ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Police Firing: ಹುಬ್ಬಳ್ಳಿಯಲ್ಲಿ ರೌಡಿಶೀಟರ್‌ ಕಾಲಿಗೆ ಗುಂಡಿಕ್ಕಿ ಸೆರೆಹಿಡಿದ ಪೊಲೀಸರು

ನಿನ್ನೆ ಹಣಕಾಸಿನ ವಿಚಾರವಾಗಿ ಕೆಲವರ ನಡುವೆ ಗಲಾಟೆ ಆಗಿತ್ತು. ಇದರ ವಿಚಾರಣೆಯ ವೇಳೆ ಪೊಲೀಸರ ಮೇಲೆ ಮಲಿಕ್ ಆಧೋನಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಆತ್ಮ ರಕ್ಷಣೆಗಾಗಿ ಪಿಎಸ್ಐ ವಿಶ್ವನಾಥ್, ಮಲಿಕ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ರೌಡಿಶೀಟರ್‌ ಕಾಲಿಗೆ ಗುಂಡಿಕ್ಕಿ ಸೆರೆಹಿಡಿದ ಪೊಲೀಸರು

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Apr 8, 2025 9:52 AM

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ (Hubballi news) ಪೊಲೀಸರ ಗುಂಡಿನ ಸದ್ದು ಅನುರಣಿಸಿದೆ. ತಮ್ಮ ಮೇಲೆ ಹಲ್ಲೆ ನಡೆಸಿದ ರೌಡಿಶೀಟರ್ (Rowdy Sheeter) ಮೇಲೆ ಪೊಲೀಸರು ಗುಂಡಿನ ದಾಳಿ (Police Firing) ನಡೆಸಿ ಬಂಧಿಸಿರುವ ಘಟನೆ ಹುಬ್ಬಳ್ಳಿಯ ಆನಂದನಗರದ ಹೊರವಲಯದಲ್ಲಿ ನಡೆದಿದೆ. ರೌಡಿಶೀಟರ್ ಮಲಿಕ್ ಆದೋನಿ ಎಂಬಾತನ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿ ಆತನನ್ನು ಬಂಧಿಸಿದ್ದಾರೆ. ಹಳೆ ಹುಬ್ಬಳ್ಳಿ ಠಾಣೆಯ ಪಿಎಸ್ಐ ವಿಶ್ವನಾಥ್ ಅವರು ರೌಡಿಶೀಟರ್ ಮಲಿಕ್ ಆದೋನಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ನಿನ್ನೆ ಹಣಕಾಸಿನ ವಿಚಾರವಾಗಿ ಗಲಾಟೆ ಆಗಿತ್ತು. ವಿಚಾರಣೆಯ ವೇಳೆ ಪೊಲೀಸರ ಮೇಲೆ ಮಲಿಕ್ ಆಧೋನಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಆತ್ಮ ರಕ್ಷಣೆಗಾಗಿ ಪಿಎಸ್ಐ ವಿಶ್ವನಾಥ್, ಮಲಿಕ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಪಿಎಸ್ಐ ವಿಶ್ವನಾಥ್, ಪಿಸಿಗಳಾದ ಕಲ್ಲನಗೌಡ, ಶರೀಫ್ ಎನ್ನುವವರಿಗೆ ಗಾಯಗಳಾಗಿವೆ. ಗಾಯಾಳು ಪೊಲೀಸರು ಮತ್ತು ಆರೋಪಿ ಮಲಿಕ್‌ಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಕೋರ್ಟ್‌ನಲ್ಲಿ ದರ್ಶನ್-‌ ಪವಿತ್ರಾ ಗೌಡ ಮುಖಾಮುಖಿ?

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ವಿಚಾರಣೆ ಇಂದು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಡೆಯಲಿದೆ. ನಟ ದರ್ಶನ್ (Actor Darshan), ಪವಿತ್ರಾ ಗೌಡ (Pavithra Gowda) ಸೇರಿದಂತೆ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ (Court) ಹಾಜರಾಗುವ ಸಾಧ್ಯತೆ ಇದೆ.

ದೋಷಾರೋಪ ನಿಗದಿಗೆ ಕೋರ್ಟ್ ದಿನಾಂಕ ಗೊತ್ತು ಪಡಿಸಲಿದೆ. ಪ್ರಕರಣ ಸಂಬಂಧ ಸದ್ಯ ಎಲ್ಲಾ 17 ಆರೋಪಿಗಳು ಕೂಡ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ದರ್ಶನ್‌ ಹಾಗೂ ಇತರರಿಗೆ ಕರ್ನಾಟಕ ಹೈಕೋರ್ಟ್‌ ನೀಡಿರುವ ಜಾಮೀನು ರದ್ದುಪಡಿಸುವಂತೆ ಕರ್ನಾಟಕ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅದು ಪರಿಶೀಲನೆಯಲ್ಲಿದೆ.

ಪವಿತ್ರಾ ಗೌಡ ಈಗಾಗಲೇ ಕೋರ್ಟ್‌ನಿಂದ ಅನುಮತಿ‌ ಪಡೆದು ಹಲವು ರಾಜ್ಯಗಳಲ್ಲಿ ಸುತ್ತಾಡಿ ಬಂದಿದ್ದಾರೆ. ಪುಣ್ಯಕ್ಷೇತ್ರಗಳ ಸಂದರ್ಶನ ಮಾಡಿದ್ದಾರೆ. ದರ್ಶನ್‌ ಕೂಡ ರಾಜ್ಯ ಬಿಟ್ಟು ತೆರಳಲು ಅನುಮತಿ ಪಡೆದಿದ್ದು, ಮೈಸೂರು,ಬೆಂಗಳೂರು, ರಾಜಸ್ಥಾನಗಳಲ್ಲಿ ತಮ್ಮ ಮುಂದಿನ ʼಡೆವಿಲ್ʼ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ದರ್ಶನ ಜೊತೆಗೆ ಅವರ ಪತ್ನಿ ವಿಜಯಲಕ್ಷ್ಮಿ ಕೂಡ ಇದ್ದರು. ಇಂದು ಬೆಳಗ್ಗೆ 11 ಗಂಟೆಗೆ ನ್ಯಾಯಾಲಯದಲ್ಲಿ ಆರೋಪಿಗಳು ಹಾಜರಾಗಲು ತಿಳಿಸಲಾಗಿದ್ದು, ಇವರಿಬ್ಬರೂ ಮುಖಾಮುಖಿ ಆಗಲಿದ್ದಾರೆಯೇ ಎಂಬ ಕುತೂಹಲವಿದೆ.

ಇದನ್ನೂ ಓದಿ: Self Harming: ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿ ಶವ, ಅಕ್ರಮ ಸಂಬಂಧ ಹೊಂದಿದ್ದ ಪತಿಯತ್ತ ಸಂಶಯ