ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mayank Yadav: ಮತ್ತೆ ಗಾಯ; ಐಪಿಎಲ್‌ನಿಂದ ಹೊರಬಿದ್ದ ವೇಗಿ ಮಾಯಾಂಕ್‌

22 ವರ್ಷದ ಮಾಯಾಂಕ್‌ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಗಂಟೆಗೆ 150 ಕೀ.ಮೀ. ವೇಗದಲ್ಲಿ ಎಸೆತವನ್ನಿಕ್ಕುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಪರ ಪಾದಾರ್ಪಣೆ ಮಾಡಿದ್ದ ಮಾಯಾಂಕ್‌ ನಂತರ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು.

ಮತ್ತೆ ಗಾಯ; ಐಪಿಎಲ್‌ನಿಂದ ಹೊರಬಿದ್ದ ವೇಗಿ ಮಾಯಾಂಕ್‌

Profile Abhilash BC May 16, 2025 9:49 AM

ಲಕ್ನೋ: ವೇಗದ ಎಸೆತಗಳ ಮೂಲಕವೇ ಈ ಐಪಿಎಲ್‌(IPL 2025)ನಲ್ಲಿ ಛಾಪು ಮೂಡಿಸಿದ್ದ ಲಕ್ನೋ(lucknow super giants) ತಂಡದ ಮಾಯಾಂಕ್‌ ಯಾದವ್‌(Mayank Yadav) ಮತ್ತೊಮ್ಮೆ ಗಾಯಗೊಂಡಿದ್ದಾರೆ. ಹೀಗಾಗಿ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಐಪಿಎಲ್‌ ಆರಂಭಕ್ಕೂ ಮುನ್ನವೇ ಬೆನ್ನುನೋವಿನ ಗಾಯಕ್ಕೆ ತುತ್ತಾಗಿದ್ದ ಮಾಯಾಂಕ್‌ ಇತ್ತೀಚೆಗಷ್ಟೇ ಲಕ್ನೋ ತಂಡ ಸೇರಿ ಕೇವಲ ಎರಡು ಪಂದ್ಯ ಆಡಿದ್ದರು. ಆದರೆ ಇದೀಗ ಮತ್ತೆ ಗಾಯಗೊಂಡು ಸಂಪೂರ್ಣವಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಮಾಯಾಂಕ್‌ಗೆ ಬದಲಿಗೆ ಲಕ್ನೋ ತಂಡ ನ್ಯೂಜಿಲೆಂಡ್‌ನ ಯುವ ವೇಗಿ ವಿಲ್ ಒ'ರೂರ್ಕ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಓ'ರೂರ್ಕ್ ಈ ಸೀಸನ್​ನ ಉಳಿದ ಪಂದ್ಯಗಳಿಗೆ 3 ಕೋಟಿ ರೂ. ವೇತನ ಪಡೆಯಲಿದ್ದಾರೆ. ಇದೇ ವೇಳೆ ಪಂಜಾಬ್ ಕಿಂಗ್ಸ್ ಲಾಕಿ ಫರ್ಗುಸನ್ ಅವರ ಬದಲಿಯಾಗಿ ಮತ್ತೊಬ್ಬ ನ್ಯೂಜಿಲೆಂಡ್‌ ವೇಗಿ ಕೈಲ್ ಜೇಮಿಸನ್ ಅವರನ್ನು 2 ಕೋಟಿ ರೂಗೆ ತಂಡಕ್ಕೆ ಸೇರಿಸಿಕೊಂಡಿದೆ.

22 ವರ್ಷದ ಮಾಯಾಂಕ್‌ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಗಂಟೆಗೆ 150 ಕೀ.ಮೀ. ವೇಗದಲ್ಲಿ ಎಸೆತವನ್ನಿಕ್ಕುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಪರ ಪಾದಾರ್ಪಣೆ ಮಾಡಿದ್ದ ಮಾಯಾಂಕ್‌ ನಂತರ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಇದಾದ ಬಳಿಕ ಕಾಲಿನ ಬೆರಳಿನ ಗಾಯಕ್ಕೀಡಾದರು. ಒಟ್ಟಾರೆ ಅವರು ಪಂದ್ಯ ಆಡುದಕ್ಕಿಂತ ಗಾಯದ ಸಮಸ್ಯೆಗೆ ಸಿಲುಕುತ್ತಿರುವುದೇ ಹೆಚ್ಚಾಗಿದೆ.

ಇದನ್ನೂ ಓದಿ IPL 2025: ಪ್ಲೇ ಆಫ್‌ ಪಂದ್ಯಕ್ಕೆ ಗುಜರಾತ್‌ ಟೈಟಾನ್ಸ್‌ ಸೇರಿದ ಕುಸಲ್‌ ಮೆಂಡಿಸ್‌

ಲಕ್ನೋ ತಂಡ ಇದುವರೆಗೆ ಆಡಿದ 11 ಪಂದ್ಯಗಳಲ್ಲಿ 5ಗೆಲುವು, 6 ಸೋಲು ಕಂಡು 10 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನಿಯಾಗಿದೆ. ಇನ್ನುಳಿದ 3 ಪಂದ್ಯಗಳಲ್ಲಿ ಗೆದ್ದರೆ 16 ಅಂಕ ತಲುಪಬಹುದು. ಒಂದು ಪಂದ್ಯ ಸೋತರೂ ಟೂರ್ನಿಯಿಂದ ಹೊರಬೀಳಲಿದೆ. ಅಲ್ಲದೇ ತಂಡದ ನೆಟ್‌ ರನ್‌ರೇಟ್‌ ಕಳಪೆ ಇರುವ ಕಾರಣ, ಪ್ಲೇ-ಆಫ್‌ ಪ್ರವೇಶ ಬಹಳ ಕಷ್ಟ ಎನಿಸಿದೆ.