Ranji Trophy: ಡೆಲ್ಲಿ ವಿರುದ್ಧ 5 ವಿಕೆಟ್ ಕಿತ್ತ ರವೀಂದ್ರ ಜಡೇಜಾ
Ranji Trophy: ಮೊದಲ ಇನಿಂಗ್ಸ್ ಆರಂಭಿಸಿರುವ ಸೌರಾಷ್ಟ್ರ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 163 ರನ್ ಬಾರಿಸಿ ಇನ್ನೂ 25 ರನ್ ಹಿನ್ನಡೆಯಲ್ಲಿದೆ. ಬ್ಯಾಟಿಂಗ್‌ನಲ್ಲಿಯೂ ಮಿಂಚಿದ ಜಡೇಜಾ 38ರನ್ ಬಾರಿಸಿದರು.
ರಾಜ್‌ಕೋಟ್: ಒಂದೆಡೆ ಭಾರತ ತಂಡದ ಅನುಭವಿ ಆಟಗಾರರಾದ ರೋಹಿತ್ ಶರ್ಮ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ರಣಜಿ ಟ್ರೋಫಿಯ(Ranji Trophy) ಪಂದ್ಯದಲ್ಲಿ ವೈಫಲ್ಯ ಕಂಡ ಮಧ್ಯೆಯೂ ಆಲ್‌ರೌಂಡರ್ ರವೀಂದ್ರ ಜಡೇಜಾ(Ravindra Jadeja) 5 ವಿಕೆಟ್ ಗೊಂಚಲು ಪಡೆದು ಮಿಂಚಿದ್ದಾರೆ.
ತವರಿನ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್‌ನಲ್ಲಿ ಭಾರತ ತಂಡ ಅತ್ಯಂತ ಕಳಪೆ ಆಟವಾಡಿತ್ತು. ಹೀಗಾಗಿ ಬಿಸಿಸಿಐ ರಾಷ್ಟ್ರೀಯ ತಂಡದ ಆಟಗಾರರಿಗೆ ದೇಶೀಯ ಕ್ರಿಕೆಟ್ ಆಡುವಂತೆ ಕಡ್ಡಾಯ ನಿಯಮ ಜಾರಿಗೆ ತಂದಿತ್ತು. ಹೀಗಾಗಿ ರೋಹಿತ್, ಪಂತ್, ಗಿಲ್ ಮತ್ತು ಜಡೇಜಾ ದೇಶೀಯ ಕ್ರಿಕೆಟ್‌ಗೆ ಮರಳಿದ್ದರು. ಆದರೆ ಈ ಪೈಕಿ ಜಡೇಜಾ ಮಾತ್ರ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಬೊಂಬಾಟ್ ಪ್ರದರ್ಶನ ತೋರುವ ಮೂಲಕ ಗಮನಸೆಳೆದರು.
ಗುರುವಾರ ಆರಂಭಗೊಂಡ ರಣಜಿ ಟೂರ್ನಿಯ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸೌರಾಷ್ಟ ಪರ ಡೆಲ್ಲಿ ವಿರುದ್ಧ ಆಡಲಿದ ಜಡೇಜಾ ತಮ್ಮ ಸ್ಪಿನ್ ಕೈಚಳಕದ ಮೂಲಕ 17.4 ಓವರ್ ಬೌಲಿಂಗ್ ನಡೆಸಿ 66 ರನ್‌ಗೆ 5 ವಿಕೆಟ್ ಕಡವಿದರು. ಡೆಲ್ಲಿ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೇವಲ 188 ರನ್‌ಗೆ ಸರ್ವಪತನ ಕಂಡಿತು. ಪಂದ್ಯದ ಕೇಂದ್ರ ಬಿಂದು ಎನಿಸಿದ್ದ ರಿಷಭ್ ಪಂತ್ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
5 WICKET HAUL FOR RAVINDRA JADEJA..!!!! ⭐
— Samar (@SamarPa71046193) January 23, 2025
He picked 5 wicket haul against Delhi in this Ranji Trophy today. His bowling figure (66/5) for Saurashtra.
- SIR JADEJA, ONE OF THE GREATEST EVER. 🐐 pic.twitter.com/irrNGHhL5V
ಡೆಲ್ಲಿ ಪರ ನಾಯಕನ ಆಟವಾಡಿದ ಆಯುಷ್ ಬದೋನಿ(60) ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ಉಳಿದಂತೆ ಯಶ್ ದುಲ್(44) ಮತ್ತು ಮಯಾಂಕ್ ಗುಸೇನ್(38) ರನ್ ಕೊಡುಗೆ ಸಲ್ಲಿಸಿದರು. ಸೌರಾಷ್ಟ್ರ ಪರ ರವೀಂದ್ರ ಜಡೇಜಾ ಹೊರತುಪಡಿಸಿ ಮತೋರ್ವ ಧರ್ಮೇಂದ್ರ ಸಿಂಗ್ ಜಡೇಜಾ(3) ವಿಕೆಟ್ ಕಿತ್ತರು.
ಇದನ್ನೂ ಓದಿ Ranji Trophy: ರಣಜಿಯಲ್ಲೂ ರೋಹಿತ್, ಜೈಸ್ವಾಲ್, ಗಿಲ್ ವಿಫಲ
ಮೊದಲ ಇನಿಂಗ್ಸ್ ಆರಂಭಿಸಿರುವ ಸೌರಾಷ್ಟ್ರ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 163 ರನ್ ಬಾರಿಸಿ ಇನ್ನೂ 25 ರನ್ ಹಿನ್ನಡೆಯಲ್ಲಿದೆ. ಬ್ಯಾಟಿಂಗ್‌ನಲ್ಲಿಯೂ ಮಿಂಚಿದ ಜಡೇಜಾ 38ರನ್ ಬಾರಿಸಿದರು.