ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʼಚಿನ್ನ ನಿನ್ನ ಮಗ ಪಾಸ್‌ ಆಗಿದ್ದಾನೆʼ; ದಿವಂಗತ ಪತ್ನಿ ನೆನಪಲ್ಲಿ ವಿಜಯ್‌ ರಾಘವೇಂದ್ರ ಪೋಸ್ಟ್

Vijay Raghavendra: 12ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ನಟ ವಿಜಯ್‌ ರಾಘವೇಂದ್ರ ಅವರ ಪುತ್ರ ಶೌರ್ಯ ವಿಜಯ್ ಪಾಸ್‌ ಆಗಿದ್ದು, ಈ ಸಂಭ್ರಮದಲ್ಲಿ ದಿವಂಗತ ಪತ್ನಿ ಸ್ಪಂದನಾ ಅವರನ್ನು ನೆನೆಯುತ್ತಾ ನಟ ವಿಜಯ್‌ ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

1/7

ಐಸಿಎಸ್​ಇ 10ನೇ ತರಗತಿ ಮತ್ತು ಐಎಸ್​ಸಿ 12ನೇ ತರಗತಿ ಪರೀಕ್ಷಾ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಸ್ಯಾಂಡಲ್‌ವುಡ್‌ನ ಖ್ಯಾತ ನಟ ವಿಜಯ್ ರಾಘವೇಂದ್ರ‌ (Vijay Raghavendra) ಅವರ ಪುತ್ರ ಶೌರ್ಯ ವಿಜಯ್ ಕೂಡ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸ್ ಆಗಿದ್ದಾರೆ. ಈ ಸಂಭ್ರಮವನ್ನು ನಟ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

2/7

ಮುದ್ದಿನ ಮಗನ ಕೆನ್ನೆಗೆ ವಿಜಯ್ ರಾಘವೇಂದ್ರ ಹಾಗೂ ಪತ್ನಿ ಸ್ಪಂದನಾ ವಿಜಯ್ ಮುತ್ತಿಡುವ ಹಳೆಯ ಫೋಟೋವನ್ನು ವಿಜಯ್ ರಾಘವೇಂದ್ರ ಶೇರ್ ಮಾಡಿದ್ದು, ಚಿನ್ನ, ನಿನ್ನ ಮಗ ಪಾಸ್ ಆಗಿದ್ದಾನೆ ಎಂದು ಪತ್ನಿಯನ್ನು ನೆನೆಯುತ್ತಾ ಪೋಸ್ಟ್ ಮಾಡಿದ್ದಾರೆ.

3/7

ಶೌರ್ಯ ವಿಜಯ್ ಐಎಸ್​ಸಿ 12ನೇ ತರಗತಿಯಲ್ಲಿ ಓದುತ್ತಿದ್ದರು. ಇವರಿಗೆ ಪರೀಕ್ಷೆಯಲ್ಲಿ ಎಷ್ಟು ಪರ್ಸೆಂಟೇಜ್ ಬಂದಿದೆ. ಯಾವ ಸ್ಕೂಲ್ ನಲ್ಲಿ ಓದುತ್ತಿದ್ದರು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ ನಟ ತಮ್ಮ ಮಗನ ಯಶಸ್ಸನ್ನು ಹಂಚಿಕೊಳ್ಳುವ ಮೂಲಕ ತಾವೂ ಸಂಭ್ರಮಿಸಿದ್ದಾರೆ.

4/7

ಮಗನ ಪರೀಕ್ಷೆಯ ಸಮಯದಲ್ಲಿ ವಿಜಯ್ ರಾಘವೇಂದ್ರ ಕಾಳಜಿಯಿಂದ ಮಗನ ಜೊತೆಯಾಗಿ ನಿಂತು ಆತನಿಗೆ ಧೈರ್ಯ ತುಂಬಿದ್ದರು. ಮಗನ ಪರೀಕ್ಷೆ ಮುಗಿಯುತ್ತಿದ್ದಂತೆ ನಟ ಆತನನ್ನು ಕರೆದುಕೊಂಡು ಸಮ್ಮರ್ ವೆಕೇಶನ್ ಎಂಜಾಯ್ ಮಾಡಲು ಗೋವಾಕ್ಕೆ ತೆರಳಿದ್ದರು.

5/7

ಇನ್ನು ನಿನ್ನೆಯಷ್ಟೇ ಶೌರ್ಯ ಅಮ್ಮ ಸ್ಪಂದನಾ ವಿಜಯ್ ಅವರ ಹಳೆಯ ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಲ್ಯಾಪ್‌ಟಾಪ್‌ನಲ್ಲಿ ನನ್ನ ಫೋಟೋಗಳನ್ನು ಸ್ಕ್ರೋಲ್ ಮಾಡಿದಾಗ ಈ ಚಿತ್ರಗಳು ಸಿಕ್ಕವು...ಇದನ್ನೆಲ್ಲಾ ನೋಡಿ ಎಂದು ಬರೆದುಕೊಂಡಿದ್ದರು.

6/7

ವಿಜಯ್ ರಾಘವೇಂದ್ರ ಹಾಕಿರುವ ಫೋಟೊ ನೋಡಿ, ಅಭಿಮಾನಿಗಳು ಸಹ ಶೌರ್ಯನಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ರಾಘು ನಿಮ್ಮ ಪರಿಶ್ರಮ . ನಿಮ್ಮ ಮಗ ನಿಮ್ಮ ಆಸೆನಾ ನೆರೆವೇರಿಸುತ್ತಾನೆ. ದೇವರು ಇಬ್ಬರಿಗೂ ಆರೋಗ್ಯ ಆಯುಷ್ ಕೊಡಲಿ ಎಂದು ಶುಭ ಕೋರಿದ್ದಾರೆ.

7/7

2023ರಲ್ಲಿ ಫ್ಯಾಮಿಲಿ ಜೊತೆ ಬ್ಯಾಂಕಾಕ್‌ಗೆ ತೆರಳಿದ್ದ ಸ್ಪಂದನಾ, ಹೃದಯಾಘಾತದಿಂದ ಮಲಗಿದ್ದಲ್ಲೇ ಸಾವನ್ನಪ್ಪಿದ್ದರು. ಹಲವು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ವಿಜಯ್ ರಾಘವೇಂದ್ರ ಪ್ರೀತಿಯ ಪತ್ನಿ ಇಲ್ಲದೇ ಒಬ್ಬಂಟಿಯಾದರು. ಮಗ ಶೌರ್ಯ ಕೂಡ ಇವತ್ತಿಗೂ ಅಮ್ಮನನ್ನು ಮಿಸ್ ಮಾಡಿಕೊಳ್ಳುತ್ತಲೇ ಇದ್ದಾರೆ.