Bagepally Ganeshotsava: ಗೂಳೂರು ರೆಡ್ಡಿ ಯುವ ಬಳಗ ವತಿಯಿಂದ ಪ್ರತಿಷ್ಠಾಪಿಸಿದ್ದ 4ನೇ ವರ್ಷದ ಗೌರಿ, ಗಣೇಶ ಮೂರ್ತಿ ವಿಸರ್ಜನೋತ್ಸವ
ಗೂಳೂರು ಗ್ರಾಮದ ರೆಡ್ಡಿ ಯುವ ಬಳಗ ವತಿಯಿಂದ ಪ್ರತಿಷ್ಠಾಪಿಸಿದ್ದ 4ನೇ ವರ್ಷದ ಗೌರಿ ಗಣೇಶೋತ್ಸ ವದ ವಿಸರ್ಜನೋತ್ಸವವು ಶುಕ್ರವಾರ ಸಂಜೆ ಹರಿ ಸ್ವಾಮಿ ಯವರಿಂದ ವಿವಿಧ ಪೂಜಾ ಕೈಂಕರ್ಯದ ನಂತರ ಪ್ರಮುಖ ಬೀದಿಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಿದ ಗೌರಿ ಗಣೇಶ ಉತ್ಸವ ಮೂರ್ತಿಯ ಶೋಭಾಯಾತ್ರೆಯಲ್ಲಿ ರಸ್ತೆ ಉದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.

-

ಬಾಗೇಪಲ್ಲಿ: ತಾಲ್ಲೂಕು ಗೂಳೂರು ಗ್ರಾಮದ ಗೂಳೂರು ರೆಡ್ಡಿ ಯುವ ಬಳಗ ವತಿಯಿಂದ ಪ್ರತಿ ಷ್ಠಾಪಿಸಿದ್ದ 4ನೇ ವರ್ಷದ ಗೌರಿ, ಗಣೇಶ ಮೂರ್ತಿ ವಿಸರ್ಜನೋತ್ಸವ ಕಾರ್ಯಕ್ರಮವು ಅದ್ಧೂರಿ ಯಾಗಿ ನಡೆಯಿತು.
ಗೂಳೂರು ಗ್ರಾಮದ ರೆಡ್ಡಿ ಯುವ ಬಳಗ ವತಿಯಿಂದ ಪ್ರತಿಷ್ಠಾಪಿಸಿದ್ದ 4ನೇ ವರ್ಷದ ಗೌರಿ ಗಣೇಶೋತ್ಸವದ ವಿಸರ್ಜನೋತ್ಸವವು ಶುಕ್ರವಾರ ಸಂಜೆ ಹರಿ ಸ್ವಾಮಿ ಯವರಿಂದ ವಿವಿಧ ಪೂಜಾ ಕೈಂಕರ್ಯದ ನಂತರ ಪ್ರಮುಖ ಬೀದಿಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಿದ ಗೌರಿ ಗಣೇಶ ಉತ್ಸವ ಮೂರ್ತಿಯ ಶೋಭಾಯಾತ್ರೆಯಲ್ಲಿ ರಸ್ತೆ ಉದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇದನ್ನೂ ಓದಿ: Ganesh Chathurthi 2025: ಬಾಲಿವುಡ್ ತಾರೆಯರ ಗಣೇಶ ಹಬ್ಬದ ಸಂಭ್ರಮ ಹೇಗಿತ್ತು? ಇಲ್ಲಿದೆ ಫೋಟೊ
ತದನಂತರ ನಲ್ಲಪರೆಡ್ಡಿಪಲ್ಲಿ ಕೆರೆಯಲ್ಲಿ ಗೌರಿ ಗಣೇಶ ಮೂರ್ತಿಯನ್ನು ಭಕ್ತಿಯಿಂದ ಪೂಜಿಸಿ ವಿಸರ್ಜಿಸಿ ಪ್ರಸಾದ ವಿತರಣೆ ಮಾಡಲಾಯಿತು.
ಗೂಳೂರು ಹೋಬಳಿ ರೆಡ್ಡಿ ಯುವಕರು ಸುತ್ತಮುತ್ತಲಿನ ನೂರಾರು ಮಂದಿ ಡ್ರಮ್ ಸೆಟ್ ಗೆ ಕುಣಿದು ಕುಪ್ಪಳಿಸಿದರು. ಈ ಸಂದರ್ಭದಲ್ಲಿ ಸಿ.ಎನ್. ಬಾಬುರೆಡ್ಡಿ.ರಂಗಾರೆಡ್ಡಿ, ಬಾಬುರೆಡ್ಡಿ, ಸಾಯಿ ನಾಥ ರೆಡ್ಡಿ,ಸುಂದರಾಮಿರೆಡ್ಡಿ, ರಘರಾಮ ರೆಡ್ಡಿ, ಧಾಮೋಧರ್ ರೆಡ್ಡಿ ಚಂದ್ರಶೇಖರ ರೆಡ್ಡಿ, ಶ್ರೀನಿವಾಸರೆಡ್ಡಿ ಸೋಮಶೇಖರ ರೆಡ್ಡಿ, ಬಾಬುರೆಡ್ಡಿ,ರವಿಚಂದ್ರಾ ರೆಡ್ಡಿ, ಅನಿಲ್ ಸುದರ್ಶನ,ವಿಷ್ಣು ರೆಡ್ಡಿ, ಸುಧಾಕರ ರೆಡ್ಡಿ, ಮಧ ಸೂಧನ ರೆಡ್ಡಿ ಅಶೋಕ ರೆಡ್ಡಿ,ಸಾಯಿಕೃಷ್ಣ ರೆಡ್ಡಿ,ಜಯಸಿಂಹ ರೆಡ್ಡಿ,ಜಸ್ವಂತ್ ರೆಡ್ಡಿ, ಶ್ರೀಕಾಂತ ರೆಡ್ಡಿ, ಪ್ರಸಾದ್ ರೆಡ್ಡಿ, ಹಾಗೂ ಇನ್ನೂ ಮುಂತಾದ ರೆಡ್ಡಿ ಯುವ ಬಳಗದ ಸದಸ್ಯರು ಹಾಜರಿದ್ದರು.