ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಶ್ರೀರಾಮ ರಕ್ಷಾ ಸ್ತ್ರೋತ್ರ ಏಕೆ ಪಠಿಸಬೇಕು ?

ರಾಮನ ಪ್ರೀತಿಗಾಗಿ ಹಂಬಲಿಸಿ ಲಕ್ಷ್ಮಣ ವನವಾಸಕ್ಕೆ ಹೋದರೆ, ಭರತ ಅಣ್ಣನಿಗೆ ಇಲ್ಲದ ಸುಖ ತನಗೂ ಬೇಡವೆಂದು ನಂದಿ ಗ್ರಾಮದಲ್ಲಿ ಕುಟೀರ ಕಟ್ಟಿಕೊಂಡು ಋಷಿಗಳಂತೆ ಬದುಕಿದ. ಅಣ್ಣಂದಿರ ಮಾತೇ ವೇದ ವಾಕ್ಯ ವೆಂದ ಶತ್ರುಘ್ನ ಭರತನ ಆಣತಿಯಂತೆ ರಾಜ್ಯ ಭಾರ ಮಾಡಿದ. ವನವಾಸಕ್ಕೆ ಹೊರಟ ರಾಮನಿಗೆ ರಥದ ಸಾರಥಿ, ದೋಣಿಯಲ್ಲಿ ಗಂಗಾ ನದಿ ದಾಟಿಸಿದ ಅಂಬಿಗ ‘ಗುಹಾ’ ತನ್ನ ಸರ್ವಸ್ವವನ್ನು ಅರ್ಪಿಸಲು ಮುಂದಾದನು.

ಶ್ರೀರಾಮ ರಕ್ಷಾ ಸ್ತ್ರೋತ್ರ ಏಕೆ ಪಠಿಸಬೇಕು ?

ಒಂದೊಳ್ಳೆ ಮಾತು

ಬಾಲ್ಯದಿಂದಲೇ ಅರಮನೆ ವೈಭೋಗಕ್ಕೆ ಒಡ್ಡಿಕೊಳ್ಳದೆ ಗುರುಕುಲ ಋಷ್ಯಾಶ್ರಮ ಕಾಡು-ಮೇಡು ಗಳಲ್ಲಿ ಕಳೆದವನು ರಾಮ. ಅರಮನೆಗೆ ಬಂದ ಕೆಲವೇ ದಿನಗಳಲ್ಲಿ ಮಹರ್ಷಿ ವಿಶ್ವಾಮಿತ್ರರು ಬಂದು, ಕಾಡಿನಲ್ಲಿ ಯಜ್ಞ ಯಾಗಗಳ ಅನುಷ್ಠಾನಕ್ಕೆ ತೊಂದರೆ ಕೊಡುತ್ತಿದ್ದ ರಾಕ್ಷಸರನ್ನು ಸಂಹ ರಿಸಲು ರಾಮ ಲಕ್ಷ್ಮಣರನ್ನು ಕರೆದುಕೊಂಡು ಹೋದರು. ಮುಂದೆ ವಿಶ್ವಾಮಿತ್ರರ ಆದೇಶದಂತೆ ಮಿಥಿಲಾ ರಾಜ್ಯದ ಜನಕ ಮಹಾರಾಜನ ಮಗಳು ಸೀತೆಯನ್ನು ಕಲ್ಯಾಣವಾಗಿ ಅಯೋಧ್ಯೆಗೆ ಬಂದು ಸ್ವಲ್ಪ ಕಾಲ ಕಳೆದಿತ್ತಷ್ಟೇ. ಸ್ವಂತ ತಾಯಿ ಅಲ್ಲದ ಕೈಕೆಯ ಮಾತನ್ನು ಪ್ರಶ್ನಿಸದೆ ತಂದೆಯ ಮಾತೆಂ‌ ದು ತಿಳಿದು, ರಾಜ್ಯ -ಅಧಿಕಾರಗಳಿಗೆ ಆಸೆ ಪಡದೆ ನಾರು ಮಡಿಯುಟ್ಟು ಹದಿನಾಲ್ಕು ವರ್ಷ ವನ ವಾಸ ಮಾಡಿ ಪಿತೃವಾಕ್ಯ ಪರಿಪಾಲಕನಾದನು ರಾಮ. ಲಕ್ಷ್ಮಣ- ಭರತ- ಶತ್ರುಘ್ನರಿಗೆ ಪ್ರೀತಿ ತೋರಿಸಿ ಭ್ರಾತೃತ್ವ ಪ್ರೇಮ ತೋರಿಸಿ ಕೊಟ್ಟ ರಾಮ.

ರಾಮನ ಪ್ರೀತಿಗಾಗಿ ಹಂಬಲಿಸಿ ಲಕ್ಷ್ಮಣ ವನವಾಸಕ್ಕೆ ಹೋದರೆ, ಭರತ ಅಣ್ಣನಿಗೆ ಇಲ್ಲದ ಸುಖ ತನಗೂ ಬೇಡವೆಂದು ನಂದಿ ಗ್ರಾಮದಲ್ಲಿ ಕುಟೀರ ಕಟ್ಟಿಕೊಂಡು ಋಷಿಗಳಂತೆ ಬದುಕಿದ. ಅಣ್ಣಂ ದಿರ ಮಾತೇ ವೇದ ವಾಕ್ಯ ವೆಂದ ಶತ್ರುಘ್ನ ಭರತನ ಆಣತಿಯಂತೆ ರಾಜ್ಯ ಭಾರ ಮಾಡಿದ. ವನವಾ ಸಕ್ಕೆ ಹೊರಟ ರಾಮನಿಗೆ ರಥದ ಸಾರಥಿ, ದೋಣಿಯಲ್ಲಿ ಗಂಗಾ ನದಿ ದಾಟಿಸಿದ ಅಂಬಿಗ ‘ಗುಹಾ’ ತನ್ನ ಸರ್ವಸ್ವವನ್ನು ಅರ್ಪಿಸಲು ಮುಂದಾದನು.

ಇದನ್ನೂ ಓದಿ: Roopa Gururaj Column: ಸಂತೋಷವಾಗಿರಲು ಏನು ಮಾಡಬೇಕು ?

ಮೇಲು ಕೀಳೆನ್ನದ ರಾಮ ಅವನನ್ನೂ ಮರೆಯಲಿಲ್ಲ. ರಾಮ ಪಟ್ಟಾಭಿಷಿಕ್ತ ನಾದ ಮೇಲೆ ಅಂಬಿಗ ನನ್ನು ಆದರಿಸಿ ಗೌರವಿಸಿ ‘ಸ್ನೇಹಕ್ಕೆ’ ಆದರ್ಶನಾದ. ‘ಶಬರಿ’ಯ ಎಂಜಲ ಫಲಗಳನ್ನು ತಿಂದು, ಭೇದ ಭಾವವನ್ನು ಭಕ್ತ ವತ್ಸಲನಾದ ರಾಮ. ಕಿಷ್ಕಿಂದೆಯಲ್ಲಿ ಹೆದರಿ ಅಡಗಿ ಕುಳಿತಿದ್ದ ಸುಗ್ರೀವ ಹಾಗೂ ಜೊತೆಗಾರರಿಗೆ ಧೈರ್ಯ ಹೇಳಿ ಆತ್ಮಸ್ಥೈರ್ಯ ತುಂಬಿ ಅವರ ಅಪಾರ ಶಕ್ತಿಯನ್ನು ಜಗತ್ತಿಗೆ ಸಾರಿದ ಶ್ರೀರಾಮ, ತಾಯಿ ಕೈಕೆಯ ಕುರಿತು ಅಪ್ಪಿ ತಪ್ಪಿಯೂ ಸೊಲ್ಲೆತ್ತಲಿಲ್ಲ.

ರಾವಣ ಸೀತೆಯನ್ನು ಅಪಹರಿಸಿದಾಗ, ಅರಸರಂತೆ ಮತ್ತೆ ವಿವಾಹವಾಗಲಿಲ್ಲ. ಸ್ತ್ರೀಯರನ್ನು ಅಪಹರಿಸುವುದು ತಪ್ಪೆಂದು ತೋರಿಸಲು, ಸಮುದ್ರಕ್ಕೆ ಸೇತುವೆ ಕಟ್ಟಿ ರಾವಣನೊಡನೆ ಯುದ್ಧ ಮಾಡಿ ಅವನನ್ನು ಸಂಹರಿಸಿ, ಸೀತಾಮಾತೆಯನ್ನು ರಕ್ಷಿಸಿದ. ಲಂಕಾ ನಗರವನ್ನು ಗೆದ್ದು ರಾಮನೆ ಅರಸನಾಗ ಬಹುದಿತ್ತು ಆದರೆ ಅನ್ಯರ ಸ್ವತ್ತಿಗೆ ಆಸೆ ಪಡದೆ ವಿಭೀಷಣನಿಗೆ ಪಟ್ಟ ಕಟ್ಟಿ ‘ಜನ್ಮಭೂ ಮಿಯೇ ಸ್ವರ್ಗ’ ಎಂದು ಅಯೋಧ್ಯಾಪತಿಯಾಗಿ ರಾಜ್ಯಭಾರ ಮಾಡಿದ.

ಪ್ರಜೆಗಳನ್ನು ತನ್ನ ಮಕ್ಕಳೆಂದು, ಪ್ರಜೆಗಳೇ ರಾಜ್ಯದ ಪ್ರಭುಗಳು ಅವರ ಅಭಿಪ್ರಾಯಗಳೇ ಮುಖ್ಯ ಎಂದು ಆಗಸನ ಮಾತಿಗೂ ಗಮನ ಕೊಟ್ಟು ಗರ್ಭಿಣಿ ಸೀತೆಯನ್ನು ಕಾಡಿಗೆ ಕಳಿಸಿದ. ಪ್ರಾಣಕ್ಕಿಂತ ಮಾನಕ್ಕೆ ಹೆದರಿದ. ಅಪವಾದಗಳಲ್ಲದ ಅಪವಾದಗಳನ್ನು ಸ್ವೀಕರಿಸಿ ಕಷ್ಟದಿಂದ ಬದುಕಿ ಉತ್ತಮ ಮಾರ್ಗದಲ್ಲಿ ನಡೆದು ಜಗತ್ತಿಗೆ ಆದರ್ಶಪ್ರಾಯ ಮಾನವತಾವಾದಿಯಾಗಿ, ರಾಜ್ಯ ಎಂದರೆ ‘ರಾಮ ರಾಜ್ಯದಂತೆ’, ದೊರೆ ಎಂದರೆ ‘ಶ್ರೀರಾಮನಂತೆ’ ಇರಬೇಕೆಂದು ಸಾಧಿಸಿ ತೋರಿಸಿದ ಪ್ರಭು ಶ್ರೀರಾಮ ಚಂದ್ರ.

ಈ ಜಗತ್ತು ಇರುವ ತನಕವೂ ಎಲ್ಲರೂ ಕೊಂಡಾಡುವಂತೆ ಆದರ್ಶಪ್ರಾಯನಾಗಿ, ಜಗತ್ತಿಗೆ ಜಗತ್ತೆ ಮೆಚ್ಚಿ ಪೂಜಿಸಲ್ಪಡುವ ಎಲ್ಲಾ ಭಕ್ತರಿಗೆ ದೇವರಾದನು. ಇಂಥ ಪ್ರಭುವಿನ ‘ಶ್ರೀರಾಮ ರಕ್ಷಾ’ ಸ್ತೋತ್ರ ಓದುವುದರಿಂದ ಕಷ್ಟದಲ್ಲಿರುವಾಗ ನಮಗಿಂತಲೂ ಕಷ್ಟದಲ್ಲಿರುವವರನ್ನೂ, ಕಷ್ಟಗಳನ್ನೆಲ್ಲ ಮೆಟ್ಟಿ ಮುನ್ನಡೆದ ಶೂರರನ್ನೂ, ಧೀರರನ್ನೂ ನೆನೆಸಿಕೊಂಡಾಗ ನಮ್ಮ ಕಷ್ಟ ಕ್ಷುಲ್ಲಕ ಎನಿಸುವುದು.

ಇಂತಹ ಪೌರಾಣಿಕ ವ್ಯಕ್ತಿತ್ವಗಳನ್ನು ನಮ್ಮ ಜೀವನದಲ್ಲಿ ಪರಿಚಯಿಸಿ ಕಷ್ಟ ಬಂದಾಗ ಹೇಗೆ ಮೆಟ್ಟಿ ನಿಲ್ಲಬೇಕು, ಎದೆ ಎಂದಿಗೂ ನಮ್ಮ ಆದರ್ಶವನ್ನು ಬಿಟ್ಟು ಕೊಡಬಾರದು ಎಂದು ತಿಳಿಸಿ ಕೊಡು ವುದಕ್ಕೆ ನಮ್ಮ ಹಿರಿಯರು ಇಂತಹ ಸ್ತೋತ್ರ ಪಠನಗಳನ್ನು ನಮ್ಮ ಜೀವನದ ಒಂದು ಭಾಗ ವಾಗಿಸಿದ್ದಾರೆ. ಇದನ್ನೆಲ್ಲಾ ಕೇವಲ ಪದ್ಧತಿಯನ್ನಾಗಿ ಮಾಡದೆ, ನಮ್ಮ ಜೀವನಕ್ಕೆ ಬೇಕಾದ ಪಾಠ ವನ್ನಾಗಿ ಸ್ವೀಕರಿಸುತ್ತಾ ನಮ್ಮ ಮಕ್ಕಳೂ ಕೂಡ ಇದನ್ನು ಸತ್ಸಂಪ್ರದಾಯ ಮನೆಯಲ್ಲಿ ಬೆಳೆಸಿದಾಗ ಖಂಡಿತ ರಾಮನ ಆದರ್ಶಗಳು ಅವರಿಗೆ ಜೀವನದ ಆದರ್ಶವಾಗಿ ದಾರಿ ತೋರುತ್ತದೆ.