ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanayakanahalli News: ಮಹಿಳಾ ದಿನಾಚರಣೆ ಅನುದಾನ ದುರ್ಬಳಕೆ; ಪುರಸಭಾ ಸದಸ್ಯರಿಂದಲೇ ಮೈಸೂರು ಪ್ರವಾಸ!

Chikkanayakanahalli Town Municipal Council: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪುರಸಭೆಯು 78 ಸಾವಿರ ರೂ. ಹಣವನ್ನು ಮಹಿಳಾ ಸಬಲೀಕರಣ ಕಾರ್ಯಕ್ರಮಗಳಿಗೆ ಬಿಡುಗಡೆ ಮಾಡಲಾಗಿತ್ತು. ಆದರೆ ಈ ಅನುದಾನವನ್ನು ಬಳಸಿ ಪುರಸಭಾ ಸದಸ್ಯರು ನ. 2 ರಂದು ಮೈಸೂರು ಪ್ರವಾಸ ಕೈಗೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ.

ಚಿಕ್ಕನಾಯಕನಹಳ್ಳಿ ಪುರಸಭೆ ಕಾರ್ಯಾಲಯ

ಚಿಕ್ಕನಾಯಕನಹಳ್ಳಿ, ನ.8: ಪುರಸಭಾ ಮಹಿಳಾ ಸದಸ್ಯರು ಮತ್ತು ಮಹಿಳಾ ಸಿಬ್ಬಂದಿ (Chikkanayakanahalli News) ಮಹಿಳಾ ದಿನಾಚರಣೆಯ ಕಾರ್ಯಕ್ರಮಗಳಿಗಾಗಿ ಬಿಡುಗಡೆಯಾಗಿದ್ದ ಸರಕಾರದ ಅನುದಾನವನ್ನು ವೈಯಕ್ತಿಕ ಪ್ರವಾಸಕ್ಕೆ ಬಳಸಿರುವ ಗಂಭೀರ ಆರೋಪ ಕೇಳಿಬಂದಿದೆ. ಸರಕಾರದ ಹಣವನ್ನು ದುರ್ಬಳಕೆ ಮಾಡಿರುವ ಈ ನಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪುರಸಭೆಯು (Chikkanayakanahalli Town Municipal Council) 78 ಸಾವಿರ ರೂ. ಹಣವನ್ನು ಮಹಿಳಾ ಸಬಲೀಕರಣ ಕಾರ್ಯಕ್ರಮಗಳು, ವಿಚಾರ ಸಂಕೀರ್ಣಗಳು ಹಾಗೂ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಆಯೋಜಿಸಲು ಬಿಡುಗಡೆ ಮಾಡಲಾಗಿತ್ತು. ಆದರೆ ಈ ಅನುದಾನವನ್ನು ಬಳಸಿ ನಾಲ್ವರು ಮಹಿಳಾ ಪುರಸಭಾ ಸದಸ್ಯರು, ಪೌರಕಾರ್ಮಿಕರು ಹಾಗು ಇಲಾಖೆಯ ಸಿಬ್ಬಂದಿ ಸೇರಿ ಇಪ್ಪತ್ತಕ್ಕೂ ಹೆಚ್ಚು ಮಂದಿ ನ. 2 ರಂದು ಮೈಸೂರು ಪ್ರವಾಸ ಕೈಗೊಂಡಿದ್ದರು ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.

ಮಹಿಳಾ ದಿನಾಚರಣೆಗಾಗಿ ನೀಡಲಾದ ಅನುದಾನವು ಕೇವಲ ಉದ್ದೇಶಿತ ಸಬಲೀಕರಣ ಕಾರ್ಯಕ್ರಮಗಳಿಗೆ ಮಾತ್ರ ಬಳಕೆಯಾಗಬೇಕು ಎಂದು ಸರಕಾರದ ಸ್ಪಷ್ಟ ಮಾರ್ಗಸೂಚಿ ಇದೆ. ವೈಯಕ್ತಿಕ ಪ್ರವಾಸಕ್ಕಾಗಿ ಸರಕಾರಿ ಹಣವನ್ನು ಬಳಸುವ ಮೂಲಕ ಸದಸ್ಯರು ಹಣಕಾಸು ದುರ್ಬಳಕೆ ಮತ್ತು ನಂಬಿಕೆಯ ಉಲ್ಲಂಘನೆ ಮಾಡಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಪ್ರವಾಸಕ್ಕೆ ಸಂಬಂಧಿಸಿದ ವಾಹನ ಬಾಡಿಗೆ, ವಸತಿ ಮತ್ತು ಊಟೋಪಚಾರದ ವೆಚ್ಚಗಳನ್ನು ದಿನಾಚರಣೆಯ ಖರ್ಚಿನ ರೂಪದಲ್ಲಿ ತೋರಿಸಲಾಗಿದೆ ಎಂದು ಆರೋಪಿಸಲಾಗಿದೆ.

ಸಾರ್ವಜನಿಕರಲ್ಲಿ ತೀವ್ರ ಚರ್ಚೆ

ಸರಕಾರದ ನಿಯಮಗಳ ಪ್ರಕಾರ ಯಾವುದೇ ಪ್ರೋತ್ಸಾಹಕ ಪ್ರವಾಸಕ್ಕಾಗಿ ಪ್ರತ್ಯೇಕ ಅನುಮತಿ ಮತ್ತು ಅನುದಾನ ಪಡೆಯಬೇಕಾಗುತ್ತದೆ. ದಿನಾಚರಣೆಯ ಹಣವನ್ನು ಬಳಸುವಂತಿಲ್ಲ. ಈ ಅಕ್ರಮದ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು ಸರಕಾರದ ಹಣದ ಸರಿಯಾದ ಬಳಕೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.