ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಲಘು ವಿಮಾನ ಹಾರಾಟದ ಬಗ್ಗೆ ಆತಂಕ ಬೇಡ: ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ

ಹಾವೇರಿ ಜಿಲ್ಲೆಯ ಹಾವೇರಿ, ಹಿರೇಕೆರೂರ, ಬ್ಯಾಡಗಿ, ಬ್ಯಾಡಗಿ ತಾಲೂಕಿನಲ್ಲಿ ಭೂ ಭಾಗದಿಂದ ಕಡಿಮೆ ಅಂತರದಲ್ಲಿ ಏರ್ ಕ್ರಾಫ್ಟ್ ಹಾರಾಟ ಮಾಡುತ್ತಿದ್ದು, ಇದು ಜಿಯೋಲಾಜಿಕಲ್ ಸರ್ವೆ ಕಾರ್ಯಕ್ಕೆ ಮಾತ್ರ ಸಿಮೀತವಾಗಿದೆ ಎಂದು ಹಾವೇರಿ ಎಸ್‌ಪಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ.

ಹಾವೇರಿ ಎಸ್‌ಪಿ ಯಶೋಧಾ ವಂಡಗೋಡಿ

ಹಾವೇರಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ವತಿಯಿಂದ ಜುಲೈ 31ವರೆಗೆ ಏರ್‌ಕ್ರಾಫ್ಟ್‌ ಮೂಲಕ ಏರ್ ಬಾರ್ನ್ ಜಿಯೋಲಾಜಿಕಲ್ ಸರ್ವೆ ಕಾರ್ಯ ನಡೆಯುತ್ತಿದ್ದರಿಂದ ಹಾವೇರಿ ಜಿಲ್ಲೆಯಲ್ಲಿಯೂ ಕೂಡ ಲಘು ವಿಮಾನ ಹಾರಾಟ ನಡೆಸಿದ್ದು, ಸಾರ್ವಜನಿಕರು ಯಾವುದೇ ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಎಸ್ಪಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ.

ಜಿಲ್ಲೆಯ ಹಾವೇರಿ, ಹಿರೇಕೆರೂರ, ಬ್ಯಾಡಗಿ, ಬ್ಯಾಡಗಿ ತಾಲೂಕಿನಲ್ಲಿ ಭೂ ಭಾಗದಿಂದ ಕಡಿಮೆ ಅಂತರದಲ್ಲಿ ಏರ್ ಕ್ರಾಫ್ಟ್ ಹಾರಾಟ ಮಾಡುತ್ತಿದ್ದು, ಇದು ಜಿಯೋಲಾಜಿಕಲ್ ಸರ್ವೆ ಕಾರ್ಯಕ್ಕೆ ಮಾತ್ರ ಸಿಮೀತವಾಗಿದೆ. ಇದರಿಂದ ಯಾವುದೇ ಅಪಾಯ ಆಗದು. ಸಾರ್ವಜನಿಕರು ಯಾವುದೇ ಭಯಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.