ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ದೃಶ್ಯ ಸಿನಿಮಾದಂತೆ ಪ್ಲಾನ್‌ ಮಾಡಿ ಕೊಲೆ ಮಾಡಿದ ಖತರ್‌ನಾಕ್‌ ಆರೋಪಿ 4 ತಿಂಗಳ ಬಳಿಕ ಸೆರೆ!

ನಾಲ್ಕು ತಿಂಗಳ ನಿರಂತರ ಹುಡುಕಾಟದ ಬಳಿಕ ಆರೋಪಿ ಲಕ್ಷ್ಮಣ ಸಿಕ್ಕಿಬಿದ್ದಿದ್ದಾನೆ. ಲಕ್ಷ್ಮಣನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯವನ್ನು ಬಾಯಿ ಬಿಟ್ಟಿದ್ದಾನೆ. ಕನ್ನಡದ ದೃಶ್ಯ ಚಲನಚಿತ್ರ ನೋಡಿದ ಬಳಿಕ ಕೊಲೆ ಮಾಡಲು ಪ್ಲಾನ್​ ಮಾಡಿದ್ದಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.

ದೃಶ್ಯ ಸಿನಿಮಾದಂತೆ ಕೊಲೆ ಮಾಡಿದ ಖತರ್‌ನಾಕ್‌ ಆರೋಪಿ 4 ತಿಂಗಳ ಬಳಿಕ ಸೆರೆ!

ಆರೋಪಿ ಲಕ್ಷ್ಮಣ, ಕೊಲೆಯಾದ ಮೇರಿ

ಹರೀಶ್‌ ಕೇರ ಹರೀಶ್‌ ಕೇರ Mar 11, 2025 1:30 PM

ಬೆಂಗಳೂರು: ದೃಶ್ಯ ಸಿನಿಮಾದಲ್ಲಿರುವಂತೆ ಪ್ಲಾನ್‌ ರೂಪಿಸಿ ಮಹಿಳೆಯೊಬ್ಬಳನ್ನು ಕೊಲೆ ಮಾಡಿ (Murder Case) ಕಸದ ಡಂಪಿಂಗ್ ಯಾರ್ಡ್​ನಲ್ಲಿ ಬಿಸಾಕಿದ್ದ ಆರೋಪಿಯನ್ನು ಕೊತ್ತನೂರು ಠಾಣೆ (Bengaluru news) ಪೊಲೀಸರು ನಾಲ್ಕು ತಿಂಗಳ ನಿರಂತರ ಶೋಧದ ಬಳಿಕ (Crime news) ಸೆರೆಹಿಡಿದಿದ್ದಾರೆ. ಚಿನ್ನದ ಆಸೆಯಿಂದ ಆರೋಪಿ 50 ವರ್ಷದ ಮಹಿಳೆಯನ್ನು ಕೊಲೆ ಮಾಡಿ ಕಸದ ರಾಶಿಗೆ ಎಸೆದು, ಆಕೆಯ ಮೊಬೈಲನ್ನು ಕಸದ ಟೆಂಪೋಗೆ ಎಸೆದು ಪರಾರಿಯಾಗಿದ್ದ.

ಲಕ್ಷ್ಮಣ್ ಬಂಧಿತ ಆರೋಪಿ. ಕೊಲೆಯಾದಾಕೆ ಮೇರಿ (50), ಇಬ್ಬರೂ ಕೊತ್ತನೂರಿನ ನಾಗೇನಹಳ್ಳಿ ಸ್ಲಂ ಬೋರ್ಡ್ ನಿವಾಸಿಗಳು. ಇಬ್ಬರೂ 2024ರ ನವಂಬರ್ 26ರಿಂದ ಕಾಣೆಯಾಗಿದ್ದರು. ಇದರಿಂದ ಅನುಮಾನಗೊಂಡಿದ್ದ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಲಕ್ಷ್ಮಣ ಮತ್ತು ಮೇರಿಗಾಗಿ ಹುಡುಕಾಟ ನಡೆಸಿದ್ದರು. ನಾಲ್ಕು ತಿಂಗಳ ನಿರಂತರ ಹುಡುಕಾಟದ ಬಳಿಕ ಆರೋಪಿ ಲಕ್ಷ್ಮಣ ಸಿಕ್ಕಿಬಿದ್ದಿದ್ದಾನೆ. ಲಕ್ಷ್ಮಣನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯವನ್ನು ಬಾಯಿ ಬಿಟ್ಟಿದ್ದಾನೆ. ಕನ್ನಡದ ದೃಶ್ಯ ಚಲನಚಿತ್ರ ನೋಡಿದ ಬಳಿಕ ಕೊಲೆ ಮಾಡಲು ಪ್ಲಾನ್​ ಮಾಡಿದ್ದಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.

ಮೇರಿಯ ಪತಿ ನಿಧನರಾಗಿದ್ದು, ಒಂಟಿಯಾಗಿ ವಾಸ ಮಾಡುತ್ತಿದ್ದರು. ಮೇರಿ ಮೈಮೇಲಿದ್ದ 50 ಗ್ರಾಂ ಚಿನ್ನವನ್ನು ಆರೋಪಿ ಲಕ್ಷ್ಮಣ ಗಮನಿಸಿದ್ದ. ಆರೋಪಿ ಲಕ್ಷ್ಮಣ 2 ಲಕ್ಷ ಸಾಲ ಮಾಡಿಕೊಂಡಿದ್ದ. ಕನ್ನಡದ ದೃಶ್ಯ ಸಿನಿಮಾ ನೋಡಿ, ಅದರಂತೆ ಪ್ಲಾನ್‌ ಮಾಡಿ ಮೇರಿಯನ್ನು ಕೊಲೆ ಮಾಡಿ ಚಿನ್ನ ಎಗರಿಸಲು ಯೋಜಿಸಿದ್ದ. ನವಂಬರ್ 25ರಂದು ಮೇರಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ಅದಕ್ಕಾಗಿ ಮೇರಿ ಮನೆಯ ಕರೆಂಟ್ ಕಟ್ ಮಾಡಿದ್ದ. ಕರೆಂಟ್ ಸರಿ ಮಾಡಲು ನನ್ನನ್ನೇ ಕರೀತಾಳೆ ಎಂದು ನಿರೀಕ್ಷಿಸಿದ್ದ. ಆದರೆ ಕರೆಂಟ್​ ರಿಪೇರಿ ಮಾಡಲು ಮೇರಿ, ಲಕ್ಷ್ಮಣ್​ನನ್ನ ಕರೆಯದೆ ಬೇರೊಬ್ಬರನ್ನು ಕರೆದಿದ್ದರು.

ಇದನ್ನೂ ಓದಿ: Murder Case: ಪ್ರೇಯಸಿಯೊಂದಿಗೆ ಮದುವೆಗೆ ಹಠ; ಮಗನನ್ನೇ ಕೊಲೆಗೈದ ತಂದೆ, ಅಣ್ಣ!

ನಂತರ ಲಕ್ಷ್ಮಣ್ ನವೆಂಬರ್​ 26ರಂದು ಆಕೆಯ ಕೊಲೆ ಮಾಡಿದ್ದ. ಲಕ್ಷ್ಮಣ್ ಒಟ್ಟು ನಾಲ್ಕು ಸಿಮ್ ಕಾರ್ಡ್ ಬಳಸುತ್ತಿದ್ದ. ಕೊಲೆಯ ಸಂದರ್ಭದಲ್ಲಿ ಮೂರು ಸಿಮ್ ಕಾರ್ಡ್ ಡಿಜೆ ಹಳ್ಳಿಯಲ್ಲಿರುವ ತನ್ನ ಪತ್ನಿ ಮನೆಯಲ್ಲಿಟ್ಟು, ತಾನು ಅಲ್ಲಿದ್ದಂತೆ ಅಲಿಬಿ ಸೃಷ್ಟಿಸಿ ಪೊಲೀಸರ ದಾರಿ ತಪ್ಪಿಸಲು ಪ್ಲಾನ್ ಮಾಡಿದ್ದ. ಕೊಲೆ ಮಾಡಿದ ಬಳಿಕ ಮಧ್ಯಾಹ್ನ 3 ಗಂಟೆಗೆ ಆಟೋದಲ್ಲಿ ಮೃತದೇಹ ಹಾಕಿಕೊಂಡು ಬಂದು ಬಾಗಲೂರಿನ ಕಸ ಡಂಪಿಂಗ್ ಯಾರ್ಡ್​ನಲ್ಲಿ ಎಸೆದಿದ್ದ. ಬಳಿಕ ಮೇರಿಯ ಮೊಬೈಲ್​ ಅನ್ನು ಆನ್ ಮಾಡಿ ಕಸದ ಆಟೋದಲ್ಲಿ ಬಿಸಾಡಿ, 50 ಗ್ರಾಂ ಚಿನ್ನದ ಸಮೇತ ಪರಾರಿಯಾಗಿದ್ದ.

ಪೊಲೀಸರು ನವೆಂಬರ್​ 26ರಂದು ಆರೋಪಿ ಲಕ್ಷ್ಮಣನ ಮೊಬೈಲ್​ ಲೊಕೇಶನ್​ ಹುಡುಕಿದಾಗ ಡಿಜೆ ಹಳ್ಳಿ ತೋರಿಸಿದೆ. ಹೀಗಾಗಿ ಪೊಲೀಸರಿಗೆ ಆತನ ಮೇಲೆ ಅನುಮಾನ ಬಂದಿರಲಿಲ್ಲ. ಆದರೆ ತಿಂಗಳುಗಳ ಕಾಲ ನಾಪತ್ತೆಯಾದಾಗ ಅನುಮಾನ ಬಂದಿತ್ತು. ಲಕ್ಷ್ಮಣ ಇತ್ತೀಚೆಗೆ ತನ್ನ ಪ್ರಿಯತಮೆಗೆ ಕಾಲ್‌ ಮಾಡಿದ್ದು ಪೊಲೀಸರಿಗೆ ಗೊತ್ತಾದ ಬಳಿಕ, ಆತನನ್ನು ಕರೆತಂದು ವಿಚಾರಿಸಿದ್ದರು. ಆಗ ಚಿನ್ನಕ್ಕಾಗಿ ಆಕೆಯ ಕೊಲೆ ಮಾಡಿದ್ದನ್ನು ಬಾಯಿಬಿಟ್ಟಿದ್ದಾನೆ. ಬಳಿಕ ಪೊಲೀಸರು ಆತನ ಸಮ್ಮುಖದಲ್ಲೇ ಮೃತದೇಹ ಪತ್ತೆ ಮಾಡಿದ್ದಾರೆ. ಮಾರ್ಚ್ 9ರಂದು ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.