ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Elephant tusk smuggling: ಬೆಂಗಳೂರಿನಲ್ಲಿ ಆನೆ ದಂತ ಸಾಗಣೆಗೆ ಯತ್ನ; ತಮಿಳುನಾಡು ಮೂಲದ ಮೂವರು ಅರೆಸ್ಟ್‌

Bengaluru News: ಆನೇಕಲ್‌ ತಾಲೂಕಿನ ಮುತ್ಯಾಲಮಡು ಸಮೀಪ ಕಾರ್ಯಾಚರಣೆ ನಡೆದಿದೆ. ಆನೇಕಲ್‌ ಪೊಲೀಸ್‌‍ ಇನ್‌ಸ್ಪೆಕ್ಟರ್‌ ಪ್ರಕಾಶ್‌ ನೇತೃತ್ವದ ತಂಡಕ್ಕೆ ದಾಳಿ ನಡೆಸಿ, ಮೂವರನ್ನು ಬಂಧಿಸಿ, ಆರೋಪಿಗಳಿಂದ ಸುಮಾರು 16 ಕೆ.ಜಿ. ತೂಕದ ಏಳು ಆನೆ ದಂತಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆನೇಕಲ್‌: ಆನೆ ದಂತ ಸಾಗಣೆ ಮಾಡುತ್ತಿದ್ದ ತಮಿಳುನಾಡು ಮೂಲದ ಮೂವರನ್ನು ಪೊಲೀಸರು ಬಂಧಿಸಿ, ಆರೋಪಿಗಳಿಂದ ಸುಮಾರು 16 ಕೆ.ಜಿ. ತೂಕದ ಏಳು ಆನೆ ದಂತಗಳು (Elephant tusk smuggling), ಒಂದು ಕಾರು, ಮೊಬೈಲ್‌ ಫೋನ್‌ಗಳು ಹಾಗೂ ವನ್ಯಜೀವಿ ಬೇಟೆಗೆ ಬಳಸುತ್ತಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡು ಮೂಲದ ಸತೀಶ್ವರನ್‌, ಶರತ್‌ ಕುಮಾರ್‌ ಹಾಗೂ ಶಂಕರ್‌ ಬಂಧಿತರು. ಆನೇಕಲ್‌ ತಾಲೂಕಿನ ಮುತ್ಯಾಲಮಡು ಸಮೀಪ ಕಾರ್ಯಾಚರಣೆ ನಡೆದಿದೆ. ಆನೇಕಲ್‌ ಪೊಲೀಸ್‌‍ ಇನ್‌ಸ್ಪೆಕ್ಟರ್‌ ಪ್ರಕಾಶ್‌ ನೇತೃತ್ವದ ತಂಡಕ್ಕೆ ವನ್ಯಜೀವಿಗಳ ಬೇಟೆ, ಆನೆ ದಂತ ಹಾಗೂ ಜಿಂಕೆ ಮಾಂಸದ ಅಕ್ರಮ ಸಾಗಾಟದ ಕುರಿತು ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡಿನಿಂದ ಬೆಂಗಳೂರಿಗೆ ಕಾರಿನಲ್ಲಿ ಆನೆ ದಂತಗಳನ್ನು ಮಾರಾಟ ಮಾಡಲು ಆರೋಪಿಗಳು ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು, ಮುತ್ಯಾಲಮಡುವಿನ ಸಮೀಪ ಕಾರು ಬರುತ್ತಿದ್ದಂತೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ವಲಸೆ ಕಾರ್ಮಿಕರ ಮೇಲೆ ಕಾಫಿ ಎಸ್ಟೇಟ್ ಮಾಲಕನ ದರ್ಪ; ದೊಣ್ಣೆಯಿಂದ ಹಲ್ಲೆ: ವಿಡಿಯೊ ವೈರಲ್‌

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆಗಾಗಿ ಆರು ದಿನಗಳ ಪೊಲೀಸ್‌‍ ಕಸ್ಟಡಿಗೆ ಪಡೆಯಲಾಗಿದೆ. ಈ ದಂಧೆ ಹಿಂದೆ ಇನ್ನಷ್ಟು ವ್ಯಕ್ತಿಗಳು ಭಾಗಿಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.