Water Price hike: ಬೆಂಗಳೂರಿನಲ್ಲಿ ಸದ್ಯವೇ ನೀರಿನ ದರ ಏರಿಕೆ ಬರೆ, ಮೂರು ಮಾದರಿ ಪರಿಷ್ಕರಣೆ ಪಟ್ಟಿ ಸಲ್ಲಿಕೆ
ಕಾವೇರಿ ನೀರಿನ ದರ ಏರಿಕೆಗೆ ಸಂಬಂಧಿಸಿದಂತೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಡಿ. ಕೆ.ಶಿವಕುಮಾರ್‌ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಜಲಮಂಡಳಿಯ ಅಧಿಕಾರಿಗಳು ಇದೀಗ ಪ್ರಸ್ತಾವನೆ ಸಿದ್ದಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಬೆಂಗಳೂರು: ರಾಜಧಾನಿಯಲ್ಲಿ ನೀರಿನ ದರ ಏರಿಕೆ (Water Price hike) ಕುರಿತಂತೆ 3 ಮಾದರಿ ದರ ಪರಿಷ್ಕರಣೆಯ ಪಟ್ಟಿಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಜಲಮಂಡಳಿ (Bangalore Water Supply and Sewerage Board) ಸಲ್ಲಿಕೆ ಮಾಡಿದೆ. ಶೀಘ್ರದಲ್ಲಿ ರಾಜಧಾನಿಯಲ್ಲಿ ನೀರಿನ ದರ ಏರಿಕೆ ಆದೇಶ ಹೊರಬೀಳುವ ಸಾಧ್ಯತೆ ಇದೆ. ಎಲ್ಲವೂ ಫ್ರೀಯಾಗಿ ಕೊಡುತ್ತಾ ಹೋದರೆ ಸರ್ಕಾರ ನಡೆಸುವುದು ಹೇಗೆ ಎಂದು ಇತ್ತೀಚಿಗೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಏರಿಕೆ ವಿಚಾರವಾಗಿ ನಡೆದ ಸಭೆಯಲ್ಲಿ ಹೇಳಿದ್ದರು.
ಕಾವೇರಿ ನೀರಿನ ದರ ಏರಿಕೆಗೆ ಸಂಬಂಧಿಸಿದಂತೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಡಿ. ಕೆ.ಶಿವಕುಮಾರ್‌ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಜಲಮಂಡಳಿಯ ಅಧಿಕಾರಿಗಳು ಇದೀಗ ಪ್ರಸ್ತಾವನೆ ಸಿದ್ದಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಒಂದೆರಡು ದಿನದಲ್ಲಿ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆ ಇದೆ.
ಜಲ ಮಂಡಳಿಯು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕಳೆದ 14 ವರ್ಷದಿಂದ ನಗರದಲ್ಲಿ ನೀರಿನ ದರ ಪರಿಷ್ಕರಣೆ ಮಾಡಿಲ್ಲ. ಮಂಡಳಿಯು ಪ್ರತಿ ತಿಂಗಳು ವೆಚ್ಚ, ಸಂಗ್ರಹ, ಮಂಡಳಿ ಅನುಭವಿಸುತ್ತಿರುವ ನಷ್ಟಕ್ಕೆ ಅನುಗುಣವಾಗಿ ನೀರಿನ ದರ ಹೆಚ್ಚಳಕ್ಕೆ ಅವಕಾಶ ನೀಡುವಂತೆ ಕೋರಲಾಗಿದೆ ಎಂದು ತಿಳಿದು ಬಂದಿದೆ.
ಜಲಮಂಡಳಿಯ ಮೂಲಗಳು ತಿಳಿಸಿರುವ ಪ್ರಕಾರ, ವಸತಿ, ವಾಣಿಜ್ಯ ಹಾಗೂ ಇತರೆ ಒಟ್ಟು ಮೂರು ಮಾದರಿಯ ದರ ಪರಿಷ್ಕರಣೆ ಪಟ್ಟಿಯನ್ನು ಸಲ್ಲಿಸಲಾಗಿದೆ. ರಾಜ್ಯ ಸರ್ಕಾರವೂ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಹಾಗಾಗಿ ಇನ್ನೆರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಏರಿಕೆಯಾಗುವ ಸಾಧ್ಯತೆಯಿದ್ದು ಬೇಸಿಗೆ ಆರಂಭಕ್ಕೂ ಮುನ್ನ ಬೆಂಗಳೂರ ಜನತೆಗೆ ಬಿಗ್ ಶಾಕ್ ನೀಡಲು ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: Bengaluru water tariff: ರಾಜಧಾನಿ ಮಂದಿಗೆ ಮತ್ತೊಂದು ಶಾಕ್; ಕಾವೇರಿ ನೀರಿನ ದರ ಏರಿಕೆ ಫಿಕ್ಸ್, ಡಿಕೆಶಿ ಸುಳಿವು