ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Ramesh Jarkiholi: ವಿಜಯೇಂದ್ರ ನೀನು ಬಚ್ಚಾ, ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ: ರಮೇಶ್‌ ಜಾರಕಿಹೊಳಿ ಕಿಡಿ

Ramesh Jarkiholi: ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂಬ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆಗೆ ಅಂಕಲಗಿ ಗ್ರಾಮದಲ್ಲಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

Ramesh Jarkiholi: ವಿಜಯೇಂದ್ರ ನೀನು ಬಚ್ಚಾ, ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ: ರಮೇಶ್‌ ಜಾರಕಿಹೊಳಿ ಕಿಡಿ

Profile Prabhakara R Jan 18, 2025 6:27 PM

ಬೆಳಗಾವಿ: ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ. ಇಂದಿಗೂ ಯಡಿಯೂರಪ್ಪ ನಮ್ಮ ನಾಯಕ, ಅದರಲ್ಲಿ ಎರಡು ಮಾತಿಲ್ಲ. ಯಡಿಯೂರಪ್ಪ ಅವರ ಬಗ್ಗೆ ನಾನು ಅಗೌರವದಿಂದ ಮಾತಾಡಿಲ್ಲ. ಅವರ ಮೇಲೆ ಗೌರವ ಇದೆ. ಆದರೆ ನೀನು ಸುಳ್ಳು ಹೇಳುವುದು ಬಿಡಬೇಕು ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jarkiholi) ಕಿಡಿಕಾರಿದ್ದಾರೆ.

ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂಬ ವಿಜಯೇಂದ್ರ ಹೇಳಿಕೆಗೆ ಅಂಕಲಗಿ ಗ್ರಾಮದಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವರು, ನಮ್ಮಲ್ಲಿ ಜಗಳ ಇರುವುದು ಅಧ್ಯಕ್ಷರ ಬದಲಾವಣೆಗೆ ಮಾತ್ರವಷ್ಟೆ‌. ಅಧ್ಯಕ್ಷ ಚೇಂಜ್ ಆದರೆ ಓಕೆ, ಇಲ್ಲವಾದರೂ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ನಾನು ಶಿಕಾರಿಪುರಕ್ಕೆ ಬರುತ್ತೇನೆ, ವಿಜಯೇಂದ್ರ ಮನೆ ಮುಂದಿನಿಂದ ಪ್ರವಾಸ ಶುರು ಮಾಡುತ್ತೇನೆ. ನಿನ್ನ ಸವಾಲು ಸ್ವೀಕಾರ ಮಾಡಿದ್ದೇನೆ, ನೀನು ದಿನಾಂಕ ನಿಗದಿ ಮಾಡು. ಬೆಂಬಲಿಗರು ಬರಲ್ಲಾ, ಗನ್ ಮ್ಯಾನ್ ಬರಲ್ಲಾ, ನಾನು ಒಬ್ಬನೇ ಬರುತ್ತೇನೆ. ಅಲ್ಲಿಂದ ಪ್ರವಾಸ ಆರಂಭ ಮಾಡುತ್ತೇನೆ, ತಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ನಿನ್ನ ಬೇಕಾದರೆ ರಾಜ್ಯದ ಮೂಲೆ ಮೂಲೆಯಲ್ಲಿ ಓಡಾಡಲು ಬಿಡದಂತೆ ಮಾಡುವ ಶಕ್ತಿ ನನಗಿದೆ. ನಿನ್ನಷ್ಟು ಕೀಳು ಮಟ್ಟದ ರಾಜಕಾರಣಿ ನಾನಲ್ಲಾ‌. ವಿಜಯೇಂದ್ರ ಬಗ್ಗೆ ನನಗೆ ಗೌರವ ಇಲ್ಲ, ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಗೌರವ ಇದೆ. ವಿಜಯೇಂದ್ರ ಬೆನ್ನು ಹತ್ತಿದರೆ ಯಡಿಯೂರಪ್ಪನವರೇ ಹಾಳಾಗುತ್ತೀರಿ. ಅವರನ್ನು ಬದಲಿಸಿ, ಹೊಸಬರಿಗೆ ಅವಕಾಶ ಕೊಡಿ. ಯಡಿಯೂರಪ್ಪ ಅವರೇ ಇನ್ನು ನೀವು ಮುಖ್ಯಮಂತ್ರಿ ಆಗಲ್ಲ. ಪದೇ ಪದೇ ಸೈಕಲ್ ಮೇಲೆ ಓಡಾಡಿದ್ದೀನಿ ಅಂತ ಹೇಳಬೇಡಿ. ಅದರ ಎರಡು ಪಟ್ಟು ನೀವು ಲಾಭ ಪಡೆದುಕೊಂಡಿದ್ದೀರಿ. ಇದನ್ನು ನೀವು ಹೇಳಬೇಡಿ ಅವಮಾನ ಆಗುತ್ತದೆ. ವಾಜಪೇಯಿ, ಮೋದಿಯವರು ಇನ್ನೂ ಒಂದು ಸೈಕಲ್ ತಗೊಂಡಿಲ್ಲ, ನೀವು ಎನೇನು ತಗೊಂಡಿದ್ದೀರಿ ಎಂದ ವಾಗ್ದಾಳಿ ನಡೆಸಿದರು.

ಪಕ್ಷಕ್ಕೆ ಬಂದು ಮೂರು ವರ್ಷ ಆಯ್ತು ಎನ್ನುತ್ತಿಯಾ. ನಾನು ಬಂದಿದ್ದು ನಿಮ್ಮ ಅಪ್ಪನ ಸಿಎಂ ಮಾಡಲು. ಅದೇ ಹರಾಮಿ ದುಡ್ಡಲ್ಲಿ ನೀನು ಓಡಾಡುತ್ತಿದ್ದೀಯಾ, ನೀನು ಇನ್ನು ಬಚ್ಚಾ ಇದ್ದೀಯಾ ವಿಜಯೇಂದ್ರ ಎಂದು ಎಚ್ಚರಿಕೆ‌ ನೀಡಿದರು.



ಯತ್ನಾಳ್ ಒಬ್ಬ ಬಹುಸಂಖ್ಯಾತ ಇದ್ದಾರೆ, ಅದಕ್ಕಾಗಿ ಅವರನ್ನು ಒಪ್ಪಿಕೊಂಡಿದ್ದೇವೆ. ಲಿಂಗಾಯತರಲ್ಲಿ ಇನ್ನೂ ಸಾಕಷ್ಟು ನಾಯಕರಿದ್ದಾರೆ. ವಿಜಯೇಂದ್ರ ನೀನು ಸಣ್ಣ ಹುಡುಗಾ, ನಿನಗೆ ಮತ್ತೆ ಅಧ್ಯಕ್ಷ ಸ್ಥಾನ ಸಿಗುವುದಿಲ್ಲ. ಆದರೆ ಹೈಕಮಾಂಡ್ ಮುಂದುವರಿಸಿದರೆ ಆಗಲಿ. ಪಕ್ಷದ ನಿರ್ಣಯ ನಾನು ಸ್ವಾಗತ ಮಾಡುತ್ತೇನೆ‌. ನೀನು ಅಧ್ಯಕ್ಷ ಸ್ಥಾನ ಬಿಟ್ಟು ಬೇರೆಯವರಿಗೆ ಅವಕಾಶ ಕೊಡು. ಸಣ್ಣ ಹುಡುಗ ಇದ್ದೀಯಾ, ನಿನಗೆ ಏನು ಮಾತಾಡಬೇಕು ಗೊತ್ತಾಗಲ್ಲ. ಗೂಂಡಾಗಿರಿ ಮಾಡೋ ಮಾತಾಡುವುದನ್ನು ಬಿಡು. ಪಕ್ಷ ಎಂದು ಬಂದಾಗ ಒಂದಾಗಿ ಭಿನ್ನಾಭಿಪ್ರಾಯ ಬದಿಗೊತ್ತಿ ಪಕ್ಷ ಸಂಘಟನೆ ಮಾಡುತ್ತೇವೆ. 2028ಕ್ಕೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಜಾತಿ ಆಧಾರದ ಮೇಲೆ ನಾನು ರಾಜಕಾರಣ ಮಾಡಿಲ್ಲ. ಕ್ಷೇತ್ರದ ಜನರಿಗೆ ನನ್ನಿಂದ ಏನಾದರೂ ತಪ್ಪಾದರೆ ಯಾರಿಗಾದರೂ ಏನಾದರೂ ಎಂದಿದ್ದರೆ ಕ್ಷಮಿಸಿ ಎಂದು ಮಾಜಿ ಸಚಿವ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Narendra Modi : ಪ್ರಧಾನಿ ನರೇಂದ್ರ ಮೋದಿ ಯೂಟ್ಯೂಬ್‌ನಿಂದ ಪ್ರತೀ ತಿಂಗಳು ಗಳಿಸುವ ಆದಾಯವೆಷ್ಟು? ಕೇಳಿದ್ರೆ ಶಾಕ್‌ ಆಗ್ತೀರಾ!