ಕಲಬುರಗಿ: ನಗರದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಮಂಗಳಮುಖಿಯನ್ನು ಬೆತ್ತಲೆ ಮಾಡಿ, ತಲೆ ಬೋಳಿಸಿ ಹಲ್ಲೆ ಮಾಡಿರುವುವುದು ಕಂಡುಬಂದಿದ್ದು, ಭೀಕ್ಷಾಟನೆಯ ಹಣದಲ್ಲಿ ಪಾಲು ಕೊಡದಿದಕ್ಕೆ ಮುಂಗಳಮುಖಿಯರೇ ಹಲ್ಲೆ ಮಾಡಿದ್ದಾರೆ.
ಅಂಕಿತಾ ಹಲ್ಲೆಗೆ ಒಳಗಾದ ಮಂಗಳಮುಖಿ. ಕಲಬುರಗಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ. ಶೀಲಾ, ಮಾಲಾ, ಭವಾನಿ ಸೇರಿ 6 ಮಂಗಳಮುಖಿಯರು ಕೃತ್ಯ ಎಸಗಿದ್ದು, ಮಂಗಳಮುಖಿಯರು ಹಲ್ಲೆ ಮಾಡುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಾಯಾಳುವನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸುದ್ದಿಯನ್ನೂ ಓದಿ | Belagavi Accident: ಕಾಂಕ್ರೀಟ್ ಮಿಕ್ಸರ್ ವಾಹನ ಉರುಳಿ ಕಾರು ಅಪ್ಪಚ್ಚಿ; ಪವಾಡಸದೃಶವಾಗಿ ಇಬ್ಬರು ಪಾರು
ವ್ಯಕ್ತಿಗೆ ಸನ್ಮಾನ ಮಾಡಿ, ಮನಸೋ ಇಚ್ಛೆ ಹಲ್ಲೆ

ಬೆಂಗಳೂರು: ವ್ಯಕ್ತಿಯೊಬ್ಬರನ್ನು ಮನೆಗೆ ಕರೆಸಿ ಸನ್ಮಾನಿಸಿ, ಮನಸೋ ಇಚ್ಛೆ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿದ್ದು, ಈ ಘಟನೆಗೆ (Assault Case) ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಹಲ್ಲೆಯ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಪುರುಷರಿಬ್ಬರು, ವ್ಯಕ್ತಿ ಮೇಲೆ ಹಲ್ಲೆ ಮಾಡುತ್ತಿದ್ದರೆ ಮಹಿಳೆ ವಿಡಿಯೊ ಮಾಡಿದ್ದಾರೆ. ಅಲ್ಲದೆ ವ್ಯಕ್ತಿಗೆ ಕೀಳುಮಟ್ಟದ ಪ್ರಶ್ನೆಗಳನ್ನು ಕೇಳುತ್ತಾ ಅಪಹಾಸ್ಯ ಮಾಡಿ ನಿರ್ದಯವಾಗಿ ಥಳಿಸಿರುವುದು ಕಂಡುಬಂದಿದೆ.
ಲತಾ ಯಾದವ್ ಎಂಬುವರ ಮನೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಅವಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಚಂದನ, ಭರತ್, ಶಿವು ಮತ್ತು ಇತರರು ಸೇರಿದಂತೆ ಆಕೆಯ ಕುಟುಂಬ ಸದಸ್ಯರು ಹಲ್ಲೆಯಲ್ಲಿ ಭಾಗಿಯಾಗಿರುವುದು ವಿಡಿಯೊದಲ್ಲಿ ನೋಡಬಹುದು. ವ್ಯಕ್ತಿಗೆ ದೈಹಿಕ ಹಿಂಸೆ, ಅವಮಾನ ಮತ್ತು ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ವ್ಯಕ್ತಿ ಅಸಹಾಯಕವಾಗಿ ಕುಳಿತಿದ್ದಾಗ ದುಷ್ಕರ್ಮಿಗಳು ಆತನಿಗೆ ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಆತ ಬಿಟ್ಟುಬಿಡಿ ಎಂದು ಬೇಡಿಕೊಂಡರೂ ಹಲ್ಲೆ ಮಾಡಲಾಗಿದೆ. ಯಾವ ಕಾರಣಕ್ಕಾಗಿ ಈ ಹಲ್ಲೆ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ.
ಹಲ್ಲೆಗೊಳಗಾದ ವ್ಯಕ್ತಿ ಬಡವನಾಗಿದ್ದರಿಂದ ಭಯ ಮತ್ತು ಬೆದರಿಕೆಯಿಂದಾಗಿ ದೂರು ದಾಖಲಿಸಿಲ್ಲ ಎಂದು ವರದಿಯಾಗಿದೆ. ಸದ್ಯ ಈ ಘಟನೆಯನ್ನು ಕರ್ನಾಟಕ ರಾಜ್ಯ ಕಾರ್ಮಿಕ ಮಂಡಳಿ ತೀವ್ರವಾಗಿ ಖಂಡಿಸಿದ್ದು, ಹೊಸಕೋಟೆ ಪೊಲೀಸರು ಘಟನೆ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದೆ. ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಒತ್ತಾಯಿಸಿದೆ.
ಇದು ಒಂದೂವರೆ ವರ್ಷದ ಹಳೆಯ ವಿಡಿಯೊ
ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಹಲ್ಲೆಯ ವಿಡಿಯೊ, ಒಂದೂವರೆ ವರ್ಷದ ಹಳೆಯ ವಿಡಿಯೊ ಆಗಿದೆ ಎಂದು ತಿಳಿದುಬಂದಿದೆ. ಇಬ್ಬರು ವ್ಯಕ್ತಿಗಳ ವೈಯಕ್ತಿಕ ವಿಚಾರವಾಗಿ ಒಂದೂವರೆ ವರ್ಷದ ಹಳೆಯ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಈ ದೃಶ್ಯದಲ್ಲಿರುವ ವ್ಯಕ್ತಿಗಳನ್ನು ಹೊಸಕೋಟೆ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದ್ದು, ಸೂಕ್ತ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Ranya Rao: ನನ್ನ ವಿರುದ್ಧ ಸುಳ್ಳು ಆರೋಪ, ವಿಚಾರಣೆ ವೇಳೆ ಅಧಿಕಾರಿಗಳಿಂದ ಚಿತ್ರಹಿಂಸೆ: ನಟಿ ರನ್ಯಾ ರಾವ್ ದೂರು
ಹಲ್ಲೆಗೊಳಗಾದ ವ್ಯಕ್ತಿ ಈ ಹಿಂದೆ ವಿಚಾರಣೆ ವೇಳೆ, ನಾನು ಮದ್ಯ ಸೇವಿಸಿ ಪರಿಚಿತರ ಮನೆಗೆ ಹೋದಾಗ ಅವರು ಈ ರೀತಿ ಚೇಷ್ಠೆ ಮಾಡಿದ್ದಾರೆ. ಅದು ನಮ್ಮಿಬ್ಬರ ವೈಯಕ್ತಿಕ ವಿಚಾರ, ಈ ಬಗ್ಗೆ ನಾನು ಮತ್ತು ಆ ಮನೆಯವರು ಯಾವುದೇ ದೂರು ನೀಡಿಲ್ಲ ಎಂದು ಹೇಳಿರುವುದಾಗಿ ಎಸ್‌ಪಿ ಸಿ.ಕೆ. ಬಾಬಾ ಹೇಳಿದ್ದಾರೆ.