ ಸಂದೇಶ ಸತ್ಯ ಮತ್ತು ಅಹಿಂಸೆ.
- ಯಾವುದೇ ಸಂದರ್ಭದಲ್ಲೂ ಸಶಸ್ತ್ರ ಶಕ್ತಿಗಿಂತ ನಿರಾಯುಧ ಅಹಿಂಸೆಯ ಶಕ್ತಿ ಶ್ರೇಷ್ಠವಾಗಿರುತ್ತದೆ.
- ಕ್ರೌರ್ಯವನ್ನು ಕ್ರೌರ್ಯದಿಂದ ಉತ್ತರಿಸುವುದು ಎಂದರೆ ನಿಮ್ಮ ನೈತಿಕ ಮತ್ತು ಬೌದ್ಧಿಕ ಅವನತಿಯನ್ನು ಒಪ್ಪಿಕೊಳ್ಳುವುದು.
- ಭಯವು ದೇಹದ ರೋಗವಲ್ಲ, ಅದು ಆತ್ಮವನ್ನು ಕೊಲ್ಲುತ್ತದೆ.
- ನೀವು ಮಾನವೀಯತೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬಾರದು. ಮಾನವೀಯತೆಯು ಸಾಗರದಂತೆ; ಸಮುದ್ರದ ಕೆಲವು ಹನಿಗಳು ಕೊಳಕಾಗಿದ್ದರೆ, ಸಾಗರವು ಕೊಳಕು ಆಗುವುದಿಲ್ಲ.
ನಡೆ-ನುಡಿಗಳಲ್ಲಿ ಏಕನಿಷ್ಠೆಯವರಾಗಿದ್ದ ಗಾಂಧಿಯವರ ಸಂದೇಶಗಳು ಎಲ್ಲರಿಗೂ ದಾರಿ ದೀಪ. ಗಾಂಧೀ ಚಿಂತನೆಗಳು ಕತ್ತಲೆಯಲ್ಲಿ ನಡೆಯುವವನಿಗೆ ಬೆಳಕನ್ನು ನೀಡುವಂತೆ, ಅದುಸಾರ್ವಕಾಲಿಕ ಸತ್ಯವಾಗಿದೆ.