Viral Video: ಕರಡಿ ದಾಳಿಗೆ ಅಪ್ಪ-ಮಗ ಬಲಿ : ಅರಣ್ಯಾಧಿಕಾರಿ ಮೇಲೆ ಕರಡಿ ದಾಳಿಯ ವಿಡಿಯೋ ವೈರಲ್
ಮಾನವ-ಪ್ರಾಣಿ ಸಂಘರ್ಷ ಇಂದು ನಿನ್ನೆಯದಲ್ಲ. ಜನವಸತಿ ಪ್ರದೇಶಗಳಿಗೆ ನುಗ್ಗುವ ಕಾಡುಪ್ರಾಣಿಗಳು ಇಲ್ಲಿ ಬೆಳೆಗಳನ್ನು ನಾಶಪಡಿಸಿದರೆ, ಇನ್ನೊಂದೆಡೆ ಕಾಡಿಗೆ ತೆರಳುವ ಮನುಷ್ಯರ ಮೇಲೆ ಕಾಡು ಪ್ರಾಣಿಗಳು ದಾಳಿ ಮಾಡುವ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತದೆ.
ರಾಂಚಿ: ಛತ್ತೀಸ್‌ಗಢದ (Chhattisgarh) ಕಂಕೇರ್ (Kanker) ಜಿಲ್ಲೆಯ ಕಾಡಿನಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿರುವುದು ವರದಿಯಾಗಿದೆ. ಕರಡಿಯೊಂದು ತಂದೆ ಮತ್ತು ಮಗನನ್ನು ಕೊಂದು, ಅರಣ್ಯಾಧಿಕಾರಿಯೊಬ್ಬರನ್ನು ಗಾಯಗೊಳಿಸಿರುವ ಘಟನೆ ನಡೆದಿದೆ. ಈ ಘಟನೆಯ ಭೀಕರತೆಯನ್ನು ಸಾರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.
ಕಾಡಿಗೆ ಕಟ್ಟಿಗೆ ತರಲೆಂದು ಹೋಗಿದ್ದ ತಂದೆ ಮತ್ತು ಮಗನ ಮೇಲೆ ದಾಳಿ ನಡೆಸಿದೆ. ಮೃತ ದುರ್ದೈವಿಗಳನ್ನು ಸುಕ್ಲಾಲ್ ದಾರ್ರೋ (45) ಹಾಗೂ ಅಜ್ಜು ಕುರೇಟಿ (22) ಎಂದು ಗುರುತಿಸಲಾಗಿದೆ. ಇಲ್ಲಿನ ಜೈಲಿನ್ ಕಸಾ ಎಂಬ ಬೆಟ್ಟದ ತಪ್ಪಲಿನಲ್ಲಿರುವ ಡೊಂಗರ್ ಕಟ್ಟಾ ಗ್ರಾಮದಲ್ಲಿರುವ ಕಾಡಿನಲ್ಲಿ ಈ ದುರ್ಘಟನೆ ನಡೆದಿದ್ದು, ಈ ಘಟನೆಯಲ್ಲಿ ಅಪ್ಪ ಹಾಗೂ ಮಗ ಕರಡಿ ದಾಳಿಯಿಂದ ಮೃತಪಟ್ಟಿದ್ದಾರೆ.
ಕಾಡಿಗೆ ತೆರಳಿದ್ದವರ ಮೇಲೆ ಕರಡಿ ಏಕಾಏಕಿ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಂದೆ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
भालू ने बाप-बेटे पर अटैक किया और उन दोनों की जान चली गई !!
— MANOJ SHARMA LUCKNOW UP🇮🇳🇮🇳🇮🇳 (@ManojSh28986262) January 20, 2025
भालू के बाप बेटे पर हमले का वीडियो सोशल मीडिया पर तेजी से हो रहा वायरल !!
छत्तीसगढ़ के कांकेर से दर्दनाक खबर सामने आई है, यहां जंगल में एक भालू ने बाप-बेटे पर हमला किया, जिसमें दोनों की मौत हो गई है !!
आक्रामक भालू ने… pic.twitter.com/RGyzodEYmg
ಈ ಘಟನೆಯ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಕರಡಿ ಅರಣ್ಯಾಧಿಕಾರಿಯ ಮೇಲೆ ದಾಳಿ ನಡೆಸುತ್ತಿರುವ ಭೀಕರ ದೃಶ್ಯ ಸೆರೆಯಾಗಿದೆ. ಮತ್ತು ವ್ಯಗ್ರಗೊಂಡಿರುವ ಕರಡಿ ಅಲ್ಲಿದ್ದವರನ್ನೆಲ್ಲಾ ಅಟ್ಟಾಡಿಸಿಕೊಂಡು ಹೋಗುತ್ತಿರುವುದೂ ಸಹ ಈ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಇದನ್ನೂ ಓದಿ: Donald Trump: ಅಧಿಕಾರಕ್ಕೆ ಬರುತ್ತಿದ್ದಂತೆ ಹತ್ತು ಹಲವು ಮಹತ್ವದ ನಿರ್ಣಯಗಳಿಗೆ ಟ್ರಂಪ್ ಸಹಿ
ಈ ವಿಡಿಯೋದಲ್ಲಿ ರೆಕಾರ್ಡ್ ಆಗಿರುವಂತೆ, ಕಾಡಿನಲ್ಲಿ ಕಟ್ಟಿಗೆ ರಾಶಿಗಳ ನಡುವೆ ಕರಡಿ ಕ್ರೋಧದಿಂದ ಓಡಾಡುತ್ತಿರುವುದು ಮತ್ತು ಮೂವರ ಮೇಲೆ ದಾಳಿ ನಡೆಸುತ್ತಿರುವುದು ರೆಕಾರ್ಡ್ ಆಗಿದೆ. ಯೂನಿಫಾರ್ಮ್ ನಲ್ಲಿದ್ದ ಅರಣ್ಯಾಧಿಕಾರಿಯ ಮೇಲೆ ಕರಡಿ ಮುಗಿ ಬೀಳುತ್ತಿರುವುದು ಈ ವಿಡಿಯೋದಲ್ಲಿ ದಾಖಲಾಗಿದೆ. ನೆಲಕ್ಕುರುಳಿರುವ ಅರಣ್ಯಾಧಿಕಾರಿಯನ್ನು ಬಿಗಿಯಾಗಿ ಅಪ್ಪಿಕೊಂಡು ಅವರ ಮೇಲೆ ಕರಡಿ ದಾಳಿ ಮಾಡುತ್ತಿದ್ದು, ಆ ದಾಳಿಯಿಂದ ತಪ್ಪಿಸಿಕೊಳ್ಳಲು ಅಧಿಕಾರಿ ಒದ್ದಾಡುತ್ತಿರುವುದು ಮತ್ತು ಅಲ್ಲಿದ್ದವರು ಕರಡಿಯನ್ನು ಓಡಿಸಲು ಪ್ರಯತ್ನಿಸುತ್ತಿರುವುದು ಈ ವಿಡಿಯೋದಲ್ಲಿ ದಾಖಲಾಗಿದೆ.
ಕರಡಿ ದಾಳಿಗೊಳಗಾಗಿ ಗಾಯಗೊಂಡ ವ್ಯಕ್ತಿಯನ್ನು ನಾರಾಯಣ್ ಯಾದವ್ ಎಂದು ಗುರುತಿಸಲಾಗಿದೆ. ಕರಡಿ ದಾಳಿಯಿಂದ ನಾರಾಯಣ್ ಅವರಿಗೆ ಕೈಗಳಿಗೆ ಗಾಯಗಳಾಗಿದ್ದು ಸದ್ಯಕ್ಕೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕರಡಿ ದಾಳಿಗೊಳಗಾಗಿ ಮೃತಪಟ್ಟ ತಂದೆ ಮತ್ತು ಮಗನ ಮೃತದೇಹವನ್ನು ಅರಣ್ಯಾಧಿಕಾರಿಗಳು ಘಟನಾ ಸ್ಥಳದಿಂದ ತೆರವುಗೊಳಿಸಿದ್ದಾರೆ ಮತ್ತು ಇವರ ಮೇಲೆ ದಾಳಿ ಮಾಡಿದ ಕರಡಿಯನ್ನು ಹಿಡಿಯಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಕರಡಿ ದಾಳಿಗೆ ಇಬ್ಬರು ಪ್ರಾಣ ಕಳೆದುಕೊಂಡಿರುವ ಈ ಘಟನೆ ಸದ್ಯಕ್ಕೆ ಗ್ರಾಮದಲ್ಲಿ ಭೀತಿಯ ವಾತಾವರಣವನ್ನು ಉಂಟುಮಾಡಿದೆ.