ರೈಲಿನಲ್ಲಿ ಟೀ-ಕಾಫಿ ಕುಡಿಯುದಕ್ಕೂ ಮುನ್ನ ಈ ಸುದ್ದಿಯನ್ನು ಒಮ್ಮೆ ಓದಿ!
ವ್ಯಕ್ತಿಯೊಬ್ಬ ರೈಲಿನ ಶೌಚಾಲಯದಲ್ಲಿ ಟೀ ಕಂಟೈನರ್ ಅನ್ನು ತೊಳೆಯುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊವನ್ನು ಆಯುಬ್ ಎಂಬ ಕಂಟೆಂಟ್ ಕ್ರಿಯೇಟರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು 91ಕ್ಕೂ ಹೆಚ್ಚಿನ ದಶಲಕ್ಷ ವೀಕ್ಷಣೆಗಳನ್ನು ಕಂಡಿದೆ.


ನವದೆಹಲಿ: ರೈಲಿನ ಶೌಚಾಲಯದಲ್ಲಿ ವ್ಯಕ್ತಿಯೊಬ್ಬ ಟೀ ಕಂಟೈನರ್ ಅನ್ನು ಜೆಟ್ ಸ್ಪ್ರೇ ಬಳಸಿ ತೊಳೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಹಾಗೂ ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆಯೂಬ್ ಎಂಬ ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಹಂಚಿಕೊಂಡ ಈ ರೀಲ್ ವೈರಲ್ ಆಗಿದೆ. ಈ ರೀಲ್ ಅನ್ನು 91 ಕ್ಕೂ ಹೆಚ್ಚಿನ ದಶಲಕ್ಷ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಆನ್‌ಲೈನ್‌ನಲ್ಲಿ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಆಯುಬ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ರೈಲು ಶೌಚಾಲಯದ ಒಳಗಡೆ ನಿಂತು ಟೀ ಕಂಟೈನರ್ ಅನ್ನು ಹಿಡಿದುಕೊಂಡು ಅದನ್ನು ಸ್ವಚ್ಛಗೊಳಿಸಲು ಜೆಟ್ ಸ್ಪ್ರೇ ಬಳಸುತ್ತಿರುವುದನ್ನು ಕಾಣಬಹುದು. ಇದು ಪ್ರಯಾಣಿಕರು ಬಳಸಬಹುದಾದ ಶೌಚಾಲಯ ಇದಾಗಿದೆ. ಇಂಥಾ ಜಾಗದಲ್ಲಿ ಚಹಾ ಮಾರಾಟಗಾರ ಕಂಟೈನರ್ ತೊಳೆಯುವ ಮೂಲಕ ಅಜಾಗರೂಕತೆ ಪ್ರದರ್ಶಿಸಿದ್ದಾನೆ. ತಾವು ಹಂಚಿಕೊಂಡ ಈ ವಿಡಿಯೊಗೆ ಆಯುಬ್ ʻಟ್ರೇನ್ ಕಿ ಚಾಯ್ʼ ಎಂಬ ಶೀರ್ಷಿಕೆ ನೀಡುವ ಮೂಲಕ ವ್ಯಂಗ್ಯವಬಾಡಿದ್ದಾರೆ.
ಈ ಘಟನೆಯನ್ನು ಸೋಶಿಯಲ್ ಮೀಡಿಯಾ ಬಳಕೆದಾರರು ಕಟುವಾಗಿ ಟೀಕಿಸಿದ್ದಾರೆ. ಇವರ ಪೈಕಿ ಕೆಲವರು ರೈಲಿನಲ್ಲಿನ ಚಹಾ ಮಾರಾಟಗಾರರ ನಿರ್ಲಕ್ಷ್ಯವನ್ನು ಕಂಡು ಗಾಬರಿಗೊಂಡಿದ್ದಾರೆ. ವೀಡಿಯೊಗೆ ಸಿಕ್ಕಾಪಟ್ಟೆ ಕಾಮೆಂಟ್‌ಗಳು ಬಂದಿವೆ.
"ಇದು ಒಂದು ರೀತಿಯ ಹಾಸ್ಯವೇ?" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಜನರು ದೇವರಿಗಾದರೂ ಸ್ವಲ್ಪ ಭಯಪಡಬೇಕು," ಎಂದು ಬರೆದಿದ್ದಾರೆ. ಇದು ನಡವಳಿಕೆಯ ನೈತಿಕ ಆಕ್ರೋಶವನ್ನು ಪ್ರತಿಬಿಂಬಿಸುತ್ತದೆ. ಮೂರನೇ ಬಳಕೆದಾರರು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. "ನೀವು ಇನ್ನು ಮುಂದೆ ಚಹಾ ಮಾರಾಟಗಾರರನ್ನು ನಂಬಬಹುದೇ? ಎಂದು ಪ್ರಶ್ನಿಸಿದ್ದಾರೆ.
ಅನೇಕ ವೀಕ್ಷಕರು ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಮನುಷ್ಯನ ಅಸಡ್ಡೆ ವರ್ತನೆಯ ವಿರುದ್ಧ ಕಿಡಿ ಕಾರಿದ್ದಾರೆ. ಇಂಥಾ ಘಟನೆಗಳಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಒತ್ತಿಹೇಳಿದರು. "ಈ ವಿಡಿಯೊವನ್ನು ಅತ್ಯಂತ ಶಾಂತಿಯುತವಾಗಿ ರೆಕಾರ್ಡ್ ಮಾಡಲಾಗಿದೆ. ಪರಿಣಾಮಗಳ ಭಯವಿಲ್ಲ ಎಂಬುದು ಸ್ಪಷ್ಟವಾಗಿದೆ," ಎಂದು ಒಬ್ಬರು ಹೇಳಿದ್ದಾರೆ. ಆ ಮೂಲಕ ವಿಡಿಯೊದಲ್ಲಿ ಕಾಣಿಸಿಕೊಂಡ ವ್ಯಕ್ತಿಯ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಇದರ ಜೊತೆಗೆ ರೈಲಿನಲ್ಲಿ ಸಿಗುವ ಆಹಾರ ಎಷ್ಟರ ಮಟ್ಟಿಗೆ ಸ್ವಚ್ಛವಾಗಿದೆ ಎಂಬುದನ್ನು ಹಲವರು ಪ್ರಶ್ನಿಸಿದ್ದಾರೆ.