Australian Open: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಬೋಪಣ್ಣ– ಶುವಾಯ್ ಜೋಡಿ
Australian Open: ಶನಿವಾರ ನಡೆದಿದ್ದ ಸಿಂಗಲ್ಸ್ ವಿಭಾಗದಲ್ಲಿ ಇಟಲಿಯ ಯಾನಿಕ್ ಸಿನ್ನರ್ ಮತ್ತು ಪೋಲೆಂಡ್‌ನ ಇಗಾ ಶ್ವಾಂಟೆಕ್ ಅವರು ಪ್ರಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕಿದ್ದರು.

Rohan Bopanna-Shuai Zhang

ಮೆಲ್ಬರ್ನ್: ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ಅವರ ಚೀನಾದ ಜತೆಗಾರ್ತಿ ಶುವಾಯ್ ಜಾಂಗ್ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇಂದು(ಭಾನುವಾರ) ನಡೆಯಬೇಕಿದ್ದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಬೋಪಣ್ಣ-ಶುವಾಯ್ ಜೋಡಿ ನಾಲ್ಕನೇ ಶ್ರೇಯಾಂಕದ ಅಮೆರಿಕದ ಟೇಲರ್ ಟೌನ್‌ಸೆಂಡ್ ಮತ್ತು ಮೊನಾಕೊದ ಹ್ಯೂಗೋ ನೈಸ್ ಜೋಡಿ ವಿರುದ್ಧ ಆಡಬೇಕಿತ್ತು. ಆದರೆ ಈ ಜೋಡಿ ಪಂದ್ಯದಿಂದ ಹಿಂದೆ ಸರಿದಿತು. ಹೀಗಾಗಿ ಬೋಪಣ್ಣ ಜೋಡಿಗೆ ವಾಕ್ ಓವರ್ ಲಭಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿತು.
ಪುರುಷರ ಡಬಲ್ಸ್‌ನಲ್ಲಿ ನಿರಾಸೆ ಮೂಡಿಸಿದ ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ಇದೀಗ ಮಿಶ್ರ ಡಬಲ್ಸ್‌ನಲ್ಲಿ ಪ್ರಶಸ್ತಿಯೊಂದನ್ನು ಗೆಲ್ಲುವ ಹಾದಿಯಲ್ಲಿ ಮುಂದುವರಿದಿದ್ದಾರೆ. ಬೋಪಣ್ಣ– ಶುವಾಯ್ ಜೋಡಿಯು ಮೊದಲ ಸುತ್ತಿನಲ್ಲಿ 6-4, 6-4ರಿಂದ ಇವಾನ್ ದೋಡಿಗ್ ಮತ್ತು ಕ್ರಿಸ್ಟಿನಾ ಮ್ಲಾಡೆನೊವಿಕ್ ಅವರನ್ನು ಮಣಿಸಿತ್ತು.
ಶನಿವಾರ ನಡೆದಿದ್ದ ಸಿಂಗಲ್ಸ್ ವಿಭಾಗದಲ್ಲಿ ಇಟಲಿಯ ಯಾನಿಕ್ ಸಿನ್ನರ್ ಮತ್ತು ಪೋಲೆಂಡ್‌ನ ಇಗಾ ಶ್ವಾಂಟೆಕ್ ಅವರು ಪ್ರಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕಿದರು. ಪುರುಷರ ಸಿಂಗಲ್ಸ್‌ನ ನಾಲ್ಕನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ಮತ್ತು ಮಹಿಳೆಯರ ಸಿಂಗಲ್ಸ್‌ನ ನಾಲ್ಕನೇ ಶ್ರೇಯಾಂಕಿತೆ ಜಾಸ್ಮಿನ್ ಪಾವ್ಲೀನಿ ಮೂರನೇ ಸುತ್ತಿನಲ್ಲೇ ಹೊರಬಿದ್ದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಹ್ಯಾಟ್ರಿಕ್ ಕಿರೀಟದ ಮೇಲೆ ಕಣ್ಣಿಟ್ಟಿರುವ ಬೆಲಾರಸ್‌ನ ಅರಿನಾ ಸಬಲೆಂಕಾ, ಅಮೆರಿಕದ ಕೊಕೊ ಗಾಫ್ ಅವರೂ 16ರ ಘಟ್ಟಕ್ಕೆ ಮುನ್ನಡೆದರು. ಆದರೆ, ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಪ್ರಯತ್ನದಲ್ಲಿದ್ದ ಜಪಾನ್‌ನ ನವೋಮಿ ಒಸಾಕಾ ಗಾಯಾಳಾಗಿ ಮೂರನೇ ಸುತ್ತಿನಲ್ಲೇ ಅಭಿಯಾನ ಮುಗಿಸಿದರು.