#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Ranji Trophy: ಕರ್ನಾಟಕದ ಬೌಲಿಂಗ್‌ ದಾಳಿಗೆ ತತ್ತರಿಸಿದ ಪಂಜಾಬ್‌; 55 ರನ್‌ಗೆ ಆಲೌಟ್‌

Ranji Trophy: ಕರ್ನಾಟಕ ಪರ ಉತ್ತಮ ದಾಳಿ ಸಂಘಟಿಸಿದ ವಿ. ಕೌಶಿಕ್‌ 11 ಓವರ್‌ ಬೌಲಿಂಗ್‌ ನಡೆಸಿ 4 ಮೇಡನ್‌ ಸಹಿತ 16 ರನ್‌ಗೆ 4 ವಿಕೆಟ್‌ ಕಿತ್ತರು.

Ranji Trophy: ಕರ್ನಾಟಕದ ಬೌಲಿಂಗ್‌ ದಾಳಿಗೆ ತತ್ತರಿಸಿದ ಪಂಜಾಬ್‌; 55 ರನ್‌ಗೆ ಆಲೌಟ್‌

V Koushik

Profile Abhilash BC Jan 23, 2025 2:57 PM

ಬೆಂಗಳೂರು: ವಿ. ಕೌಶಿಕ್‌ ಮತ್ತು ಅಭಿಲಾಷ್‌ ಶೆಟ್ಟಿಯ ಕರಾರುವಾಕ್‌ ಬೌಲಿಂಗ್‌ ದಾಳಿಗೆ ತತ್ತರಿಸಿದ ಪಂಜಾಬ್‌ ತಂಡ ಗುರುವಾರ ಆರಂಭಗೊಂಡ ರಣಜಿ(Ranji Trophy) ಟೂರ್ನಿಯ ಪಂದ್ಯದಲ್ಲಿ ಕೇವಲ 55 ರನ್‌ಗೆ ಸರ್ವಪತನ ಕಂಡಿದೆ. ಮೊದಲ ಇನಿಂಗ್ಸ್‌ ಆರಂಭಿಸಿದ ಕರ್ನಾಟಕ ಮುನ್ನಡೆ ಸಾಧಿಸಿ ಬ್ಯಾಟಿಂಗ್‌ ನಡೆಸುತ್ತೀದೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಕರ್ನಾಟಕ ತಂಡ ತನ್ನ ಆಯ್ಕೆಗೆ ತಕ್ಕ ಪ್ರದರ್ಶನ ತೋರುವ ಮೂಲಕ ಪಂಜಾಬ್‌ ತಂಡವನ್ನು 29 ಓವರ್‌ಗಳಲ್ಲಿ 55 ರನ್‌ಗೆ ಆಲೌಟ್‌ ಮಾಡಿತು.

ಕರ್ನಾಟಕ ಪರ ಉತ್ತಮ ದಾಳಿ ಸಂಘಟಿಸಿದ ವಿ. ಕೌಶಿಕ್‌ 11 ಓವರ್‌ ಬೌಲಿಂಗ್‌ ನಡೆಸಿ 4 ಮೇಡನ್‌ ಸಹಿತ 16 ರನ್‌ಗೆ 4 ವಿಕೆಟ್‌ ಕಿತ್ತರು. ಇವರಿಗೆ ಉತ್ತಮ ಸಾಥ್‌ ನೀಡಿದ ಅಭಿಲಾಷ್‌ ಶೆಟ್ಟಿ 19 ರನ್‌ಗೆ 3, ಅನುಭವಿ ಪ್ರಸಿದ್ಧ್‌ ಕೃಷ್ಣ 11 ಕ್ಕೆ 2 ವಿಕೆಟ್‌ ಉರುಳಿಸಿದರು. ನಾಯಕ ಶುಭಮನ್‌ ಗಿಲ್‌(4) ರನ್‌ ಗಳಿಸಿ ಮತ್ತೆ ವಿಫಲವಾದರು.

ಇದನ್ನೂ ಓದಿ Ranji Trophy: ರಣಜಿಯಲ್ಲೂ ರೋಹಿತ್‌, ಜೈಸ್ವಾಲ್‌, ಗಿಲ್‌ ವಿಫಲ

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯಲ್ಲೂ ಸಂಪೂರ್ಣ ವೈಫಲ್ಯ ಕಂಡಿದ್ದರು. ಇದೀಗ ದೇಶೀಯ ಟೂರ್ನಿಯಲ್ಲಿ ವಿಫಲವಾಗಿದ್ದಾರೆ. ಗಿಲ್‌ ಮಾತ್ರವಲ್ಲದೆ ರೋಹಿತ್‌ ಶರ್ಮ, ರಿಷಭ್‌ ಪಂತ್‌ ಮತ್ತು ಯಶಸ್ವಿ ಜೈಸ್ವಾಲ್‌ ಕೂಡ ಒಂದಂಕಿಗೆ ಸೀಮಿತರಾದರು.

ಪಂಜಾಬ್‌ ಪರ ರಮಣದೀಪ್‌ ಸಿಂಗ್‌, 16, ಮಯಾಂಕ್‌ ಮಾರ್ಕಂಡೆ 12 ರನ್‌ ಬಾರಿಸಿದರು. ಉಭಯ ಆಟಗಾರರನ್ನು ಒರತುಪಡಿಸಿ ಉಳಿದ ಎಲ್ಲ ಬ್ಯಾಟರ್‌ಗಳು ಒಂದಂಕಿಗೆ ಸೀಮಿತರಾದರು.