ತೀರ್ಥಕ್ಷೇತ್ರಗಳಲ್ಲಿ ಸೋಪು, ಶಾಂಪೂ ಮಾರಾಟ ನಿಷೇಧ: ರಾಜ್ಯ ಸರ್ಕಾರ ಆದೇಶ
ಪುಣ್ಯಕ್ಷೇತ್ರಗಳ ನದಿ ತೀರಗಳಲ್ಲಿ ಸೋಪು ಮತ್ತು ಶಾಂಪೂ ಬಳಸಿ ಸ್ನಾನ ಮಾಡುತ್ತಿರುವುದರಿಂದ ಅಲ್ಲಿರುವ ಮೀನು, ಏಡಿ, ಆಮೆ ಮತ್ತಿತರ ಜೀವಜಾಲಕ್ಕೆ ತೊಂದರೆ ಆಗುತ್ತಿದೆ. ಕೆಲವು ಕಡೆಗಳಲ್ಲಿ ಪವಿತ್ರ ಮೀನುಗಳು ಕೂಡ ಇದ್ದು, ಅವುಗಳಿಗೂ ತೊಂದರೆ ಆಗುತ್ತಿದೆ. ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸೋಪು ಹಾಗೂ ಶಾಂಪೂ ಬಳಕೆಯನ್ನು ನಿಷೇಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು.

ಅರಣ್ಯ ಸಚಿವ ಈಶ್ವರ ಖಂಡ್ರೆ

ಬೆಂಗಳೂರು : ರಾಜ್ಯದ ಎಲ್ಲಾ ಪುಣ್ಯಕ್ಷೇತ್ರಗಳ ನದಿ ತೀರದಲ್ಲಿ ಇನ್ನು ಮುಂದೆ ಸೋಪು (Soap) ಹಾಗೂ ಶಾಂಪೂ (Shampoo) ಮಾರಾಟ ಮಾಡದಂತೆ ನಿಷೇಧಿಸಿ ಅರಣ್ಯ ಇಲಾಖೆ (Forest Department) ಈ ಕುರಿತು ಆದೇಶ ಹೊರಡಿಸಿದೆ. ಈ ಕುರಿತು ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ (Eshwar Khandre) ಅವರು ಆದೇಶ ಹೊರಡಿಸಿದ್ದಾರೆ. ಅಲ್ಲದೆ ಮಾಲಿನ್ಯಕಾರಕ ವಸ್ತುಗಳನ್ನು ನದಿಗಳಲ್ಲಿ ವಿಸರ್ಜನೆ ಮಾಡದಂತೆ ಭಕ್ತರಿಗೂ ಸೂಚನೆ ನೀಡಲಾಗಿದೆ.
ಪುಣ್ಯಕ್ಷೇತ್ರಗಳ ನದಿ ತೀರಗಳಲ್ಲಿ ಸೋಪು ಮತ್ತು ಶಾಂಪೂ ಬಳಸಿ ಸ್ನಾನ ಮಾಡುತ್ತಿರುವುದರಿಂದ ಅಲ್ಲಿರುವ ಮೀನು, ಏಡಿ, ಆಮೆ ಮತ್ತಿತರ ಜೀವಜಾಲಕ್ಕೆ ತೊಂದರೆ ಆಗುತ್ತಿದೆ. ಕೆಲವು ಕಡೆಗಳಲ್ಲಿ ಪವಿತ್ರ ಮೀನುಗಳು ಕೂಡ ಇದ್ದು, ಅವುಗಳಿಗೂ ತೊಂದರೆ ಆಗುತ್ತಿದೆ. ನದಿ ನೀರನ್ನು ದೇವರ ಅಭಿಷೇಕ ಇತ್ಯಾದಿಗಳಿಗೂ ಬಳಸಲಾಗುತ್ತಿದೆ. ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸೋಪು ಹಾಗೂ ಶಾಂಪೂ ಬಳಕೆಯನ್ನು ನಿಷೇಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಹೀಗಾಗಿ ಇನ್ನು ಮುಂದೆ ಪುಣ್ಯಕ್ಷೇತ್ರಗಳ ನದಿ ದಡದಲ್ಲಿ ಭಕ್ತರು ಯಾವುದೇ ರೀತಿಯಾಗಿ ಶಾಂಪೂ ಸೋಪು ಹಾಗೂ ಇತರೆ ಪರಿಸರ ಮಾಲಿನ್ಯಕಾರಕ ವಸ್ತುಗಳನ್ನು ಬಳಸುವಂತಿಲ್ಲ. ಇವುಗಳ ಮಾರಾಟ ನಿಷೇಧ ಮಾಡಿ ಇದೀಗ ಅರಣ್ಯ ಮತ್ತು ಪರಿಸರ ಇಲಾಖೆ ಆದೇಶ ಹೊರಡಿಸಿದೆ.
ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಖಂಡಿಸಿ ರೈಲಿನೊಳಗೇ ಪ್ರತಿಭಟನೆ
ಬೆಂಗಳೂರು: ರಾಜಧಾನಿಯಲ್ಲಿ (Bengaluru News) ನಮ್ಮ ಮೆಟ್ರೋ (Namma Metro) ಪ್ರಯಾಣ ದರವನ್ನು (Ticket Price Hike) ದುಪ್ಪಟ್ಟು ಹೆಚ್ಚಿಸಿದ ಒಂದು ತಿಂಗಳ ನಂತರವೂ ಜನರ ಆಕ್ರೋಶ, ಪ್ರತಿಭಟನೆ ನಿಂತಿಲ್ಲ. ದರವನ್ನು ಕಡಿಮೆ ಮಾಡುವಂತೆ ಒತ್ತಾಯಿಸಿ ಭಾನುವಾರ ಮೆಟ್ರೋ ರೈಲಿನ ಒಳಗಡೆ ಗ್ರೀನ್ ಪೀಸ್ ಇಂಡಿಯಾ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಹತ್ತಿದ ಕಾರ್ಯಕರ್ತರು, ರೈಲಿನ ಒಳಗಡೆ ಬೆಲೆ ಏರಿಕೆಯಿಂದ ಅಸಮಾನತೆ ಏರಿಕೆ ಎಂಬ ಫಲ ಪ್ರದರ್ಶಿಸಿ ಮೌನ ಪ್ರತಿಭಟಿಸಿದರು. ಬಳಿಕ ಎಂ. ಜಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಹೊರಬಂದ ಬಳಿಕ 'ಮೆಟ್ರೋ ಪರಿಷ್ಕೃತ ದರವನ್ನು ಹಿಂಪಡೆಯಿರಿ' ಎಂಬ ಆಗ್ರಹದ ಫಲಕ ಪ್ರದರ್ಶಿಸಿದರು.
ದರ ಏರಿಕೆಯಾದ ನಂತರ ಗ್ರೀನ್ ಪೀಸ್ ಇಂಡಿಯಾ ಸಮೀಕ್ಷೆ ನಡೆಸಿತ್ತು. ದರ ಏರಿಕೆಯೂ ಒಂದು ಹೊತ್ತಿನ ಊಟಕ್ಕೆ ವ್ಯಯಿಸುವ ಖರ್ಚಿಗೆ ಸಮಾನವಾಗಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ. 72.9 ರಷ್ಟು ಜನರು ಅಭಿಪ್ರಾಯ ತಿಳಿಸಿದ್ದರು.
ಮೆಟ್ರೋ ದರ ಏರಿಕೆಯಿಂದ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ ಇಳಿಮುಖವಾಗಿದ್ದು, ತಮ್ಮ ಸ್ವಂತ ವಾಹನಗಳನ್ನು ಬಳಸುತ್ತಿರುವುದರಿಂದ ನಗರದಲ್ಲಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಹಾಗೂ ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ ಎಂದು ಗ್ರೀನ್ ಪೀಸ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Forest land: ವಾಯುಪಡೆ ವಶದಲ್ಲಿರುವ 444.12 ಎಕರೆ ಅರಣ್ಯ ಭೂಮಿ ಮರು ವಶಕ್ಕೆ ಪಡೆಯಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ