Ranji Trophy: ರಿಷಭ್ ಪಂತ್ ವಿಕೆಟ್ ಕಿತ್ತ ಧರ್ಮೇಂದ್ರ ಸಿನ್ಹ ಜಡೇಜಾ ಯಾರು?
ಪ್ರಸ್ತುತ ಭಾರತ ಟೆಸ್ಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ಗಳು ರಣಜಿ ಟ್ರೋಫಿ ಟೂರ್ನಿಯಲ್ಲಿ ತಮ್ಮ -ತಮ್ಮ ರಾಜ್ಯ ತಂಡಗಳ ಪರ ಆಡುತ್ತಿದ್ದಾರೆ. ಅದರಂತೆ ದಿಲ್ಲಿ ತಂಡದ ಪರ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಆಡುತ್ತಿದ್ದಾರೆ. ಗುರುವಾರ ಸೌರಾಷ್ಟ್ರ ವಿರುದ್ದ ಆರಂಭವಾದ ಪಂದ್ಯದಲ್ಲಿ ರಿಷಭ್ ಪಂತ್ ಅವರನ್ನು ಧರ್ಮೇಂದ್ರ ಸಿನ್ಹ ಜಡೇಜಾ ಔಟ್ ಮಾಡಿದ್ದಾರೆ.
ರಾಜ್‌ಕೋಟ್: ಗುರುವಾರದಿಂದ ಆರಂಭವಾದ ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ದಿಲ್ಲಿ ಮತ್ತು ಸೌರಾಷ್ಟ್ರ ತಂಡಗಳು ಕಾದಾಟ ನಡೆಸುತ್ತಿವೆ. ಭಾರತ ತಂಡದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಕೂಡ ಈ ಪಂದ್ಯದಲ್ಲಿ ದಿಲ್ಲಿ ಪರ ಆಡುತ್ತಿದ್ದಾರೆ. ಪಂತ್ ಕೊನೆಯ ಬಾರಿ 2017 ರಲ್ಲಿ ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದರು. ಅಂದಹಾಗೆ ರಣಜಿ ಟ್ರೋಫಿಯಲ್ಲಿನ ಅವರ ಕಮ್‌ಬ್ಯಾಕ್ ಉತ್ತಮವಾಗಿಲ್ಲ. ಪ್ರಥಮ ಇನಿಂಗ್ಸ್‌ನಲ್ಲಿ ಅವರು ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದಾರೆ.
10 ಎಸೆತಗಳನ್ನು ಆಡಿದ ರಿಷಭ್ ಪಂತ್ ಕೇವಲ ಒಂದು ರನ್ ಗಳಿಸಿ ಔಟಾದರು. ಧರ್ಮೇಂದ್ರ ಸಿನ್ಹ ಜಡೇಜಾ ಬೌಲಿಂಗ್‌ನಲ್ಲಿ ರಿಷಭ್ ಪಂತ್ ಪ್ರೇರಕ್ ಮಂಕಡ್‌ಗೆ ಕ್ಯಾಚಿತ್ತು ಔಟಾದರು. ಪ್ರಥಮ ಇನಿಂಗ್ಸ್‌ನಲ್ಲಿ ಧರ್ಮೇಂದ್ರ ಸಿಂಗ್ ಜಡೇಜಾ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿ 19 ಓವರ್‌ಗಳಲ್ಲಿ 63 ರನ್ ನೀಡಿ 3 ವಿಕೆಟ್ ಪಡೆದರು. ಪಂತ್ ಹೊರತಾಗಿ, ಅವರು ಸುಮಿತ್ ಮಾಥುರ್ ಮತ್ತು ಶಿವಂ ಶರ್ಮಾ ಅವರನ್ನು ಔಟ್ ಮಾಡಿದರು.
Ranji Trophy: ರಣಜಿಯಲ್ಲೂ ರೋಹಿತ್, ಜೈಸ್ವಾಲ್, ಗಿಲ್ ವಿಫಲ
ಧರ್ಮೇಂದ್ರ ಸಿನ್ಹ್ ಜಡೇಜಾ ಯಾರು?
34ರ ವಯಸ್ಸಿನ ಧರ್ಮೇಂದ್ರ ಸಿನ್ಹ್ ಜಡೇಜಾ ಅನುಭವಿ ಎಡಗೈ ಸ್ಪಿನ್ನರ್ ಆಗಿದ್ದು, ಅವರು ಸೌರಾಷ್ಟ್ರ ಪರ ದೇಶೀಯ ಕ್ರಿಕೆಟ್ ಆಡುತ್ತಾರೆ. ಧರ್ಮೇಂದ್ರ ಇದುವರೆಗೆ 90 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 375 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ ಜಡೇಜಾ 82 ಲಿಸ್ಟ್ ಎ ಪಂದ್ಯಗಳಲ್ಲಿ 118 ವಿಕೆಟ್ ಪಡೆದಿದ್ದಾರೆ. ಟಿ20ಯಲ್ಲೂ ಅವರ ಎಕಾನಮಿ ಅದ್ಭುತವಾಗಿದೆ. ಧರ್ಮೇಂದ್ರ ಅವರು 69 ಟಿ20 ಪಂದ್ಯಗಳಲ್ಲಿ 6.91 ಎಕಾನಮಿಯಲ್ಲಿ ಬೌಲ್ ಮಾಡಿ 61 ವಿಕೆಟ್ ಪಡೆದಿದ್ದಾರೆ.
Ranji Trophy: ಕರ್ನಾಟಕದ ಬೌಲಿಂಗ್ ದಾಳಿಗೆ ತತ್ತರಿಸಿದ ಪಂಜಾಬ್; 55 ರನ್‌ಗೆ ಆಲೌಟ್
ದಿಲ್ಲಿ vs ಸೌರಾಷ್ಟ್ರ ನಡುವಣ ಪಂದ್ಯ
ದಿಲ್ಲಿ ತಂಡದ ನಾಯಕ ಆಯುಷ್ ಬದೋನಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಿರ್ಧರಿಸಿದರು. ಆದರೆ, ದಿಲ್ಲಿಯ ಬ್ಯಾಟಿಂಗ್ ಅಷ್ಟೊಂದು ವಿಶೇಷವಾಗಿರಲಿಲ್ಲ. ಸೌರಾಷ್ಟ್ರ, ದಿಲ್ಲಿ ತಂಡವನ್ನು 49.4 ಓವರ್‌ಗಳಲ್ಲಿ 188 ರನ್‌ಗಳಿಗೆ ಆಲೌಟ್ ಮಾಡಿತು. ದಿಲ್ಲಿ ಪರ ಆಯುಷ್ ಬದೋನಿ ಗರಿಷ್ಠ 60 ರನ್ ಗಳಿಸಿದರು. ಅವರು ತಮ್ಮ ಇನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಇದಲ್ಲದೇ ಮಯಾಂಕ್ ಜಿತೇಂದ್ರ ಗುಸೇನ್ 38 ರನ್ ಗಳಿಸಿದರು. ರವೀಂದ್ರ ಜಡೇಜಾ ಸೌರಾಷ್ಟ್ರ ಪರ 5 ವಿಕೆಟ್ ಸಾಧನೆ ಮಾಡಿದರು. ಆದರೆ ಧರ್ಮೇಂದ್ರ 3 ವಿಕೆಟ್ ಪಡೆದರು. ಜಯದೇವ್ ಉನದ್ಕಟ್ ಮತ್ತು ಯುವಸಿಂಗ್ ದೋಧಿಯಾ ತಲಾ ಒಂದೊಂದು ವಿಕೆಟ್ ಪಡೆದರು.
Ranji Trophy: ಡೆಲ್ಲಿ ವಿರುದ್ಧ 5 ವಿಕೆಟ್ ಕಿತ್ತ ರವೀಂದ್ರ ಜಡೇಜಾ
ಮೊದಲ ದಿನದಾಟದ ಅಂತ್ಯಕ್ಕೆ ಸೌರಾಷ್ಟ್ರ 5 ವಿಕೆಟ್‌ಗೆ 163 ರನ್ ಗಳಿಸಿದೆ. ಸೌರಾಷ್ಟ್ರ ಪರ ಹಾರ್ವಿಕ್ ದೇಸಾಯಿ 93 ರನ್ ಗಳಿಸಿದರು. ರವೀಂದ್ರ ಜಡೇಜಾ 38 ರನ್ ಗಳಿಸಿ ಔಟಾದರು. ಡೆದಿಲ್ಲಿ ಪರ ಶಿವಂ ಶರ್ಮಾ 2 ವಿಕೆಟ್ ಪಡೆದರು. ಹರ್ಷ್ ತ್ಯಾಗಿ, ಆಯುಷ್ ಬದೋನಿ ಮತ್ತು ಅರ್ಪಿತ್ ರಾಣಾ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ. ಸದ್ಯ ಸೌರಾಷ್ಟ್ರ 25 ರನ್‌ಗಳಿಂದ ಮುಂದಿದೆ.