ಲಖನೌ: ಜಗತ್ತಿನ ಅತಿದೊಡ್ಡ ಧಾರ್ಮಿಕ ಉತ್ಸವವಾದ ಮಹಾ ಕುಂಭಮೇಳಕ್ಕೆ(Mahakumbh) ವಿಶ್ವದ ನಾನಾ ಮೂಲೆಗಳಿಂದ ಕೋಟ್ಯಂತರ ಭಕ್ತರು ಹರಿದು ಬರುತ್ತಿದ್ದಾರೆ. ಈ ಮಧ್ಯೆ ಇಲ್ಲೊಬ್ಬ ಪುತ್ರ ತನ್ನ ತಾಯಿಯ ಆಸೆಯನ್ನು ಈಡೇರಿಸಲು ಮಾಡರ್ನ್ ಶ್ರವಣಕುಮಾರನ ಅವತಾರ ತಾಳಿದ್ದಾರೆ. ವಯೋವೃದ್ಧ ತಾಯಿಯು ಮಹಾ ಕುಂಭಮೇಳವನ್ನು ಕಣ್ತುಂಬಿಕೊಂಡು ನದಿಯಲ್ಲಿ ಪುಣ್ಯ ಸ್ನಾನ ಮಾಡಬೇಕೆಂಬ ಇಂಗಿತವನ್ನು ಮಗನ ಬಳಿ ತೋಡಿಕೊಂಡಿದ್ದಾರೆ. ಇದೀಗ ಮಗ ತಾಯಿಯನ್ನು ತಳ್ಳುವ ಗಾಡಿಯಲ್ಲಿ ಕೂರಿಸಿಕೊಂಡು ಪ್ರಯಾಗ್‌ರಾಜ್‌ನತ್ತ(Prayagraj) ಬರುತ್ತಿದ್ದಾರೆ. ಈ ಸುದ್ದಿ(Viral News) ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಕುಂಭಮೇಳದಲ್ಲಿ ಪಾಲ್ಗೊಳ್ಳಬೇಕೆಂಬ ಬಯಕೆಯನ್ನು ಈಡೇರಿಸುವ ಸಲುವಾಗಿ ಮಗ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ತಾಯಿಯನ್ನು ಪ್ರಯಾಗ್‌ರಾಜ್ ಗೆ ಕರೆದುಕೊಂಡು ಹೋಗುತ್ತಿದ್ದಾರೆ. ಬಸ್ಸು ಅಥವಾ ಟ್ರೈನ್‌ನಲ್ಲಿ ಅಲ್ಲದೆ ತಳ್ಳುವ ಬಂಡಿಯಲ್ಲಿ ತಾಯಿಯನ್ನು ಕೂರಿಸಿಕೊಂಡು ಹೋಗುತ್ತಿರುವ ಮಗನ ಮಾತೃ ಭಕ್ತಿ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
ಈ ಸುದ್ದಿಯನ್ನೂ ಓದಿ:Mahakumbh: ಕುಂಭಮೇಳದಲ್ಲಿ ಕಾಲ್ತುಳಿತ-12 ವರ್ಷಗಳ ಹಿಂದೆಯೂ ನಡೆದಿತ್ತು ಇಂತಹದ್ದೇ ದುರಂತ!
ಈಗಾಗಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಗ, ತನ್ನ ವೃದ್ಧ ತಾಯಿಯನ್ನು ತಳ್ಳು ಬಂಡಿಯಲ್ಲಿ ಕೂರಿಸಿ, ಕುಂಭಮೇಳಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಮಗನಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಈ ಬಾರಿಯ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನವನ್ನು ಮಾಡಬೇಕೆಂದು ತಾಯಿ ಮಗನ ಬಳಿ ಹೇಳಿಕೊಂಡಿದ್ದಾರೆ. ಹೀಗಾಗಿ ಉತ್ತರ ಪ್ರದೇಶದ ಬುಲಂದರ್‌ಶಹರ್‌ನ 65 ವರ್ಷದ ವ್ಯಕ್ತಿ ತಮ್ಮ 92 ವರ್ಷದ ತಾಯಿಯನ್ನು ಬಂಡಿಯ ಮೇಲೆ ಕೂರಿಸಿ ತಾವೇ ಬಂಡಿಯನ್ನು ಎಳೆದು ಸಾಗುವ ಮೂಲಕ ಮಹಾ ಕುಂಭಮೇಳಕ್ಕೆ ಕರೆದೊಯ್ದಿದ್ದಾರೆ. ಹೀಗೆ 13 ದಿನಗಳ ಕಾಲ ಪ್ರಯಾಣ ಕ್ರಮಿಸಿ ಅಂತಿಮವಾಗಿ ತಮ್ಮ ತಾಯಿಯ ಆಸೆಯನ್ನು ಈಡೇರಿಸಿದ್ದಾರೆ.