ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KH Muniyappa: ಬಂಧಿಸ್ತೀವಿ ಎಂದ ಕೋರ್ಟ್‌, ಓಡೋಡಿ ಬಂದ ಸಚಿವ ಮುನಿಯಪ್ಪಗೆ ಜಾಮೀನು

ವಿಧಾನಸಭೆ ಚುನಾವಣೆಯಲ್ಲಿ ಕೆಜಿಎಫ್‍ನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿ.ಶಂಕರ್ ಮೇಲೆ ಅಂದು ಸಂಸದರಾಗಿದ್ದ ಮುನಿಯಪ್ಪ ಹಾಗೂ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹಲ್ಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಮುನಿಯಪ್ಪ ಗೈರಾಗುತ್ತಿದ್ದರು. ಇದೀಗ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ.

ಬಂಧಿಸ್ತೀವಿ ಎಂದ ಕೋರ್ಟ್‌, ಓಡೋಡಿ ಬಂದ ಸಚಿವ ಮುನಿಯಪ್ಪಗೆ ಜಾಮೀನು

ಸಚಿವ ಕೆಎಚ್‌ ಮುನಿಯಪ್ಪ

ಹರೀಶ್‌ ಕೇರ ಹರೀಶ್‌ ಕೇರ Mar 13, 2025 7:38 AM

ಬೆಂಗಳೂರು: 2013ರ ವಿಧಾನಸಭಾ ಚುನಾವಣೆ (Assembly Election) ವೇಳೆ ನಡೆದಿದ್ದ ಕೆಜಿಎಫ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿಯಾಗಿರುವ ಸಚಿವ ಕೆ.ಹೆಚ್ ಮುನಿಯಪ್ಪ (Minister KH Muniyappa) ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು (Bail) ಮಂಜೂರು ಮಾಡಿದೆ. ಪದೇ ಪದೆ ನ್ಯಾಯಾಲಯಕ್ಕೆ (Court) ಗೈರು ಹಾಜರಾಗುತ್ತಿದ್ದ ಮುನಿಯಪ್ಪ ಅವರಿಗೆ ನ್ಯಾಯಾಲಯ ಬಂಧನ ಎಚ್ಚರಿಕೆ ನೀಡಿತ್ತು. ಇದಾದ ಬಳಿಕ ಮುನಿಯಪ್ಪ ಅವರು ಕೋರ್ಟ್‌ಗೆ ಧಾವಿಸಿ ಬಂದಿದ್ದು, ನಂತರ ಕೋರ್ಟ್‌ ಅವರಿಗೆ ಜಾಮೀನು ನೀಡಿದೆ.

ಅಂದು ಕೆಜಿಎಫ್‍ನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿ.ಶಂಕರ್ ಮೇಲೆ ಅಂದು ಸಂಸದರಾಗಿದ್ದ ಮುನಿಯಪ್ಪ ಹಾಗೂ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹಲ್ಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಮುನಿಯಪ್ಪ ಗೈರಾಗುತ್ತಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗದಿದ್ದರೆ ಬಂಧನ ವಾರೆಂಟ್ ಹೊರಡಿಸುವುದಾಗಿ ನ್ಯಾಯಮೂರ್ತಿ ಗಜಾನನ ಭಟ್ ಎಚ್ಚರಿಕೆ ನೀಡಿದ್ದರು. ಬಳಿಕ ಲಕ್ಷ್ಮೀ ನಾರಾಯಣ್ ಮತ್ತು ಮುನಿಯಪ್ಪ ಇಬ್ಬರೂ ನ್ಯಾಯಾಧೀಶರ ಮುಂದೆ ಹಾಜರಾದರು. ವಿಚಾರಣೆ ವೇಳೆ ನ್ಯಾಯಾಧೀಶರು 50 ಸಾವಿರ ರೂಪಾಯಿ ಶ್ಯೂರಿಟಿಯೊಂದಿಗೆ ಜಾಮೀನು ಮಂಜೂರು ಮಾಡಿದರು.

ಕೊಡಗಿನಲ್ಲಿ 1.6 ರಿಕ್ಟರ್‌ ಅಳತೆಯ ಲಘು ಭೂಕಂಪನ

ಮಡಿಕೇರಿ: ಕೊಡಗು ಜಿಲ್ಲೆಯ ಹಲವೆಡೆ ಬುಧವಾರ 1.6 ತೀವ್ರತೆಯ ಲಘು ಭೂಕಂಪದ ಅನುಭವವಾಗಿದೆ. ಮದೆ‌ನಾಡು ಗ್ರಾಮ ಪಂಚಾಯಿತಿಯ ವಾಯವ್ಯ ದಿಕ್ಕಿನಲ್ಲಿ 2.4 ಕಿಮೀ ದೂರದ 5 ಕಿಮೀ ಆಳವನ್ನು ಭೂಕಂಪದ ಕೇಂದ್ರ ಬಿಂದು ಎಂದು ಗುರುತಿಸಲಾಗಿದೆ. ರಿಕ್ಟರ್ ಮಾಪಕದಲ್ಲಿ ಸುಮಾರು 1.6 ರಷ್ಟು ಪ್ರಮಾಣದಲ್ಲಿ ಭೂಕಂಪನ ದಾಖಲಾಗಿದೆ. ನಿನ್ನೆ ಬೆಳಗ್ಗೆ 10.49ರ ಸುಮಾರಿಗೆ ಭೂಮಿ ಕಂಪಿಸಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

ಮದೆನಾಡು ಸುತ್ತಮುತ್ತಲಿನ 15 ರಿಂದ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವಾಗಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಯಾವುದೇ ಹಾನಿಯಾಗಿಲ್ಲ KSNDMC ಎಂದು ಮಾಹಿತಿ ನೀಡಿದೆ. ಕೊಡಗಿನಲ್ಲಿ 2018 ಹಾಗೂ ಕಳೆದ ವರ್ಷವೂ ಸಹ ಭೂಕಂಪನದ ಅನುಭವಾಗಿತ್ತು.

ಇದನ್ನೂ ಓದಿ: Hit and Run: ಉಡುಪಿ ಬಳಿ ಹಿಟ್‌ ಆ್ಯಂಡ್‌ ರನ್‌, ಬೈಕ್‌ ಸವಾರ ಸಾವು