ಮುಂಬೈ: ಜಿಯೋಭಾರತ್ ಸಾಧನದಲ್ಲಿ (Reliance Jio) ಕ್ರಾಂತಿಕಾರಿಯಾದ ಹೊಸ ವೈಶಿಷ್ಟ್ಯವನ್ನು ಘೋಷಿಸಲಾಗಿದ್ದು, ಇದು ಮತ್ತೊಮ್ಮೆ ಪ್ರತಿ ಭಾರತೀಯರನ್ನೂ ಸಬಲಗೊಳಿಸುವ ಜಿಯೋದ ಬದ್ಧತೆಯನ್ನು ಒತ್ತಿಹೇಳುವಂಥ ದಿಟ್ಟ ಕ್ರಮ ಇದಾಗಿದೆ. ಇನ್ನು ಮುಂದೆ ದೇಶಾದ್ಯಂತ ಇರುವ 5 ಕೋಟಿ ಸಣ್ಣ ಪ್ರಮಾಣದ ವ್ಯಾಪಾರಿಗಳಿಗೆ ಮೀಸಲಾಗಿರುವಂಥ ಉಚಿತ ಹಾಗೂ ದೂರಸಂಪರ್ಕ ಮಾಧ್ಯಮದಲ್ಲಿಯೇ ಇದೇ ಮೊದಲ ಬಾರಿಗೆ ಎಂಬಂತೆ ಜಿಯೋಸೌಂಡ್‌ಪೇ ಎಂಬುದನ್ನು ಪರಿಚಯಿಸಲಾಗುತ್ತಿದೆ.
ಈ ಆವಿಷ್ಕಾರ ಜಿಯೋಸೌಂಡ್‌ಪೇ ಪ್ರತಿ ಯುಪಿಐ ಪಾವತಿಗೆ ಶೀಘ್ರವಾಗಿ ಹಾಗೂ ಬಹುಭಾಷಾ ಧ್ವನಿಯ ದೃಢೀಕರಣವನ್ನು ಒದಗಿಸುವ ಮೂಲಕ ವ್ಯಾಪಾರದಲ್ಲಿ ಹೊಸ ಅನುಭವವನ್ನು ದೊರಕಿಸುತ್ತದೆ. ಅಂದ ಹಾಗೆ ಇದು ಚಿಕ್ಕ ಕಿರಾಣಿ ಅಂಗಡಿಗಳು, ತರಕಾರಿ ಮಾರಾಟಗಾರರು ಮತ್ತು ರಸ್ತೆಬದಿಯ ತಿನಿಸು ಮಾರಾಟಗಳಲ್ಲಿಯೂ ಅಡೆತಡೆ ಇಲ್ಲದೆ ಮತ್ತು ಪರಿಣಾಮಕಾರಿಯಾ ವ್ಯಾಪಾರ ಚಟುವಟಿಕೆಗಳನ್ನು ಸುಲಭಗೊಳಿಸುತ್ತದೆ.
ಈಗಾಗಲೇ ಇರುವ ಸಣ್ಣ ಮತ್ತು ಕಿರು ಪ್ರಮಾಣದ ವ್ಯಾಪಾರಿಗಳು ಈ ಸೌಂಡ್ ಬಾಕ್ಸ್‌ಗಾಗಿ ತಿಂಗಳಿಗೆ ಸುಮಾರು 125 ರೂಪಾಯಿ ಪಾವತಿಸುತ್ತಾರೆ. ಈಗ, ಜಿಯೋಸೌಂಡ್‌ಪೇ ಅನ್ನು ಉಚಿತವಾಗಿ ನೀಡುವುದರಿಂದ, ಜಿಯೋಭಾರತ್ ಬಳಕೆದಾರರು ವಾರ್ಷಿಕವಾಗಿ 1,500 ರೂಪಾಯಿಗಳನ್ನು ಉಳಿಸುತ್ತಾರೆ.
ಒಂದು ವರ್ಷದ ಹಿಂದೆ ಬಿಡುಗಡೆಯಾದ ಜಿಯೋಭಾರತ್ ಫೋನ್ ಕೇವಲ 699 ರೂಪಾಯಿಗಳಿಗೆ ಲಭ್ಯವಿರುವ ವಿಶ್ವದ ಅತ್ಯಂತ ಕೈಗೆಟುಕುವ 4ಜಿ ಫೋನ್ ಆಗಿದೆ. ಆ ಮೂಲಕ, ಹೊಸ ಜಿಯೋಭಾರತ್ ಫೋನ್ ಖರೀದಿಸುವ ಯಾವುದೇ ವ್ಯಾಪಾರಿ ಕೇವಲ 6 ತಿಂಗಳಲ್ಲಿ ಫೋನ್‌ನ ಸಂಪೂರ್ಣ ಬೆಲೆಯನ್ನು ಮರುಪಡೆದಂತೆ ಆಗುತ್ತದೆ.
ಡಿಜಿಟಲ್ ಇಂಡಿಯಾ ಮತ್ತು ಭಾರತವನ್ನು ಡಿಜಿಟಲ್ ಸಮುದಾಯವಾಗಿ ಪರಿವರ್ತಿಸುವ ಜಿಯೋದ ಗಟ್ಟಿಯಾದ ಆಲೋಚನೆಗೆ ಸಾಕ್ಷಿಯಾಗಿ ಈ ಉಪಕ್ರಮವು, ತಂತ್ರಜ್ಞಾನದ ಉಪಯೋಗವನ್ನು ದೇಶದ ಎಲ್ಲರಿಗೂ ಅದರಲ್ಲೂ ನಿತ್ಯ ದುಡಿಮೆಗಾಗಿ ಸಣ್ಣ- ಕಿರು ಉದ್ಯಮದ ಮೇಲೆ ಅವಲಂಬಿತರಾಗಿರುವ ಉದ್ಯಮಿಗಳನ್ನು ತಲುಪುವುದನ್ನು ಖಚಿತಪಡಿಸುತ್ತದೆ.
ಭಾರತದ ಗಣರಾಜ್ಯೋತ್ಸವದ 75 ವರ್ಷಗಳನ್ನು ಸ್ಮರಿಸುವ ಸಂದರ್ಭದಲ್ಲಿ ಜಿಯೋ ಜಿಯೋಸೌಂಡ್‌ಪೇನಲ್ಲಿ ವಂದೇ ಮಾತರಂನ ಪ್ರಸ್ತುತಪಡಿಸುತ್ತದೆ - ಇದು ಆಧುನಿಕ ಸಂಗೀತದೊಂದಿಗೆ ಕಾಲಾತೀತ ಮಾಧುರ್ಯ ಬೆರೆಸುವ ಭಾವಪೂರ್ಣ ಗೌರವವಾಗಿದೆ. ಮೈಜಿಯೋ ಅಪ್ಲಿಕೇಷನ್ ಅಥವಾ ಜಿಯೋಸಾವನ್ ಮೂಲಕ ತಮ್ಮ ಜಿಯೋಟ್ಯೂನ್ ಆಗಿ ಹೊಂದಿಸುವುದರೊಂದಿಗೆ ಈ ಆಧುನಿಕ ಸಂಗೀತದಲ್ಲಿರುವ ಮೇರುಕೃತಿಯನ್ನು ಅನುಭವಕ್ಕೆ ಪಡೆಯಲು ಜಿಯೋ ಎಲ್ಲಾ ಭಾರತೀಯರನ್ನು ಆಹ್ವಾನಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Job Guide: ನ್ಯಾಶನಲ್ ಅಲ್ಯುಮಿನಿಯಂ ಕಂಪೆನಿ ಲಿಮಿಟೆಡ್‌ನಲ್ಲಿದೆ 518 ಹುದ್ದೆ; ಹೀಗೆ ಅಪ್ಲೈ ಮಾಡಿ
ʼಪ್ರತಿ ಭಾರತೀಯರನ್ನು ಸಬಲಗೊಳಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಜಿಯೋ ನಂಬಿಕೆ ಇಡುತ್ತದೆʼ ಎಂದು ಜಿಯೋ ಅಧ್ಯಕ್ಷ ಸುನೀಲ್ ದತ್ ಹೇಳಿದ್ದಾರೆ. ʼಜಿಯೋಭಾರತ್‌ನಲ್ಲಿ ಉಚಿತ ಜಿಯೋಸೌಂಡ್‌ಪೇ ವೈಶಿಷ್ಟ್ಯ ಮತ್ತು ವಂದೇ ಮಾತರಂನ ಭಾವಪೂರ್ಣ ಪ್ರಸ್ತುತಿಯ ಜತೆಗೆ ನಾವು ಭಾರತದ ಸ್ಫೂರ್ತಿಯನ್ನು ಆಚರಿಸುತ್ತೇವೆ ಮತ್ತು ನಿಜವಾದ ಡಿಜಿಟಲ್ ಇಂಡಿಯಾವನ್ನು ರೂಪಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆʼ ಎಂದು ತಿಳಿಸಿದ್ದಾರೆ.