-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೈವಿಧ್ಯಮಯ ಟ್ರೆಡಿಷನಲ್ ಔಟ್‌ಫಿಟ್‌ಗಳಲ್ಲಿ ಹಾಗೂ ಸೀರೆಗಳಲ್ಲಿ ತಾರೆಯರು ಹಾಗೂ ಸೆಲೆಬ್ರಿಟಿಗಳು ಸಂಕ್ರಾಂತಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು. ಇನ್ನು, ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಗೆ ಸಾಥ್ ನೀಡುವ ಡಿಸೈನರ್‌ವೇರ್‌ಗಳಲ್ಲಿ ಸಿನಿಮಾ, ಕಿರುತೆರೆ ತಾರೆಯರು ಹಾಗೂ ಫ್ಯಾಷನ್ ಸೆಲೆಬ್ರೆಟಿಗಳು ಸಂಕ್ರಾಂತಿ ಹಬ್ಬವನ್ನು (Stars Sankranti Celebration 2025) ಆಚರಿಸಿದರು.

ಅಷ್ಟು ಮಾತ್ರವಲ್ಲ, ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಔಟ್‌ಫಿಟ್ ಹಾಗೂ ಹಬ್ಬದ ಲುಕ್‌ನ ಸ್ಟೈಲ್ ಹಾಗೂ ಫ್ಯಾಷನ್ ಸ್ಟೇಟ್‌ಮೆಂಟ್ ಅನ್ನು ಅಪ್‌ಲೋಡ್ ಮಾಡಿ ಅಭಿಮಾನಿಗಳನ್ನು ಸೆಳೆದರು.

ಸ್ಯಾಂಡಲ್‌ವುಡ್ ತಾರೆಯರ ಟ್ರೆಡಿಷನಲ್ ಔಟ್‌ಫಿಟ್ಸ್
ʼಕೇಡಿʼ ಸಿನಿಮಾದ ಪ್ರಮೋಷನ್ ಜತೆಜತೆಗೆ ನಟ ನಿರ್ದೆಶಕ ಪ್ರೇಮ್, ರಕ್ಷಿತಾ ಹಾಗೂ ನಟ ಧ್ರುವ ಸರ್ಜಾ ಫಾರ್ಮ್ ಹೌಸ್‌ನಲ್ಲಿ, ಎತ್ತುಗಳ ಸಿಂಗಾರ ಮಾಡಿ ಆಚರಿಸಿದ್ದು, ನಟಿ ಅಮೂಲ್ಯ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಆಚರಿಸಿದ್ದು ಅಭಿಮಾನಿಗಳನ್ನು ಮಾತ್ರವಲ್ಲ, ಸಿನಿಮಾ ಪ್ರೇಮಿಗಳನ್ನು ಸೆಳೆಯಿತು. ಇನ್ನು ಇವರಂತೆಯೇ, ನಟ ದರ್ಶನ್, ಮಗ ಹಾಗೂ ಪತ್ನಿ ಹಾಗೂ ಕುಟುಂಬದೊಂದಿಗೆ ಆಚರಿಸಿದರು. ಇನ್ನು, ನಟಿ ಸಂಗೀತಾ ಭಟ್-ಸುದರ್ಶನ್ ಮನೆಯಲ್ಲೆ ಹಬ್ಬ ಮಾಡಿದರು.

ಪ್ರಿಯಾಂಕಾ ಉಪೇಂದ್ರ ಸೀರೆಯಲ್ಲಿ ಸಖತ್ ಆಗಿ ಕಾಣಿಸಿಕೊಂಡರು. ನಟಿ ಸಪ್ತಮಿ ಗೌಡ ಸೀರೆಯಲ್ಲಿ ರಂಗುರಂಗಾಗಿ ಮಿಂಚಿದರು. ಸಾನ್ಯಾ ಅಯ್ಯರ್, ಸಂಯುಕ್ತಾ ಹೆಗಡೆ ಶುಭಾ ರಕ್ಷಾ ಕೂಡ ರೇಷ್ಮೆ ಸೀರೆಯಲ್ಲಿ ಮಿನುಗಿದರು. ನಟಿ ರಾಧಿಕಾ ಕುಮಾರಸ್ವಾಮಿ ಸೇರಿದಂತೆ ಸಾಕಷ್ಟು ನಟಿಯರು ಎಳ್ಳು-ಬೆಲ್ಲ ಹಾಗೂ ಕಬ್ಬನ್ನು ಕೈಗಳಲ್ಲಿ ಹಿಡಿದು ಹಬ್ಬಕ್ಕೆ ವಿಶ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಇನ್ನು ಬಾಲಿವುಡ್‌ನಲ್ಲಿ ಶಿಲ್ಪಾ ಶೆಟ್ಟಿ ಲೋಹ್ರಿ ಆಚರಿಸಿದರೆ, ಹೊಸತಾಗಿ ಮದುವೆಯಾದ ನಟಿ ಕೀರ್ತಿ ಸುರೇಶ್, ನಟ ನಾಗಚೈತನ್ಯ ಪೊಂಗಲ್ ಸೆಲೆಬ್ರೇಟ್ ಮಾಡಿದರು.

ಕಿರುತೆರೆ ತಾರೆಯರ ಸಂಕ್ರಾಂತಿ ಔಟ್‌ಫಿಟ್ಸ್
ಕಿರುತೆರೆ ನಟಿಯರಾದ ರಜನಿ, ಐಶ್ವರ್ಯಾ ಸಿಂಧೋಗಿ ಸೇರಿದಂತೆ ನಾನಾ ನಟ-ನಟಿಯರು ಹಬ್ಬದ ದಿನ ತಮ್ಮ ಈ ಔಟ್‌ಫಿಟ್‌ಗಳನ್ನು ಪ್ರತ್ಯೇಕವಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರದರ್ಶಿಸಿದರು. ಒಬ್ಬರಿಗಿಂತ ಒಬ್ಬರ ಡಿಸೈನವೇರ್‌ಗಳು ಭಿನ್ನವಾಗಿದ್ದವು ಎನ್ನಬಹುದು ಎನ್ನುತ್ತಾರೆ ಫ್ಯಾಷನ್ ವಿಮರ್ಶಕಿ ಜೀವಿತಾ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)