ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

ನಾಯಕನಾಗಿ ಧೋನಿ, ಕೊಹ್ಲಿಯಿಂದ ಸಾಧ್ಯವಾಗದ ದೊಡ್ಡ ದಾಖಲೆ ಬರೆದ ರೋಹಿತ್‌ ಶರ್ಮಾ!

Rohit Sharma Creates history as a Captain: ಆಸ್ಟ್ರೇಲಿಯಾ ವಿರುದ್ಧ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ 4 ವಿಕೆಟ್‌ ಗೆಲುವು ಪಡೆಯುವ ಮೂಲಕ ಭಾರತ ತಂಡ ಫೈನಲ್‌ಗೆ ಪ್ರವೇಶ ಮಾಡಿದೆ. ಆ ಮೂಲಕ ನಾಯಕನಾಗಿ ರೋಹಿತ್‌ ಶರ್ಮಾ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ತಲುಪಿ ಇತಿಹಾಸ ನಿರ್ಮಿಸಿದ ರೋಹಿತ್‌ ಶರ್ಮಾ!

ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ತಲುಪುವ ಮೂಲಕ ಇತಿಹಾಸ ಬರೆದ ರೋಹಿತ್‌ ಶರ್ಮಾ.

Profile Ramesh Kote Mar 4, 2025 11:40 PM

ದುಬೈ: ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ ಪಂದ್ಯದಲ್ಲಿ 4 ವಿಕೆಟ್‌ ಗೆಲುವು ಪಡೆಯುವ ಮೂಲಕ ಭಾರತ ತಂಡ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿದೆ. ಆ ಮೂಲಕ ನಾಯಕನಾಗಿ ರೋಹಿತ್‌ ಶರ್ಮಾ ಅಪರೂಪದ ದಾಖಲೆಯನ್ನು ಬರೆದಿದ್ದಾರೆ. ಐಸಿಸಿಯ ಎಲ್ಲಾ ನಾಲ್ಕೂ ಟೂರ್ನಿಗಳ ಫೈನಲ್‌ಗೆ ತಮ್ಮ ತಂಡವನ್ನು ಪ್ರವೇಶ ಮಾಡಿಸಿದ ವಿಶ್ವದ ಮೊದಲ ನಾಯಕ ಎಂಬ ಇತಿಹಾಸವನ್ನು ರೋಹಿತ್‌ ಶರ್ಮಾ ನಿರ್ಮಿಸಿದ್ದಾರೆ.

ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ, 2023ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಪೈನಲ್‌, 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌, 2024ರ ಐಸಿಸಿ ಟಿ20ಐ ವಿಶ್ವಕಪ್‌ ಫೈನಲ್‌, ಇದೀಗ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ಗೆ ಪ್ರವೇಶ ಮಾಡಿದೆ. ಇಡೀ ವಿಶ್ವದಲ್ಲಿಯೇ ಈ ರೀತಯ ಅಪರೂಪದ ದಾಖಲೆ ಬರೆದ ಮೊದಲ ನಾಯಕ ಎಂಬ ಕೀರ್ತಿಗೆ ರೋಹಿತ್‌ ಶರ್ಮಾ ಭಾಜನರಾಗಿದ್ದಾರೆ.

IND vs AUS: ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿ ಫೈನಲ್‌ ಪ್ರವೇಶಿಸಿದ ಟೀಮ್‌ ಇಂಡಿಯಾ!

ಎಂಎಸ್‌ ಧೋನಿಯ ನಾಯಕತ್ವದ ಸಾಧನೆ

ಎಂಎಸ್‌ ಧೋನಿ ನಾಯಕತ್ವದಲ್ಲಿ ಭಾರತ ತಂಡ, 2007ರ ಐಸಿಸಿ ಟಿ20 ವಿಶ್ವಕಪ್‌ ಫೈನಲ್‌, 2011ರ ಐಸಿಸಿ ಏಕದಿನ ವಿಶ್ವಕಪ್‌ ಪೈನಲ್‌ ಹಾಗೂ 2013ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪ್ರವೇಶ ಮಾಡಿತ್ತು. ಈ ಮೂರೂ ಟೂರ್ನಿಗಳಲ್ಲಿ ಭಾರತ ತಂಡ ಚಾಂಪಿಯನ್‌ ಆಗಿತ್ತು. ಆದರೆ, ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಎಂಎಸ್‌ ಧೋನಿ ನಾಯಕತ್ವದ ಅವಧಿಯಲ್ಲಿ ಇರಲಿಲ್ಲ.



ಕೇನ್‌ ವಿಲಿಯಮ್ಸನ್‌ ಅವಧಿಯಲ್ಲಿನ ಸಾಧನೆ

ನ್ಯೂಜಿಲೆಂಡ್‌ ತಂಡದ ಕೇನ್‌ ವಿಲಿಯಮ್ಸನ್‌ ನಾಯಕತ್ವದಲ್ಲಿ ನ್ಯೂಜಿಲೆಂಡ್‌ ತಂಡ, 2019ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌, 2021ರ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಹಾಗೂ 2021ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶ ಮಾಡಿದೆ. ಆದರೆ, ಇಲ್ಲಿಯವರೆಗೂ ವಿಲಿಯಮ್ಸನ್‌ ನಾಯಕತ್ವದಲ್ಲಿ ಕಿವೀಸ್‌ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ಗೆ ಪ್ರವೇಶ ಮಾಡಿಲ್ಲ.



ಎರಡನೇ ಐಸಿಸಿ ಟ್ರೋಫಿ ಮೇಲೆ ರೋಹಿತ್‌ ಶರ್ಮಾ ಕಣ್ಣು

ಮಾರ್ಚ್‌ 9 ರಂದು ನಡೆಯುವ ಫೈನಲ್‌ ಹಣಾಹಣಿಯನ್ನು ಗೆದ್ದು ಭಾರತ ತಂಡ ಚಾಂಪಿಯನ್ಸ್‌ ಟ್ರೋಫಿ ಗೆಲ್ಲಲು ಎದುರು ನೋಡುತ್ತಿದೆ. ಒಂದು ವೇಳೆ ಈ ಕನಸು ನನಸಾದರೆ, ನಾಯಕನಾಗಿ ರೋಹಿತ್‌ ಶರ್ಮಾ ಎರಡು ಐಸಿಸಿ ಟ್ರೋಫಿ ಗೆದ್ದಂತಾಗುತ್ತದೆ. ಈ ಹಿಂದೆ 2024ರಲ್ಲಿ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಟಿ20 ವಿಶ್ವಕಪ್‌ ಗೆದ್ದಿತ್ತು.