ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pranitha subhash: ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಕಣ್ಣು ಕುಕ್ಕಿದ ಪ್ರಣೀತಾ ಸುಭಾಷ್; ತಾಯಿಯಾದ ಬಳಿಕ ನಿಮ್ಮ ಅಂದ ಹೆಚ್ಚಿದೆ ಎಂದ ಜನ!

ಪ್ಯಾರಿಸ್‌ನ ಸ್ಟ್ರೀಟ್‌ನಲ್ಲಿ ಕ್ಯಾಮರಾಗೆ ನಟಿ ಪ್ರಣೀತಾ ಸಖತ್ ಪೋಸ್ ನೀಡಿದ್ದಾರೆ. ಇಬ್ಬರು ಮಕ್ಕಳ ತಾಯಿಯಾದ ಬಳಿಕ ಮೊದಲ ಬಾರಿಗೆ ಗ್ಲಾಮರಸ್‌ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿರುವ ಅವರನ್ನು ನೋಡಿದ ಫ್ಯಾನ್ಸ್‌ ನಿಮ್ಮ ಅಂದ ಹೆಚ್ಚಿದೆ ಎಂದು ಮೆಚ್ಚಿಕೊಂಡಿದ್ದಾರೆ.

ಪ್ರಣೀತಾ ಸುಭಾಷ್

ಪ್ಯಾರಿಸ್: ಪ್ಯಾರಿಸ್ ಫ್ಯಾಷನ್ ವೀಕ್ 2025 (Paris fashion week 2025) ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಅದ್ಧೂರಿಯಾಗಿ ಆರಂಭಗೊಂಡಿದ್ದು, ಅದರಲ್ಲಿ ಕನ್ನಡದ ನಟಿ ಪ್ರಣೀತಾ ಸುಭಾಷ್ (Pranitha subhash) ಪಾಲ್ಗೊಂಡಿದ್ದಾರೆ. ಗ್ಲಾಮರಸ್ ಆಗಿ ಪ್ರಣೀತಾ ಸುಭಾಷ್ ಪೋಸ್ ಕೊಟ್ಟಿದ್ದು, ಅದನ್ನು ನೋಡಿ ಆಕೆಯ ಅಭಿಮಾನಿಗಳು ಕಳೆದೇ ಹೋಗಿದ್ದಾರೆ. ಇಬ್ಬರು ಮಕ್ಕಳ ತಾಯಿಯಾದ ಬಳಿ ನಿಮ್ಮ ಅಂದ ಹೆಚ್ಚಾಗಿದೆ ಎಂದು ಮೆಚ್ಚಿಕೊಂಡಿದ್ದಾರೆ.

ಈ ಪ್ರತಿಷ್ಠಿತ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ ಕನ್ನಡದ ಮೊದಲ ನಟಿ ಎನಿಸಿಕೊಂಡಿದ್ದಾರೆ ಪ್ರಣೀತಾ ಸುಭಾಷ್. ಪ್ಯಾರಿಸ್‌ನ ಸ್ಟ್ರೀಟ್‌ನಲ್ಲಿ ಕ್ಯಾಮರಾಗೆ ಪ್ರಣಿತಾ ಸಖತ್ ಪೋಸ್ ನೀಡಿದ್ದಾರೆ. ವಿವಾಹದ ಬಳಿಕ ಸಿನಿಮಾಗಳಿಂದ ಸ್ವಲ್ಪ ಹಿಂದೆ ಸರಿದಿದ್ದ ಪ್ರಣೀತಾ, ಬಳಿಕ ಇಬ್ಬರು ಮಕ್ಕಳ ತಾಯಿ ಆಗಿದ್ದರು. ನಂತರ ತಾಯ್ತನದಲ್ಲಿ ಬ್ಯುಸಿ ಆಗಿದ್ದರು. ಆದರೂ ಸೋಶಿಯಲ್‌ ಮೀಡಿಯಾದಲ್ಲಿ ಅವರು ಆಕ್ಟಿವ್‌ ಆಗಿದ್ದು, ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು.



ಪ್ಯಾರಿಸ್‌ ಫ್ಯಾಷನ್‌ ವೀಕ್‌ನ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಣೀತಾ ಹಂಚಿಕೊಂಡಿದ್ದು, ಆ ಫೋಟೊಗಳನ್ನು ನೋಡಿದವರು ಫಿದಾ ಆಗಿಹೋಗಿದ್ದಾರೆ. ರೂಪದರ್ಶಿಗಳ, ಸಿನಿಮಾ ತಾರೆಯರ ನೆಚ್ಚಿನ ಫ್ಯಾಷನ್‌ ವೀಕ್‌ ಇದಾಗಿದ್ದು, ಇಲ್ಲಿ ವಿಶ್ವದ ಮೂಲೆ ಮೂಲೆಯಿಂದ ಸ್ಟಾರ್‌ಗಳು ಆಕರ್ಷಕ ಉಡುಪುಗಳನ್ನು ಧರಿಸಿ ಬರುತ್ತಾರೆ. ಖ್ಯಾತ ವಸ್ತ್ರ ವಿನ್ಯಾಸಗಾರರ ವಸ್ತ್ರಗಳನ್ನು ಧರಿಸಿ ರ‍್ಯಾಂಪ್ ವಾಕ್ ಮಾಡುತ್ತಾರೆ. ಇದು ಸಿನಿಮಾ ತಾರೆಯರಿಗೂ ಕೂಡ ಪ್ರತಿಷ್ಠೆಯ ಇವೆಂಟ್. ಪ್ರಣಿತಾ ಸುಭಾಷ್ ಆ ನಟಿಯರ ಸಾಲಿನಲ್ಲಿ ಸೇರಿದ್ದಾರೆ.

ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಪ್ರಣೀತಾ, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಬ್ಬರು ಮಕ್ಕಳ ತಾಯಿಯಾಗಿರುನ ನಟಿ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇಬ್ಬರು ಮಕ್ಕಳ ತಾಯಿಯಾಗಿದ್ದರೂ ಸೌಂದರ್ಯವನ್ನು ಹಾಗೇ ಕಾಪಾಡಿಕೊಂಡಿದ್ದಾರೆ. ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನ ಇಟ್ಟಿದ್ದಾರೆ.

2010ರಲ್ಲಿ ದರ್ಶನ್ ನಟಿಸಿದ 'ಪೊರ್ಕಿ' ಸಿನಿಮಾದ ಮೂಲಕ ಪ್ರಣಿತಾ ಸುಭಾಷ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಂತರ 'ಜರಾಸಂಧ', 'ಭೀಮಾ ತೀರದಲ್ಲಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮಧ್ಯೆ 'ಭಾವ'. ಪವನ್ ಕಲ್ಯಾಣ್ ಸಿನಿಮಾ 'ಅತ್ತಾರಿಂಟಿಕಿ ದಾರೇದಿ', ಜೂ.ಎನ್‌ಟಿಆರ್ 'ರಭಸ', ಮಹೇಶ್ ಬಾಬು ಅಭಿನಯದ 'ಬ್ರಹ್ಮೋತ್ಸವಂ' ಅಂತಹ ತೆಲುಗು ಸೂಪರ್‌ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ 'ಹಂಗಾಮ 2' ಹಾಗೂ 'ಬುರ್ಜ್; ದಿ ಪ್ರೈಡ್ ಆಫ್ ಇಂಡಿಯಾ' ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಪ್ರಣೀತಾ ಸರಳ ಮದುವೆ

pranitha subhash 3

ಹರೀಶ್‌ ಕೇರ

View all posts by this author