ಇಸ್ಲಮಾಬಾದ್: ಪಾಕಿಸ್ತಾನದ ಟಿಕ್‌ಟಾಕ್(Pakistani TikToker)ಸ್ಟಾರ್ ಅನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 17 ವರ್ಷದ ಸನಾ ಯೂಸುಫ್(Sana Yousaf) ಸೋಮವಾರ ಇಸ್ಲಾಮಾಬಾದ್‌ನಲ್ಲಿರುವ ತನ್ನ ಮನೆಯಲ್ಲಿ ಹತ್ಯೆಗೀಡಾಗಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಅಪರಿಚಿತ ದುಷ್ಕರ್ಮಿಯೊಬ್ಬ ಸನಾ ಮನೆಗೆ ಮನೆಗೆ ನುಗ್ಗಿ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಸನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಚಿತ್ರಾಲ್ ಮೂಲದ ಸನಾ, ತನ್ನ ಟಿಕ್‌ಟಾಕ್ ವೀಡಿಯೊಗಳ ಮೂಲಕ ಜನಪ್ರಿಯತೆ ಗಳಿಸಿದ್ದರು. ಇದೊಂದು ಮರ್ಯಾದಾ ಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ.
"ಇಸ್ಲಾಮಾಬಾದ್‌ನ ಸೆಕ್ಟರ್ ಜಿ -13 ರಲ್ಲಿ ವಾಸಿಸುತ್ತಿದ್ದ ಅಪ್ಪರ್ ಚಿತ್ರಾಲ್‌ನ ಸನಾ ಯೂಸುಫ್ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಬಂದಿದ್ದ ವ್ಯಕ್ತಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಘಟನೆಯ ನಂತರ ದುರ್ಷರ್ಮಿ ಸ್ಥಳದಿಂದ ಪರಾರಿಯಾಗಿದ್ದು, ಶಂಕಿತನ ಹುಡುಕಾಟ ಶುರುವಾಗಿದೆ" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಅರೆಸ್ಟ್ ಮಾಡಲಾಗಿಲ್ಲ. ಇನ್ನು ಕೊಲೆಯ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ.
ಈ ಸುದ್ದಿಯನ್ನೂ ಓದಿ: Viral News: ಲೈವ್‌ಸ್ಟ್ರೀಮಿಂಗ್ ಮಾಡುತ್ತಿದ್ದಾಗಲೇ ಟಿಕ್‌ಟಾಕ್ ಸ್ಟಾರ್ ಮೇಲೆ ಮೇಲೆ ಗುಂಡಿನ ದಾಳಿ; ಕಾರಣವೇನು?
ಏತನ್ಮಧ್ಯೆ, ಸಂತ್ರಸ್ತೆಯ ಕುಟುಂಬವು ಅವರ ದುರಂತ ಸಾವಿನ ಬಗ್ಗೆ ಇನ್ನೂ ಸಾರ್ವಜನಿಕ ಹೇಳಿಕೆಯನ್ನು ನೀಡಿಲ್ಲ. ಮೂಲತಃ ಚಿತ್ರಾಲ್ ಮೂಲದ ಸನಾ ಯೂಸಫ್ ಪ್ರಸಿದ್ಧ ಟಿಕ್‌ಟಾಕ್ ಸ್ಟಾರ್ ಆಗಿದ್ದರು. ಅವರು ಇನ್‌ಸ್ಟಾಗ್ರಾಮ್‌ನಲ್ಲಿಯೂ ಸಕ್ರಿಯರಾಗಿದ್ದರು, ಅಲ್ಲಿ ಅವರು ನಿಯಮಿತವಾಗಿ ಮನರಂಜನಾ ವೀಡಿಯೊಗಳು ಮತ್ತು ಹಾಸ್ಯಮಯ ರೀಲ್‌ಗಳನ್ನು ಪೋಸ್ಟ್ ಮಾಡುತ್ತಿದ್ದರು. ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆಯರ ಪುತ್ರಿಯೂ ಆಗಿರುವ ಸನಾ, ಮಹಿಳೆಯ ಹಕ್ಕುಗಳ ಬಗ್ಗೆ ತಮ್ಮ ರೀಲ್ಸ್ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿದ್ದರು. ಇದು ಕೆಲವು ಮೂಲಭೂತವಾದಿಗಳ ಕೆಂಗಣ್ಣಿಗೆ ಕಾರಣವಾಗಿತ್ತು.