Murder Case: ಪ್ರಿಯತಮೆಯ ಕಣ್ಣ ಮುಂದೆಯೇ ರೌಡಿಶೀಟರ್‌ನ ಬರ್ಬರ ಕೊಲೆ
ಕೋಲಾರದ ಮಾರಿಕೊಪ್ಪಂನ ರಿವೀಟರ್ಸ್ ಲೈನ್ ನಿವಾಸಿ ಶಿವಕುಮಾರ್‌ನನ್ನು ಬೈಕ್‌ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪ್ರಿಯತಮೆ ಜೊತೆ ಕಾಮಸಮುದ್ರಕ್ಕೆ ಹೋಗುತ್ತಿರುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.


ಕೋಲಾರ: ಕೋಲಾರದಲ್ಲಿ (Kolara news) ರೌಡಿಶೀಟರ್ (Rowdy Sheeter) ಒಬ್ಬನ ಭೀಕರವಾದ ಕೊಲೆ (Murder Case) ನಡೆದಿದ್ದು, ಪ್ರಿಯತಮೆಯ ಕಣ್ಣ ಮುಂದೆಯೇ ಆತನನ್ನು ನೆಲಕ್ಕೆ ಕೆಡವಿಕೊಂಡು ಕೊಚ್ಚಿ ಕೊಲೆ (killed) ಮಾಡಲಾಗಿದೆ. ರೌಡಿಶೀಟರ್ ಶಿವಕುಮಾರ್ ಅಲಿಯಾಸ್ ತೇನ್ ಕೊಲೆಯಾದ ವ್ಯಕ್ತಿ. ತನ್ನ ಪ್ರಿಯತಮೆ ಜೊತೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಬೀಳಿಸಿ ಮಾರಕಾಸ್ತ್ರಗಳಿಂದ ಸಿಕ್ಕ ಸಿಕ್ಕಲ್ಲಿ ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ. ಈ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನಲ್ಲಿ ನಡೆದಿದೆ.
ಮಾರಿಕೊಪ್ಪಂನ ರಿವೀಟರ್ಸ್ ಲೈನ್ ನಿವಾಸಿ ಶಿವಕುಮಾರ್‌ನನ್ನು ಬೈಕ್‌ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪ್ರಿಯತಮೆ ಜೊತೆ ಕಾಮಸಮುದ್ರಕ್ಕೆ ಹೋಗುತ್ತಿರುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಕುರಿತು ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೌಡಿಶೀಟರ್ ಜೊತೆಗಿದ್ದ ಪ್ರಿಯತಮೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕೊಲೆಯಾದ ಶಿವಕುಮಾರ್ ಆಂಡರ್ಸನ್ ಪೇಟೆ ಠಾಣೆಯ ರೌಡಿಶೀಟರ್ ಎಂದು ತಿಳಿದುಬಂದಿದೆ. ಶಿವಕುಮಾರ್ ವಿರುದ್ಧ 3 ಕೊಲೆ ಮತ್ತು ಹಲ್ಲೆ ಪ್ರಕರಣಗಳು ಇದ್ದವು.
ಮಾರಕಾಸ್ತ್ರಗಳಿಂದ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ
ಬೆಂಗಳೂರು: ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಬಿಜಾಡಿಯ ಗ್ರಾಮದ ಬಿಜಿಎಸ್ ಲೇಔಟ್ನಲ್ಲಿ ನಿನ್ನೆ ಸಂಜೆ ರಿಯಲ್ ಎಸ್ಟೇಟ್ (real estate) ಯುವ ಉದ್ಯಮಿ ಲೋಕನಾಥ್ ಸಿಂಗ್ ಎಂಬವರ (murder case) ಹತ್ಯೆಯಾಗಿದೆ. ಇವರು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಈ ಸಂಬಂಧದಲ್ಲಿ ಕೊಲೆಯಾಗಿದೆ ಎಂದು ಶಂಕಿಸಲಾಗಿದೆ. ಲೋಕನಾಥ್ ಸಹೋದರ ಸೋಲದೇವನಹಳ್ಳಿ (Bengaluru Crime news) ಠಾಣೆಯಲ್ಲಿ ಅಣ್ಣನ ಕೊಲೆ ಬಗ್ಗೆ ದೂರು ನೀಡಿದ್ದಾರೆ.
ನಿನ್ನೆ ಸಂಜೆ ಲೋಕನಾಥ್ ಕೊಲೆಯಾಗಿದೆ. ಮಾಗಡಿ ಮೂಲದ ಲೋಕನಾಥ್ ಸಿಂಗ್ಗೆ ವಯಸ್ಸಿನ್ನೂ 28. ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಲೋಕನಾಥ್ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡಿಕೊಂಡಿದ್ದ. ಒಬ್ಬ ತಮ್ಮನಿಗೆ ಮದುವೆ ಮಾಡಿ ತಾನೂ ಮದುವೆಗೆ ಸಿದ್ದವಾಗಿದ್ದ. ಲೋಕನಾಥ್ ಹುಡುಗಿಯೊಬ್ಬಳ ಪ್ರೇಮಪಾಶಕ್ಕೆ ಬಿದ್ದಿದ್ದು, ಅದರಿಂದಲೇ ಈ ಘಟನೆ ಆಗಿರಬಹುದು ಎಂದು ಕುಟುಂಬಸ್ಥರು ದೂರಿದ್ದಾರೆ.
ಲೋಕನಾಥ್ ದೂರದ ಸಂಬಂಧಿ ಹುಡುಗಿಯನ್ನು 2 ವರ್ಷದಿಂದ ಪ್ರೀತಿಸುತ್ತಿದ್ದ. 2023ರಲ್ಲಿ ಹೆಣ್ಣು ಕೇಳಲು ಹೋದಾಗ 2 ಕುಟುಂಬಗಳ ಮಧ್ಯೆ ಗಲಾಟೆಯಾಗಿದೆ. ದೀಪಕ್ ಸಿಂಗ್ ಎಂಬವರು ಮಧ್ಯಸ್ಥಿಕೆ ಮಾಡಿದಾಗಲೂ ಗಲಾಟೆಯಾಗಿದೆ. ಹುಡುಗಿಯ ಅಪ್ಪ ಲೋಕನಾಥ್ನಿಂದಾಗಿ ತನ್ನ ಮನೆಯಲ್ಲಿ ದುರ್ಘಟನೆ ಆಗಿದೆ ಅಂತ ಕೋಪಗೊಂಡಿದ್ದ. ದುರ್ಘಟನೆಯಲ್ಲಿ ಲೋಕನಾಥ್ ಕೈವಾಡ ಇದ್ರೆ ಧೀರಜ್ ಆತನನ್ನು ಕೊಲೆ ಮಾಡ್ತಾನೆ ಅಂತ ವಾರ್ನ್ ಮಾಡಿದ್ದ. ನಿನ್ನೆ ಬೆಳಗ್ಗೆ 4 ಬಿಯರ್ ಬಾಟಲ್ ಕಾರಿನಲ್ಲಿ ಹಾಕಿಕೊಂಡ ಲೋಕನಾಥ್ ಬೆಂಗಳೂರಿಗೆ ಹೋಗಿದ್ದಾಗ ಕೊಲೆಯಾಗಿದ್ದಾನೆ.
ತಾನು ತಂದಿದ್ದ ಕಾರಿನಲ್ಲೇ ಲೋಕನಾಥ್ ಸಿಂಗ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಕಾರಿನಿಂದ ಓಡಿ ಬಂದ ಲೋಕನಾಥ್ 1000 ಮೀಟರ್ ದೂರದಲ್ಲಿದ್ದ ಆಟೋ ಹತ್ತಿ ಪ್ರಾಣ ಬಿಟ್ಟಿದ್ದ. ಕೊಲೆಯಾದ ವೇಳೆ ಲೋಕನಾಥ್ ಸಿಂಗ್ ಬಾಡಿಗಾರ್ಡ್ ಸ್ಥಳದಲ್ಲಿ ತಾನಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ನಡೆದಿದ್ದ ರಿಕವರಿ ಹಣ ದುರ್ಬಳಕೆ ಕೇಸ್ನಲ್ಲಿ ಲೋಕನಾಥ್ ಸಿಂಗ್ ಎರಡನೇ ಆರೋಪಿಯಾಗಿದ್ದ. ಈ ಕೇಸ್ನ ಮೊದಲ ಆರೋಪಿ ಇನ್ಸ್ಪೆಕ್ಟರ್ ಶಂಕರ್ ನಾಯಕ್ಗೆ ಲೋಕನಾಥ್ ಸಿಂಗ್ ಸಾಥ್ ನೀಡಿದ್ದರಿಂದ ಸಿಸಿಬಿ ಪೊಲೀಸರು ಈತನನ್ನ ಬಂಧಿಸಿದ್ದರು. ಈತನ ಕೊಲೆ ಕೇಸ್ ತನಿಖೆಗೆ ವಿಶೇಷ ತಂಡ ನೇಮಿಸಿದ್ದು, ಎಲ್ಲಾ ಕೋನಗಳಲ್ಲೂ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: Karnataka Rain: ಚಿಕ್ಕಮಗಳೂರಲ್ಲಿ ಭಾರಿ ಮಳೆ; ಸಿಡಿಲು ಬಡಿದು ಮಹಿಳೆ ಸಾವು