IND vs ENG: ತಮ್ಮ 7ನೇ ಶತಕದ ಮೂಲಕ ವಿಶೇಷ ದಾಖಲೆ ಬರೆದ ಶುಭಮನ್ ಗಿಲ್!
Shubman Gill Scored 7th ODI Hundred: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್, ಇಂಗ್ಲೆಂಡ್ ವಿರುದ್ದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕವನ್ನು ಸಿಡಿಸಿದ್ದಾರೆ. 95 ಎಸೆತಗಳಲ್ಲಿ ಶುಭಮನ್ ಗಿಲ್ ಮೂರಂಕಿ ವೈಯಕ್ತಿಕ ಮೊತ್ತವನ್ನು ದಾಖಲಿಸಿದರು. ಇದು ಗಿಲ್ ಅವರ ಏಕದಿನ ಕ್ರಿಕೆಟ್ 7ನೇ ಶತಕವಾಗಿದೆ. ಈ ಶತಕದ ಮೂಲಕ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 2500 ರನ್‌ಗಳನ್ನು ಪೂರ್ಣಗೊಳಿಸಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.
![ಏಳನೇ ಒಡಿಐ ಶತಕದೊಂದಿಗೆ ವಿಶೇಷ ದಾಖಲೆ ಬರೆದ ಶುಭಮನ್ ಗಿಲ್!](https://cdn-vishwavani-prod.hindverse.com/media/original_images/Shubman_Gill_lg9XkhW.jpg)
Shubman Gill Scored Century
![Profile](https://vishwavani.news/static/img/user.png)
ಅಹಮಾದಾಬಾದ್: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದಾರೆ. ಇದು ಯುವ ಬ್ಯಾಟ್ಸ್‌ಮನ್ ಪಾಲಿಗೆ 7ನೇ ಏಕದಿನ ಕ್ರಿಕೆಟ್ ಶತಕವಾಗಿದೆ. ಈ ಶತಕದ ಮೂಲಕ ಶುಭಮನ್ ಗಿಲ್ 2500 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ.
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡದ ಪರ ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸಿದ್ದರು. ತಮ್ಮ ಐಪಿಎಲ್ ತವರು ಅಂಗಣದಲ್ಲಿ ಮನಮೋಹಕ ಬ್ಯಾಟ್ ಮಾಡಿದ ಶುಭಮನ್ ಗಿಲ್, 95 ಎಸೆತಗಳಲ್ಲಿ ತಮ್ಮ ಒಡಿಐ ವೃತ್ತಿ ಜೀವನದ ಏಳನೇ ಶತಕವನ್ನು ಪೂರ್ಣಗೊಳಿಸಿದರು. ಅಂದ ಹಾಗೆ ಒಟ್ಟು 102 ಎಸೆತಗಳನ್ನು ಎದುರಿಸಿದ ಗಿಲ್, ಮೂರು ಸಿಕ್ಸರ್ ಹಾಗೂ 14 ಬೌಂಡರಿಗಳೊಂದಿಗೆ 112 ರನ್‌ಗಳನ್ನು ಗಳಿಸಿದರು. ಆದರೆ, ಉತ್ತಮ ಬ್ಯಾಟ್ ಮಾಡುತ್ತಿದ್ದ ಗಿಲ್, ಆದಿಲ್ ರಶೀದ್ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಕ್ಲೀನ್ ಬೌಲ್ಡ್ ಆದರು.
IND vs ENG 3rd ODI: ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್!
ನಾಯಕ ರೋಹಿತ್ ಶರ್ಮಾ ಜೊತೆ ಕ್ರೀಸ್‌ಗೆ ಬಂದಿದ್ದ ಶುಭಮನ್ ಗಿಲ್, ಇಂಗ್ಲೆಂಡ್ ಬೌಲರ್‌ಗಳು ಸುಲಲಿತವಾಗಿ ಎದುರಿಸಿದರು. ರೋಹಿತ್ ಶರ್ಮಾ ಬಹುಬೇಗ ವಿಕೆಟ್ ಒಪ್ಪಿಸಿದರೂ, ವಿಶ್ವಾಸ ಕಳೆದುಕೊಳ್ಳದ ಗಿಲ್ ಸೊಗಸಾಗಿ ಬ್ಯಾಟ್ ಮಾಡಿದರು. ವಿರಾಟ್ ಕೊಹ್ಲಿ ಜೊತೆಗೆ ಮುರಿಯದ ಎರಡನೇ ವಿಕೆಟ್‌ಗೆ 116 ರನ್‌ಗಳನ್ನು ಗಳಿಸಿದ್ದ ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಜೊತೆ ಮೂರನೇ ವಿಕೆಟ್‌ಗೆ 104 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಭಾರತ ತಂಡದ ಮೊತ್ತ 220ರ ಗಡಿ ದಾಟಿಸುವಲ್ಲಿ ಮಹತ್ತರ ಪಾತ್ರವಹಿಸಿದರು.
Jubilation as @ShubmanGill gets to a fine CENTURY!
— BCCI (@BCCI) February 12, 2025
Keep at it, young man 🙌🙌
Live - https://t.co/S88KfhFzri… #INDvENG@IDFCFIRSTBank pic.twitter.com/Xbcy6uaO6J
2500 ರನ್‌ಗಳನ್ನು ಪೂರ್ಣಗೊಳಿಸಿದ ಶುಭಮನ್ ಗಿಲ್
ತಮ್ಮ ವೃತ್ತಿ ಜೀವನದ ಏಳನೇ ಒಡಿಐ ಶತಕದ ಮೂಲಕ ಶುಭಮನ್ ಗಿಲ್, ಏಕದಿನ ಕ್ರಿಕೆಟ್‌ನಲ್ಲಿ 2500 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 2500 ರನ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಗಿಲ್ ಬರೆದಿದ್ದಾರೆ. ಆ ಮೂಲಕ ದಕ್ಷಿಣ ಆಫ್ರಿಕಾ ಮಾಜಿ ಬ್ಯಾಟ್ಸ್‌ಮನ್ ಹಾಶಿಮ್ ಆಮ್ಲಾ ದಾಖಲೆಯನ್ನು ಮುರಿದಿದ್ದಾರೆ. ಆಮ್ಲಾ ತಮ್ಮ 51 ಏಕದಿನ ಪಂದ್ಯದಲ್ಲಿ 2500 ರನ್‌ಗಳನ್ನು ಪೂರ್ಣಗೊಳಿಸಿದ್ದರು. ಆದರೆ, ಭಾರತೀಯ ಬ್ಯಾಟ್ಸ್‌ಮನ್ 50 ಪಂದ್ಯಗಳಿಂದ ಈ ಮೊತ್ತವನ್ನು ಪೂರ್ಣಗೊಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 131 ಇನಿಂಗ್ಸ್‌ಗಳಿಂದ ಗಿಲ್ 5000 ರನ್‌ಗಳನ್ನು ಕೂಡ ಪೂರ್ಣಗೊಳಿಸಿದ್ದಾರೆ.
ಒಡಿಐ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಗಿಲ್
ಆರಂಭಿಕ ಎರಡು ಪಂದ್ಯಗಳಲ್ಲಿ ಕ್ರಮವಾಗಿ 87 ಮತ್ತು 60 ರನ್‌ಗಳನ್ನು ಕಲೆ ಹಾಕಿದ್ದ ಶುಭಮನ್ ಗಿಲ್ ಐಸಿಸಿ ಏಕದಿನ ಕ್ರಿಕೆಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಆ ಮೂಲಕ ತಮ್ಮ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ.
ODI CENTURY NO.7 for @ShubmanGill 👏👏
— BCCI (@BCCI) February 12, 2025
A stroke filled innings from the vice-captain as he brings up a fine 💯
He's been in terrific form this series!#TeamIndia #INDvENG @IDFCFIRSTBank pic.twitter.com/dnJq0IaLS3
ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 2500 ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳು
50 ಇನಿಂಗ್ಸ್ - ಶುಭಮನ್ ಗಿಲ್
51 ಇನಿಂಗ್ಸ್ - ಹಾಶಿಮ್ ಆಮ್ಲಾ
52 ಇನಿಂಗ್ಸ್ - ಇಮಾಮ್-ಉಲ್-ಹಕ್
56 ಇನಿಂಗ್ಸ್ - ವಿವಿಯನ್ ರಿಚರ್ಡ್ಸ್
56 ಇನಿಂಗ್ಸ್ - ಜೊನಾಥನ್ ಟ್ರಾಟ್